ಗಡಿಪಾರಾದ ಸ್ನೋಡೆನ್ ಟ್ವೀಟ್ ಲೋಕಕ್ಕೆ ಎಂಟ್ರಿ
ಬೆಂಗಳೂರು, ಸೆ. 30: ಅಮೆರಿಕಕ್ಕೆ ಸಂಬಂಧಿಸಿದಂತೆ ಗುಪ್ತ ಮಾಹಿತಿಗಳನ್ನು ಹೊರ ಹಾಕಿ ಗಡಿಪಾರಾದ ಎಡ್ವರ್ಡ್ ಸ್ನೋಡೆನ್ ಅವರು ಹೊಸ ಲೋಕಕ್ಕೆ ಎಂಟ್ರಿ ಕೊಟ್ಟಿದ್ದಾರೆ. ವಿಕಿಲೀಕ್ಸ್ ನ ಜುಲಿಯನ್ ಅಸ್ಸಾಂಜ್ (42) ಮಾದರಿಯಲ್ಲಿ ಅಮೆರಿಕದ ಗೌಪ್ಯ ಮಾಹಿತಿಗಳನ್ನು ಬಹಿರಂಗಗೊಳಿಸಿದ್ದ 32ರ ಹರೆಯ ಸ್ನೋಡೆನ್ಅವರು ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟ್ಟರ್ ಖಾತೆ ಆರಂಭಿಸಿದ್ದಾರೆ.
ರಾಷ್ಟ್ರೀಯ ಭದ್ರತಾ ಸಂಸ್ಥೆಯ ಒಬ್ಬ ಮಾಜಿ ಗುತ್ತಿಗೆದಾರ ಹಾಗೂ ವಿವಿಧ ರಾಷ್ಟ್ರಗಳ ಮೇಲೆ ಅಮೆರಿಕ ನಡೆಸುತ್ತಿದ್ದ ನಿಗಾ ಕಾರ್ಯಾಚರಣೆಗಳ ಬಗ್ಗೆ ಸ್ಫೋಟಕ ಮಾಹಿತಿಗಳನ್ನು ಸ್ನೋಡೆನ್ ಬಹಿರಂಗಪಡಿಸಿದ್ದರು.ನಂತರ ಅಮೆರಿಕದಿಂದ ಗಡಿಪಾರಾಗಿ ರಷ್ಯಾದಲ್ಲಿ ತಾತ್ಕಾಲಿಕ ಆಶ್ರಯ ಪಡೆದುಕೊಂಡಿದ್ದರು.[ಸ್ನೋಡೆನಿಗೆ ಆಶ್ರಯ ದಕ್ಕಿತು]

ಟ್ವಿಟ್ಟರ್ ಲೋಕಕ್ಕೆ ಎಂಟ್ರಿ ಕೊಟ್ಟ ಸ್ನೋಡೆನ್ ಅವರಿಗೆ ಉತ್ತಮ ರೀತಿ ಸ್ವಾಗತ ಸಿಕ್ಕಿದೆ. ಮಂಗಳವಾರ ಖಾತೆ ಆರಂಭಿಸಿದ ಒಂದು ಗಂಟೆ ಅವಧಿಯಲ್ಲೇ 1,85,000 ಹಿಂಬಾಲಕರನ್ನು ಪಡೆದುಕೊಂಡಿದ್ದಾರೆ. Can you hear me now?" ಎಂದು ತಮ್ಮ ಮೊದಲ ಟ್ವೀಟ್ ನಲ್ಲಿ ವಿಶ್ವಕ್ಕೆ ಪ್ರಶ್ನಿಸಿದ್ದಾರೆ.
ನಾನು ಸರ್ಕಾರಕ್ಕಾಗಿ ದುಡಿಯುತ್ತಿದ್ದೆ ಈಗ ಸಾರ್ವಜನಿಕರಿಗಾಗಿ ದುಡಿಯುತ್ತಿದ್ದೇನೆ @FreedomofPress ನ ನಿರ್ದೇಶಕ ಎಂದು ಬರೆದುಕೊಂಡಿದ್ದಾರೆ.
Can you hear me now?
— Edward Snowden (@Snowden) September 29, 2015 ರಾಷ್ಟ್ರೀಯ ಭದ್ರತಾ ಸಂಸ್ಥೆಯ ಅಧಿಕೃತ ಟ್ವೀಟ್ ಖಾತೆಯನ್ನು ಹಿಂಬಾಲಿಸುತ್ತಿದ್ದಾರೆ. ಅಮೆರಿಕದ ವಿವಿಧ ನ್ಯಾಯಾಲಯದಲ್ಲಿ ವಿಚಾರಣೆಗೆ ಹಾಜರಾಗಬೇಕಿರುವ ಸ್ನೊಡೆನ್ ಅವರಿಗೆ ಕೆಲ ನ್ಯಾಯಾಲಯಗಳು 30 ವರ್ಷಕ್ಕೂ ಅಧಿಕ ಜೈಲುಶಿಕ್ಷೆ ವಿಧಿಸಿದೆ. ಸ್ನೋಡೆನ್ ಅವರ ಖಾತೆ ಅಧಿಕೃತ ಎಂದು ಟ್ವಿಟ್ಟರ್ ಸಂಸ್ಥೆ ಕೂಡಾ ಮುದ್ರೆ ಒತ್ತಿದೆ. ಅದರೆ, ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
Meanwhile, a thousand people at Fort Meade just opened Twitter.
— Edward Snowden (@Snowden) September 29, 2015 ಫೋರ್ಟ್ ಜಾರ್ಜ್ ಜಿ.ಮೀಡ್ ಕೇಂದ್ರ ಕಚೇರಿಯಲ್ಲಿ ಅನೇಕರು ಟ್ವಿಟ್ಟರ್ ಖಾತೆ ಓಪನ್ ಮಾಡಿದ್ದಾರಂತೆ ಎಂದು ಅಮೆರಿಕದ ಮಿಲಿಟರಿಯ ಕೇಂದ್ರ ಕಚೇರಿಯ ಬಗ್ಗೆ ಟ್ವೀಟ್ ಮಾಡಿದ ಸ್ನೋಡೆನ್.(ಪಿಟಿಐ)












Click it and Unblock the Notifications