ಒಂದೇ ದಿನ ಮಣಿಪುರ, ಅಫ್ಘಾನಿಸ್ತಾನ, ತಜಿಕಿಸ್ತಾನದಲ್ಲೂ ಭೂಕಂಪ
ಇತ್ತೀಚಿನ ದಿನಗಳಲ್ಲಿ ಭೂಕಂಪದ ಕಂಪನಗಳು ನಿರಂತರವಾಗಿ ಅನುಭವವಾಗುತ್ತಿದ್ದು, ಮಂಗಳವಾರ ಕೆಲವು ಕಡೆ ಭೂಮಿ ನಡುಗಿದೆ.
ಮಣಿಪುರ,ಫೆಬ್ರವರಿ28: ಪ್ರಪಂಚದಾದ್ಯಂತದ ಅನೇಕ ದೇಶಗಳಲ್ಲಿ ಇತ್ತೀಚಿನ ದಿನಗಳಲ್ಲಿ ಭೂಕಂಪದ ಕಂಪನಗಳು ನಿರಂತರವಾಗಿ ಅನುಭವವಾಗುತ್ತಿದ್ದು, ಮಂಗಳವಾರ ಬೆಳಗ್ಗೆ ಮಣಿಪುರ ಸೇರಿದಂತೆ ಅಫ್ಘಾನಿಸ್ತಾನ ಮತ್ತು ತಜಕಿಸ್ತಾನದಲ್ಲಿ ಭೂಕಂಪ ಸಂಭವಿಸಿದೆ.
ಮಂಗಳವಾರ ಬೆಳಗಿನ ಜಾವ 2:46ರ ಸುಮಾರಿಗೆ ಭೂಕಂಪ ಸಂಭವಿಸಿದ್ದು, ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದ ಪ್ರಚಾರ, ಮಣಿಪುರದ ನೋನಿ ಜಿಲ್ಲೆಯಲ್ಲಿ 3.2 ತೀವ್ರತೆಯ ಭೂಕಂಪ ಸಂಭವಿಸಿದೆ. ಅದರ ಆಳ 25 ಕಿ.ಮೀ. ಅದೇ ಸಮಯದಲ್ಲಿ, ಅಫ್ಘಾನಿಸ್ತಾನದಲ್ಲಿ ಭೂಕಂಪದ ಕಂಪನಗಳು ಕಂಡುಬಂದವು, ಅದರ ತೀವ್ರತೆಯು 4.1 ಆಗಿತ್ತು. ತಜಕಿಸ್ತಾನದಲ್ಲಿ 4.3 ತೀವ್ರತೆಯ ಭೂಕಂಪ ಸಂಭವಿಸಿದೆ.

ಇದುವರೆಗೆ ಯಾವುದೇ ರೀತಿಯ ಹಾನಿಯಾದ ಸುದ್ದಿಗಳಯ ವರದಿಯಾಗಿಲ್ಲ.ಫೆಬ್ರವರಿ 19 ರಂದು ಆಂಧ್ರಪ್ರದೇಶದ ಎನ್‌ಟಿಆರ್ ಜಿಲ್ಲೆಯ ನಂದಿಗಮ ಪಟ್ಟಣದಲ್ಲಿ ಭೂಕಂಪ ಸಂಭವಿಸಿತ್ತು. ಭಾನುವಾರ ಬೆಳಗ್ಗೆ 7.13ರ ಸುಮಾರಿಗೆ 3.4 ಸೆಕೆಂಡುಗಳ ಕಾಲ ಕಂಪನ ಸಂಭವಿಸಿದೆ. ಸ್ಥಳೀಯರು ಭಯಭೀತರಾಗಿ ಮನೆಯಿಂದ ಹೊರಬಂದು ಬೀದಿಗೆ ಬಂದಿದ್ದರು.
ಅದೇ ದಿನ ಮಧ್ಯಪ್ರದೇಶದಲ್ಲಿ ಭೂಕಂಪನದ ಅನುಭವವಾಯಿತು. ರಿಕ್ಟರ್ ಮಾಪಕದಲ್ಲಿ ಇದರ ತೀವ್ರತೆ 3.0 ಆಗಿತ್ತು. ಕಳೆದ ಭಾನುವಾರ ಮಧ್ಯರಾತ್ರಿ 2.14 ಕ್ಕೆ ಅಫ್ಘಾನಿಸ್ತಾನದಲ್ಲಿ 4.3 ತೀವ್ರತೆಯ ಭೂಕಂಪ ಸಂಭವಿಸಿದೆ . ಈಗಾಗಲೇ ಟರ್ಕಿ ಮತ್ತು ಸಿರಿಯಾದಲ್ಲಿ ಸಂಭವಿಸಿದ ಭೀಕರ ಭೂಕಂಪದಿಂದಾಗಿ ಜನರಲ್ಲಿ ಈ ಭೂಕಂಪನ ಅನುಭವವೂ ಭಯವನ್ನ ಹುಟ್ಟಿಸಿದೆ.
ಈಗಾಗಲೇ ಟರ್ಕಿ ಮತ್ತು ಸಿರಿಯಾದಲ್ಲಿ ಭೂಕಂಪದಿಂದಾಗಿ 50 ಸಾವಿರಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಸಾಕಷ್ಟು ಜನರು ಗಾಯಗೊಂಡಿದ್ದು, ಲಕ್ಷಾಂತರ ಜನರು ನಿರಾಶ್ರಿತರಾದ್ದಾರೆ.

ಇನ್ನೂ ಫೆಬ್ರವರಿ 23 ರಂದು ಚೀನಾ ಮತ್ತು ತಜಕೀಸ್ತಾನದ ಗಡಿಯಲ್ಲಿ ಪ್ರಬಲ ಭೂಕಂಪ ಸಂಭವಿಸಿದೆ. ಚೀನಾದ ಕ್ಸಿನ್ ಜಿಯಾಂಗ್ ಪ್ರದೇಶ ಹಾಗೂ ಪೂರ್ವ ತಜಕೀಸ್ತಾನ ಪ್ರದೇಶದಲ್ಲಿ 7.2 ತೀವ್ರತೆಯ ಭೂಕಂಪ ಸಂಭವಿಸಿತ್ತು.












Click it and Unblock the Notifications