ಇಸ್ರೇಲ್ & ಹಮಾಸ್ ಯುದ್ಧ ನಿಲ್ಲುವ ಸಮಯಕ್ಕೆ ಮತ್ತೊಂದು ಸಮಸ್ಯೆ ಶುರು?

ಆಧುನಿಕ ಜಗತ್ತಿನಲ್ಲಿ ದ್ವೇಷ ಹೆಚ್ಚಾಗುತ್ತಿದ್ದು, ರಷ್ಯಾ ಹಾಗೂ ಉಕ್ರೇನ್ ಮಧ್ಯೆ ರಣಭೀಕರ ಯುದ್ಧ ನಡೆಯುವಾಗಲೇ ಇಸ್ರೇಲ್ & ಹಮಾಸ್ ಉಗ್ರರ ನಡುವೆಯೂ ಘೋರ ರಣ ಕಾಳಗ ಆರಂಭವಾಗಿದೆ. ಹೀಗೆ ಇಸ್ರೇಲ್ VS ಹಮಾಸ್ ಯುದ್ಧ 47ನೇ ದಿನಕ್ಕೆ ಕಾಲಿಟ್ಟ ಸಮಯಕ್ಕೆ ಯುದ್ಧ ನಿಲ್ಲಿಸುವ ಯತ್ನ ಆರಂಭವಾಗಿತ್ತು. ಆದ್ರೆ 48ನೇ ದಿನಕ್ಕೆ ದಿಢೀರ್ ಶಾಕಿಂಗ್ ಸುದ್ದಿ ಹೊರಬಿದ್ದಿದೆ.

ಹಮಾಸ್ ಉಗ್ರರು ಮಾಡಿದ್ದ ತಪ್ಪಿಗೆ, ಕಳೆದ ಒಂದೂವರೆ ತಿಂಗಳಿಂದ ಗಾಜಾಪಟ್ಟಿಯ ಜನ ಸಾಮಾನ್ಯರು ನರಳಾಡುತ್ತಿದ್ದಾರೆ. ಈಗಾಗಲೇ 13,000ಕ್ಕೂ ಹೆಚ್ಚು ಗಾಜಾಪಟ್ಟಿ ನಾಗರಿಕರು ಯುದ್ಧಕ್ಕೆ ಬಲಿಯಾಗಿದ್ದು 6,000ಕ್ಕೂ ಹೆಚ್ಚು ಜನ ನಾಪತ್ತೆಯಾಗಿದ್ದಾರೆ ಎಂದು ಹಮಾಸ್ ಆರೋಪ ಮಾಡುತ್ತಿದೆ. ಇದೇ ಸಮಯದಲ್ಲಿ ಇಬ್ಬರ ನಡುವೆ ಸಂಧಾನ ನಡೆದು, ಇಸ್ರೇಲ್ ಮೂಲದ ಒತ್ತೆಯಾಳುಗಳನ್ನು ಹಮಾಸ್ ರಿಲೀಸ್ ಮಾಡಲಿದೆ ಎನ್ನಲಾಗಿತ್ತು. ಈ ಮೂಲಕ ಗಾಜಾ ಸಂಘರ್ಷ ಅಂತ್ಯವಾಗುತ್ತೆ ಎಂದೇ ಭಾವಿಸಲಾಗಿತ್ತು. ಆದರೆ ಇದೀಗ ಆಗಿದ್ದೇ ಬೇರೆ.

Discover Why Israel & Hamas Hostage Exchange Deal Delayed

ಬ್ರೇಕಿಂಗ್ ನ್ಯೂಸ್.. ಯುದ್ಧ ನಿಂತಿಲ್ಲ!

ಹೌದು, ಇದೀಗ ಸಿಗುತ್ತಿರುವ ಮಾಹಿತಿ ಪ್ರಕಾರ ಹಮಾಸ್ ಉಗ್ರರ‌ ವಶದಲ್ಲಿರುವ ಒತ್ತೆಯಾಳು ಬಿಡುಗಡೆ ಪ್ರಕ್ರಿಯೆ ಹಾಗೂ ಕದನ ವಿರಾಮ ಜಾರಿ ವಿಳಂಬ ಆಗುತ್ತೆ ಅಂತಾ ಹೇಳಲಾಗುತ್ತಿದೆ. ಒತ್ತೆಯಾಳು ಬಿಡುಗಡೆ ಪ್ರಕ್ರಿಯೆ ಶುಕ್ರವಾರ ತನಕ ಆರಂಭ ಆಗಲ್ಲ ಅಂತ ಇಸ್ರೇಲ್‌ ಹೇಳಿದೆ. ಹಾಗಾದ್ರೆ ಈ ಬೆಳವಣಿಗೆ ಹಿಂದಿನ ಅಸಲಿ ಕಾರಣ ಏನು? ಈ ಬಗ್ಗೆ ಇಸ್ರೇಲ್ ನಿಲುವೇನು? ಸಂಪೂರ್ಣ ಮಾಹಿತಿ ಇಲ್ಲಿದೆ ಮುಂದೆ ಓದಿ.

ಅಂದಹಾಗೆ ಕೆಲವು ದಿನಗಳಿಂದ ನಿರಂತರವಾಗಿ ಯುದ್ಧ ನಿಲ್ಲಿಸಲು ಶ್ರಮ ಹಾಕಿದ ಹಿನ್ನೆಲೆ ಕದನ ವಿರಾಮ ಘೋಷಿಸಲು 2 ಕಡೆ ಒಪ್ಪಿಗೆ ಸಿಕ್ಕಿತ್ತು. ಇಸ್ರೇಲ್ & ಹಮಾಸ್ ಉಗ್ರರ ನಡುವೆ 4 ದಿನ ತಾತ್ಕಾಲಿಕ ಕದನ ವಿರಾಮ ಒಪ್ಪಂದ ಏರ್ಪಟ್ಟಿತ್ತು. ಅಲ್ಲದೆ ಇದೇ ವೇಳೆ, ಒಟ್ಟು 50 ಒತ್ತೆಯಾಳುಗಳ ಸುರಕ್ಷಿತ ಬಿಡುಗಡೆಗೆ ಹಮಾಸ್ ಉಗ್ರರು ಒಪ್ಪಿದ್ದರು. ಹಾಗೆ ಇಸ್ರೇಲ್‌ ಜೈಲಲ್ಲಿ ಇರುವ ಗಾಜಾ ಸೇರಿ ಪ್ಯಾಲೆಸ್ತೀನ್ ಮೂಲದ ಹಲವರನ್ನ ರಿಲೀಸ್ ಮಾಡಲು ಒಪ್ಪಲಾಗಿತ್ತು ಎಂಬ ಸುದ್ದಿ ಹೊರಬಿದ್ದಿತ್ತು. ಆದರೆ ದಿಢೀರ್ ಈ ಪ್ರಕ್ರಿಯೆ ವಿಳಂಬವಾಗಲಿದೆ ಅಂತ ಈಗ ಮಾಹಿತಿ ನೀಡಿದೆ ಇಸ್ರೇಲ್.

ಇಸ್ರೇಲ್ ಹೇಳುತ್ತಿರುವುದು ಏನು?

ಇಷ್ಟೆಲ್ಲದರ ನಡುವೆ ಒತ್ತೆಯಾಳು ಬಿಡುಗಡೆ ವಿಳಂಬ ಯಾಕೆ? ಅನ್ನೋದಕ್ಕೆ ಪಕ್ಕಾ ಕಾರಣ ತಿಳಿದುಬಂದಿಲ್ಲ. ಹಮಾಸ್‌ ಉಗ್ರರು ರಿಲೀಸ್ ಮಾಡುತ್ತಿರುವ ಒಟ್ಟು 50 ಒತ್ತೆಯಾಳುಗಳಲ್ಲಿ 3 ಅಮೆರಿಕನ್ನರು ಕೂಡ ಸೇರಿದ್ದಾರೆ ಎನ್ನಲಾಗಿದೆ. ಇನ್ನು ಈ ಬಗ್ಗೆ ಮಾತನಾಡಿದ ಇಸ್ರೇಲ್‌ನ ರಾಷ್ಟ್ರೀಯ ಭದ್ರತಾ ಸಲಹೆಗಾರ ಝಚಿ ಹನೇಗ್ಬಿ, ಹಮಾಸ್ ವಶದಲ್ಲಿ ಇರುವ 50 ಇಸ್ರೇಲಿ & ವಿದೇಶಿ ಒತ್ತೆಯಾಳುಗಳ ರಿಲೀಸ್ ಮಾಡುವ ಪ್ರಕ್ರಿಯೆ ಬಗ್ಗೆ ಮಾತುಕತೆ ನಡೆಯುತ್ತಿದೆ. ಆದ್ರೆ ಈ ಪ್ರಕ್ರಿಯೆ ಶುಕ್ರವಾರದ ತನಕ ಆರಂಭ ಆಗಲ್ಲ ಎಂದಿದ್ದಾರೆ.

Discover Why Israel & Hamas Hostage Exchange Deal Delayed

48 ದಿನಗಳಿಂದ ಹಮಾಸ್ & ಇಸ್ರೇಲ್ ನಡುವೆ ರಣಭೀಕರ ಕಾಳಗ ನಡೆಯುತ್ತಿದ್ದ ಹಿನ್ನೆಲೆ, ಪರಿಸ್ಥಿತಿ ಸುಧಾರಿಸಲು ಕತಾರ್‌ ಸೇರಿದಂತೆ ಈಜಿಪ್ಟ್‌ & ಅಮೆರಿಕದ ರಾಜತಾಂತ್ರಿಕರು ಹಗಲು & ರಾತ್ರಿ ಶ್ರಮ ವಹಿಸಿ ಸಂಧಾನ ನಡೆಸಿದ್ದರು. ಈ ಮೂಲಕ ಯುದ್ಧವು ಶುರುವಾದ ಒಟ್ಟು 47 ದಿನದ ಬಳಿಕ ರಾಜತಾಂತ್ರಿಕ ಮಾತುಕತೆಗೆ ಸಿಕ್ಕಿದ ಮೊದಲ ದಿಗ್ವಿಜಯ ಇದಾಗಿತ್ತು. ಆದ್ರೆ ಇದೇ ಸಮಯದಲ್ಲಿ ಹೊಸ ಸಮಸ್ಯೆ ಶುರುವಾದಂತೆ ಕಾಣುತ್ತಿದೆ. ಅದೆಲ್ಲಾ ಏನೇ ಇರಲಿ, ಆದಷ್ಟು ಬೇಗ ಈ ಯುದ್ಧವು ನಿಲ್ಲಲಿ ಅನ್ನೋದೆ ಜಗತ್ತಿನ ಆಶಯ. ಯಾಕಂದ್ರೆ ಈಗಾಗಲೇ 2 ಮಹಾಯುದ್ಧ ನೋಡಿರುವ ಜಗತ್ತಿಗೆ ಮತ್ತೊಂದು ಮಹಾಯುದ್ಧ ಬೇಡವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+