Donald Trump: ಟ್ರಂಪ್ ಮೇಲೆ ಗುಂಡಿನ ದಾಳಿ: ಸತ್ತೇ ಹೋಗ್ತಾರಾ ಅಮೆರಿಕದ ಮಾಜಿ ಅಧ್ಯಕ್ಷ?
ಅಮೆರಿಕ ಮಾಜಿ ಅಧ್ಯಕ್ಷ & ಹಾಲಿ ಚುನಾವಣೆಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರ ಜೀವಕ್ಕೆ ಕುತ್ತು ಎದುರಾಗಿದೆ ಎಂಬ ಸುದ್ದಿ ಸಂಚಲನ ಸೃಷ್ಟಿ ಮಾಡಿದೆ. ಇಂದು ಚುನಾವಣೆಯ ಪ್ರಚಾರಕ್ಕೆ ತೆರಳಿದ್ದ ಸಮಯದಲ್ಲಿ ಡೊನಾಲ್ಡ್ ಟ್ರಂಪ್ ಅವರ ಮೇಲೆ ಭೀಕರ ಗುಂಡಿನ ದಾಳಿ ಮಾಡಲಾಗಿದೆ. ಹಾಗಾದ್ರೆ ಡೊನಾಲ್ಡ್ ಟ್ರಂಪ್ ಅವರಿಗೆ ಏನಾಯ್ತು? ಈ ಘೋರ ಗುಂಡಿನ ದಾಳಿ ಬಗ್ಗೆ ಮಾಹಿತಿ ತಿಳಿಯಲು ಮುಂದೆ ಓದಿ.
ಡೊನಾಲ್ಡ್ ಟ್ರಂಪ್ 2020ರ ಅಮೆರಿಕ ಅಧ್ಯಕ್ಷೀಯ ಚುನಾವಣೆ ವೇಳೆ ಸೋಲು ಕಂಡು, ಬೈಡನ್ ಅವರಿಗೆ ಅಧಿಕಾರ ಬಿಟ್ಟುಕೊಟ್ಟಿದ್ದರು. ಹೀಗಿದ್ದರೂ ಡೊನಾಲ್ಡ್ ಟ್ರಂಪ್‌ಗೆ ಇರುವ ಜನಪ್ರಿಯತೆಗೆ ಯಾವುದೇ ಕೊರತೆ ಆಗಿಲ್ಲ. ಇದೇ ಕಾರಣಕ್ಕೆ ಈಗಲೂ ಡೊನಾಲ್ಡ್ ಟ್ರಂಪ್ ಅವರನ್ನೇ ಅಧ್ಯಕ್ಷನ ಸ್ಥಾನಕ್ಕೆ ಆಯ್ಕೆ ಮಾಡಲು ಅಮೆರಿಕನ್ನರು ಉತ್ಸಾಹ ತೋರಿಸುತ್ತಿದ್ದಾರೆ. ಹೀಗೆ ಚುನಾವಣೆ ಶುರು ಆಗುವ ಮೊದಲೇ ಡೊನಾಲ್ಡ್ ಟ್ರಂಪ್ ಪರವಾಗಿ ಅಲೆ ಎದ್ದಿದೆ. ಇದೇ ಕಾರಣಕ್ಕೆ ಟ್ರಂಪ್ ಕೂಡ ಅಮೆರಿಕದ ಪ್ರತಿಯೊಂದು ರಾಜ್ಯಕ್ಕೂ ತೆರಳಿ ಪ್ರಚಾರ ನಡೆಸುತ್ತಿದ್ದಾರೆ. ಹೀಗೆ ಚುನಾವಣೆ ಕುರಿತು ರ್‍ಯಾಲಿ ನಡೆಸುವ ಸಮಯದಲ್ಲೇ ಡೊನಾಲ್ಡ್ ಟ್ರಂಪ್ ಮೇಲೆ ಭೀಕರ ಗುಂಡಿನ ದಾಳಿ ನಡೆದಿದೆ.

ಡೊನಾಲ್ಡ್ ಟ್ರಂಪ್‌ಗೆ ಏನಾಯ್ತು?
ಅಮೆರಿಕದ ಪೆನ್ಸಿಲ್ವೇನಿಯಾದಲ್ಲಿ ಡೊನಾಲ್ಡ್ ಟ್ರಂಪ್ ಚುನಾವಣೆ ಸಂಬಂಧ ಪ್ರಚಾರ ಸಭೆಯನ್ನ ನಡೆಸುವ ವೇಳೆ ಗುಂಡಿನ ದಾಳಿ ಆಗಿದೆ. ಆದರೆ, ಅದೃಷ್ಟಕ್ಕೆ ಟ್ರಂಪ್ ಅವರ ಕಿವಿಗೆ ತಾಗಿದ ಆ ಗುಂಡು ಪಕ್ಕಕ್ಕೆ ಜಾರಿ ಹೋಗಿದೆ. ಹೀಗಾಗಿ, ಗುಂಡು ತಗುಲಿದ ಪರಿಣಾಮ ಟ್ರಂಪ್ ಕಿವಿ & ಮುಖದ ತುಂಬಾ ರಕ್ತ ಜಲಪಾತದಂತೆ ಹರಿದಾಡಿದೆ. ಆ ತಕ್ಷಣ ಭದ್ರತಾ ಸಿಬ್ಬಂದಿ ಓಡೋಡಿ ಬಂದಿದ್ದಾರೆ.
ಇನ್ನು ರಹಸ್ಯವಾಗಿ ಭದ್ರತೆ ಜವಾಬ್ದಾರಿ ವಹಿಸಿಕೊಂಡಿದ್ದ ಭದ್ರತಾ ಸಿಬ್ಬಂದಿ ಕೂಡ ಟ್ರಂಪ್‌ಗೆ ಈ ವೇಳೆ ನೆರವಾಗಿದ್ದಾರೆ. ಕೂಡಲೇ ಆಸ್ಪತ್ರೆಗೆ ಕೂಡ ಸೇರಿಸಲಾಗಿದ್ದು, ಟ್ರಂಪ್ ಅವರ ಜೀವಕ್ಕೆ ಈಗ ಯಾವುದೇ ಅಪಾಯ ಇಲ್ಲ ಎಂದು ತಿಳಿಸಲಾಗಿದೆ. ಮತ್ತೊಂದು ಕಡೆ ಟ್ರಂಪ್ ಚುನಾವಣೆ ಪ್ರಚಾರ ಸಭೆಯಲ್ಲಿ ಭಾಗವಹಿಸಿದ್ದ ಜನರು ಕೂಡ ಹೀಗೆ ಗುಂಡಿನ ಸದ್ದು ಕೇಳಿ ಓಡೋಡಿ ಹೋಗಿದ್ದಾರೆ.
81 ವರ್ಷ VS 78 ವರ್ಷ!
ಅಮೆರಿಕ ಅಧ್ಯಕ್ಷರ ಹುದ್ದೆಗೆ 81 ವರ್ಷದ ಜೋ ಬೈಡನ್ ವಿರುದ್ಧ 78 ವರ್ಷದ ಟ್ರಂಪ್ ಸ್ಪರ್ಧಿಸಿದ್ದಾರೆ ಹೀಗಾಗಿ ಇಬ್ಬರ ನಡುವೆ ಭರ್ಜರಿ ಫೈಟಿಂಗ್ ಇದೆ. ಆದರೆ ಇಂತಹ ಸಮಯದಲ್ಲೇ ಅನಾಮಿಕರ ಗುಂಡಿನ ದಾಳಿ ಅಮೆರಿಕದಲ್ಲಿ ಸಂಚಲನ ಸೃಷ್ಟಿ ಮಾಡಿದೆ. ಘಟನೆ ಬಗ್ಗೆ ಸ್ವತಃ ಅಮೆರಿಕ ಅಧ್ಯಕ್ಷ ಜೋ ಬೈಡನ್ ಹೇಳಿಕೆ ನೀಡಿದ್ದು, ಅಮೆರಿಕನ್ನರು ಈ ಘಟನೆಯಿಂದಾಗಿ ವಿಚಲಿತರಾಗಬೇಡಿ. ಈ ಕುರಿತು ತನಿಖೆ ನಡೆಸಲಾಗುತ್ತಿದೆ. ಹೀಗಾಗಿ ಶಾಂತಿ ಕಾಪಾಡಬೇಕು ಎಂದು ಮನವಿ ಮಾಡಿದ್ದಾರೆ. ಮತ್ತೊಂದು ಕಡೆ ಗುಂಡಿನ ದಾಳಿ ನಡೆಸಿದ ಅನಾಮಧೇಯ ವ್ಯಕ್ತಿ ಮೃತಪಟ್ಟಿರುವ ಬಗ್ಗೆ ಇದೀಗ ಮಾಹಿತಿ ಹರಿದಾಡುತ್ತಿದೆ.












Click it and Unblock the Notifications