ಡಿಶುಂ.. ಡಿಶುಂ.. ಬೈಡನ್ ಪಡೆಗೆ ಗುದ್ದು ಕೊಟ್ಟ ಡೊನಾಲ್ಡ್ ಟ್ರಂಪ್!

ಡೊನಾಲ್ಡ್ ಟ್ರಂಪ್ ರೊಚ್ಚಿಗೆದ್ದಿದ್ದಾರೆ, ಹೇಗಾದರೂ ಮಾಡಿ ಮತ್ತೊಮ್ಮೆ ಅಮೆರಿಕ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಆಗಬೇಕು ಎಂದು ಪಣತೊಟ್ಟಿದ್ದಾರೆ ಡೊನಾಲ್ಡ್ ಟ್ರಂಪ್. ಇದೇ ಕಾರಣಕ್ಕೆ ಅಖಾಡಕ್ಕೆ ಧುಮುಕಿ, ಜೋ ಬೈಡನ್ & ಕಮಲಾ ಹ್ಯಾರಿಸ್ ವಿರುದ್ಧ ಗಂಭೀರ ಆರೋಪಗಳ ಸುರಿಮಳೆಯನ್ನೇ ಸುರಿಸುತ್ತಿದ್ದಾರೆ. ಹೀಗಿದ್ದಾಗಲೇ ಜೋ ಬೈಡನ್ ಕುರಿತು ಸ್ಫೋಟಕ ಹೇಳಿಕೆ ನೀಡಿದ್ದಾರೆ ಅಮೆರಿಕದ ಮಾಜಿ ಅಧ್ಯಕ್ಷ ಟ್ರಂಪ್!

ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಅಮೆರಿಕ ಅಧ್ಯಕ್ಷರಾಗಿ ಆಯ್ಕೆ ಆಗುವುದು ಗ್ಯಾರಂಟಿ ಎಂಬ ವಿಶ್ವಾಸ ಅವರ ಬೆಂಬಲಿಗರಲ್ಲಿ ಮೂಡಿತ್ತು. ಕೆಲವು ದಿನಗಳ ಹಿಂದಷ್ಟೇ ಅಮೆರಿಕ ಅಧ್ಯಕ್ಷೀಯ ಚುನಾವಣೆ ಸಮೀಕ್ಷೆಗಳಲ್ಲಿ ಕೂಡ ಡೊನಾಲ್ಡ್ ಟ್ರಂಪ್ ಮುಂದಿದ್ದರು. ಹೀಗಿದ್ದಾಗ ಡೊನಾಲ್ಡ್ ಟ್ರಂಪ್ ವಿರುದ್ಧ ಜೋ ಬೈಡನ್ ಸ್ಪರ್ಧೆ ಮಾಡುವುದಿಲ್ಲ ಎಂಬ ವಿಚಾರ ಹೊರಬಿದ್ದು, ಕಮಲಾ ಹ್ಯಾರಿಸ್ ಅವರು ಟ್ರಂಪ್ ವಿರುದ್ಧ ಚುನಾವಣೆ ಅಖಾಡಕ್ಕೆ ನಿಲ್ಲಲಿದ್ದಾರೆ ಎಂಬ ಮಾಹಿತಿ ಹೊರ ಬೀಳುತ್ತಿದ್ದಂತೆ ಅಲ್ಲೋಲ ಕಲ್ಲೋಲವೇ ಸೃಷ್ಟಿಯಾಗಿದೆ. ಡೊನಾಲ್ಡ್ ಟ್ರಂಪ್ ಈಗ ಸೋಲಿನ ಸುಳಿಗೆ ಸಿಲುಕಿದ್ದು, ಹೊಸ ಹೊಸ ರಣತಂತ್ರಗಳನ್ನ ಅನುಸರಿಸುತ್ತಿದ್ದಾರೆ.

Donald Trump Using New Strategy After Joe Biden Exit From The American Presidential Election

ಟ್ರಂಪ್ ಮಾಡುತ್ತಿರುವ ಆರೋಪ ಏನು?

ಹೌದು, ಯಾವಾಗ ಜೋ ಬೈಡನ್ ಅವರ ಮೇಲೆ ಡೆಮಾಕ್ರಟಿಕ್ ಪಕ್ಷದ ನಾಯಕರು ಚುನಾವಣೆ ಅಖಾಡದಿಂದ ಹಿಂದೆ ಸರಿಯುವಂತೆ ಒತ್ತಡ ಹೇರಿದ್ದರೋ ಅಲ್ಲಿಂದಲೇ ಕಿರಿಕ್ ಶುರುವಾಗಿದೆ. ಇದೇ ವಿಚಾರವನ್ನು ಮುಂದೆ ಇಟ್ಟುಕೊಂಡು ಅಮೆರಿಕದ ಬಿಳಿಯರ ಮನಸ್ಸು ಗೆಲ್ಲೋದಕ್ಕೆ ಡೊನಾಲ್ಡ್ ಟ್ರಂಪ್ ಮುಂದಾದ ರೀತಿ ಕಾಣುತ್ತಿದೆ. ಹೀಗಾಗಿ ಇದೀಗ ಪದೇ ಪದೇ ಬೈಡನ್‌ರ ನಿರ್ಗಮನದ ವಿಚಾರ ಪ್ರಸ್ತಾಪ ಮಾಡ್ತಿದ್ದಾರೆ. ಜೋ ಬೈಡನ್‌ ಅಧ್ಯಕ್ಷೀಯ ಚುನಾವಣೆಯಿಂದ ಹಿಂದೆ ಸರಿಯುವಂತೆ ಮಾಡಲು ಡೆಮಾಕ್ರಟಿಕ್‌ ಪಕ್ಷ 'ಷಡ್ಯಂತರ' ನಡೆಸಿತು. ಸ್ಪರ್ಧೆಯಿಂದಲೇ ಹೊರ ಉಳಿಯುವಂತೆ ಒತ್ತಡ ಹೇರಿತು ಅಂತ ರಿಪಬ್ಲಿಕನ್‌ ಪಕ್ಷದ ಅಭ್ಯರ್ಥಿ ಡೊನಾಲ್ಡ್‌ ಟ್ರಂಪ್ ಗಂಭೀರ ಆರೋಪ ಮಾಡಿದ್ದಾರೆ.

ಹಾಗೇ ಅಮೆರಿಕ ಸಂವಿಧಾನ ತಿದ್ದುಪಡಿ ವಿಚಾರವನ್ನು ಕೂಡ ಪ್ರಸ್ತಾಪ ಮಾಡಿ ಡೊನಾಲ್ಡ್ ಟ್ರಂಪ್ ಚುನಾವಣಾ ಪ್ರಚಾರ ನಡೆಸುತ್ತಿದ್ದಾರೆ. ಅಮೆರಿಕ ಸಂವಿಧಾನದ 25ನೇ ತಿದ್ದುಪಡಿಯ ಅಸ್ತ್ರ ಬಳಸಿಕೊಂಡು ಬೈಡನ್‌ ಅವರನ್ನ ಅಧಿಕಾರದಿಂದಲೇ ಇಳಿಸುವುದಾಗಿ ಬೆದರಿಕೆ ಹಾಕಿದ್ರು ಎಂದು ಆರೋಪಿಸಿದ್ದಾರೆ. ಹಾಗಾದ್ರೆ ಟ್ರಂಪ್ ಮಾಡುತ್ತಿರುವ ಅಮೆರಿಕ ಸಂವಿಧಾನದ 25ನೇ ತಿದ್ದುಪಡಿಯ ದುರ್ಬಳಕೆ ಆರೋಪ ಏನು? ಮುಂದೆ ಓದಿ.

ಒಬಾಮಾ & ಕಮಲಾ ವಿರುದ್ಧ ಆಕ್ರೋಶ?

ಅಮೆರಿಕ ಅಧ್ಯಕ್ಷರಾಗಿದ್ದ ಜಾನ್‌ ಎಫ್‌. ಕೆನಡಿ ಹತ್ಯೆ ನಂತರ ಅಮೆರಿಕ ಕಾಂಗ್ರೆಸ್‌ ಸಂವಿಧಾನಕ್ಕೆ 25ನೇ ತಿದ್ದುಪಡಿ ಮಾಡಿತ್ತು. ತಿದ್ದುಪಡಿ ಪ್ರಕಾರ, ಅಧ್ಯಕ್ಷರೊಬ್ಬರು ಉತ್ತರಾಧಿಕಾರಿ ನೇಮಕ ಮಾಡಿಕೊಳ್ಳುವುದಕ್ಕೆ ಸಂಬಂಧಿಸಿತ್ತು. ಅದರ ಜತೆಗೆ, ಅಕಸ್ಮಾತ್ ಅಮೆರಿಕ ಅಧ್ಯಕ್ಷ ದೈಹಿಕವಾಗಿ ಅಶಕ್ತರಾದ್ರೆ ಅವರನ್ನ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸುವ ಅಧಿಕಾರ ಉಪಾಧ್ಯಕ್ಷನಿಗೆ & ಸಂಪುಟಕ್ಕೆ ಇರುತ್ತದೆ ಎಂಬುದನ್ನ ಕೂಡ ತಿದ್ದುಪಡಿ ತಿಳಿಸಿತ್ತು. ಇದೇ ಅಸ್ತ್ರವನ್ನ ಬಳಸಿಕೊಂಡು ಬೈಡನ್ ವಿರುದ್ಧ ಈಗ ಕುತಂತ್ರ ಮಾಡಲಾಗಿದೆ ಎಂಬುದು ಟ್ರಂಪ್ ಆರೋಪ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+