Donald Trump: ಪನಾಮ ಕಾಲುವೆ ವಿಚಾರಕ್ಕೆ ಕೈಹಾಕಿದ ಡೊನಾಲ್ಡ್ ಟ್ರಂಪ್‌ಗೆ ಖಡಕ್ ತಿರುಗೇಟು!

ಡೊನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷರಾಗಿ ಅಧಿಕಾರವನ್ನು ವಹಿಸಿಕೊಳ್ಳಲು ಇನ್ನೂ ಕೆಲವು ದಿನಗಳು ಬಾಕಿ ಉಳಿದಿವೆ, ಹೀಗಿದ್ದಾಗಲೇ ದೊಡ್ಡ ಮಟ್ಟಿಗೆ ಕಿರಿಕ್ ಶುರುವಾಗಿದೆ. ಮಾತು ಮನೆ ಕೆಡಿಸಿತ್ತು & ತೂತು ಒಲೆ ಕೆಡಿಸಿತ್ತು ಅನ್ನುವಂತೆ, ಈಗ ಪನಾಮ ಕಾಲುವೆ ವಿಚಾರಕ್ಕೆ ಕೈಹಾಕಿದ್ದ ಡೊನಾಲ್ಡ್ ಟ್ರಂಪ್‌ಗೆ ಖಡಕ್ ತಿರುಗೇಟು ಸಿಕ್ಕಿದೆ. ಖುದ್ದು ಪನಾಮ ಅಧ್ಯಕ್ಷರೇ ಡೊನಾಲ್ಡ್ ಟ್ರಂಪ್ ಹೇಳಿಕೆಗೆ ಸರಿಯಾಗಿ ಉತ್ತರ ನೀಡಿದ್ದಾರೆ!

ಒಂದಾನೊಂದು ಕಾಲದಲ್ಲಿ ಪನಾಮ ಕಾಲುವೆ ಅಮೆರಿಕದ ಹಿಡಿತದಲ್ಲೇ ಇತ್ತು, ಆದರೆ ಆ ಹಿಡಿತ ತಪ್ಪಿಹೋಗಿ ಕೊನೆಗೆ ಪನಾಮ ಕಾಲುವೆ ಸ್ವತಂತ್ರವಾಗಿ ಅದೇ ದೇಶದ ಸರ್ಕಾರದ ಕೈಗೆ ಸಿಕ್ಕಿತ್ತು. ಹೀಗೆ ಪನಾಮ ಕಾಲುವೆ ಮೂಲಕವೇ ಪನಾಮ ಎಂಬ ಮಧ್ಯ ಅಮೆರಿಕದ ದೇಶವು ಜೀವನ ನಡೆಸುತ್ತಿದೆ. ಹೀಗಿದ್ದಾಗಲೇ ಹೊಸ ಕಿರಿಕ್ ತೆಗೆದಿರುವ ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ಪನಾಮ ಕಾಲುವೆ ನಮಗೆ ಸೇರಿದ್ದು ಒಂದೋ ಅಲ್ಲಿನ ತೆರಿಗೆ ಕಡಿಮೆ ಮಾಡಿ ಅಥವಾ ಪನಾಮ ಕಾಲುವೆ ಅಧಿಕಾರ ನಮಗೆ ಕೊಡಿ ಎಂದಿದ್ದರು!

Donald Trump Got Reply For His Comment On The Panama Canal

ಇಂಚಿಂಚು ಜಾಗ ಕೂಡ ನಮಗೆ...

ಹೀಗೆ, ಡೊನಾಲ್ಡ್ ಟ್ರಂಪ್ ಅವರು ಪನಾಮ ಕಾಲುವೆ ಬಗ್ಗೆ ಮಾತನಾಡಿದ ವಿಚಾರ ಇದೀಗ ಪನಾಮ ಎಂಬ ದೇಶವನ್ನು ಕೆರಳಿಸಿ ಕೆಂಡವಾಗಿಸಿದೆ. ಇದೇ ಕಾರಣಕ್ಕೆ ಖಡಕ್ ಉತ್ತರವನ್ನ ನೀಡಿರುವ ಪನಾಮ ದೇಶದ ಅಧ್ಯಕ್ಷ ಮುಲಿನೊ, ಪನಾಮ ಕಾಲುವೆಯ ಇಂಚಿಂಚು ಜಾಗ ಕೂಡ ನಮಗೆ ಸೇರಿದೆ. ಅದರ ಅಧಿಕಾರವನ್ನು ಬಿಟ್ಟುಕೊಡುವ ಮಾತೇ ಇಲ್ಲ ಅಂತಿದ್ದಾರೆ. ಈ ಮೂಲಕ ಡೊನಾಲ್ಡ್ ಟ್ರಂಪ್ ಅವರು ತಮ್ಮ ಮಾತಿಗೆ ತಕ್ಕ ಉತ್ತರ ಪಡೆದಿದ್ದಾರೆ.

ಪನಾಮ ಕಾಲುವೆ ವಿಚಾರದಲ್ಲಿ ಟ್ರಂಪ್ ಜಗಳ?

ಹೌದು, ಜಗತ್ತಿನ ಅತಿದೊಡ್ಡ ಮಾನವ ನಿರ್ಮಿತ ಕಾಲುವೆಗಳ ಪೈಕಿ ಪನಾಮ ಕಾಲುವೆ ಕೂಡ ಒಂದಾಗಿದೆ. ಆದರೆ ಪನಾಮ ಕಾಲುವೆ ಬಳಕೆಗೆ ಹೆಚ್ಚಿನ ಶುಲ್ಕ ವಿಧಿಸಲಾಗುತ್ತಿದೆ, ಹಾಗೇ ಈ ಮೂಲಕ ಅಮೆರಿಕ ಮೂಲದ ಹಡಗುಗಳಿಗೆ ತೊಂದರೆ ಆಗುತ್ತಿದೆ ಎಂಬ ಭಾರಿ ಗಂಭೀರವಾದ ಆರೋಪ ಕೇಳಿ ಬಂದಿತ್ತು. ಈ ಆರೋಪದ ಬೆನ್ನಲ್ಲೇ ಡೊನಾಲ್ಡ್ ಟ್ರಂಪ್ ಅವರು ಆಕ್ರೋಶ ಹೊರಹಾಕಿ, ಪನಾಮ ಕಾಲುವೆ ಮತ್ತೆ ನಮ್ಮ ಅಧಿಕಾರಕ್ಕೆ ವಹಿಸಿಕೊಡಿ ಅಂತಾ ಆಗ್ರಹಿಸಿದ್ದರು.

ಮತ್ತೊಂದು ಎಡವಟ್ಟು ಮಾಡಿದ್ರಾ ಟ್ರಂಪ್?

ಡೊನಾಲ್ಡ್ ಟ್ರಂಪ್ ಅವರು ಈ ರೀತಿ ಹೇಳಿಕೆ ನೀಡಿರುವ ಕಾರಣಕ್ಕೆ ಇದೀಗ ಮಧ್ಯ ಅಮೆರಿಕ ದೇಶಗಳು ಕೂಡ ಆಕ್ರೋಶ ಹೊರ ಹಾಕುತ್ತಿವೆ. ಜೊತೆಗೆ ಈ ವಿಚಾರ ಜಾಗತಿಕವಾಗಿ ಕೂಡ, ದೊಡ್ಡ ಮಟ್ಟಿಗೆ ಸದ್ದು ಮಾಡುತ್ತಿದೆ. ಯಾಕಂದ್ರೆ ಪನಾಮ ಕಾಲುವೆ ಕೂಡ ಕೋಟಿ ಕೋಟಿ ಡಾಲರ್ ಆದಾಯ ತಂದುಕೊಡುವ ಜಾಗ. ಹೀಗಾಗಿ ಎಲ್ಲವನ್ನೂ ಪರಿಗಣಿಸಿ ಇದೀಗ ಪನಾಮ ಅಧ್ಯಕ್ಷರು ರೊಚ್ಚಿಗೆದ್ದಿದ್ದಾರೆ, ಇಂತಹ ಬೆಳವಣಿಗೆ ಅಮೆರಿಕ & ಪನಾಮ ನಡುವಿನ ಸಂಬಂಧ ಹಾಳು ಮಾಡುವ ಸಾಧ್ಯತೆ ದಟ್ಟವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+