Donald Trump: ಚೀನಾ ಆಯ್ತು & ಕೆನಡಾ ಮುಗೀತು, ಈಗ ಪನಾಮ ವಿಚಾರದಲ್ಲೂ ಟ್ರಂಪ್ ಕಿರಿಕ್?
ಡೊನಾಲ್ಡ್ ಟ್ರಂಪ್ ಅಮೆರಿಕದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಒಂದಲ್ಲ ಒಂದು ರೀತಿಯ ಕಿರಿಕ್ ನಡೆಯುತ್ತಲೇ ಇದೆ. ಡೊನಾಲ್ಡ್ ಟ್ರಂಪ್ ಅವರು 2016ರ ಸಮಯದಲ್ಲಿ ಹೀಗೆ ಅಮೆರಿಕದ ಅಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದ ಸಮಯದಲ್ಲಿ ಕೂಡ, ತಮ್ಮ ಕಿರಿಕ್ ಮೂಲಕ ಇಡೀ ಜಗತ್ತಿನ ಗಮನ ಸೆಳೆದಿದ್ದರು. ಈಗ 2ನೇ ಬಾರಿಗೆ ಡೊನಾಲ್ಡ್ ಟ್ರಂಪ್ ಅವರು ಅಮೆರಿಕದ ಅಧ್ಯಕ್ಷರಾಗಿ ಆಯ್ಕೆ ಆಗಿದ್ದರೂ ಈ ಕಿರಿಕ್ ಕಥೆ ನಿಂತಿಲ್ಲ.
ಡೊನಾಲ್ಡ್ ಟ್ರಂಪ್ & ಜಗತ್ತಿನ ಹಲವು ದೇಶಗಳ ನಾಯಕರ ಜೊತೆಗೆ ಭರ್ಜರಿ ತಿಕ್ಕಾಟ ಈಗ ಏರ್ಪಟ್ಟಂತೆ ಕಾಣುತ್ತಿದೆ. ಯಾಕಂದ್ರೆ ಮೊದಲಿಗೆ ಕೆನಡಾ, ಚೀನಾ & ಮೆಕ್ಸಿಕೋ ಜೊತೆಯಲ್ಲಿ ಕಿರಿಕ್ ಶುರು ಮಾಡಿದ್ದ ಡೊನಾಲ್ಡ್ ಟ್ರಂಪ್ ಅವರು ಇದೀಗ ಪನಾಮ ವಿಚಾರದಲ್ಲಿ ಕೂಡ ಇದೇ ರೀತಿ ಕಿರಿಕ್ ಶುರು ಮಾಡಿದಂತೆ ಕಾಣುತ್ತಿದೆ. ಮೊದಲೇ ಕೊತ ಕೊತ ಕುದಿಯುತ್ತಿರುವ ಅಮೆರಿಕ ಸುತ್ತಮುತ್ತಲ ದೇಶಗಳು ಇದೀಗ, ಅಮೆರಿಕ ವಿರುದ್ಧ ಮತ್ತಷ್ಟು ರೊಚ್ಚಿಗೆಳುವ ಸ್ಥಿತಿ ನಿರ್ಮಾಣ ಆಗಿದೆ!

ಪನಾಮ ಕಾಲುವೆ ವಿಚಾರದಲ್ಲಿ ಟ್ರಂಪ್ ಜಗಳ?
ಹೌದು, ಜಗತ್ತಿನ ಅತಿದೊಡ್ಡ ಮಾನವ ನಿರ್ಮಿತ ಕಾಲುವೆಗಳ ಪೈಕಿ ಪನಾಮ ಕಾಲುವೆ ಕೂಡ ಒಂದಾಗಿದೆ. ಆದರೆ ಪನಾಮ ಕಾಲುವೆ ಬಳಕೆಗೆ ಹೆಚ್ಚಿನ ಶುಲ್ಕ ವಿಧಿಸಲಾಗುತ್ತಿದೆ, ಹಾಗೇ ಈ ಮೂಲಕ ಅಮೆರಿಕ ಮೂಲದ ಹಡಗುಗಳಿಗೆ ತೊಂದರೆ ಆಗುತ್ತಿದೆ ಎಂಬ ಭಾರಿ ಗಂಭೀರವಾದ ಆರೋಪ ಕೇಳಿ ಬಂದಿತ್ತು. ಈ ಆರೋಪದ ಬೆನ್ನಲ್ಲೇ ಡೊನಾಲ್ಡ್ ಟ್ರಂಪ್ ಅವರು ಆಕ್ರೋಶ ಹೊರಹಾಕಿ, ಪನಾಮ ಕಾಲುವೆ ಮತ್ತೆ ನಮ್ಮ ಅಧಿಕಾರಕ್ಕೆ ವಹಿಸಿಕೊಡಿ ಅಂತಾ ಆಗ್ರಹಿಸಿದ್ದರು.
ಮತ್ತೊಂದು ಎಡವಟ್ಟು ಮಾಡಿದ್ರಾ ಟ್ರಂಪ್?
ಡೊನಾಲ್ಡ್ ಟ್ರಂಪ್ ಅವರು ಈ ರೀತಿ ಹೇಳಿಕೆ ನೀಡಿರುವ ಕಾರಣಕ್ಕೆ ಇದೀಗ ಮಧ್ಯ ಅಮೆರಿಕ ದೇಶಗಳು ಕೂಡ ಆಕ್ರೋಶ ಹೊರ ಹಾಕುತ್ತಿವೆ. ಜೊತೆಗೆ ಈ ವಿಚಾರ ಜಾಗತಿಕವಾಗಿ ಕೂಡ, ದೊಡ್ಡ ಮಟ್ಟಿಗೆ ಸದ್ದು ಮಾಡುತ್ತಿದೆ. ಯಾಕಂದ್ರೆ ಪನಾಮ ಕಾಲುವೆ ಕೂಡ ಕೋಟಿ ಕೋಟಿ ಡಾಲರ್ ಆದಾಯ ತಂದುಕೊಡುವ ಜಾಗ.
ಹೀಗಾಗಿ ಇಂತಹ ಜಾಗದ ಮೇಲೆ ಬೇರೆ ದೇಶಗಳ ಕಣ್ಣು ಬಿದ್ದರೆ ಪರಿಸ್ಥಿತಿ ಹೇಗೆ ಇರಬೇಡ ಹೇಳಿ? ಈಗ ಕೂಡ ಅದೇ ರೀತಿ ಆಗಿದ್ದು, ಸಂಚಲನ ಸೃಷ್ಟಿ ಆಗಿದೆ. ಹಾಗೇ ಅಮೆರಿಕ ಭಾವಿ ಅಧ್ಯಕ್ಷರ ಈ ಹೇಳಿಕೆಗೆ ಬೇರೆ ಬೇರೆ ದೇಶಗಳು ಕೂಡ ಖಡಕ್ ಆಗಿ ಪ್ರತಿಕ್ರಿಯೆ ನೀಡುತ್ತಿವೆ. ಮತ್ತೊಂದು ಕಡೆ ಡೊನಾಲ್ಡ್ ಟ್ರಂಪ್ ಅವರು ಅಮೆರಿಕ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುವ ಮೊದಲೇ ಈ ರೀತಿಯ ತಿಕ್ಕಾಟ ಶುರುವಾಗಿದೆ!












Click it and Unblock the Notifications