ಕಮಲಾ ಹ್ಯಾರಿಸ್ ವಿರುದ್ಧ ಡೊನಾಲ್ಡ್ ಟ್ರಂಪ್ ಹೊಸ ಅಸ್ತ್ರ!

ಅಮೆರಿಕ ಅಧ್ಯಕ್ಷೀಯ ಚುನಾವಣೆ 2024ಕ್ಕೆ ಈಗ ರಂಗು ಬಂದಿದೆ. ಭಾರತ ಮೂಲದ ಕಮಲಾ ಅವರನ್ನ ಡೆಮಾಕ್ರಟಿಕ್ ಪಕ್ಷ ಅಧಿಕೃತವಾಗಿ ಅಧ್ಯಕ್ಷೀಯ ಸ್ಥಾನದ ಸ್ಪರ್ಧೆಗೆ ಆಯ್ಕೆ ಮಾಡಿದ ನಂತರ ರೋಚಕ ತಿರುವು ಪಡೆಯುತ್ತಿದೆ ಅಮೆರಿಕ ಅಧ್ಯಕ್ಷೀಯ ಚುನಾವಣೆ. ಜೋ ಬೈಡನ್ ವಿರುದ್ಧ ಡೊನಾಲ್ಡ್ ಟ್ರಂಪ್ ಸುಲಭವಾಗಿ ಗೆಲುವು ಸಾಧಿಸುತ್ತಾರೆ ಎಂಬ ಭಯದ ನಡುವೆ, ಜೋ ಬೈಡನ್ ಚುನಾವಣೆ ಕಣದಿಂದಲೇ ಹಿಂದೆ ಸರಿದು ಕಮಲಾ ಹ್ಯಾರಿಸ್ ಅವರಿಗೆ ಇದೀಗ ಅವಕಾಶ ಮಾಡಿಕೊಟ್ಟಿದ್ದಾರೆ. ಹೀಗಿದ್ದಾಗಲೇ ಹೊಸ ಅಸ್ತ್ರ ಪ್ರಯೋಗಿಸಿದ್ದಾರೆ ಟ್ರಂಪ್!

ಡೊನಾಲ್ಡ್ ಟ್ರಂಪ್ & ಕಮಲಾ ಹ್ಯಾರಿಸ್ ನಡುವೆ ಕಿತ್ತಾಟ ಹಾಗೂ ತಿಕ್ಕಾಟ ನಡೆಯುತ್ತಿರುವುದು ಇದೇ ಮೊದಲೇನಲ್ಲ. 2020ರ ಅಮೆರಿಕ ಅಧ್ಯಕ್ಷೀಯ ಚುನಾವಣೆ ಸಮಯದಲ್ಲಿ ಬೈಡನ್‌ರ ಜೊತೆಗೆ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದ ಕಮಲಾ ಹ್ಯಾರಿಸ್ ವಿರುದ್ಧ ಇದೇ ಟ್ರಂಪ್ ಬಾಯಿಗೆ ಬಂದಂತೆ ಮಾತನಾಡಿದ್ದರು. ಭಾರತ ಮೂಲದ ನಂಟು ಹೊಂದಿರುವ ಕಮಲಾ ಅವರು ಆ ಸಮಯದಲ್ಲೇ ತಕ್ಕ ಉತ್ತರ ನೀಡಿದ್ದರು. ಆದರೆ ಇದೀಗ ಇಬ್ಬರೂ ನೇರವಾಗಿಯೇ ಚುನಾವಣೆ ಅಖಾಡಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಹೀಗಿದ್ದಾಗಲೇ ಟ್ರಂಪ್ ಸ್ಫೋಟಕ ಆರೋಪದ ಮೂಲಕ ಗಮನ ಸೆಳೆದಿದ್ದಾರೆ.

Donald Trump Is Said This Against The Kamala Harris

ಕಮಲಾ ಹ್ಯಾರಿಸ್ ಅಸಮರ್ಥ ಅಭ್ಯರ್ಥಿ?

ಡೊನಾಲ್ಡ್ ಟ್ರಂಪ್ ಮಾತನಾಡಲು ನಿಂತರೆ ಒಂದೋ ಎದುರಾಳಿ ಸೋಲಬೇಕು, ಇಲ್ಲವೋ ಒಂದು ದೊಡ್ಡ ವಿವಾದ ಸೃಷ್ಟಿ ಆಗಬೇಕು. ಅಲ್ಲಿಯ ತನಕ, ಡೊನಾಲ್ಡ್ ಟ್ರಂಪ್ ಅವರಿಗೆ ನೆಮ್ಮದಿ ಇರಲ್ಲ ಅಂತಾ ಕಾಣುತ್ತೆ. ಅದೇ ರೀತಿ ಇದೀಗ ಅಮೆರಿಕ ಅಧ್ಯಕ್ಷೀಯ ಚುನಾವಣೆ ವೇಳೆ ತಮ್ಮ ಪ್ರತಿಸ್ಪರ್ಧಿ ಆಗಲಿರುವ ಕಮಲಾ ಹ್ಯಾರಿಸ್ ಅವರ ಬಗ್ಗೆ ಮನಸ್ಸಿಗೆ ಬಂದಂತೆ ಮಾತನಾಡಿದ್ದಾರೆ ಡೊನಾಲ್ಡ್ ಟ್ರಂಪ್. ಕಮಲಾ ಹ್ಯಾರಿಸ್ ಅಮೆರಿಕದ ಅಧ್ಯಕ್ಷರಾಗಿ ಆಡಳಿತ ನಡೆಸಲು ಅಸಮರ್ಥರು ಎಂದು ಸ್ಫೋಟಕ ಆರೋಪ ಮಾಡಿದ್ದಾರೆ ಟ್ರಂಪ್.

ರೊಚ್ಚಿಗೆದ್ದ ಡೊನಾಲ್ಡ್ ಟ್ರಂಪ್!

ಜೋ ಬೈಡನ್‌ರ ವಿನಾಶಕಾರಿ ನೀತಿಗಳನ್ನ ಕಳೆದ ಅವಧಿಯಲ್ಲಿ ಬೆಂಬಲಿಸುತ್ತಾ ಬಂದ ಕಮಲಾ ಹ್ಯಾರಿಸ್ ಅವರದ್ದು ಅತಿರೇಕದ ಎಡಪಂಥೀಯ ವಿಚಾರಧಾರೆ ಆಗಿದ್ದು. ಕಮಲಾಗೆ ಅಧಿಕಾರ ಸಿಕ್ಕುಬಿಟ್ಟರೆ ನಮ್ಮ ದೇಶವನ್ನು ನಾಶ ಮಾಡುತ್ತಾರೆ. ಅದಕ್ಕೆ ಅವಕಾಶ ನೀಡಬೇಡಿ ಎಂದಿರುವ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಕಮಲಾ ಹ್ಯಾರಿಸ್ ಅವರನ್ನು ಅಮೆರಿಕದಲ್ಲಿ ಆಡಳಿತ ನಡೆಸಲು ಅಸಮರ್ಥರು ಎಂದಿದ್ದಾರೆ. ಅಲ್ಲದೆ ಇಂತಹ ಜನರ ಜೊತೆಗೆ ವ್ಯವಹರಿಸುವಾಗೆಲ್ಲ ತುಂಬಾ ಎಚ್ಚರಿಕೆ ಇರಬೇಕು. ನೀವು ನವೆಂಬರ್‌ನಲ್ಲಿ ಬರುವ ಚುನಾವಣೆಯಲ್ಲಿ ಇವರಿಗೆಲ್ಲಾ ತಕ್ಕ ಪಾಠ ಕಲಿಸಿ ಎಂದು ಸಲಹೆ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+