Donald Trump: ಡೊನಾಲ್ಡ್ ಟ್ರಂಪ್ ಹೊಸ ತೆರಿಗೆ ಯೋಜನೆ ಜಾರಿಗೆ ಕೌಂಟ್‌ಡೌನ್!
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಧಿಕಾರಕ್ಕೆ ಬಂದ ನಂತರ ಭಾರಿ ಸಂಚಲನ ಸೃಷ್ಟಿಸಿ ಸದ್ದು ಮಾಡಿರುವ ಹೊಸ ತೆರಿಗೆ ನೀತಿ ಇನ್ನೇನು ಜಾರಿಗೆ ಬರಲಿದೆ. ಹೀಗೆ ಹೊಸ ತೆರಿಗೆಯ ನೀತಿ ಜಾರಿಗೆ ಅಮೆರಿಕ ಸರ್ಕಾರ ಸಕಲ ಸಿದ್ಧತೆ ಮಾಡಿಕೊಂಡಿದೆ. ವಿರೋಧಿಗಳನ್ನು ಎದುರಿಸಿ ನಿಲ್ಲಲು & ಆರ್ಥಿಕವಾಗಿ ಅಮೆರಿಕದ ಬಲವರ್ಧನೆಗೆ ತೆರಿಗೆ ನೀತಿಯಲ್ಲಿ ಬದಲಾವಣೆ ಮಾಡಿ ಸಂಚಲನ ಸೃಷ್ಟಿಸಿದ್ದಾರೆ ಟ್ರಂಪ್. ಹಾಗಾದ್ರೆ ಈ ಹೊಸ ನೀತಿ ಜಾರಿಗೆ ಬರುವುದು ಯಾವಾಗ? ಯಾವೆಲ್ಲಾ ದೇಶಗಳಿಗೆ ಇದರಿಂದ ಸಮಸ್ಯೆ ಆಗಲಿದೆ?
ಅಂದಹಾಗೆ ಅಮೆರಿಕ ತಮ್ಮ ವಿರುದ್ಧ ತೆರಿಗೆ ಹೇರಿಕೆ ಮಾಡಲು ಮುಂದಾಗಿರುವ ಹಿನ್ನೆಲೆ ಹಲವು ದೇಶಗಳು ರೊಚ್ಚಿಗೆದ್ದು, ಈಗಾಗಲೇ ತಾವು ಕೂಡ ಭಾರಿ ದೊಡ್ಡ ಪ್ರಮಾಣದ ತೆರಿಗೆ ಹೇರಿಕೆಗೆ ಪ್ಲಾನ್ ಮಾಡಿವೆ. ಆದರೂ ಅಮೆರಿಕ ಮಾತ್ರ ತನ್ನ ನೀತಿಯಲ್ಲಿ ಬದಲಾವಣೆ ಮಾಡಿಕೊಳ್ಳದೆ ಹಠ ಹಿಡಿದು ಕೂತಿದೆ. ಈ ಮೂಲಕ ಅವರಿಗೆ ಕೂಡ ನೋವು ಗೊತ್ತಾಗಲಿ ಎಂದು ಗುಡುಗಿತ್ತಿವೆ ಹಲವು ದೇಶಗಳು. ಇನ್ನೊಂದು ಕಡೆ ಡೊನಾಲ್ಡ್ ಟ್ರಂಪ್ ಇನ್ನಷ್ಟು ರೊಚ್ಚಿಗೆದ್ದು, ನೀವೆಲ್ಲಾ ಹೀಗೆ ಮಾಡಿದರೆ ನಾವು ಮತ್ತೆ ಹೆಚ್ಚಿನ ಪ್ರಮಾಣದ ತೆರಿಗೆ ಹೇರಿಕೆ ಮಾಡ್ತೀವಿ ಅಂತಾ ಈಗ ಎಚ್ಚರಿಕೆ ನೀಡಿದ್ದಾರೆ. ಈ ಮೂಲಕ ಭಾರಿ ದೊಡ್ಡ ಕೋಲಾಹಲ ಸೃಷ್ಟಿಯಾಗಿದೆ.

ವಾಹನ ತಯಾರಿಕಾ ಕ್ಷೇತ್ರದ ಮೇಲೂ ಎಫೆಕ್ಟ್?
ಡೊನಾಲ್ಡ್ ಟ್ರಂಪ್ ತೆರಿಗೆ ಹೇರಿಕೆ ಎಚ್ಚರಿಕೆ ನೀಡಿರುವ ಪ್ರಮುಖ ಕ್ಷೇತ್ರಗಳ ಪೈಕಿ, ವಾಹನ ತಯಾರಿಕಾ ಕ್ಷೇತ್ರವೂ ಸೇರಿದೆ. ಏಪ್ರಿಲ್ 2 ರಿಂದ ಹೊಸ ತೆರಿಗೆ ಹೇರಿಕೆ ಮಾಡಲು ಅಮೆರಿಕ ತಯಾರಿ ನಡೆಸುತ್ತಿದೆ ಎಂಬ ಸುದ್ದಿ ಹಬ್ಬಿದೆ. ಈಗಾಗಲೇ ಭಾರತದ ಜೊತೆಗೂ ಇದೇ ವಿಚಾರ ಮುಂದಿಟ್ಟು ತಿಕ್ಕಾಟ ನಡೆಸಿತ್ತು ಅಮೆರಿಕ. ಕೊನೆಗೆ ಭಾರತ ಕೂಡ ಅಮೆರಿಕದ ಒತ್ತಡಗಳಿಗೆ ಮಣಿದಿದೆ ಎಂಬ ಚರ್ಚೆ ನಡೆಯುತ್ತಿದೆ. ಇಷ್ಟೆಲ್ಲಾ ಘಟನೆಗಳ ನಡುವೆ ಮತ್ತೊಂದು ತಲೆನೋವು ಇದೀಗ ಶುರುವಾಗಿದೆ.
ಸಂಬಂಧ ಹಾಳಾಗುವುದು ಗ್ಯಾರಂಟಿ?
ಒಟ್ನಲ್ಲಿ ಹೀಗೆ ಡೊನಾಲ್ಡ್ ಟ್ರಂಪ್ ಮನಸ್ಸಿಗೆ ಬಂದ ರೀತಿ ತೆರಿಗೆ ಹಾಕಲು ಮುಂದಾಗಿದ್ದು, ಜಾಗತಿಕ ಆರ್ಥಿಕ ವ್ಯವಸ್ಥೆಯಲ್ಲಿ ಭಾರಿ ದೊಡ್ಡ ಕೋಲಾಹಲ ಸೃಷ್ಟಿಯಾಗುವ ಭಯ ಕಾಡ್ತಾ ಇದೆ. ಕೊರೊನಾ ಎಂಬ ಮಹಾಮಾರಿ ಅಪ್ಪಳಿಸಿದ ನಂತರ ಜಾಗತಿಕ ಆರ್ಥಿಕ ವ್ಯವಸ್ಥೆಯ ಬುಡವೇ ಅಲುಗಾಡಿ ಹೋಗಿದೆ. ಹೀಗಿದ್ದಾಗ ಹೆಚ್ಚಿನ ತೆರಿಗೆ ಹೇರಿಕೆ ಮಾಡಲು ಅಮೆರಿಕದಲ್ಲಿ ಒತ್ತಡ ಹೆಚ್ಚಾಗುತ್ತಿದ್ದು, ಆರ್ಥಿಕವಾಗಿ ಮತ್ತಷ್ಟು ಸಂಕಷ್ಟ ಎದುರಾಬಹುದು ಅಂತಾ ಸಲಹೆ ನೀಡುತ್ತಿದ್ದಾರೆ ತಜ್ಞರು. ಇಷ್ಟೆಲ್ಲಾ ಸಮಸ್ಯೆ ಇದ್ದರೂ ಡೊನಾಲ್ಡ್ ಟ್ರಂಪ್ ಮಾತ್ರ ತಮ್ಮ ನಿಲುವು ಬದಲಾವಣೆ ಮಾಡಿಕೊಳ್ಳುತ್ತಿಲ್ಲ.












Click it and Unblock the Notifications