ಭಾರತ ಮೂಲದ ಕಮಲಾ ಹ್ಯಾರಿಸ್‌ಗೆ ಹೆದರಿ ಓಡಿ ಹೋದ ಡೊನಾಲ್ಡ್ ಟ್ರಂಪ್?
ಡೊನಾಲ್ಡ್ ಟ್ರಂಪ್ ತಮ್ಮ ಬುಡಕ್ಕೆ ತಾವೇ ಬೆಂಕಿ ಇಟ್ಟುಕೊಳ್ಳುವ ಕೆಲಸ ಮಾಡುತ್ತಿದ್ದಾರೆ, ಈ ಮೂಲಕ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಹೀನಾಯವಾಗಿ ಸೋತು ಮನೆಗೆ ಹೋಗಲಿದ್ದಾರೆ ಎಂಬ ಮಾತುಗಳು ನಿಜವಾಗುತ್ತಿವೆ. ಯಾಕಂದ್ರೆ ಕಮಲಾ ಹ್ಯಾರಿಸ್ ಜೊತೆಗೆ ಡೊನಾಲ್ಡ್ ಟ್ರಂಪ್, ಬಹುಮುಖ್ಯ ಕಾರ್ಯಕ್ರಮ ಒಂದನ್ನ ರದ್ದು ಮಾಡಿ ಆದೇಶ ಹೊರಡಿಸಿದ್ದಾರೆ. ಈ ಮೂಲಕ ಇಡೀ ಅಮೆರಿಕದ ಅಧ್ಯಕ್ಷೀಯ ಚುನಾವಣೆ ಇತಿಹಾಸ ತಿರುಗಿ ನೋಡುವಂತೆ ಮಾಡಿದ್ದಾರೆ ಡೊನಾಲ್ಡ್ ಟ್ರಂಪ್!
ಹೌದು, ಡೊನಾಲ್ಡ್ ಟ್ರಂಪ್‌ಗೆ ತಲೆಕೆಟ್ಟು ಹೋಗಿದೆ ಎಂಬ ಮಾತುಗಳು ಇದೀಗ ಅಮೆರಿಕದ ಗಲ್ಲಿ ಗಲ್ಲಿಗಳಲ್ಲೂ ಕೇಳಿಬರುತ್ತಿದೆ. ಯಾಕಂದ್ರೆ ಕಮಲಾ ಹ್ಯಾರಿಸ್ ಅವರನ್ನ ಡೆಮಾಕ್ರಟಿಕ್ ಪಕ್ಷ ಅಂದ್ರೆ ಡೊನಾಲ್ಡ್ ಟ್ರಂಪ್ ಅವರ ವಿರೋಧಿ ಪಕ್ಷ ಆಯ್ಕೆ ಮಾಡಿದ ನಂತರ, ಅಮೆರಿಕ ಅಧ್ಯಕ್ಷೀಯ ಚುನಾವಣೆಯ ದಿಕ್ಕೇ ಬದಲಾಗಿ ಹೋಗಿದೆ. ಈ ಕಾರಣಕ್ಕೆ ಇದೀಗ ತಿಕ್ಕಾಟವೂ ಹೆಚ್ಚಾಗಿದ್ದು, ಕಮಲಾ ಹ್ಯಾರಿಸ್ ಗೆಲುವು ಗ್ಯಾರಂಟಿ ಎಂಬ ಮಾತುಗಳು ಕೇಳಿಬರುತ್ತಿವೆ.

ಡೊನಾಲ್ಡ್ ಟ್ರಂಪ್ ಓಡಿ ಹೋದರಾ?
ಈ ಸಮಯದಲ್ಲೇ ಅಮೆರಿಕ ಅಧ್ಯಕ್ಷೀಯ ಚುನಾವಣೆ ಸಂಪ್ರದಾಯದಂತೆ, ಅಧ್ಯಕ್ಷೀಯ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದ ಇಬ್ಬರು ಅಭ್ಯರ್ಥಿಗಳು ಮುಖಾಮುಖಿ ಸಂವಾದ ನಡೆಸುವುದು ಮಾಮೂಲು. ಈಗಾಗಲೇ ನಡೆದ ಮೊದಲ ಮುಖಾಮುಖಿ ಚರ್ಚೆಯಲ್ಲಿ ಡೊನಾಲ್ಡ್ ಟ್ರಂಪ್‌ಗೆ ಭಾರತ ಮೂಲ ಹೊಂದಿರುವ ಕಮಲಾ ಹ್ಯಾರಿಸ್ ಬೆವರು ಇಳಿಸಿದ್ದಾರೆ. ಹೀಗಿದ್ದಾಗ ಮತ್ತೊಂದು ಸುತ್ತಿನಲ್ಲಿ ಅಂದ್ರೆ 2ನೇ ಸುತ್ತಿನ ಡಿಬೆಟ್ ನಡೆಯಬೇಕಿತ್ತು. ಆದರೆ ಚರ್ಚೆ ಆರಂಭಕ್ಕೂ ಮೊದಲೇ ಭಾರಿ ಸ್ಫೋಟಕ ಸುದ್ದಿ ಹೊರಗೆ ಬಿದ್ದಿದೆ. ಅದು ಏನೆಂದರೆ ಡೊನಾಲ್ಡ್ ಟ್ರಂಪ್ ಇದೀಗ ಕಮಲಾ ಹ್ಯಾರಿಸ್ ಜೊತೆಗೆ, ಮುಂದೆ ಯಾವುದೇ ಚರ್ಚೆ ನಡೆಸಲ್ಲ ಎಂಬ ಹೇಳಿಕೆ ನೀಡಿದ್ದಾರೆ!
ಅಮೆರಿಕದ ಮಾಜಿ ಅಧ್ಯಕ್ಷ ಹೇಳಿದ್ದೇನು?
ಡೊನಾಲ್ಡ್ ಟ್ರಂಪ್ ಸೋಷಿಯಲ್ ಮೀಡಿಯಾದಲ್ಲಿ ಕಮಲಾ ಹ್ಯಾರಿಸ್ ವಿರುದ್ಧ ಕೆಂಡಕಾರಿ ಪೋಸ್ಟ್ ಒಂದನ್ನ ಹಾಕಿದ್ದಾರೆ. ಈ ಪೋಸ್ಟ್‌ನಲ್ಲಿ ಪ್ರತಿಸ್ಪರ್ಧಿ ಅಭ್ಯರ್ಥಿಯೊಂದಿಗೆ ಮತ್ತೊಂದು ಸಂವಾದ ಇರುವುದಿಲ್ಲ ಎಂದು ತಿಳಿಸಿದ್ದಾರೆ ಡೊನಾಲ್ಡ್ ಟ್ರಂಪ್. ಕಮಲಾ ಹ್ಯಾರಿಸ್ ಅವರಿಗೆ ಮುಂಚೆ ಜೋ ಬೈಡನ್ ಜೊತೆಗೆ ಮುಖಾಮುಖಿ ಸಂವಾದ ನಡೆಸಿದ್ದರು ಡೊನಾಲ್ಡ್ ಟ್ರಂಪ್. ಆಗ ಕೂಡ ಜೋ ಬೈಡನ್ & ಡೊನಾಲ್ಡ್ ಟ್ರಂಪ್ ಭರ್ಜರಿ ಮಾತಿನ ಫೈಟಿಂಗ್ ಮಾಡಿದ್ದರು.
ಆ ನಂತರ ಜೋ ಬೈಡನ್ ಅವರು ಚುನಾವಣೆ ಕಣದಿಂದ ಹಿಂದೆ ಸರಿದು ಕಮಲಾ ಹ್ಯಾರಿಸ್ ಅವರಿಗೆ ಅವಕಾಶ ಮಾಡಿಕೊಟ್ಟರು. ಇದಾದ ನಂತರ ಕಮಲಾ ಹ್ಯಾರಿಸ್ ಜೊತೆಗೂ ನಡೆದ ಭಾರಿ ಮಹತ್ವದ ಚರ್ಚೆಯಲ್ಲಿ ಡೊನಾಲ್ಡ್ ಟ್ರಂಪ್ ಹಿನ್ನಡೆ ಅನುಭವಿಸಿದ್ದರು ಎಂಬ ಆರೋಪ ಕೇಳಿಬಂದಿತ್ತು. ಇನ್ನು, ಅಮೆರಿಕದ ಅಧ್ಯಕ್ಷೀಯ ಚುನಾವಣೆ ಮತದಾನವು ನವೆಂಬರ್ 5ರಂದು ನಡೆಯಲಿದೆ. ಹೀಗಾಗಿ ಇಡೀ ಜಗತ್ತಿನಾದ್ಯಂತ ಈ ಎಲೆಕ್ಷನ್ ಭಾರಿ ಕುತೂಹಲ ಕೆರಳಿಸಿದೆ.












Click it and Unblock the Notifications