Trump's Economic War: ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಭೇಟಿ ಮಾಡಲಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್!
ಡೊನಾಲ್ಡ್
ಟ್ರಂಪ್ ಕಂಡ ಕಂಡ ದೇಶಗಳ ವಿರುದ್ಧ ತೆರಿಗೆ ಯುದ್ಧ ಮಾಡಿಕೊಂಡು ಓಡಾಡುತ್ತಿರುವ ಈ ಸಮಯದಲ್ಲಿ, ಜಾಗತಿಕ ಆರ್ಥಿಕತೆ ಸೂಕ್ಷ್ಮ ಪರಿಸ್ಥಿತಿ ತಲುಪಿದೆ. ಈ ಪರಿಸ್ಥಿತಿ ಹೀಗೆ ಮುಂದುವರಿದರೆ ಇಡೀ ಜಗತ್ತು ಮತ್ತೊಂದು ಘೋರ ಆರ್ಥಿಕ ಸಂಕಷ್ಟಕ್ಕೆ ಸಿಲುಕುವ ಅಪಾಯ ಇದೆ. ಆದರೆ ಇದನ್ನು ಕಂಡೂ, ಗೊತ್ತಿದ್ದೂ ಡೊನಾಲ್ಡ್ ಟ್ರಂಪ್ ಮಾತ್ರ ಮನಸ್ಸಿಗೆ ಬಂದಂತೆ ತೆರಿಗೆ ಹೇರಿಕೆ ಮಾಡುತ್ತಿದ್ದಾರೆ. ಭಾರತವೂ ಸೇರಿದಂತೆ ಚೀನಾ, ಬ್ರೆಜಿಲ್ ರೀತಿಯ ದೊಡ್ಡ ದೊಡ್ಡ ದೇಶಗಳನ್ನೇ ಟಾರ್ಗೆಟ್ ಮಾಡಿ ಟ್ರಂಪ್ ಹೀಗೆಲ್ಲಾ ಆಡುತ್ತಿದ್ದಾರೆ ಎಂಬ ಆರೋಪ ಇದೆ. ಇಂತಹ ಸಮಯದಲ್ಲೇ ಕಹಾನಿಗೆ ದೊಡ್ಡ ಟ್ವಿಸ್ಟ್ ಸಿಕ್ಕುಬಿಟ್ಟಿದೆ! id="toptextpromo"> id='are-slot-1' class='oiad oi-axt oiadv'> id='top-searched-articles'>ಹೌದು,
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರತಿದಿನ ಒಂದಲ್ಲ ಒಂದು ಕಿರಿಕ್ ಮಾಡ್ತಾನೆ ಇದ್ದಾರೆ. ಒಂದು ಕಡೆ ಭಾರತದ ವಿರುದ್ಧ ಕೂಡ ಹೀಗೆ ಕುತಂತ್ರ ಮಾಡಲು ಬಂದು ಹೆಚ್ಚಿನ ತೆರಿಗೆ ಹಾಕುವ ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಇದೇ ಸಮಯದಲ್ಲಿ, ಭಾರತ ಮಾತ್ರವಲ್ಲ ಬ್ರೆಜಿಲ್ ಜೊತೆ ಕೂಡ ಟ್ರಂಪ್ ಡಿಸೈನ್ ಡಿಸೈನ್ ನಾಟಕ ಶುರು ಮಾಡಿದ್ದು, ಚೀನಾ & ರಷ್ಯಾಗೆ ಕೂಡ ಡೊನಾಲ್ಡ್ ಟ್ರಂಪ್ ಕಾಟ ಕೊಡುತ್ತಿರುವ ಆರೋಪ ಕೇಳಿ ಬರುತ್ತಲೇ ಇದೆ. ಹೀಗೆ ಭಾರಿ ದೊಡ್ಡ ಬೆಳವಣಿಗೆಗಳ ನಡುವೆಯೇ, ದಿಢೀರ್ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಭೇಟಿ ಮಾಡಲಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಏನು ಪ್ಲಾನ್ ಮಾಡಿದ್ದಾರೆ ಗೊತ್ತಾ? id='are-slot-2' class='oiad oi-axt oiadv'>












Click it and Unblock the Notifications