ಜನವರಿಯಲ್ಲೇ ವಾರ್ನಿಂಗ್ ಕೊಟ್ಟಿದ್ದರೂ, ಎಚ್ಚೆತ್ತುಕೊಳ್ಳಲಿಲ್ಲವೇಕೆ ಡೊನಾಲ್ಡ್ ಟ್ರಂಪ್.?

ಇಡೀ ಜಗತ್ತಿನಲ್ಲಿ ತಲ್ಲಣ ಸೃಷ್ಟಿಸಿರುವ ಮಾರಣಾಂತಿಕ ಕೊರೊನಾ ವೈರಸ್ ನಿಂದಾಗಿ ಈವರೆಗೂ 83,103 ಮಂದಿ ಮೃತಪಟ್ಟಿದ್ದಾರೆ. ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾವೊಂದರಲ್ಲೇ 12,857 ಮಂದಿ ಸಾವನ್ನಪ್ಪಿದ್ದಾರೆ. ಕೋವಿಡ್-19 ನಿಂದಾಗಿ ಅಮೇರಿಕಾ ಅಕ್ಷರಶಃ ಜರ್ಜರಿತವಾಗಿದೆ.

ಅಸಲಿಗೆ, ಅತಿ ಹೆಚ್ಚು ಕೊರೊನಾ ಸೋಂಕು ಪೀಡಿತರು ಇರುವುದು ಅಮೇರಿಕಾದಲ್ಲೇ. ಇಲ್ಲಿಯವರೆಗೂ ಯು.ಎಸ್.ಎ ನಲ್ಲಿ 4,00,549 ಮಂದಿಗೆ ಕೋವಿಡ್-19 ಪಾಸಿಟಿವ್ ಇರುವುದು ದೃಢಪಟ್ಟಿದೆ.

ಯು.ಎಸ್.ಎ ಇದೀಗ ಪೀಕ್ ಡೆತ್ ವೀಕ್ (ಹೆಚ್ಚು ಸಾವುಗಳು ಸಂಭವಿಸುವ ವಾರ) ಹಂತ ತಲುಪಿದ್ದು, ರೋಗಿಗಳ ಪ್ರಾಣ ಉಳಿಸಲು ವೈದ್ಯರು ಹೆಣಗಾಡುತ್ತಿದ್ದಾರೆ.

''ಕೊರೊನಾ ವೈರಸ್ ನಿಂದ ಇಡೀ ವಿಶ್ವಕ್ಕೆ ಆಪತ್ತು ಎದುರಾಗುತ್ತೆ ಎಂಬುದನ್ನ ಯಾರೂ ಊಹಿಸಿರಲಿಲ್ಲ'' ಎಂದು ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾರ್ಚ್ ತಿಂಗಳಲ್ಲಿ ಪದೇ ಪದೇ ಹೇಳಿದ್ದರು. ಆದ್ರೆ, ''ಅಮೇರಿಕಾದಲ್ಲಿ ಇಂಥದ್ದೊಂದು ಪರಿಸ್ಥಿತಿ ನಿರ್ಮಾಣವಾಗಬಹುದು'' ಎಂಬ ವಾರ್ನಿಂಗ್ ಅನ್ನು ಜನವರಿ ತಿಂಗಳಲ್ಲೇ ನೀಡಲಾಗಿತ್ತು.!

ಜನವರಿಯಲ್ಲಿ ಬಂದಿತ್ತು ವಾರ್ನಿಂಗ್

ಜನವರಿಯಲ್ಲಿ ಬಂದಿತ್ತು ವಾರ್ನಿಂಗ್

''ಇಷ್ಟೊಂದು ವ್ಯಾಪಕವಾಗಿ ಕೊರೊನಾ ವೈರಸ್ ಹಬ್ಬುತ್ತದೆ ಎಂದು ಯಾರಿಗೂ ಗೊತ್ತಿರಲಿಲ್ಲ. ಇಡೀ ವಿಶ್ವಕ್ಕೆ ಕೊರೊನಾ ವೈರಸ್ ನಿಂದ ಆಪತ್ತು ಎದುರಾಗುತ್ತೆ ಎಂಬುದನ್ನು ಯಾರೂ ಊಹಿಸಿರಲಿಲ್ಲ'' ಎಂದು ಕಳೆದ ಮಾರ್ಚ್ 19 ರಂದು ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದರು. ಆದರೆ, ಡೊನಾಲ್ಡ್ ಟ್ರಂಪ್ ರವರ ಆಡಳಿತ ವಲಯದ ಉನ್ನತ ಅಧಿಕಾರಿಯೇ ಜನವರಿ ತಿಂಗಳಿನಲ್ಲಿ ಕೊರೊನಾ ವೈರಸ್ ಬಗ್ಗೆ ವಾರ್ನಿಂಗ್ ಕೊಟ್ಟಿದ್ದರು ಎಂದು ದಿ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.

ಮೆಮೊ ಕಳುಹಿಸಿದ್ದ ಪೀಟರ್

ಮೆಮೊ ಕಳುಹಿಸಿದ್ದ ಪೀಟರ್

ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ಟ್ರೇಡ್ ಅಡ್ವೈಸರ್ ಆಗಿರುವ ಪೀಟರ್ ನವಾರೋ ಜನವರಿ 29 ರಂದು ನ್ಯಾಷನಲ್ ಸೆಕ್ಯೂರಿಟಿ ಕೌನ್ಸಿಲ್ ಗೆ ಒಂದು ಮೆಮೊ ಕಳುಹಿಸಿದ್ದರು. ಅದರಲ್ಲಿ ''ಕೊರೊನಾ ವೈರಸ್ ನಿಂದ ಉದ್ಭವವಾಗುವ ಕೆಟ್ಟ ಸಾಂಕ್ರಾಮಿಕ ಸನ್ನಿವೇಶದ ಅಪಾಯವನ್ನು ಕಡೆಗಣಿಸುವಂತಿಲ್ಲ'' ಎಂದು ಉಲ್ಲೇಖಿಸಿದ್ದರು.

ವಾರ್ನಿಂಗ್ ನೀಡಿದ್ದ ಪೀಟರ್

ವಾರ್ನಿಂಗ್ ನೀಡಿದ್ದ ಪೀಟರ್

''ಕಾಯಿಲೆಯಿಂದಾಗಿ ಲಕ್ಷಾಂತರ ಅಮೇರಿಕನ್ನರು ಸಾವನ್ನಪ್ಪಬಹುದು. ವೈರಸ್ ಅನ್ನು ತಡೆಗಟ್ಟದೇ ಹೋದರೆ, ಅದರಿಂದ ದೊಡ್ಡ ನಷ್ಟವಾಗಬಹುದು. ಯು.ಎಸ್ ನಲ್ಲಿ ಕೊರೊನಾ ವೈರಸ್ ವ್ಯಾಪಿಸಿದರೆ, ಲಸಿಕೆ ಅಥವಾ ಔಷಧಿ ಇಲ್ಲದೆ ಅಮೇರಿಕನ್ನರು ಸಂಕಷ್ಟದಲ್ಲಿ ಸಿಲುಕಬೇಕಾಗುತ್ತದೆ'' ಎಂದು ಮೆಮೊ ಮೂಲಕ ಪೀಟರ್ ನವಾರೋ ವಾರ್ನಿಂಗ್ ಕೊಟ್ಟಿದ್ದರು.

ಟ್ರಂಪ್ ಗೂ ಮೆಮೊ ಕಳುಹಿಸಿದ್ದ ಪೀಟರ್ ನವಾರೋ

ಟ್ರಂಪ್ ಗೂ ಮೆಮೊ ಕಳುಹಿಸಿದ್ದ ಪೀಟರ್ ನವಾರೋ

ಫೆಬ್ರವರಿ 23 ರಂದು ''ಸುಮಾರು 100 ಮಿಲಿಯನ್ ಅಮೇರಿಕನ್ನರಿಗೆ ಕೊರೊನಾ ವೈರಸ್ ಸೋಂಕು ತಗಲುವ ಸಾಧ್ಯತೆ ಇದೆ. 1-2 ಮಿಲಿಯನ್ ಮಂದಿ ಕೋವಿಡ್-19 ನಿಂದ ಸಾವನ್ನಪ್ಪಬಹುದು'' ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ಪೀಟರ್ ನವಾರೋ ಮೆಮೊ ಕಳುಹಿಸಿದ್ದರು. ಆದರೆ ಮಾರ್ಚ್ ವರೆಗೂ ಡೊನಾಲ್ಡ್ ಟ್ರಂಪ್ ಕಠಿಣ ಕ್ರಮಗಳನ್ನು ಕೈಗೊಳ್ಳಲಿಲ್ಲ ಎನ್ನಲಾಗಿದೆ. ಮೊದಮೊದಲು ಡೊನಾಲ್ಡ್ ಟ್ರಂಪ್ ನಿರ್ಲಕ್ಷ್ಯ ವಹಿಸಿದ್ದಕ್ಕೋ, ಏನೋ.. ಇದೀಗ ಯುಎಸ್ಎನಲ್ಲಿ ಕೊರೊನಾ ವೈರಸ್ ನಿಂದ ಸಾವಿನ ಪ್ರಮಾಣ ಹೆಚ್ಚಾಗುತ್ತಿದೆ.

ವೈಟ್ ಹೌಸ್ ಅಧಿಕಾರಿಗಳ ಅಂದಾಜು

ವೈಟ್ ಹೌಸ್ ಅಧಿಕಾರಿಗಳ ಅಂದಾಜು

ಅಮೇರಿಕಾವೊಂದರಲ್ಲೇ ಕೋವಿಡ್-19 ನಿಂದಾಗಿ 1,00,000 ದಿಂದ 2,40,000 ಮಂದಿ ಸಾವನ್ನಪ್ಪುವ ಸಾಧ್ಯತೆ ಇದೆ ಎಂದು ವೈಟ್ ಹೌಸ್ ಅಧಿಕಾರಿಗಳು ಅಂದಾಜಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+