Turkey Earthquake Death Toll : ಟರ್ಕಿಯಲ್ಲಿ ಭೂಕಂಪ: 21,000ಕ್ಕೆ ದಾಟಿದ ಮೃತರ ಸಂಖ್ಯೆ
ಮಾರಣಾಂತಿಕ ಭೂಕಂಪದಿಂದ ಇದುವರೆಗೂ ಟರ್ಕಿಯಲ್ಲಿ ಕನಿಷ್ಠ 17,674 ಜನರು ಸಾವನ್ನಪ್ಪಿದ್ದು, 72,879 ಜನರು ಗಾಯಗೊಂಡಿದ್ದಾರೆ
ಅಂಕಾರ, ಫೆಬ್ರವರಿ 10: ಟರ್ಕಿಯಲ್ಲಿ ಸಂಭವಿಸಿದ ಪ್ರಬಲ ಭೂಕಂಪದ ಪರಿಣಾಮವಾಗಿ ಸಾವಿರಾರು ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದು, ಮೃತರ ಸಂಖ್ಯೆ ದಿನನಿತ್ಯ ಏರುತ್ತದೆ ಇದೆ.
ಮಾರಣಾಂತಿಕ ಭೂಕಂಪದಿಂದ ಇದುವರೆಗೂ ಸಾವಿನ ಸಂಖ್ಯೆ 21,051 ಆಗಿದೆ ಎಂದು ಅಧಿಕಾರಿಗಳು ಶುಕ್ರವಾರ ಮಾಹಿತಿ ನೀಡಿದ್ದಾರೆ. ಟರ್ಕಿಯಲ್ಲಿ ಕನಿಷ್ಠ 17,674 ಜನರು ಸಾವನ್ನಪ್ಪಿದ್ದು, 72,879 ಜನರು ಗಾಯಗೊಂಡಿದ್ದಾರೆ ಎಂದು ಅಲ್ಲಿನ ಉಪಾಧ್ಯಕ್ಷ ಫುಟ್ ಒಕ್ಟೇ ಗುರುವಾರ ಹೇಳಿದ್ದಾರೆ.
ಆದರೆ ವೈಟ್ ಹೆಲ್ಮೆಟ್ಸ್ ನಾಗರಿಕ ರಕ್ಷಣಾ ಸಂಸ್ಥೆಯ ಪ್ರಕಾರ, ಸಿರಿಯಾದಲ್ಲಿ ಕನಿಷ್ಠ 3,377 ವ್ಯಕ್ತಿಗಳು ಮೃತರಾಗಿದ್ದಾರೆ. ಇದರಲ್ಲಿ 2,030 ವಾಯುವ್ಯದಲ್ಲಿ ಬಂಡುಕೋರರ ಹಿಡಿತದಲ್ಲಿರುವ ಪ್ರದೇಶಗಳಲ್ಲಿ ಮತ್ತು 1,347 ಸರ್ಕಾರಿ ನಿಯಂತ್ರಿತ ಪ್ರದೇಶಗಳಲ್ಲಿ ಎಂದು ಸಿರಿಯನ್ ರಾಜ್ಯ ಮಾಧ್ಯಮ ವರದಿ ಮಾಡಿದೆ. ಟರ್ಕಿಯ ಭೂಕಂಪ ಪೀಡಿತ ಪ್ರಾಂತ್ಯಗಳಲ್ಲಿ ರಕ್ಷಣಾ ಮತ್ತು ನೆರವು ಪ್ರಯತ್ನಗಳನ್ನು ವೇಗಗೊಳಿಸಲು ಮೂರು ತಿಂಗಳ ತುರ್ತು ಪರಿಸ್ಥಿತಿಯನ್ನು ಜಾರಿ ಮಾಡಿದ್ದು ಸ್ಥಳೀಯ ಅನುಮೋದನೆಯ ನಂತರ ಗುರುವಾರ ಜಾರಿಗೆ ಬಂದಿದೆ ಎಂದು ಅನಾಡೋಲು ಏಜೆನ್ಸಿ ವರದಿ ಮಾಡಿದೆ.
ಮಂಗಳವಾರ ಟರ್ಕಿಯ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್ ಅವರು ಭೂಕಂಪ ಪೀಡಿತ ಪ್ರಾಂತ್ಯಗಳಲ್ಲಿ ಹುಡುಕಾಟ ಮತ್ತು ರಕ್ಷಣಾ ಪ್ರಯತ್ನಗಳನ್ನು ವೇಗಗೊಳಿಸಲು ಮೂರು ತಿಂಗಳ ತುರ್ತು ಪರಿಸ್ಥಿತಿಯನ್ನು ಘೋಷಿಸಿದರು ಎಂದು ಸುದ್ದಿ ವರದಿಯಾಗಿದೆ. ಕಹ್ರಮನ್ಮರಸ್ ಪ್ರಾಂತ್ಯದಲ್ಲಿ 7.7 ಮತ್ತು 7.6 ರ ತೀವ್ರತೆಯ ಎರಡು ಭೂಕಂಪಗಳಿಂದ ಅದಾನ, ಅಡಿಯಾಮನ್, ದಿಯಾರ್‌ಬಾಕಿರ್, ಗಾಜಿಯಾಂಟೆಪ್, ಹಟೇ, ಕಿಲಿಸ್, ಮಲತ್ಯಾ, ಉಸ್ಮಾನಿಯೆ ಮತ್ತು ಸಾನ್ಲಿಯುರ್ಫಾ ಸೇರಿದಂತೆ 10 ಪ್ರಾಂತ್ಯಗಳಲ್ಲಿ 13 ಮಿಲಿಯನ್ ಜನರು ಸಾವು ನೋವು ಅನುಭವಿಸಿದ್ದಾರೆ. ಇದಲ್ಲದೆ ಸಿರಿಯಾ ಮತ್ತು ಲೆಬನಾನ್ ಸೇರಿದಂತೆ ಟರ್ಕಿಯ ನೆರೆಯ ರಾಷ್ಟ್ರಗಳು ಸಹ ಕಂಪನವನ್ನು ಅನುಭವಿಸಿವೆ.

56 ದೇಶಗಳ 6,479 ರಕ್ಷಣಾ ಸಿಬ್ಬಂದಿ
ಟರ್ಕಿಯ ವಿದೇಶಾಂಗ ಸಚಿವ ಮೆವ್ಲುಟ್ ಕಾವುಸೊಗ್ಲು ಅವರು ಗುರುವಾರ ಪ್ರಬಲ 2 ಭೂಕಂಪಗಳು ರಾಷ್ಟ್ರವನ್ನು ತಲ್ಲಣಗೊಳಿಸಿದ ನಂತರ 75 ರಾಷ್ಟ್ರಗಳು ಮತ್ತು 16 ಅಂತಾರಾಷ್ಟ್ರೀಯ ಸಂಸ್ಥೆಗಳು ಟರ್ಕಿಗೆ ನೆರವು ನೀಡುವುದಾಗಿ ವಾಗ್ದಾನ ಮಾಡಿವೆ. 56 ದೇಶಗಳ 6,479 ರಕ್ಷಣಾ ಸಿಬ್ಬಂದಿ ನೆರವಿಗೆ ಧಾವಿಸಿದ್ದಾರೆ. 19 ರಾಷ್ಟ್ರಗಳ ತಂಡಗಳು 24 ಗಂಟೆಗಳ ಒಳಗೆ ಯುನೈಟೆಡ್ ಸ್ಟೇಟ್ಸ್‌ನಿಂದ ಬಂದಿವೆ ಎಂದು ಸಿಎನ್ಎನ್ ವರದಿ ಮಾಡಿದೆ.

ಸಿರಿಯಾದಲ್ಲಿ 70,000 ಜನರಿಗೆ ಗಾಯ
ಇನ್ನೂ 19 ದೇಶಗಳ ತಂಡಗಳು 24 ಗಂಟೆಗಳ ಒಳಗೆ ಟರ್ಕಿ ದೇಶಕ್ಕೆ ಬಂದಿವೆ. ಸೋಮವಾರ ಸಂಭವಿಸಿದ ದುರಂತದ ನಂತರ ಟರ್ಕಿಗೆ ಜಾಗತಿಕ ನೆರವು ಹರಿದುಬರುತ್ತಿದೆ. ಟರ್ಕಿಯಲ್ಲಿ ಇದುವರೆಗೆ 20,000 ಕ್ಕೂ ಹೆಚ್ಚು ಜನರು ಪ್ರಾಣವನ್ನು ಕಳೆದುಕೊಂಡಿದ್ದಾರೆ. ನೆರೆಯ ಸಿರಿಯಾದಲ್ಲಿ 70,000 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಭಾರತೀಯ ಸೇನೆಯಿಂದ ವಿಪತ್ತು ಪರಿಹಾರ
ಭೂಕಂಪಗಳು ರಾಷ್ಟ್ರವನ್ನು ತಲ್ಲಣಗೊಳಿಸಿದ್ದು, ಉದ್ಭವಿಸಿರುವ ಬಿಕ್ಕಟ್ಟಿನಿಂದಾಗಿ ನಡೆಯುತ್ತಿರುವ ರಕ್ಷಣಾ ಪ್ರಯತ್ನದಲ್ಲಿ ಭಾರತವು ಟರ್ಕಿಗೆ ಸಹಾಯ ಮಾಡುತ್ತಿದೆ. ಟರ್ಕಿಯಲ್ಲಿ ಸಂಭವಿಸಿದ ಇತ್ತೀಚಿನ ಭೂಕಂಪಗಳಿಂದ ಹಾನಿಗೊಳಗಾದವರಿಗೆ ಸಹಾಯ ಮಾಡಲು, ಭಾರತೀಯ ಸೇನೆಯು ವಿಪತ್ತು ಪರಿಹಾರ ತಂಡಗಳನ್ನು ಕಳುಹಿಸಿದೆ ಮತ್ತು ಕ್ಷೇತ್ರ ಆಸ್ಪತ್ರೆಯನ್ನು ಸ್ಥಾಪಿಸಲಾಗಿದೆ. ಭಾರತದ ಹೆಚ್ಚುವರಿ ಸಾರ್ವಜನಿಕ ಮಾಹಿತಿ ಮಹಾನಿರ್ದೇಶನಾಲಯ ಗುರುವಾರ ಟರ್ಕಿಯ ಭೂಕಂಪ ಪೀಡಿತ ಪ್ರದೇಶಗಳಲ್ಲಿ ಟರ್ಕಿಯ ಮಹಿಳೆಯನ್ನು ಅಪ್ಪಿಕೊಂಡಿರುವ ಭಾರತೀಯ ಸೇನಾ ಅಧಿಕಾರಿಯ ಚಿತ್ರವನ್ನು ಟ್ವೀಟ್ ಮಾಡಿದೆ.

ಮಲತ್ಯದಿಂದ 19 ಕಿಮೀ ದೂರದಲ್ಲಿ ಭೂಕಂಪ
ಈ ಮಧ್ಯೆ ರಿಕ್ಟರ್ ಮಾಪಕದಲ್ಲಿ 4.6 ರ ತೀವ್ರತೆಯ ಭೂಕಂಪವು ಟರ್ಕಿಯ ಮಲತ್ಯದಿಂದ 19 ಕಿಮೀ ದೂರದಲ್ಲಿ ಸಂಭವಿಸಿದೆ ಎಂದು ಯುರೋಪಿಯನ್ ಮೆಡಿಟರೇನಿಯನ್ ಭೂಕಂಪನ ಕೇಂದ್ರ ಟ್ವಿಟರ್‌ನಲ್ಲಿ ಪೋಸ್ಟ್‌ನಲ್ಲಿ ಪ್ರಕಟಿಸಿದೆ. 38.19 ಉತ್ತರಕ್ಕೆ ಮತ್ತು 38.23 ಪೂರ್ವಕ್ಕೆ ಸ್ಥಳದಲ್ಲಿ 2 ಕಿಮೀ ಆಳದಲ್ಲಿ 05:03:43 (ಸ್ಥಳೀಯ ಕಾಲಮಾನ) ಭೂಕಂಪ ವರದಿಯಾಗಿದೆ ಎಂದು ಕೇಂದ್ರ ತಿಳಿಸಿದೆ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications