ಭೂಮಿಯಂತೆ ಕಾಣುವ ಮತ್ತೊಂದು ಆಕಾಶಕಾಯ ಪತ್ತೆ
ನ್ಯೂಯಾರ್ಕ್, ಜುಲೈ, 24 : ಅಮೆರಿಕಾ ಬಾಹ್ಯಾಕಾಶ ವಿಜ್ಞಾನ ಸಂಸ್ಥೆ ನಾಸಾ, ಇದೀಗ ಬಾಹ್ಯಾಕಾಶ ವಿಜ್ಞಾನ ಸಂಸ್ಥೆಯಲ್ಲಿ ಮತ್ತೊಂದು ಮೈಲುಗಲ್ಲು ಸಾಧಿಸಿದೆ. ಭೂಮಿಯನ್ನೇ ಹೋಲುವ ಮತ್ತೊಂದು ಗ್ರಹವನ್ನು ನಾಸಾದ ದೂರದರ್ಶಕ ಕೆಪ್ಲರ್ ಪತ್ತೆ ಹಚ್ಚಿದ್ದು, ಇದು ಭೂಮಿಗಿಂತಲೂ ದೊಡ್ಡದಿದೆ ಎಂದು ನಾಸಾ ಸಂಸ್ಥೆ ತಿಳಿಸಿದೆ.
ಭೂಮಿಯು 4.5 ಶತಕೋಟಿ ಹಿಂದೆ ಹುಟ್ಟಿದ್ದರೆ, ಇದು ಸುಮಾರು 6 ಶತಕೋಟಿ ವರ್ಷಗಳ ಹಿಂದೆಯೇ ಹುಟ್ಟಿದೆ. ಜೀವ ವೈವಿಧ್ಯತೆ ಬೆಳೆಯಲು ಅಗತ್ಯವಿರುವ ಎಲ್ಲಾ ವಾತಾವರಣ ಇದರಲ್ಲಿದ್ದು, ಇದು ಭೂಮಿಗಿಂತ 60% ನಷ್ಟು ದೊಡ್ಡದಿದೆ. ಜೀವಿಗಳು ವಾಸಿಸುತ್ತಿರುವುದರ ಕುರಿತಾಗಿ ಮಾಹಿತಿ ಕಲೆಹಾಕಲು ಇನ್ನಷ್ಟು ಅಧ್ಯಯನ ಕೈಗೊಳ್ಳಲಿದ್ದೇವೆ ಎಂದು ನಾಸಾ ಅಧಿಕಾರಿಗಳು ಹೇಳಿದ್ದಾರೆ.[1.6 ಮಿಲಿಯನ್ ಕಿಮೀ ದೂರ ನಿಂತು ಭೂಮಿ ನೋಡಿದ್ದೀರಾ?]

ನೂತನವಾಗಿ ಪತ್ತೆ ಹಚ್ಚಲಾದ ಈ ಗ್ರಹಕ್ಕೆ 'ಕೆಪ್ಲರ್ 452 ಬಿ' ಎಂದು ಹೆಸರಿಟ್ಟಿರುವ ನಾಸಾ ಈ ಗ್ರಹ ಭೂಮಿಯ ದ್ರವ್ಯರಾಶಿಗಿಂತ 5 ಪಟ್ಟು ಫ್ಲಸ್ ಅಥವಾ ಮೈನಸ್ ದ್ರವ್ಯರಾಶಿ ಹೊಂದಿದೆ. ಈ ಗ್ರಹದಲ್ಲಿ ವಾಸಿಸಲು ಸಾಧ್ಯವಾಗುವುದೋ ಇಲ್ಲವೋ ಎಂಬುದಾಗಿ ಮತ್ತಷ್ಟು ಚಿಂತನೆಗಳನ್ನು, ಅಧ್ಯಯನವನ್ನು ಕೈಗೊಳ್ಳಲಾಗುವುದು ಎಂದು ನಾಸಾ ಕೆಪ್ಲರ್ ನೌಕೆಯ ದತ್ತಾಂಶ ವಿಶ್ಲೇಷಕ ಜಾನ್ ಜೆಂಕಿನ್ಸ್ ತಿಳಿಸಿದ್ದಾರೆ.
ದೂರದರ್ಶಕ ಕೆಪ್ಲರ್ ಸಾಧನೆ:
ಬಾಹ್ಯಾಕಾಶ ಕ್ಷೇತ್ರದಲ್ಲಿನ ಅನ್ವೇಷಣೆಗಾಗಿ 2009ರಲ್ಲಿ ನಾಸಾ ಕಳುಹಿಸಿದ್ದ ಕೆಪ್ಲರ್ ದೂರದರ್ಶಕ ಈ ವರೆಗೆ ಅನೇಕ ಗ್ರಹಗಳನ್ನು, ಉಪಗ್ರಹಗಳನ್ನು ಹಾಗೂ ವಿಶಿಷ್ಟ ಸ್ವರೂಪದ ನಕ್ಷತ್ರಗಳನ್ನು ಪತ್ತೆಹಚ್ಚಿದೆ. ಸೌರ ಮಂಡಲದಿಂದ ಹೊರ ಭಾಗದಲ್ಲಿರುವ 1,000ಕ್ಕೂ ಹೆಚ್ಚು ಕ್ಷುದ್ರ ಗ್ರಹಗಳನ್ನು ಪತ್ತೆಮಾಡಿದೆ. 2015ರಲ್ಲಿ ಇದುವರೆಗೆ 8 ಉಪಗ್ರಹಗಳನ್ನು ಪತ್ತೆಹಚ್ಚಿದೆ. ಈ ಪೈಕಿ ಭೂಮಿಯ ಗಾತ್ರವನ್ನೇ ಹೋಲುವ 2 ಗ್ರಹಗಳಿದ್ದವು












Click it and Unblock the Notifications