ಜಗತ್ತಿನಲ್ಲಿ ಮತ್ತೊಂದು ಭೀಕರ ಯುದ್ಧಕ್ಕೆ ಕೌಂಟ್‌ಡೌನ್ ಶುರು? ಹೊಸ ಯುದ್ಧ ಎಲ್ಲಿ ನಡೆಯುತ್ತೆ ಗೊತ್ತಾ?
ಜಗತ್ತಿನಲ್ಲಿ ಈಗ 2 ಭೀಕರ ಯುದ್ಧ ನಡೆಯುತ್ತಿದ್ದು, ರಷ್ಯಾ & ಉಕ್ರೇನ್ ಹಾಗೂ ಇಸ್ರೇಲ್ & ಹಮಾಸ್ ಉಗ್ರರ ನಡುವೆ ಕಿಚ್ಚು ಹೊತ್ತಿಕೊಂಡಿದೆ. ಆದರೆ ಇದೇ ಸಮಯದಲ್ಲಿ ಇನ್ನೂ ಒಂದು ದೇಶದಲ್ಲಿ ಯುದ್ಧದ ಸುನಾಮಿ ಎದ್ದೇಳುವ ಲಕ್ಷಣ ಗೋಚರಿಸಿದೆ. ಅಕಸ್ಮಾತ್ ಈ ದೇಶದಲ್ಲಿ ಯುದ್ಧ ಶುರುವಾದರೆ, ಈಗಲೇ ಬರೆದಿಟ್ಟುಕೊಳ್ಳಿ ಆ ಕ್ಷಣವೇ ಜಗತ್ತಿನಲ್ಲಿ 3ನೇ ಮಹಾಯುದ್ಧ ಶುರು ಅಂತಾನೆ ಅರ್ಥ. ಹಾಗಾದರೆ ಯಾವುದು ಆ ದೇಶ ಗೊತ್ತಾ?
ಒಬ್ಬರ ಮೇಲೆ ಮತ್ತೊಬ್ಬರು ಹಗೆ ತೋರಿಸುತ್ತಾ, ಗಡಿ ವಿವಾದಗಳನ್ನೇ ದೊಡ್ಡದು ಮಾಡಿ ಯುದ್ಧಗಳನ್ನ ನಡೆಸುತ್ತಿವೆ ಆಧುನಿಕ ಜಗತ್ತಿನ ದೇಶಗಳು. ಅದರಲ್ಲೂ ಉಕ್ರೇನ್ & ರಷ್ಯಾ ಮಧ್ಯೆ ಶುರುವಾಗಿದ್ದ ಯುದ್ಧ ಜಗತ್ತಿಗೆ ಆಘಾತ ನೀಡಿತ್ತು. ಈ ಆಘಾತದಿಂದ ಸುಧಾರಿಸಲು ಅವಕಾಶವೇ ಸಿಗದಂತೆ ಇಸ್ರೇಲ್ ಮತ್ತು ಹಮಾಸ್ ಉಗ್ರರ ನಡುವೆ ಯುದ್ಧ ಶುರುವಾಗಿದೆ. ಇದೇ ಸಮಯದಲ್ಲಿ ಸರ್ವಾಧಿಕಾರಿ ನಾಡಿನ ವಿರುದ್ಧ, ದಕ್ಷಿಣ ಕೊರಿಯಾ ಗುಡುಗುತ್ತಿರುವ ಕಾರಣಕ್ಕೆ ಮತ್ತೊಂದು ಮಹಾಯುದ್ಧದ ಭೀತಿ ಆವರಿಸಿದೆ.

ಏನಿದು ಪ್ರಾಬ್ಲಂ? ಯಾಕೆ ಕಿತ್ತಾಟ?
ಉ.ಕೊರಿಯಾ ಸರ್ಕಾರಕ್ಕೆ, ಸರ್ವಾಧಿಕಾರಿ ಕಿಮ್ ಪಾಲಿಗೆ ಅಮೆರಿಕ ಅತಿದೊಡ್ಡ ಶತ್ರು ರಾಷ್ಟ್ರ ಎನ್ನಬಹುದು. ಹೀಗೆ ಉತ್ತರ ಕೊರಿಯಾ ಮತ್ತು ಅಮೆರಿಕ ನಡುವೆ ಕಿತ್ತಾಟ ಶುರುವಾಗಲು ಕಾರಣವಾಗಿದ್ದು ದಕ್ಷಿಣ ಕೊರಿಯಾ. ದಕ್ಷಿಣ ಚೀನಾ ಸಮುದ್ರದ ಭಾಗದಲ್ಲಿ ಜಪಾನ್ ಸೇರಿ ಅಮೆರಿಕ & ದ.ಕೊರಿಯಾ ದೇಶಗಳನ್ನ ಉ.ಕೊರಿಯಾ ಎದುರು ಹಾಕಿಕೊಂಡಿದೆ. ಪರಿಸ್ಥಿತಿ ಹೀಗಿದ್ದಾಗ ತನ್ನ ರಕ್ಷಣೆಗೆ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್, ರಷ್ಯಾ ಜೊತೆಗೆ ಗಾಢ ಸಂಬಂಧ ಬೆಳೆಸುತ್ತಿರುವ ಸಮಯಕ್ಕೆ ಮತ್ತೊಂದು ಯುದ್ಧದ ಆತಂಕ ಆವರಿಸಿದೆ.
ಉ.ಕೊರಿಯಾ VS ದ.ಕೊರಿಯಾ ಯುದ್ಧ?
ರಷ್ಯಾಗೆ ತೆರಳಿ ಶಸ್ತ್ರಾಸ್ತ್ರ ನೀಡುವ ಭರವಸೆ ಕೊಟ್ಟಂತೆ ಕಿಮ್ ಜಾಂಗ್ ಉನ್ ಈವರೆಗೂ, ಭಾರಿ ಪ್ರಮಾಣದಲ್ಲಿ ಶಸ್ತ್ರಾಸ್ತ್ರವನ್ನ ರಷ್ಯಾಗೆ ಗಿಫ್ಟ್ ಕೊಟ್ಟಿರುವಂತೆ ಕಾಣ್ತಿದೆ. ರಷ್ಯಾಗೆ ಸುಮಾರು 1 ಸಾವಿರ ಕಂಟೇನರ್ ಶಸ್ತ್ರಾಸ್ತ್ರ ಪೂರೈಕೆ ಮಾಡಿದೆಯಂತೆ ಉತ್ತರ ಕೊರಿಯಾ. ಈ ಆರೋಪ ಹಸಿಯಾಗಿ ಇರುವಾಗಲೇ ಮತ್ತೊಮ್ಮೆ ದಕ್ಷಿಣ ಕೊರಿಯಾ ರೊಚ್ಚಿಗೆದ್ದಿದೆ. ಏಕೆಂದರೆ ರಷ್ಯಾ ಈಗ ಉತ್ತರ ಕೊರಿಯಾ ಮೂಲಕ ಭಾರಿ ಪ್ರಮಾಣದಲ್ಲಿ ಮದ್ದು, ಗುಂಡು ಪಡೆಯುತ್ತಿದೆ. ಹೀಗೆ ಶಸ್ತ್ರಾಸ್ತ್ರ ಪಡೆದು, ಅದರ ಬದಲಿಗೆ ಉತ್ತರ ಕೊರಿಯಾಗೆ ಉಪಗ್ರಹ ತಂತ್ರಜ್ಞಾನವನ್ನ ನೀಡಲು ಮುಂದಾಗಿದೆ ಎಂಬ ಆರೋಪ ಮಾಡಿದೆ.
ಸೋತು ಸುಣ್ಣವಾಗಿರುವ ಸರ್ವಾಧಿಕಾರಿ!
ಕಿಮ್ ಜಾಂಗ್ ಉನ್‌ಗೆ, ಕ್ಷಿಪಣಿಗಳನ್ನ ಹಾರಿಸುವುದು ಒಂದು ರೀತಿ ಹವ್ಯಾಸ! ಈತನಿಗೆ ಈ ರೋಗ ಅಂಟಿಕೊಂಡ ನಂತರ ಇಡೀ ಜಗತ್ತು ಭಯದಲ್ಲಿ ದಿನದೂಡುತ್ತಿದೆ. ಯಾವ ಘಳಿಗೆ ಯಾವ ನ್ಯೂಕ್ಲಿಯರ್ ಬಾಂಬ್, ಯಾರ ಮೇಲೆ ಕಿಮ್ ಎಸೆಯುತ್ತಾನೋ? ಅಂತಾ ಆತಂಕ ಕಾಡುತ್ತಿದೆ. ಸ್ಥಿತಿ ಹೀಗಿದ್ದಾಗ, ರಷ್ಯಾ ಸರ್ಕಾರ ಮತ್ತು ಸೇನೆ ಸರ್ವಾಧಿಕಾರಿ ಕಿಮ್ ಜಾಂಗ್ ಉನ್‌ಗೆ ಕ್ಷಿಪಣಿ ತಂತ್ರಜ್ಞಾನ ಕೊಡಲಿದೆ ಎಂಬ ಭಯದಲ್ಲಿ ದಕ್ಷಿಣ ಕೊರಿಯಾ ನರಳುತ್ತಿದೆ.

ಸಿಟ್ಟಿನಲ್ಲಿ ಇನ್ನೂ ಏನೇನ್ ಮಾಡ್ತಾನೋ!
ಆದರೆ ರಷ್ಯಾ ಕ್ಷಿಪಣಿ ತಂತ್ರಜ್ಞಾನದ ಜೊತೆ ಉಪಗ್ರಹ ತಂತ್ರಜ್ಞಾನವನ್ನೂ ಹಂಚಿಕೊಂಡಿದೆ ಎಂದು ದಕ್ಷಿಣ ಕೊರಿಯಾ ಆರೋಪಿಸಿದೆ. ಅಲ್ಲದೆ ಇದರ ಪರಿಣಾಮ ನೆಟ್ಟಗೆ ಇರೋದಿಲ್ಲ ಎಂಬ ಉತ್ತರವನ್ನೂ ದಕ್ಷಿಣ ಕೊರಿಯಾ ನೀಡಿದೆ. ಈ ಮೂಲಕ ದಕ್ಷಿಣ ಕೊರಿಯಾ ಈಗ, ಕಿಮ್ ಜಾಂಗ್ ಉನ್‌ಗೆ ಕೋಪ ತರಿಸಿದ್ದು, ಸರ್ವಾಧಿಕಾರಿ ಯುದ್ಧ ಘೋಷಣೆ ಮಾಡ್ತಾನಾ? ಎಂಬ ಅನುಮಾನ ಹೆಚ್ಚಾಗಿದೆ. ಅಲ್ಲದೆ ಕಿಮ್ ಸಿಟ್ಟಿನಲ್ಲಿ ಇನ್ನೂ ಏನೇನ್ ಮಾಡ್ತಾನೋ, ಅಂತಾ ಜನರು ಚರ್ಚೆ ಶುರು ಮಾಡಿದ್ದಾರೆ.
ಒಟ್ನಲ್ಲಿ ದಕ್ಷಿಣ ಕೊರಿಯಾ ಹೀಗೆ ನೀಡಿರುವ ಎಚ್ಚರಿಕೆ ಸಂಚಲನ ಸೃಷ್ಟಿ ಮಾಡಿದೆ. ಇದು ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್‌ಗೆ, ಮತ್ತಷ್ಟು ಕೋಪ ತರಿಸುವಂತೆ ಕಾಣಿಸುತ್ತಿದೆ. ಅಕಸ್ಮಾತ್ ಈ ಕೋಪದಲ್ಲಿ ಕಿಮ್ ಯುದ್ಧ ಸಾರಿದರೆ ಏನು ಗತಿ? ಎನ್ನುವ ಬಗ್ಗೆ ಕೂಡ ಚರ್ಚೆ ಶುರುವಾಗಿದೆ. ಅಕಸ್ಮಾತ್ ಉ.ಕೊರಿಯಾ ಭವಿಷ್ಯದಲ್ಲಿ ದ.ಕೊರಿಯಾ ವಿರುದ್ಧ ಯುದ್ಧ ಸಾರಿದರೆ 3ನೇ ಮಹಾಯುದ್ಧ ಗ್ಯಾರಂಟಿ. ಯಾಕಂದ್ರೆ ಉತ್ತರ ಕೊರಿಯಾ ಬಳಿ ಭಾರಿ ಪ್ರಮಾಣದಲ್ಲಿ ಪರಮಾಣು ಅಸ್ತ್ರಗಳ ಸಂಗ್ರಹವೇ ಇದೆ.












Click it and Unblock the Notifications