ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೆರಿಟ್ ಆಧಾರಿತ ವಲಸೆಗೆ ಟ್ರಂಪ್ ಒಲವು, ಇದು ಭಾರತದ ಗೆಲುವು

ವಲಸೆ ನೀತಿ ಬಗ್ಗೆ ಕೆಂಡ ಉಗುಳುತ್ತಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದೀಗ ಮೆದುವಾದಂತಿದೆ. ಅವರು ಪ್ರಸ್ತಾವಿಸಿರುವ ಮೆರಿಟ್ ಆಧಾರಿತ ವಲಸೆ ನೀತಿ ಖಂಡಿತಾ ಭಾರತದಂತಹ ದೇಶಕ್ಕೆ ಅನುಕೂಲಕಾರಿಯಾಗುವಂತಿದೆ

|
Google Oneindia Kannada News

ವಾಷಿಂಗ್ಟನ್, ಮಾರ್ಚ್ 1: ಮೆರಿಟ್ ಆಧಾರಿತ ವಲಸೆ ನಿಯಮವನ್ನು ಅನುಸರಿಸುವ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ಮಾತನಾಡಿದ್ದಾರೆ. ಅದರಿಂದ ಭಾರತದಂಥ ದೇಶದ ಹೈ ಟೆಕ್ ವೃತ್ತಿಪರರಿಗೆ ಅನುಕೂಲವಾಗಲಿದೆ. ಅಮೆರಿಕ ಕಾಂಗ್ರೆಸ್ ಉದ್ದೇಶಿಸಿ ಮೊದಲ ಬಾರಿಗೆ ಮಾತನಾಡಿದ ಟ್ರಂಪ್, ಜಗತ್ತಿನ ವಿವಿಧ ದೇಶಗಳಲ್ಲಿ ಈ ರೀತಿ ಮೆರಿಟ್ ಆಧಾರಿತ ವಲಸೆ ನೀತಿ ಇದೆ ಎಂದಿದ್ದಾರೆ.

ಇಂಥ ನಿಯಮದಿಂದ ಲೆಕ್ಕವಿಲ್ಲದಷ್ಟು ಹಣ ಉಳಿತಾಯ ಆಗುತ್ತದೆ ಮತ್ತು ಕಾರ್ಮಿಕರ ವೇತನ ಹೆಚ್ಚಳವಾಗುತ್ತದೆ. ಈ ಸಂದರ್ಭದಲ್ಲಿ ಅಬ್ರಹಾಂ ಲಿಂಕನ್ ಅವರ ಮಾತನ್ನು ನೆನಪಿಸಿಕೊಂಡ ಅವರು, ಮೆರಿಟ್ ಆಧಾರಿತ ವಲಸೆ ನಿಯಮ ಜಾರಿಗೆ ತರುವ ಅಗತ್ಯವಿದೆ ಎಂದು ಹೇಳಿದರು.[ನೀನ್ಯಾವೋನಯ್ಯ ಅಮೆರಿಕಾಕ್ಕೆ ಬರಬೇಡ ಅಂತ ಹೇಳೋಕೆ?]

Donald Trump softens stand on immigration, favours merit-based system

ಲಕ್ಷಗಟ್ಟಲೆ ಉದ್ಯೋಗವನ್ನು ಅಮೆರಿಕಕ್ಕೆ ವಾಪಸ್ ತರ್ತೀನಿ ಎಂದ ಟ್ರಂಪ್, "ನಮ್ಮ ಕಾರ್ಮಿಕರ ಹಿತರಕ್ಷಣೆ ಮಾಡುವುದು ಅಂದರೆ ನಮ್ಮ ಅಧಿಕೃತ ವಲಸೆ ನಿಯಮದಲ್ಲಿ ಸುಧಾರಣೆ ಮಾಡುವುದು ಅಂತಲೇ ಅರ್ಥ. ಸದ್ಯಕ್ಕಿರುವ ಹಳೆಯ ನಿಯಮ ಬಡ ಕಾರ್ಮಿಕರ ವೇತನಕ್ಕೆ ಹೊಡೆತ ನೀಡುತ್ತಿದೆ. ಆದಾಯ ತೆರಿಗೆದಾರರಿಗೂ ಒತ್ತಡ ಆಗುತ್ತಿದೆ" ಎಂದು ಅವರು ಹೇಳಿದರು.

ಅಮೆರಿಕನ್ನರ ಕೆಲಸ ಹಾಗೂ ವೇತನದ ಸ್ಥಿತಿ ಸುಧಾರಣೆ ಮತ್ತು ಅಮೆರಿಕದ ರಕ್ಷಣೆಯನ್ನು ಗುರಿಯಾಗಿಸಿಕೊಂಡು ಈ ನಿಯಮವನ್ನು ಮಾಡಲಾಗುತ್ತಿದೆ. ಇದೂ ಸೇರಿದ ಹಾಗೆ ಇತರ ಸಮಸ್ಯೆಗಳನ್ನು ಪರಿಹರಿಸಬೇಕು ಅಂದರೆ ಪಕ್ಷ ಭೇದ ಮರೆತು ಒಟ್ಟಾಗಿ ಕೆಲಸ ಮಾಡಬೇಕು ಎಂದು ಟ್ರಂಪ್ ಹೇಳಿದರು.[ಇರಾಕ್ ಮೇಲಿನ ವೀಸಾ ನಿರ್ಬಂಧ ತೆರವು : ಡೊನಾಲ್ಡ್ ಟ್ರಂಪ್]

ಅಮೆರಿಕಕ್ಕೆ ಎಚ್ 1ಬಿ ವೀಸಾ ಪಡೆದು ತೆರಳುವವರಲ್ಲಿ ಭಾರತೀಯರ ಸಂಖ್ಯೆ ಹೆಚ್ಚಿದೆ. ಅದರಲ್ಲೂ ವಿಜ್ಞಾನಿಗಳು, ವೈದ್ಯರು, ಎಂಜಿನಿಯರ್ ಗಳು ಮತ್ತು ಇತರ ಉತ್ತಮ ತರಬೇತಿ ಪಡೆದ ವೃತ್ತಿಪರರು ಅಮೆರಿಕಕ್ಕೆ ಉದ್ಯೋಗಕ್ಕಾಗಿ ತೆರಳುತ್ತಾರೆ. ಅಮೆರಿಕ ಕಂಪನಿಗಳು ಎಚ್ 1ಬಿ ವೀಸಾ ಅಡಿಯಲ್ಲಿ ಬುದ್ಧಿವಂತ ವಿದೇಶಿ ಉದ್ಯೋಗಿಗಳನ್ನು ಆಯ್ಕೆ ಮಾಡಿಕೊಳ್ಳುತ್ತವೆ.

ದಾಖಲೆ ಇಲ್ಲದೆ ಅಮೆರಿಕ ಪ್ರವೇಶಿಸುವ ವಲಸಿಗರನ್ನು ತಡೆಯುವ ಬಗ್ಗೆ ಅಧ್ಯಕ್ಷೀಯ ಚುನಾವಣೆ ಪ್ರಚಾರದ ವೇಳೆ ಡೊನಾಲ್ಡ್ ಟ್ರಂಪ್ ಭರವಸೆ ನೀಡಿದ್ದರು ಎಂಬುದನ್ನು ಇಲ್ಲಿ ಸ್ಮರಿಸಬಹುದು.

English summary
US President Donald Trump on Wednesday called for adopting a merit-based immigration system that could benefit high-tech professionals from countries like India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X