ಹೊಸ ಮನೆ ಕಟ್ಟುತ್ತೀರಾ? ವಾಸ್ತು ಪ್ರಕಾರ ಯಾವ ದಿಕ್ಕಿನಲ್ಲಿ ಪ್ರಾರಂಭಿಸಬೇಕು

ಹೊಸ ಮನೆ ಕಟ್ಟುವುದು ಪ್ರತಿಯೊಬ್ಬರ ಕನಸು ಆಗಿರುತ್ತದೆ. ಆದರೆ ಆ ಕನಸು ಸರಳವಾಗಿ ನೆರವೇರಬೇಕಾದರೆ, ಹಣ ಮತ್ತು ಕಾರ್ಮಿಕರ ಜೊತೆಗೆ ನಮಗೆ ಸರಿಯಾದ ವಾಸ್ತು ಶಾಸ್ತ್ರದ ಯೋಜನೆಯೂ ಅತ್ಯಂತ ಅಗತ್ಯವಿದೆ. ವಾಸ್ತು ಶಾಸ್ತ್ರದ ಪ್ರಕಾರ ಕನಸಿನ ಮನೆಯ ನಿರ್ಮಾಣವನ್ನು ಸರಿಯಾದ ದಿಕ್ಕಿನಲ್ಲಿ ಪ್ರಾರಂಭಿಸಿದರೆ, ಮುಂದಿನ ದಿನಗಳಲ್ಲಿ ಶಾಂತಿ ಮತ್ತು ಸಮೃದ್ಧಿ ಹೆಚ್ಚುತ್ತದೆ ಎಂದು ತಜ್ಞರ ಅಭಿಪ್ರಾಯ ಆಗಿದೆ.

ಮನೆ ನಿರ್ಮಾಣಕ್ಕೆ ಸರಿಯಾದ ದಿಕ್ಕು

ವಾಸ್ತು ಪ್ರಕಾರ ಮನೆಯ ನಿರ್ಮಾಣವನ್ನು ನೈಋತ್ಯ ಮೂಲೆಯಿಂದ ದಿಕ್ಕಿನಿಂದ ಪ್ರಾರಂಭಿಸುವುದು ಒಳ್ಳೆಯದು ಎಂದು ಹೇಳಲಾಗುತ್ತದೆ. ಗೋಡೆಗಳನ್ನು ದಕ್ಷಿಣ ಅಥವಾ ಪಶ್ಚಿಮ ದಿಕ್ಕಿನಿಂದ ಪ್ರಾರಂಭಿಸಲು ಸಲಹೆ ನೀಡಲಾಗುತ್ತದೆ. ನೈಋತ್ಯ ಭಾಗವನ್ನು ಗಟ್ಟಿಯಾಗಿಯೂ ಮತ್ತು ಎತ್ತರವಾಗಿಯೂ ಕಟ್ಟುವುದರಿಂದ ಹಣಕಾಸಿನ ಸ್ಥಿರತೆಗೆ ಕಾರಣವಾಗುತ್ತದೆ.

Vastu Tips for House Construction

ಹಂತ ಹಂತವಾಗಿ ಕಟ್ಟಡ ನಿರ್ಮಾಣ

ಮೊದಲು ನೈಋತ್ಯ ಭಾಗವನ್ನು ಪೂರ್ಣಗೊಳಿಸಿ, ನಂತರ ವಾಯುವ್ಯ ಮತ್ತು ಆಗ್ನೇಯ ಕಡೆಗೆ ಕಟ್ಟಬೇಕು. ಕೊನೆಯಲ್ಲಿ ಈಶಾನ್ಯ ಭಾಗದಲ್ಲಿ ನಿರ್ಮಾಣವನ್ನು ಪೂರ್ಣಗೊಳಿಸುವುದು ಉತ್ತಮ ಎಂದು ವಾಸ್ತು ಸೂಚಿಸುತ್ತದೆ.

ವಾಸ್ತು ಶಾಸ್ತ್ರದ ಪ್ರಕಾರ ನಿಮ್ಮ ಅಡುಗೆಮನೆಯಲ್ಲಿ ಈ 6 ವಸ್ತುಗಳು ಖಾಲಿಯಾಗಬಾರದು: ಇಲ್ಲಿದೆ ಸರಳ ವಿವರಣೆ
ವಾಸ್ತು ಶಾಸ್ತ್ರದ ಪ್ರಕಾರ ನಿಮ್ಮ ಅಡುಗೆಮನೆಯಲ್ಲಿ ಈ 6 ವಸ್ತುಗಳು ಖಾಲಿಯಾಗಬಾರದು: ಇಲ್ಲಿದೆ ಸರಳ ವಿವರಣೆ

ಸ್ಥಳದ ಆಯ್ಕೆ ಮತ್ತು ಸಿದ್ಧತೆ

ಮನೆ ಕಟ್ಟುವ ಜಾಗ ಚೌಕಾಕಾರ ಅಥವಾ ಆಯತಾಕಾರದಾಗಿದ್ದರೆ ಉತ್ತಮ. ಮೂಲೆಗಳು ಕತ್ತರಿಸಿಕೊಂಡಿರುವ ಜಾಗಗಳು ಆರ್ಥಿಕ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ನಂಬಲಾಗಿದೆ. ಜಾಗದಲ್ಲಿ ಹಳೆಯ ಅವಶೇಷಗಳು, ಕಲ್ಲುಗಳು ಅಥವಾ ಅಶುದ್ಧ ವಸ್ತುಗಳಿದ್ದರೆ ಅವನ್ನು ತೆಗೆದು ಹೊಸ ಮಣ್ಣಿನಿಂದ ತುಂಬುವುದು ಮುಖ್ಯ.

ರಸ್ತೆ ಎತ್ತರ ಗಮನ

ಮನೆಯ ಮುಂದಿನ ರಸ್ತೆಗಿಂತ ಮನೆಯು ಎತ್ತರವಾಗಿ ಇರಬೇಕು, ಯಾಕೆಂದರೆ ಮನೆಯ ಮುಂದೆ ರಸ್ತೆಯು ಎತ್ತರವಾಗಿದ್ದರೆ ಮನೆಯ ಆರ್ಥಿಕತೆ, ಶಾಂತಿ ಮತ್ತು ನೆಮ್ಮದಿಗೆ ತೊಂದರೆ ಆಗುತ್ತದೆ ಎಂದು ವಾಸ್ತು ತಜ್ಞರ ಹೇಳುತ್ತಾರೆ. ಮನೆ ಮುಂದಿನ ರಸ್ತೆ ನೇರವಾಗಿ ಮನೆಯ ಮುಂದೆ ಬಂದು ನಿಲ್ಲುವುದು ಕೊಡ ಒಳ್ಳೆಯದಲ್ಲ.

ರಾತ್ರಿ ನಿದ್ರೆ ಬರ್ತಿಲ್ಲವಾ? ವಾಸ್ತು ಪ್ರಕಾರ ನಿದ್ರೆ ಬಾರದ ಸಮಸ್ಯೆಗೆ ಇಲ್ಲಿದೆ ಸುಲಭ ಪರಿಹಾರಗಳು
ರಾತ್ರಿ ನಿದ್ರೆ ಬರ್ತಿಲ್ಲವಾ? ವಾಸ್ತು ಪ್ರಕಾರ ನಿದ್ರೆ ಬಾರದ ಸಮಸ್ಯೆಗೆ ಇಲ್ಲಿದೆ ಸುಲಭ ಪರಿಹಾರಗಳು

ಮನೆಯ ಅಡಿಪಾಯ ನಿರ್ಮಾಣ

ಮನೆಯ ಅಡಿಪಾಯಕ್ಕಾಗಿ ಗುಂಡಿ ಅಗೆಯುವಾಗ ಮೊದಲು ಈಶಾನ್ಯ ದಿಕ್ಕಿನಿಂದ ಆರಂಭಿಸುವುದು ಉತ್ತಮ. ಆದರೆ ಮೊದಲ ಕಲ್ಲನ್ನು ನೈಋತ್ಯದಲ್ಲಿ ಇಡುವುದು ವಾಸ್ತು ಪ್ರಕಾರ ಶ್ರೇಷ್ಟ. ಇದನ್ನು 'ಕಲ್ಲಿನ ಅಡಿಪಾಯ' ಎಂದು ಕರೆಯಲಾಗುತ್ತದೆ.

ಪೂಜೆ ಮತ್ತು ಶುಭಗಳಿಗೆ

ಮನೆ ನಿರ್ಮಾಣಕ್ಕೆ ಪ್ರಾರಂಭಿಸುವ ಮೊದಲು ಗಣಪತಿ ಪೂಜೆ ಮತ್ತು ಭೂಮಿ ಪೂಜೆ ಮಾಡುವುದು ಉತ್ತಮ ಎಂದು ತಜ್ಞರು ಸೂಚಿಸುತ್ತಾರೆ. ಇದರಿಂದ ಅಡೆತಡೆಗಳು ಕಡಿಮೆಯಾಗುತ್ತವೆ ಎನ್ನುವ ನಂಬಿಕೆ ಇದೆ. ನಿರ್ಮಾಣ ಸಮಯದಲ್ಲಿ ಸ್ಥಳದಲ್ಲಿ ಸ್ವಚ್ಚತೆ ಮತ್ತು ಸಕಾರಾತ್ಮಕವಾದ ವಾತಾವರಣ ಕಾಪಾಡಿಕೊಳ್ಳುವುದು ಮುಖ್ಯ.

ಈ ಮಾಹಿತಿ ವಾಸ್ತು ಶಾಸ್ತ್ರದ ನಂಬಿಕೆಗಳ ಆಧಾರಿತವಾಗಿದೆ. ವೈಜ್ಞಾನಿಕ ದೃಷ್ಟಿಕೋನ ಅಥವಾ ತಜ್ಞರ ಸಲಹೆಗಾಗಿ ಸಂಬಂಧಿತ ಪರಿಣಿತರನ್ನು ಸಂಪರ್ಕಿಸುವುದು ಒಳಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+