CET ಅಭ್ಯರ್ಥಿಗಳೇ ಗಮನಿಸಿ: ಮೂಲ ದಾಖಲೆ ಸಲ್ಲಿಸಲು ದಿನಾಂಕವಾರು ವೇಳಾಪಟ್ಟಿ ಪ್ರಕಟ
ಬೆಂಗಳೂರು: ವೃತ್ತಿಪರ ಕೋರ್ಸ್‌ಗಳಿಗೆ ಸಾಮಾನ್ಯ ಪ್ರವೇಶ ಪರೀಕ್ಷೆ (ಯುಜಿ) 2026 (UGCET-2026) ಏಪ್ರಿಲ್ ಕೊನೆ ವಾರ ಜರುಗಿತು. ಇತ್ತೀಚೆಗೆ ಸಿಇಟಿ ಪರೀಕ್ಷೆಯ ಕೀ ಉತ್ತರಗಳನ್ನು ಬಿಡುಗಡೆ ಮಾಡಿದ್ದ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಇದೀಗ ನಿದಿಷ್ಟ ಅಭ್ಯರ್ಥಿಗಳಿಗೆ ತಮ್ಮ ಮೂಲ ದಾಖಲೆಗಳನ್ನು ವೇಳಾಪಟ್ಟಿ ಪ್ರಕಾರ ಸಲ್ಲಿಸಲು ಅವಕಾಶ ನೀಡಿ, ವೇಳಾಪಟ್ಟಿ ಬಿಡುಗಡೆ ಮಾಡಿದೆ.
ಹೌದು, ಪ್ರಸಕ್ತ ಸಾಲಿನ ಸಿಇಟಿ ಪರೀಕ್ಷೆ ಬರೆದ ಅಭ್ಯರ್ಥಿಗಳು ಯಾರೆಲ್ಲ ತಮ್ಮ ಅರ್ಜಿಯಲ್ಲಿ ಕ್ರೀಡೆ, ರಕ್ಷಣೆ, ಎನ್ ಸಿಸಿ ಇತ್ಯಾದಿ ವಿಶೇಷ ವರ್ಗಗಳನ್ನು ಕ್ಲೇಮ್ ಮಾಡಿದ್ದೀರಿ ಅವರೆಲ್ಲ ಮೂಲ ದಾಖಲೆಗಳನ್ನು ಮೇ 5ರಿಂದ 15ರವರೆಗೆ ಸಲ್ಲಿಸಬಹುದು. ಪ್ರತಿದಿನ ಬೆಳಗ್ಗೆ 9.30ರಿಂದ ಸಂಜೆ 5.30ರವರೆಗೆ ಬೆಂಗಳೂರಿನ ಮಲ್ಲೇಶ್ವರದಲ್ಲಿನ ಕೆಇಎ ಕಚೇರಿಗೆ ಬಂದು ದಾಖಲೆಯ ಎರಡು ಸೆಟ್ ಜೆರಾಕ್ಸ್ ಪ್ರತಿಗಳನ್ನು ಸಲ್ಲಿಸಬೇಕೆಂದು ಪ್ರಾಧಿಕಾರದ ಕಾರ್ಯ ನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಅವರು ತಿಳಿಸಿದ್ದಾರೆ.

ದಿನಾಂಕವಾರು ಅರ್ಜಿ ಸಲ್ಲಿಕೆ: ಅಭ್ಯರ್ಥಿಗಳು ಗಮನಿಸಿ
* ಮೇ 5ರಿಂದ 7ರವರೆಗೆ ಕ್ರೀಡಾ ಕೋಟಾದ ಅಭ್ಯರ್ಥಿಗಳು ದಾಖಲೆ ಸಲ್ಲಿಸಬೇಕು
* ಸಿಎಪಿಎಫ್, ಸಿಆರ್ ಪಿಎಫ್, ಸಿಐಎಸ್ಎಫ್, ಬಿಎಸ್ಎಫ್, ಐಟಿಬಿಪಿ ಕ್ಲೇಮ್ ಮಾಡಿರುವವರು ಮೇ 8 ರಂದು ಬರಬೇಕು.
E-Swathu: ಇ-ಸ್ವತ್ತು ತಾಂತ್ರಿಕ ಸಮಸ್ಯೆಗಳಿಗೆ ಮುಕ್ತಿ, ಸೇವೆಗೆ ವೇಗ; 1.40 ಲಕ್ಷ ಅರ್ಜಿಗಳ ವಿಲೇವಾರಿ
* ಮಾಜಿ ಸೈನಿಕ/ಮಾಜಿ ಸಿಎಪಿಎಫ್ ಕ್ಲೇಮ್ ಮಾಡಿರುವವರು ಮೇ 9 ಮತ್ತು 10ರಂದು ದಾಖಲೆ ಸಲ್ಲಿಸಬೇಕು.
* ಡಿಫೆನ್ಸ್ ಕೋಟಾ ಕ್ಲೇಮ್ ಮಾಡಿರುವವರು ಮೇ 11 ಮತ್ತು 12ರಂದು ದಾಖಲೆ ಸಲ್ಲಿಸಬೇಕು.
* ಮೇ 13ರಂದು ಸ್ಕೌಟ್ಸ್ ಆ್ಯಂಡ್ ಗೈಡ್ಸ್/ ಆಂಗ್ಲೊ-ಇಂಡಿಯನ್ ಹಾಗೂ ಮೇ 14 ಮತ್ತು 15ರಂದು ಎನ್ ಸಿಸಿ ಕ್ಲೇಮ್ ಮಾಡಿರುವರು ದಾಖಲೆ ಸಲ್ಲಿಸಬೇಕು.
ಹೆಚ್ಚಿನ ವಿವರಗಳಿಗೆ ಇಲ್ಲಿ ನೀಡಲಾದ ಲಿಂಕ್ (https://cetonline.karnataka.gov.in/keawebentry456/ugcet2026/20260421232212kannada.pdf) ಬಳಸಿ ಮಾಹಿತಿ ಪಡೆಯಬಹುದು.
ಅರ್ಜಿ ತಿದ್ದುಪಡಿಗೆ ಮೇ 3ರ ತನಕ ಅವಕಾಶ
ಎಂಜಿನಿಯರಿಂಗ್ ಸೇರಿದಂತೆ ಇತರ ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕೆ ಸಿಇಟಿ ಬರೆದಿರುವ ಅಭ್ಯರ್ಥಿಗಳ ಅರ್ಜಿ ತಿದ್ದುಪಡಿಗೆ ಮೇ 3ರವರೆಗೆ ಮತ್ತೊಂದು ಅವಕಾಶ ನೀಡಲಾಗಿದೆ. ವ್ಯಾಸಂಗ, ಮೀಸಲಾತಿ, ಕ್ಲೇಮ್ ಸೇರಿದಂತೆ ಇತರ ತಿದ್ದುಪಡಿಗಳನ್ನು ಮಾಡಿಕೊಳ್ಳಬಹುದು. ವಿದ್ಯಾರ್ಥಿಗಳ ಕೋರಿಕೆ ಮೇರೆಗೆ ಈ ನಿರ್ಧಾರ ಮಾಡಿದ್ದು, ತಿದ್ದುಪಡಿಗೆ ಇದೊಂದು ಕೊನೆ ಅವಕಾಶ ಎಂದು ಕೆಇಎ ತಿಳಿಸಿದೆ.
ಸಿಇಟಿ ಪರೀಕ್ಷೆ: ಕೀ ಉತ್ತರಗಳ ಲಿಂಕ್
ಇದೇ 23 ಮತ್ತು 24ರಂದು ನಡೆದ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ಯ ಎಲ್ಲ ವಿಷಯಗಳ ಕೀ ಉತ್ತರಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ವೆಬ್ ಸೈಟ್ ನಲ್ಲಿ (https://cetonline.karnataka.gov.in/kea/) ಪ್ರಕಟಿಸಿದೆ.












Click it and Unblock the Notifications