ಡೊನಾಲ್ಡ್ ಟ್ರಂಪ್ ತೆರಿಗೆ ನೀತಿಗೆ ಬೆಚ್ಚಿಬಿದ್ದ ಪ್ರಪಂಚ, ಮನಸ್ಸಿಗೆ ಬಂದಂತೆ ತೆರಿಗೆ ಹೇರಿಕೆ?
ಡೊನಾಲ್ಡ್ ಟ್ರಂಪ್ 2ನೇ ಬಾರಿ ಅಮೆರಿಕ ಅಧ್ಯಕ್ಷೀಯ ಚುನಾವಣೆ ಗೆದ್ದು, ವೈಟ್‌ಹೌಸ್ ತಲುಪಿದ ಮೇಲೆ ಸಾಕಷ್ಟು ಬದಲಾವಣೆಗಳು ಪ್ರಪಂಚದ ಮೂಲೆ ಮೂಲೆಯಲ್ಲಿ ಕೂಡ ಸಂಭವಿಸುತ್ತಲೇ ಇದೆ. ಹೀಗೆ ತೆರಿಗೆ ವಿಚಾರದಲ್ಲಿ ಕೂಡ ಡೊನಾಲ್ಡ್ ಟ್ರಂಪ್ ಅವರು ಸಖತ್ ಸದ್ದು ಮಾಡಿದ್ದರು. ಏಕೆಂದರೆ ತಮ್ಮ ವಿರೋಧಿಗಳಿಗೆ ಹಾಗೂ ಅಮೆರಿಕದ ಶತ್ರು ದೇಶಗಳಿಗೆ ಭಾರಿ ದೊಡ್ಡ ಪ್ರಮಾಣದಲ್ಲಿ ತೆರಿಗೆ ಹಾಕಿ, ಆ ಮೂಲಕ ವಿರೋಧಿಗಳ ಬಲ ಕುಗ್ಗಿಸುವ ಪ್ರಯತ್ನ ನಡೆಯಿತು. ಆದರೆ ಇದೆಲ್ಲವನ್ನೂ ಮೀರಿ ಟ್ರಂಪ್ ಅವರು ಜಾರಿಗೆ ತಂದ ಹೊಸ ತೆರಿಗೆ ನೀತಿ ಸಾಕಷ್ಟು ದೊಡ್ಡ ಚರ್ಚೆಗೆ ವೇದಿಕೆ ಒದಗಿಸಿತ್ತು.
ಡೊನಾಲ್ಡ್ ಟ್ರಂಪ್ ಪಕ್ಕಾ ಬ್ಯುಸಿನೆಸ್ ಮ್ಯಾನ್, ಹೀಗಿದ್ದಾಗ ಡೊನಾಲ್ಡ್ ಟ್ರಂಪ್ ತಮ್ಮ ಮಾತು ಕೇಳದ ಯಾವುದೇ ದೇಶಗಳಿಗೆ ತೆರಿಗೆ ಮೂಲಕವೇ ಆಘಾತ ನೀಡುತ್ತಾ ಬಂದಿದ್ದಾರೆ. ಆದರೆ, ಇತ್ತೀಚೆಗೆ ತೆರಿಗೆ ಫೈಟಿಂಗ್ ದೊಡ್ಡ ಚರ್ಚೆಗೆ ಗ್ರಾಸವಾಗಿ ಅಮೆರಿಕದ ಸ್ನೇಹಿತ ರಾಷ್ಟ್ರಗಳೇ ಒದ್ದಾಡುವಂತೆ ಆಗಿತ್ತು. ಈ ಮಧ್ಯೆ ಟ್ರಂಪ್ ಅವರು ಹೇರಿಕೆ ಮಾಡುತ್ತಿರುವ ಹೆಚ್ಚುವರಿ ಶುಲ್ಕ ದೊಡ್ಡ ಕಳವಳಕ್ಕೆ ಕಾರಣ ಆಗಿದೆ. ಏಕೆಂದರೆ ಭವಿಷ್ಯದಲ್ಲಿ ಇದು ಇತರ ದೇಶಗಳ ಜೊತೆಗೆ ವ್ಯವಹಾರ ಮಾಡುವಾಗ ಸಮಸ್ಯೆ ಹುಟ್ಟು ಹಾಕಬಹುದು ಎಂಬ ಆತಂಕ ಇದರಲ್ಲಿ ಇದೆ.

ಶೇಕಡಾ 200ರಷ್ಟು ಸುಂಕದ ಎಚ್ಚರಿಕೆ!
ಅಮೆರಿಕದಲ್ಲಿ ಡೊನಾಲ್ಡ್ ಟ್ರಂಪ್ ಎರಡನೇ ಬಾರಿಗೆ ಅಧಿಕಾರ ಹಿಡಿದ ಮರು ಕ್ಷಣವೇ ತೆರಿಗೆ ಯುದ್ಧ ಶುರು ಮಾಡಿದ್ದರು. ಅಮೆರಿಕದ ವಸ್ತುಗಳಿಗೆ ಭಾರಿ ಪ್ರಮಾಣದಲ್ಲಿ ತೆರಿಗೆ ಹಾಕಲಾಗುತ್ತಿದೆ, ಹೀಗಾಗಿ ನಾವು ಕೂಡ ಹೆಚ್ಚಿನ ತೆರಿಗೆ ವಿಧಿಸುತ್ತೇವೆ ಎಂದು ಟ್ರಂಪ್ ಹೊಸ ಆಟ ಶುರು ಮಾಡಿದ್ದರು. ಈ ಪೈಕಿ ಕೆಲವು ದೇಶಗಳ ಮೇಲೆ ಶೇಕಡಾ 200ರಷ್ಟು ಸುಂಕದ ಎಚ್ಚರಿಕೆ ಕೂಡ ನೀಡಿದ್ದರು. ಕೊನೆಗೆ ಟ್ರಂಪ್ ಅವರ ಈ ನಿರ್ಧಾರಗಳು ಅಮೆರಿಕದಲ್ಲಿ ಉಲ್ಟಾ ಹೊಡೆಯಲು ಆರಂಭಿಸಿತ್ತು. ಖುದ್ದು ಅಮೆರಿಕ ಜನ ಹೆಚ್ಚಿನ ತೆರಿಗೆ ಕೊಟ್ಟು ವಸ್ತುಗಳನ್ನು ಖರೀದಿ ಮಾಡುವ ಪರಿಸ್ಥಿತಿ ಬಂತು. ಅಗತ್ಯ ವಸ್ತುಗಳ ಬೆಲೆಯಲ್ಲಿ ಭಾರಿ ಏರಿಕೆ ಕಂಡುಬಂದ ನಂತರ ಟ್ರಂಪ್ ತಮ್ಮ ನಿರ್ಧಾರದಿಂದ ನಿಧಾನವಾಗಿ ಹಿಂದೆ ಸರಿದರು. ಹಾಗೇ ಟ್ರಂಪ್ ಅವರ ಮೇಲೆ ತೆರಿಗೆ ಹೇರಿಕೆ ವಿಚಾರದಲ್ಲಿ ಭಾರಿ ಒತ್ತಡ ಕೂಡ ಮೂಡಿತ್ತು.
ಭಾರತದ ಜೊತೆಗೂ ಟ್ರಂಪ್ ತೆರಿಗೆ ಕಿರಿಕ್
ಚೀನಾ, ಯುರೋಪ್ ಒಕ್ಕೂಟ ಸೇರಿದಂತೆ ಹಲವು ದೇಶಗಳ ಜೊತೆಗೆ ಮೊದಲು ಆರಂಭವಾಗಿದ್ದ ಈ ತೆರಿಗೆ ಕಿರಿಕ್ ಕೊನೆಗೆ ಭಾರತದ ಜೊತೆಗೂ ಶುರುವಾಗಿತ್ತು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ವಿಚಾರದಲ್ಲಿ ಭಾರತ ರಫ್ತು ಮಾಡುವ ವಸ್ತುಗಳನ್ನೇ ಟಾರ್ಗೆಟ್ ಮಾಡಿ, ಆಮದು ತೆರಿಗೆ ಹೇರಿಕೆಯನ್ನ ಮಾಡಿದ್ದ ಬಗ್ಗೆ ಆಕ್ರೋಶ ಮೊಳಗಿತ್ತು. ಅದರಲ್ಲೂ ಭಾರತದ ಮೂಲಕ ಅಮೆರಿಕಗೆ ಹೋಗುವ ಹಲವು ವಸ್ತುಗಳು ಖುದ್ದು ಅಮೆರಿಕದ ಜನರಿಗೆ ಅತ್ಯಗತ್ಯವಾಗಿವೆ, ಹೀಗಿದ್ದಾಗ ಟ್ರಂಪ್ ಅವರ ತೆರಿಗೆ ಹೇರಿಕೆ ನೀತಿ ಪರಿಣಾಮ ಖುದ್ದು ಅಮೆರಿಕದ ಜನರು ಸಮಸ್ಯೆಗೆ ಸಿಲುಕಿದ್ದರು. ಕೊನೆಗೆ ಭಾರತದ ಜೊತೆಯಲ್ಲಿ ಸಂಧಾನ ಮಾಡಿಕೊಂಡ ಟ್ರಂಪ್ ತೆರಿಗೆ ಕಡಿತಕ್ಕೆ ಒಪ್ಪಿದ್ದರು.












Click it and Unblock the Notifications