• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking: ಸೊಲೊಮನ್ ದ್ವೀಪದಲ್ಲಿ 7.0 ತೀವ್ರತೆ ಭೂಕಂಪ; ಸುನಾಮಿ ಎಚ್ಚರಿಕೆ

|
Google Oneindia Kannada News

ಸೊಲೊಮನ್, ನವೆಂಬರ್ 22: ಸೊಲೊಮನ್ ದ್ವೀಪಗಳಲ್ಲಿ ತೀವ್ರ ಭೂಕಂಪ ಸಂಭವಿಸಿದೆ. ಭೂಮಿ ಕಂಪಿಸಿರುವುದರ ಬೆನ್ನಲ್ಲೇ ಸುಲೊಮನ್ ದ್ವೀಪದಲ್ಲಿ ಸುನಾಮಿಯ ಮುನ್ನೆಚ್ಚರಿಕೆಯನ್ನು ನೀಡಲಾಗಿದೆ.

ಮಂಗಳವಾರ ಬೆಳಗ್ಗೆ 7 ಗಂಟೆ 33 ನಿಮಿಷಕ್ಕೆ ಸೊಲೊಮನ್ ದ್ವೀಪಗಳ ಮಲಂಗೋ ಪ್ರದೇಶದಲ್ಲಿ ಭೂಕಂಪನ ಸಂಭವಿಸಿದೆ. ರಿಕ್ಟರ್ ಮಾಪನದಲ್ಲಿ ಭೂಕಂಪನದ ತೀವ್ರತೆಯು 7.0 ರಷ್ಟು ದಾಖಲಾಗಿದೆ.

ಮಾಜಿ ಸೈನಿಕನಿಗೆ ಭೂಮಿ ವಾಪಸ್ ನೀಡದ ಪ್ರಕರಣ; ಸರ್ಕಾರಕ್ಕೆ ಹೈಕೋರ್ಟ್ ತರಾಟೆಮಾಜಿ ಸೈನಿಕನಿಗೆ ಭೂಮಿ ವಾಪಸ್ ನೀಡದ ಪ್ರಕರಣ; ಸರ್ಕಾರಕ್ಕೆ ಹೈಕೋರ್ಟ್ ತರಾಟೆ

7.0 ತೀವ್ರತೆಯ ಭೂಕಂಪದ ನಂತರ ಸುನಾಮಿ ಎಚ್ಚರಿಕೆಯನ್ನು ನೀಡಲಾಗಿದೆ. ಪೆಸಿಫಿಕ್ ಕೇಂದ್ರದಿಂದ ಸುನಾಮಿ ಕುರಿತು ಎಚ್ಚರಿಕೆ ನೀಡಲಾಗಿದೆ ಎಂದು ಎಎಫ್‌ಪಿ ವರದಿ ಮಾಡಿದೆ.

ಇಂಡೋನೆಷ್ಯಾದಲ್ಲಿ ಮರಣ ಮೃದಂಗ ಬಾರಿಸಿದ ಪ್ರಕೃತಿ ವಿಕೋಪ:

ಸೊಲೊಮನ್ ದ್ವೀಪದಲ್ಲಿ ಇದೀಗ ಸುನಾಮಿ ಎಚ್ಚರಿಕೆಯನ್ನು ನೀಡಲಾಗುತ್ತಿದೆ. ಇನ್ನೊಂದು ಮಗ್ಗಲಿನಲ್ಲಿ ಇಂಡೋನೆಷ್ಯಾದಲ್ಲಿ ಅದೇ ಪ್ರಕೃತಿ ವಿಕೋಪವು ಮರಣ ಮೃದಂಗವನ್ನು ಬಾರಿಸಿದೆ. ಇಂಡೋನೇಷ್ಯಾದ ಪಶ್ಚಿಮ ಜಾವಾ ಪ್ರಾಂತ್ಯದಲ್ಲಿ ಸೋಮವಾರ ಪ್ರಬಲ ಭೂಕಂಪ ಸಂಭವಿಸಿದ್ದು 162 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಅವಶೇಷಗಳಡಿಯಲ್ಲಿ ಸಿಲುಕಿರುವವರ ಹುಡುಕಾಟ ಕಾರ್ಯ ಮುಂದುವರೆದಿದೆ.
ರಿಕ್ಟರ್ ಮಾಪಕದಲ್ಲಿ 5.6 ತೀವ್ರತೆಯ ಭೂಕಂಪ ಪಶ್ಚಿಮ ಜಾವಾದ ಪರ್ವತದ ಸಿಯಾಂಜೂರ್ ಪಟ್ಟಣದ ಸಮೀಪ ಸಂಭವಿಸಿದೆ. ಈ ಪ್ರದೇಶದಲ್ಲಿ 2.5 ದಶಲಕ್ಷಕ್ಕೂ ಹೆಚ್ಚು ಜನರು ವಾಸವಾಗಿದ್ದಾರೆ. ಭೂಕಂಪದ ಬಳಿಕ, ಪಶ್ಚಿಮ ಜಾವಾ ಗವರ್ನರ್ ರಿದ್ವಾನ್ ಕಾಮಿಲ್ ಇನ್ಸ್ಟಾಗ್ರಾಮ್‌ನಲ್ಲಿ 162 ಜನರು ಸಾವನ್ನಪ್ಪಿದ್ದಾರೆ ಮತ್ತು 326 ಜನರು ಗಾಯಗೊಂಡಿದ್ದಾರೆ ಎಂದು ಹೇಳಿದ್ದಾರೆ. ಭೂಕಂಪದಿಂದ ಹಲವು ಕಟ್ಟಡಗಳು ಕುಸಿದಿದ್ದು, ಸಾವಿನ ಸಂಖ್ಯೆ ಹೆಚ್ಚಾಗಬಹುದು ಎಂದು ರಿದ್ವಾನ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

English summary
Earthquake of magnitude 7.0 jolts Solomon Islands; Tsunami alert.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X