Donald Trump: ಜಗತ್ತಿನ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ಜೊತೆ ಡೊನಾಲ್ಡ್ ಟ್ರಂಪ್ ಸ್ನೇಹ ಸಂಧಾನ?

ಡೊನಾಲ್ಡ್ ಟ್ರಂಪ್ & ಜಗತ್ತಿನ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ಒಗ್ಗಟ್ಟಿನಿಂದ ಹೋರಾಡಿ ಎದುರಾಳಿ ಪಡೆಯನ್ನ ಧೂಳಿಪಟ ಮಾಡಿ ಅಮೆರಿಕ ಚುನಾವಣೆ ಗೆದ್ದಿದ್ದರು. 2024 ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಇದೇ ಡೊನಾಲ್ಡ್ ಟ್ರಂಪ್ ಗೆಲುವು ಕಾಣಲು ಎಲಾನ್ ಮಸ್ಕ್ ಅವರ ದುಡ್ಡು & ಶ್ರಮ ಎರಡೂ ಕೆಲಸ ಮಾಡಿತ್ತು. ಆದರೆ ಇಬ್ಬರೂ ಭಾರಿ ಭರ್ಜರಿ ಫೈಟಿಂಗ್ ಮಾಡುತ್ತಾ ದೂರ ಆಗೇ ಬಿಟ್ಟರು. ಇದು ಅಮೆರಿಕ ಉದ್ಯಮ ಕ್ಷೇತ್ರದಲ್ಲಿ ಕೂಡ ಹೊಸ ತಲ್ಲಣ ಸೃಷ್ಟಿಸಿ ಆತಂಕ ಎದುರಾಗುವಂತೆ ಮಾಡಿದೆ.

ಹೌದು, ಡೊನಾಲ್ಡ್ ಟ್ರಂಪ್ ಅವರು ತಮ್ಮ ಜೊತೆಗೆ ಯಾರೇ ದ್ವೇಷ ಇಟ್ಟುಕೊಂಡರೂ ಅವರನ್ನ ನಾಶ ಮಾಡುತ್ತಾರೆ ಎಂಬ ಆರೋಪ ಇದೆ. ಅದರಲ್ಲೂ, ಡೊನಾಲ್ಡ್ ಟ್ರಂಪ್ ಜೊತೆಗೆ ಜಗಳ ಮಾಡುವ ಯಾವುದೇ ದೇಶ ಅಥವಾ ವ್ಯಕ್ತಿಗೆ ನೆಮ್ಮದಿ ಇರೋದಿಲ್ಲ ಅನ್ನೋದು ಇದೀಗ ಜಗತ್ತಿನ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ವಿಚಾರದಲ್ಲೂ ನಿಜ ಆಗುತ್ತಿದೆ. ಇಂತಹ ಸಮಯದಲ್ಲೇ, ಡೊನಾಲ್ಡ್ ಟ್ರಂಪ್ ಜೊತೆಗೆ ಸಂಧಾನ ಮಾಡಿಕೊಳ್ಳಲು ಮುಂದಾದರಾ ಎಲಾನ್ ಮಸ್ಕ್? ಎಂಬ ಪ್ರಶ್ನೆ ಮೂಡಿದೆ. ಅರೆರೆ ಈ ಪ್ರಶ್ನೆ ಯಾಕೆ ಅಂದ್ರಾ? ಮುಂದೆ ಓದಿ.

Elon Musk Expresses Regret Over Social Media Posts About Donald Trump

ಟ್ರಂಪ್ ಜೊತೆ ಎಲಾನ್ ಮಸ್ಕ್ ಸಂಧಾನ?

ಅಂದಹಾಗೆ ಡೊನಾಲ್ಡ್ ಟ್ರಂಪ್ ಅವರ ಬಗ್ಗೆ ನಾನು ಹಾಕಿದ ಕೆಲವು ಸೋಷಿಯಲ್ ಮೀಡಿಯಾ ಪೋಸ್ಟ್‌ಗಳ ಬಗ್ಗೆ ನಾನು ವಿಷಾದಿಸುವೆ ಅಂತಾ ಹೇಳಿದ್ದಾರೆ ಜಗತ್ತಿನ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್. ಡೊನಾಲ್ಡ್ ಟ್ರಂಪ್‌ ಅವರ ತೆರಿಗೆ ಕಡಿತ ಮತ್ತು ಖರ್ಚು ಮಸೂದೆ ವಿರುದ್ಧ ಎಲಾನ್ ಮಸ್ಕ್ ರೊಚ್ಚಿಗೆದ್ದು ಕೂತಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಅಲ್ಲದೆ ಇದೇ ವಿಚಾರವಾಗಿ ಎಲಾನ್ ಮಸ್ಕ್ & ಡೊನಾಲ್ಡ್ ಟ್ರಂಪ್ ನಡುವೆ ವಾರ್ ಕೂಡ ಶುರುವಾಗಿತ್ತು. ಹೀಗೆ ಎಲಾನ್ ಮಸ್ಕ್ & ಡೊನಾಲ್ಡ್ ಟ್ರಂಪ್ ತಿಕ್ಕಾಟ ಜೋರಾಗಿದ್ದ ಸಮಯದಲ್ಲೇ, ಎಲಾನ್ ಮಸ್ಕ್ ಅವರ ಕಂಪನಿ ಷೇರುಗಳು ಪಾತಾಳಕ್ಕೂ ಕುಸಿತ ಕಂಡಿದ್ದವು.

ಟ್ರಂಪ್ ಸರ್ಕಾರಕ್ಕೆ ಮಸ್ಕ್ ರಿಟರ್ನ್?

ಡೊನಾಲ್ಡ್ ಟ್ರಂಪ್ ಅವರ ಬಳಿ ಪರೋಕ್ಷವಾಗಿ ಕ್ಷಮೆ ಕೇಳಿರುವ ಎಲಾನ್ ಮಸ್ಕ್, ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಸ್ಪೆಷಲ್ ಪೋಸ್ಟ್ ಹಾಕಿ ಮತ್ತೊಮ್ಮೆ ಈ ವಿಚಾರದಲ್ಲಿ ದಿಢೀರ್ ಇಡೀ ಜಗತ್ತಿನ ಗಮನವನ್ನ ಕೂಡ ಸೆಳೆಯುತ್ತಿದ್ದಾರೆ. ಹೀಗೆ ಇಬ್ಬರ ನಡುವೆ ಕೆಂಡದ ರೀತಿ ಪರಿಸ್ಥಿತಿ ಇದ್ದಾಗಲೇ ಟ್ರಂಪ್ ಕೂಡ ಮಸ್ಕ್ ವಿರುದ್ಧ ರೊಚ್ಚಿಗೆದ್ದಿದ್ದರು. ಆದರೆ ಈಗ ಎಲ್ಲವೂ ತಣ್ಣಗಾಗುವ ಮುನ್ಸೂಚನೆ ಸಿಗುತ್ತಿದ್ದು, ಡೊನಾಲ್ಡ್ ಟ್ರಂಪ್ & ಎಲಾನ್ ಮಸ್ಕ್ ಮತ್ತೆ ಒಂದಾಗುತ್ತಾರಾ? ಎಂಬ ಕುತೂಹಲ ಮೂಡಿದೆ. ಹಾಗೇ ಇನ್ನೊಂದು ಕಡೆ ಅಮೆರಿಕ ಸರ್ಕಾರದ ಕಾರ್ಯಕ್ಷಮತೆ ಇಲಾಖೆಗೆ ಎಲಾನ್ ಮಸ್ಕ್ ವಾಪಸ್ ಬರುವ ಸಾಧ್ಯತೆ ಕೂಡ ದಟ್ಟವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+