Donald Trump: ಅಪರಾಧ ಸಾಬೀತಾದರೂ ಜೈಲು ಶಿಕ್ಷೆ ತಪ್ಪಿಸಿಕೊಂಡ ಡೊನಾಲ್ಡ್ ಟ್ರಂಪ್‌!

ಅಮೆರಿಕ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಲು ಸಜ್ಜಾಗುತ್ತಿರುವ ಡೊನಾಲ್ಡ್ ಟ್ರಂಪ್‌ಗೆ ಮತ್ತೊಂದು ಸಂತಸದ ಸುದ್ದಿ ಸಿಕ್ಕಿದೆ. ಅಮೆರಿಕ ನ್ಯಾಯಾಲಯವು ರಹಸ್ಯ ಹಣದ ಪ್ರಕರಣದಲ್ಲಿ ಟ್ರಂಪ್‌ಗೆ ವಿಧಿಸಿದ್ದ ಶಿಕ್ಷೆಯನ್ನು ಎತ್ತಿಹಿಡಿದಿದೆ, ಆದರೂ ಡೊನಾಲ್ಡ್‌ ಟ್ರಂಪ್‌ ಜೈಲು ಶಿಕ್ಷೆಯಿಂದ ತಪ್ಪಿಸಿಕೊಂಡಿದ್ದಾರೆ

ಡೊನಾಲ್ಡ್ ಟ್ರಂಪ್‌ ಆರೋಪಗಳಲ್ಲಿ ತಪ್ಪಿತಸ್ಥರು ಎಂದು ಸಾಬೀತಾಗಿದ್ದರೂ ಅವರು ಯುಎಸ್‌ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಕಾರಣ, ಯಾವುದೇ ಜೈಲು ಶಿಕ್ಷೆ ಅಥವಾ ದಂಡ ಅವರಿಗೆ ಅನ್ವಯಿಸುವುದಿಲ್ಲ. ಯುಎಸ್ ಅಧ್ಯಕ್ಷ ಗಾದಿಯಲ್ಲಿದ್ದವರಿಗೆ ಶಿಕ್ಷೆ ವಿಧಿಸಲು ಅವಕಾಶ ಇರುವುದಿಲ್ಲ. ಡೊನಾಲ್ಡ್ ಟ್ರಂಪ್ ಜನವರಿ 20ರಂದು ಯುಎಸ್ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

Donald trump first us president felon sentenced

ಡೊನಾಲ್ಡ್ ಟ್ರಂಪ್ ಅಮೆರಿಕ ಚುನಾವಣೆಯಲ್ಲಿ ಸೋತಿದ್ದರೆ ನಾಲ್ಕು ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತಿತ್ತು. ಆದರೆ ಈಗ ಅವರು ಅಧ್ಯಕ್ಷರಾಗಿ ಶ್ವೇತಭವನ ಪ್ರವೇಶಿಸಲಿದ್ದಾರೆ. ಡೊನಾಲ್ಡ್ ಟ್ರಂಪ್ ನ್ಯಾಯಾಲಯದ ವಿಚಾರಣೆಗೆ ಖುದ್ದಾಗಿ ಹಾಜರಾಗಿರಲಿಲ್ಲ, ತಮ್ಮನ್ನು ಜೈಲಿಗೆ ಕಳಿಸಲು ಸಾಧ್ಯವಿಲ್ಲ ಎಂದು ತಿಳಿದಿದ್ದರೂ ಟ್ರಂಪ್ ವರ್ಚುವಲ್ ಆಗಿ ವಿಚಾರಣೆಗೆ ಹಾಜರಾಗಿದ್ದರು.

ನ್ಯೂಯಾರ್ಕ್ ನ್ಯಾಯಾಧೀಶ ಜುವಾನ್ ಮೆರ್ಚನ್ ಶಿಕ್ಷೆಯನ್ನು ಪ್ರಕಟಿಸಿದ್ದು, ದೇಶದ ಅತ್ಯುನ್ನತ ಹುದ್ದೆಯಲ್ಲಿರುವ ವ್ಯಕ್ತಿಗೆ ನೀಡಬಹುದಾದ ಶಿಕ್ಷೆಯೆಂದರೆ ಬೇಷರತ್ತಾದ ಬಿಡುಗಡೆ ಎಂದು ಹೇಳಿದರು.

ಈ ನ್ಯಾಯಾಲಯ ಈ ಮೊದಲು ಇಂತಹ ಪ್ರಕರಣವನ್ನು ನೋಡಿಲ್ಲ ಇಂತಹ ಸನ್ನಿವೇಶ ಎದುರಾಗಿರುವುದು ಇದೇ ಮೊದಲು ಎಂದು ನ್ಯಾಯಾಧೀಶರು ಹೇಳಿದರು. ಸಂವಿಧಾನವು ಯುನೈಟೆಡ್ ಸ್ಟೇಟ್ಸ್‌ನ ಅಧ್ಯಕ್ಷರ ಹುದ್ದೆಯನ್ನು ರಕ್ಷಿಸುತ್ತಿರುವುದರಿಂದ ಟ್ರಂಪ್‌ಗೆ ಬೇಷರತ್ ಬಿಡುಗಡೆ ನೀಡುವುದಕ್ಕಿಂತ ನ್ಯಾಯಾಧೀಶರಿಗೆ ಬೇರೆ ಯಾವುದೇ ಆಯ್ಕೆ ಇರಲಿಲ್ಲ.

ಪ್ರಮಾಣ ವಚನ ಸ್ವೀಕರಿಸುವ ಮುನ್ನವೇ ತಮ್ಮ ಮೇಲಿದ್ದ ಅಪರಾಧಿ ಎನ್ನುವ ಕೊಳೆ ತೊಳೆದುಕೊಳ್ಳಲು ಟ್ರಂಪ್ ಎಲ್ಲಾ ಪ್ರಯತ್ನ ಮಾಡಿದರು. ತಮ್ಮ ಅಧಿಕಾರ, ಸಂಪನ್ಮೂಲ ಬಳಸಿದರು. ಶಿಕ್ಷೆ ಪ್ರಕಟಿಸುವ ಕೆಲವು ಗಂಟೆಗಳ ಮೊದಲು ಈ ಕಾನೂನು ಕ್ರಮ ನ್ಯೂಯಾರ್ಕ್ ನ್ಯಾಯಾಲಯ ವ್ಯವಸ್ಥೆಗೆ ಹಿನ್ನಡೆ ಎಂದು ಹೇಳಿದ್ದರು. ನನ್ನ ಜನಪ್ರಿಯತೆಗೆ ಹಾನಿ ಮಾಡಲು, ಚುನಾವಣೆಯಲ್ಲಿ ನನ್ನನ್ನು ಸೋಲಿಸಲು ಈ ಷಡ್ಯಂತ್ರ ಮಾಡಲಾಗಿದೆ. ಇದೊಂದು ಕೆಟ್ಟ ಅನುಭವ ಎಂದು ಹೇಳಿದ್ದಾರೆ.

ಏನಿದು ಪ್ರಕರಣ?

2016ರ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಮೊದಲು ನೀಲಿ ಚಿತ್ರ ತಾರೆ ಸ್ವಾರ್ಮಿ ಡೇನಿಯಲ್ಸ್ ಅವರ ಜೊತೆಗಿನ ಮದುವೆ ಸಂಬಂಧವನ್ನು ಬಹಿರಂಗಪಡಿಸುವುದನ್ನು ತಡೆಯಲು ಅಕ್ರಮವಾಗಿ ಹಣ ಪಾವತಿ ಮಾಡಿದ್ದರು ಎನ್ನುವ ಆರೋಪದ ಮೇಲೆ ಪ್ರಕರಣ ದಾಖಲಾಗಿತ್ತು, ಆ ಚುನಾವಣೆಯಲ್ಲಿ ಅವರು ಗೆಲುವು ಸಾಧಿಸಿದ್ದರು.

ತಮ್ಮ ವಿರುದ್ಧದ ಕ್ರಿಮಿನಲ್ ಪ್ರಕರಣಗಳನ್ನು ತಡೆಯಲು ಡೊನಾಲ್ಟ್ ಟ್ರಂಪ್ ಸಾಕಷ್ಟು ಪ್ರಯತ್ನ ಪಟ್ಟರು. ಆದರೆ ಯುಎಸ್ ಸುಪ್ರೀಂ ಕೋರ್ಟ್ ಅವರ ಶಿಕ್ಷೆಯನ್ನು ಮುಂದುವರೆಸಬಹುದು ಎಂದು ತೀರ್ಪು ಕೊಟ್ಟಾಗ ಭಾರಿ ಹಿನ್ನಡೆ ಅನುಭವಿಸಿದ್ದರು. ಈಗ ಎರಡನೇ ಬಾರಿ ಯುಎಸ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಪ್ರಮಾಣ ವಚನ ಸ್ವೀಕರಿವ ಹತ್ತು ದಿನಗಳ ಮೊದಲು ಈ ತೀರ್ಪು ಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+