Donald Trump: ಡೊನಾಲ್ಡ್ ಟ್ರಂಪ್ ಬಿಟ್ಟರು ಹೊಸ ಬಾಣ: ಅಮೆರಿಕ ಚುನಾವಣೆ ಅಖಾಡದಲ್ಲಿ ನಡುಕ!
ಡೊನಾಲ್ಡ್ ಟ್ರಂಪ್ ಪದೇ ಪದೇ ತಮ್ಮ ವಿವಾದಾತ್ಮಕ ಮಾತುಗಳಿಂದ ಎಲ್ಲಾ ಕಡೆ ಸೌಂಡ್ ಮಾಡುತ್ತಿದ್ದರು. ಅದರಲ್ಲೂ ಕಮಲಾ ಹ್ಯಾರಿಸ್ ಬಗ್ಗೆ ಡೊನಾಲ್ಡ್ ಟ್ರಂಪ್ ನೀಡಿದ್ದ ಹೇಳಿಕೆ ವಿವಾದದ ಬಿರುಗಾಳಿ ಎಬ್ಬಿಸಿತ್ತು. ಹೀಗಿದ್ದಾಗ ಟ್ರಂಪ್‌ಗೆ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಅಖಾಡದಲ್ಲಿ ಸೋಲು ಗ್ಯಾರಂಟಿ ಎನ್ನಲಾಗಿತ್ತು. ಹೀಗಾಗಿಯೇ ಡೊನಾಲ್ಡ್ ಟ್ರಂಪ್ ಇದೀಗ ಹೊಸ ಅಸ್ತ್ರ ಒಂದನ್ನು ರೆಡಿ ಮಾಡಿದ್ದಾರೆ. ಡೊನಾಲ್ಡ್ ಟ್ರಂಪ್ ಹೊಸ ಬಾಣ ಬಿಟ್ಟಿದ್ದು, ಅಮೆರಿಕ ಚುನಾವಣೆ ಅಖಾಡದಲ್ಲಿ ನಡುಕ ಶುರುವಾಗಿದೆ!
ಡೊನಾಲ್ಡ್ ಟ್ರಂಪ್ ಬಾಯಿ ಬಿಟ್ಟರೆ ಒಂದೋ ವಿವಾದವೇ ಸೃಷ್ಟಿಯಾಗುತ್ತೆ, ಇಲ್ಲ ಅಂದ್ರೆ ಆ ಮಾತು ಜಗಳಕ್ಕೆ ಕಾರಣವಾಗುತ್ತೆ. ಆದರೆ ಈ ಬಾರಿ ಅಮೆರಿಕದ ಮಾಜಿ ಅಧ್ಯಕ್ಷರಾದ ಹಾಗೂ ಅಮೆರಿಕದ ಹಾಲಿ ಅಧ್ಯಕ್ಷೀಯ ಚುನಾವಣೆ ಅಭ್ಯರ್ಥಿ ಆಗಿರುವ ಡೊನಾಲ್ಡ್ ಟ್ರಂಪ್ ಬೇರೆಯೇ ಶಪಥ ಮಾಡಿದ್ದಾರೆ. ಈ ಮೂಲಕ ಎದುರಾಳಿ ಎದೆಯಲ್ಲಿ ನಡುಕ ತರಿಸುವ ಕೆಲಸ ಕೂಡ ಮಾಡಿದ್ದಾರೆ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್. ಹಾಗಾದರೆ ಡೊನಾಲ್ಡ್ ಟ್ರಂಪ್ ಹೇಳಿರುವುದು ಏನು? ಈ ಮಾತಿನಿಂದ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಏನೆಲ್ಲಾ ಆಗಬಹುದು? ಬನ್ನಿ ತಿಳಿಯೋಣ.

2028ರ ಚುನಾವಣೆಯಲ್ಲಿ ಸ್ಪರ್ಧೆ...
ಅಷ್ಟಕ್ಕೂ ಡೊನಾಲ್ಡ್ ಟ್ರಂಪ್ ಇದೀಗ ಶಪಥ ಒಂದನ್ನ ಮಾಡಿದ್ದಾರೆ. ಆ ಪ್ರಕಾರ ಟ್ರಂಪ್‌ಗೆ ಹಾಲಿ ಚುನಾವಣೆಯಲ್ಲಿ ಸೋಲು ಎದುರಾದರೆ, ಅಂದ್ರೆ ಅಮೆರಿಕ ಅಧ್ಯಕ್ಷೀಯ ಚುನಾವಣೆ ಅಖಾಡದಲ್ಲಿ ಟ್ರಂಪ್ ಸೋತು ಹೋದರೆ 2028ರ ಚುನಾವಣೆಯಲ್ಲಿ ಅವರು ಸ್ಪರ್ಧೆಯನ್ನೇ ಮಾಡುವುದಿಲ್ಲವಂತೆ! ಈ ಕುರಿತು ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಮಹತ್ವದ ಹೇಳಿಕೆ ನೀಡಿದ್ದಾರೆ. ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಈಗ ನಾನು ಸೋತು ಹೋದರೆ 2028ರ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದಿದ್ದಾರೆ ಡೊನಾಲ್ಡ್ ಟ್ರಂಪ್. ಇದು ಅಮೆರಿಕ ಅಧ್ಯಕ್ಷೀಯ ಚುನಾವಣೆ ಅಖಾಡದಲ್ಲಿ ಹೊಸ ಸಂಚಲನಕ್ಕೆ ಕೂಡ ಕಾರಣವಾಗಿದೆ.












Click it and Unblock the Notifications