ಡೊನಾಲ್ಡ್ ಟ್ರಂಪ್ ವಿರುದ್ಧ ಸ್ವಂತ ಪಕ್ಷದವರಿಂದಲೇ ವಿರೋಧ!
ಡೊನಾಲ್ಡ್ ಟ್ರಂಪ್ ಬಾಯಿಗೆ ಬಂದಂತೆ ಮಾತನಾಡಿ ಎಲ್ಲವನ್ನೂ ಹಾಳು ಮಾಡಿಕೊಂಡು, ತಮ್ಮ ಸ್ವಂತ ಪಕ್ಷದವರನ್ನೇ ಸಂಕಷ್ಟಕ್ಕೆ ಸಿಲುಕಿಸುತ್ತಿದ್ದಾರೆ ಎಂಬ ಆರೋಪ ಇದೆ. ಹೀಗಿದ್ದಾಗ ದಿಢೀರ್ ಸ್ವತಃ ಡೊನಾಲ್ಡ್ ಟ್ರಂಪ್ ಅವರ ಪಕ್ಷದವರೇ ತಿರುಗಿಬಿದ್ದು, ಟ್ರಂಪ್ ಬಗ್ಗೆ ಇದೀಗ ಆಕ್ರೋಶ ಹೊರಹಾಕುತ್ತಿದ್ದಾರೆ! ಹಾಗಾದ್ರೆ ಟ್ರಂಪ್ ವಿರುದ್ಧ ರಿಪಬ್ಲಿಕನ್ ಪಕ್ಷದ ನಾಯಕರು ಕೆಂಡವಾಗಲು ಕಾರಣ ಏನು?
ಡೊನಾಲ್ಡ್ ಟ್ರಂಪ್ ತಮ್ಮ ವಿವಾದಗಳ ಮೂಲಕವೇ ಸದ್ದು ಮಾಡಿದ್ದವರು. ಅಮೆರಿಕದಲ್ಲಿ ಒಂದು ಹವಾ ಇಟ್ಟಿದ್ದ ಡೊನಾಲ್ಡ್ ಟ್ರಂಪ್ ಅಮೆರಿಕ ದೇಶವನ್ನು ಮತ್ತೊಮ್ಮೆ ಜಗತ್ತಿನ ಕಿಂಗ್ ಮಾಡುವೆ ಎಂದು ಪಣತೊಟ್ಟು ನಿಂತಿದ್ದರು. ಆದರೆ, ಅಮೆರಿಕ ಉದ್ಧಾರ ಮಾಡುವುದನ್ನು ಬಿಟ್ಟು ಡೊನಾಲ್ಡ್ ಟ್ರಂಪ್ ಬೇರೆ ಎಲ್ಲವನ್ನೂ ಮಾಡಿಬಿಟ್ಟರು. ತಮ್ಮ ಅಧಿಕಾರ ಅವಧಿಯಲ್ಲಿ ಟ್ರಂಪ್ ಮಾಡಿಕೊಂಡ ವಿವಾದಗಳಷ್ಟು ಬೇರೆ ಯಾವುದೇ ಅಮೆರಿಕನ್ ಪ್ರೆಸಿಡೆಂಟ್ ಮಾಡಲಿಲ್ಲ ಎಂಬ ಆರೋಪ ಕೇಳಿಬಂದಿತ್ತು. ಇಷ್ಟೆಲ್ಲಾ ಕಿರಿಕ್ ನಡುವೆ ಇದೀಗ ಭಾರತ ಮೂಲದ ಮಹಿಳೆ ಕಮಲಾ ಹ್ಯಾರಿಸ್ ಕುರಿತು ಜನಾಂಗೀಯ ನಿಂದನೆ ಮಾಡಿದ ಆರೋಪ ಡೊನಾಲ್ಡ್ ಟ್ರಂಪ್ ವಿರುದ್ಧ ಕೇಳಿಬಂದಿದೆ.

ಸ್ವಂತ ಪಕ್ಷದವರಿಂದಲೇ ಟ್ರಂಪ್‌ಗೆ ಕ್ಲಾಸ್!
ಡೊನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಸೋಲುವುದು ಬಹುತೇಕ ಪಕ್ಕಾ ಎಂಬ ಮಾತುಗಳು ಸಮೀಕ್ಷೆ ವರದಿಯ ನಂತರ ಕೇಳಿಬರುತ್ತಿದೆ. ಯಾಕಂದ್ರೆ ಟ್ರಂಪ್ ವಿರುದ್ಧ ಜೋ ಬೈಡನ್ ಸ್ಪರ್ಧೆ ಮಾಡಿದ್ದರೆ ಆಗ ಸುಲಭವಾಗಿ ಟ್ರಂಪ್ ಗೆಲ್ಲುತ್ತಿದ್ದರು. ಆದರೆ ಇದನ್ನ ಅರ್ಥ ಮಾಡಿಕೊಂಡಿದ್ದ ಜೋ ಬೈಡನ್ ಅಧ್ಯಕ್ಷೀಯ ಚುನಾವಣೆಯಿಂದ ಹಿಂದೆ ಸರಿದಿದ್ದು ಸಂಚಲನ ಸೃಷ್ಟಿಸಿದೆ.
ಜೋ ಬೈಡನ್ ಹಿಂದೆ ಸರಿದ ನಂತರ ಕಮಲಾ ಹ್ಯಾರಿಸ್ ಅಭ್ಯರ್ಥಿ ಆಗಿದ್ದಾರೆ. ಆದರೆ ಕಮಲಾ ವಿರುದ್ಧ ಸೋಲಿನ ಭಯದಲ್ಲಿರುವ ಟ್ರಂಪ್ ಈಗ ನರಳುತ್ತಿದ್ದಾರೆ ಎಂಬ ಆರೋಪ ಇದೆ. ಈ ಕಾರಣಕ್ಕೆ ಟ್ರಂಪ್ ಈಗ ಕಮಲಾ ಹ್ಯಾರಿಸ್ ವಿರುದ್ಧ ಜನಾಂಗೀಯ ನಿಂದನೆ ಮಾಡಿದ ಆರೋಪ ಕೇಳಿಬಂದಿದೆ. ಈ ಘಟನೆಯ ಬೆನ್ನಲ್ಲೇ ಸ್ವಂತ ಪಕ್ಷದವರೇ, ಟ್ರಂಪ್‌ಗೆ ಬುದ್ಧಿ ಹೇಳಿ ಬೇಸರ ಹೊರ ಹಾಕಿದ್ದಾರೆಂಬ ಮಾತುಗಳು ಅಮೆರಿಕದ ರಾಜಕೀಯ ವಲಯದಲ್ಲಿ ಕೇಳಿಬಂದಿದೆ.
ಡೊನಾಲ್ಡ್ ಟ್ರಂಪ್ VS ಭಾರತದ ಮಹಿಳೆ?
ಹೌದು, ಡೊನಾಲ್ಡ್ ಟ್ರಂಪ್‌ಗೆ ಅಮೆರಿಕದ ಕಾನೂನಿನ ಬಗ್ಗೆ ಜ್ಞಾನ ಇದೆಯೋ, ಇಲ್ಲವೋ ಗೊತ್ತಿಲ್ಲ. ಯಾಕಂದ್ರೆ ಭಾರತ ಮೂಲದ ನಂಟು ಹೊಂದಿರುವ ಕಮಲಾ ಹ್ಯಾರಿಸ್ ವಿರುದ್ಧ ಇದೀಗ ಜನಾಂಗೀಯ ದಾಳಿ ನಡೆಸಿದ್ದಾರೆ. ಭಾರತ ಮೂಲದ ಅಮೆರಿಕ ಉಪಾಧ್ಯಕ್ಷೆ ಕಮಲಾ, ಇದೀಗ ಅಧ್ಯಕ್ಷೀಯ ಚುನಾವಣೆಗೆ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಆಗಿ ಸ್ಪರ್ಧೆ ಮಾಡಿದ್ದಾರೆ.
ಆದರೆ ಇದೇ ಕಮಲಾ ಅವರ ವಿರುದ್ಧ ಈಗ ಡೊನಾಲ್ಡ್ ಟ್ರಂಪ್ ಜನಾಂಗೀಯ ದಾಳಿಯನ್ನ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಕಮಲಾ ಹ್ಯಾರಿಸ್ ಕಪ್ಪುವರ್ಣೀಯ ಮಹಿಳೆಯೇ? ಅಥವಾ ಭಾರತೀಯರೇ? ಎಂದು ಟ್ರಂಪ್ ಪ್ರಶ್ನಿಸಿದ್ದಾರೆ. ಮೊದಲಿನಿಂದ ಕೂಡ ಡೊನಾಲ್ಡ್ ಟ್ರಂಪ್ ಇದೇ ರೀತಿ ವಿವಾದ ಸೃಷ್ಟಿಸುವ ಮಾತುಗಳನ್ನ ಆಡುತ್ತಾ ಬಂದಿದ್ದರು. ಈಗಲಾದರೂ ಟ್ರಂಪ್ ಬದಲಾಗುತ್ತಾರಾ? ಎಂಬ ನಿರೀಕ್ಷೆ ಸುಳ್ಳಾಗುತ್ತಿದೆ.












Click it and Unblock the Notifications