Get Updates
Get notified of breaking news, exclusive insights, and must-see stories!

ಭಾರತಕ್ಕೆ ಭರ್ಜರಿ ಗುಡ್‌ನ್ಯೂಸ್‌ ಕೊಟ್ಟ ಟ್ರಂಪ್: ಚೀನಾ ಇನ್ಮುಂದೆ ವಿಲವಿಲ ಪಕ್ಕಾ!

ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಭಾರತಕ್ಕೆ ಭರ್ಜರಿ ಗುಡ್‌ನ್ಯೂಸ್‌ ಕೊಟ್ಟಿದ್ದಾರೆ. ಅಮೆರಿಕದ ಅಧ್ಯಕ್ಷರಾಗಿ ಡೊನಾಲ್ಡ್‌ ಟ್ರಂಪ್ ಅವರು ಆಯ್ಕೆಯಾಗುತ್ತಿದ್ದಂತೆಯೇ ಭಾರತೀಯರಲ್ಲಿ ಹೊಸ ಕನಸುಗಳು ಚಿಗುರೊಡೆದಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು ಹಾಗೂ ಅಮೆರಿಕದ ಅಧ್ಯಕ್ಷರ ನಡುವೆ ಉತ್ತಮ ಸಂಬಂಧ ಇದೆ. ಹೀಗಾಗಿ, ಭಾರತಕ್ಕೆ ಒಳ್ಳೆಯ ಅವಕಾಶಗಳು ಸಿಗಲಿವೆ. ಟ್ರಂಪ್ ಅವರ ಆಯ್ಕೆಯಿಂದಾಗಿ ಭಾರತಕ್ಕೆ ಲಾಭವಾಗಲಿದೆ ಎಂದೇ ಹೇಳಲಾಗಿತ್ತು. ಇದೀಗ ಭಾರತಕ್ಕೆ ಲಾಭವಾಗುವ ಮೊದಲ ಬೆಳವಣಿಗೆ ಆಗಿದೆ.

ಈಚೆಗೆ ನಡೆದ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್‌ ಟ್ರಂಪ್‌ ಅವರು ಭರ್ಜರಿ ಗೆಲುವು ದಾಖಲಿಸಿದ್ದಾರೆ. ಡೊನಾಲ್ಡ್‌ ಟ್ರಂಪ್ ಅವರು ಅಧ್ಯಕ್ಷರಾದ ಮೇಲೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು, ನನ್ನ ಹಳೆಯ ಸ್ನೇಹಿತ ಮತ್ತೆ ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಅವರಿಗೆ ಶುಭಾಶಯಗಳು ಭಾರತದೊಂದಿಗೆ ಅಮೆರಿಕದ ಬಾಂಧವ್ಯ ಇನ್ನಷ್ಟು ವೃದ್ಧಿಯಾಗಲಿದೆ. ಎರಡೂ ದೇಶಗಳ ನಡುವೆ ಹೊಸ ಅಭಿವೃದ್ಧಿಗೆ ಹಾದಿಯಾಗಲಿದೆ ಎಂದಿದ್ದರು. ಇದೀಗ ಆ ಮಾತುಗಳು ನಿಜವಾಗ್ತಿದೆ.

Donald Trump gave great good news to India China began to tremble

ಚೀನಾಗೆ ಟಾಂಗ್‌ ಕೊಟ್ಟು ಭಾರತಕ್ಕೆ ನೆರವು ನೀಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಅವರು ಮೊದಲ ಹೆಜ್ಜೆ ಇರಿಸಿದ್ದಾರೆ. ಇದೀಗ ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ ಮೈಕ್‌ ವಾಲ್ಟ್ಜ್‌ ಅವರನ್ನು ನೇಮಕ ಮಾಡಲಾಗಿದೆ. ಇವರು ಅಮೆರಿಕದ ಪ್ಲೋರಿಡಾದ ಪ್ರತಿನಿಧಿಯಾಗಿದ್ದಾರೆ. ಇವರ ಆಯ್ಕೆ ಭಾರತಕ್ಕೆ ಲಾಭದಾಯಕ ಎಂದೇ ವಿಶ್ಲೇಷಿಸಲಾಗುತ್ತಿದೆ.

ಯಾಕೆಂದರೆ ಮೈಕ್‌ ವಾಲ್ಟ್ಜ್‌ ಚೀನಾದ ಮೇಲೆ ಸದಾ ಹದ್ದಿನ ಕಣ್ಣು ಇರಿಸಿದ್ದರು. ಚೀನಾದ ತಪ್ಪು ನಿರ್ಧಾರಗಳನ್ನು ಇವರು ಸದಾ ವಿರೋಧಿಸಿಕೊಂಡು ಬಂದಿದ್ದಾರೆ. ಅಷ್ಟೇ ಅಲ್ಲ ಕೆಲವು ಕಠಿಣ ಸಂದರ್ಭಗಳಲ್ಲಿ ಚೀನಾದ ವಿರುದ್ಧ ಗಟ್ಟಿ ನಿರ್ಧಾರಗಳನ್ನು ಸಹ ತೆಗೆದುಕೊಂಡಿದ್ದಾರೆ.

ಹೀಗಾಗಿ, ಇವರ ಆಯ್ಕೆ ಪರೋಕ್ಷವಾಗಿ ಭಾರತಕ್ಕೆ ಲಾಭವನ್ನು ತರುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಚೀನಾ ವಿನಾಕಾರಣ ಭಾರತದೊಂದಿಗೆ ಜಗಳಕ್ಕೆ ಇಳಿಯುತ್ತಿದೆ. ಇತ್ತೀಚಿನ ದಿನಗಳಲ್ಲಿ ಅದು ತುಸು ಇಳಿಕೆಯಾಗಿದ್ದರೂ, ಚೀನಾದ ನಡೆ ಯಾವಾಗಲೂ ಅನುಮಾನಾಸ್ಪದವೇ.

Donald Trump gave great good news to India China began to tremble

ರಷ್ಯಾ - ಭಾರತದ ಸಂಬಂಧ ಉತ್ತಮವಾಗಿದೆಯಾದರೂ, ರಷ್ಯಾ ಕಮ್ಯೂನಿಸ್ಟ್‌ ದೇಶವಾಗಿರುವುದರಿಂದ ಚೀನಾದ ಪರವಾದ ಒಲವನ್ನು ಈ ಹಿಂದೆಯಿಂದಲೂ ಮುಂದುವರಿಸಿಕೊಂಡು ಬಂದಿದೆ. ಅಲ್ಲದೇ ರಷ್ಯಾ ದೇಶವು ಭಾರತ ಸಂಕಷ್ಟದಲ್ಲಿ ಇರುವ ಸಂದರ್ಭದಲ್ಲಿ ಭಾರತದ ಕೈ ಹಿಡಿದಿದೆಯಾದರೂ ಈಗ ಪರಿಸ್ಥಿತಿ ಭಿನ್ನವಾಗಿದೆ.

ರಷ್ಯಾ ಹಾಗೂ ಉಕ್ರೇನ್‌ನ ನಡುವೆ ಈಗ ಯುದ್ಧ ನಡೆಯುತ್ತಿರುವುದರಿಂದ ರಷ್ಯಾ ಈಗಾಗಲೇ ಆರ್ಥಿಕವಾಗಿಯೂ ಸೊರಗಿದೆ. ಹೀಗಾಗಿ, ಚೀನಾವನ್ನು ಕಟ್ಟಿಹಾಕುವುದಕ್ಕೆ ಭಾರತಕ್ಕೆ ಬಲಿಷ್ಠ ರಾಷ್ಟ್ರವೊಂದರ ಬೆಂಬಲ ಅತ್ಯಂತ ಅವಶ್ಯವಾಗಿದೆ. ಇದೀಗ ಚೀನಾವನ್ನು ಕಟ್ಟಿ ಹಾಕುವ ನಿಟ್ಟಿನಲ್ಲಿ ಅಮೆರಿಕ ಮೊದಲ ಹೆಜ್ಜೆ ಇರಿಸಿದೆ.

ಮೈಕ್‌ ವಾಲ್ಟ್ಜ್‌ ಅವರು ಇದಕ್ಕೂ ಮೊದಲು 'ಗ್ರೀನ್ ಬೆರೆಟ್ಸ್‌' ಆಗಿದ್ದರು. ಚೀನಾದ ಮೇಲೆ ಅಂತರರಾಷ್ಟ್ರೀಯ ವೇದಿಕೆಗಳಲ್ಲೇ ಅವರು ಕಿಡಿಕಾರಿದ್ದರು. "ಗ್ರೀನ್ ಬೆರೆಟ್ಸ್" ಎನ್ನುವುದು ಅಮೆರಿಕ ಸೇನೆಯ ವಿಶೇಷ ಪಡೆಯಾಗಿದೆ.

ಇದರಲ್ಲಿನ ಸೈನಿಕರು ಗೆರಿಲ್ಲಾ ಯುದ್ಧ-ಶೈಲಿಯ ಕಾರ್ಯಾಚರಣೆಗಳ ಮೂಲಕ ಭಯೋತ್ಪಾದಕರನ್ನು ನಿರ್ನಾಮ ಮಾಡುವುದರಲ್ಲಿ ಫೇಮಸ್‌ ಆಗಿದ್ದಾರೆ. ಗ್ರೀನ್ ಬೆರೆಟ್ಸ್‌ ಪಡೆಯ ಸೈನಿಕರು ಯಾವುದೇ ಪರಿಸ್ಥಿತಿಯಲ್ಲಾದರೂ, ಯಾವುದೇ ಮಾದರಿಯ ಶತ್ರುಗಳನ್ನು ಎದುರಿಸುವಷ್ಟು ಸಮರ್ಥರಾಗಿರುತ್ತಾರೆ.

ಇನ್ನು ಮೈಕ್‌ ಅವರು ಚೀನಾ ಕೋವಿ* ಹರಡುವುದಕ್ಕೆ ಮೂಲ ಕಾರಣ ಹಾಗೂ ತನ್ನ ದೇಶದಲ್ಲಿ ಅಲ್ಪಸಂಖ್ಯಾತ ಮುಸ್ಲಿಂ ಉಯಿಘರ್ ಜನಸಂಖ್ಯೆಯ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂದು ಆರೋಪಿಸಿ, 2022ರ ಚಳಿಗಾಲದ ಒಲಿಂಪಿಕ್ಸ್‌ಗೆ ಯುಎಸ್‌ ಬಹಿಷ್ಕಾರ ಹಾಕುವುದರಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದರು.

ಗ್ರೀನ್ ಬೆರೆಟ್ಸ್‌ನಲ್ಲಿ ಮೈಕ್‌ ಅವರು ನಾಲ್ಕು ವರ್ಷ ಸೇವೆ ಸಲ್ಲಿಸಿದ್ದರು. ಅಫ್ಘಾನಿಸ್ತಾನ, ಮಧ್ಯಪ್ರಾಚ್ಯ ಮತ್ತು ಆಫ್ರಿಕಾದಲ್ಲಿ ಅನೇಕ ಯುದ್ಧಗಳಲ್ಲಿ ಭಾಗಿಯಾಗಿದ್ದರು. ಅವರು ಅಮೆರಿಕ ಸರ್ಕಾರ ನೀಡುವ ಅತ್ಯುತ್ತಮ ಗೌರವಗಳಾದ ಎರಡು ಶೌರ್ಯ ಪ್ರಶಸ್ತಿ ಹಾಗೂ ನಾಲ್ಕು ಕಂಚಿನ (ಸ್ಟಾರ್‌) ಪ್ರಶಸ್ತಿಗೆ ಭಾಜನರಾಗಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+