Israel Vs Iran War: ಇಸ್ರೇಲ್ ಪರವಾಗಿ ಭಾರತ ಯುದ್ಧಕ್ಕೆ ಮುಂದೆ...
ಇಸ್ರೇಲ್ ಯುದ್ಧ ಶುರುವಾಗಿದ್ದು, ಇರಾನ್ ವಿರುದ್ಧ ದೊಡ್ಡ ಮಟ್ಟದ ದಾಳಿಗೆ ಇಸ್ರೇಲ್‌ನ ಸೇನೆ ಸಿದ್ಧತೆ ನಡೆಸುತ್ತಿದೆ. ಇಂತಹ ಸಮಯದಲ್ಲೇ ಪೆಟ್ರೋಲ್ & ಡೀಸೆಲ್ ರೇಟ್ ಮುಗಿಲು ಮುಟ್ಟುತ್ತಿದೆ. ಹೀಗಿದ್ದಾಗ ಭಾರತ ಕೂಡ ಇಸ್ರೇಲ್ ಪರವಾಗಿ ಯುದ್ಧಕ್ಕೆ ಮುಂದೆ ಬರುತ್ತಾ? ಯಾಕಂದ್ರೆ ಇಸ್ರೇಲ್ ಮತ್ತು ಭಾರತದ ನಡುವೆ ಗಟ್ಟಿಯಾದ ಸ್ನೇಹ ಇದ್ದು, ಎರಡೂ ದೇಶ ಹಲವು ವರ್ಷಗಳಿಂದ ವ್ಯಾಪಾರ & ವಹಿವಾಟು ನಡೆಸುತ್ತಿವೆ. ಇಂತಹ ಸಮಯದಲ್ಲೇ ಈಗ ಇಸ್ರೇಲ್ ಪರವಾಗಿ ಭಾರತ ಯುದ್ಧಕ್ಕೆ ಮುಂದೆ...
ಇಸ್ರೇಲ್ ದೇಶದಲ್ಲಿ ಭಾರತೀಯರ ಸಂಖ್ಯೆ ತುಂಬಾ ಹೆಚ್ಚಾಗಿದೆ. ಯಾಕಂದ್ರೆ ಇಸ್ರೇಲ್ ದೇಶ ಅಭಿವೃದ್ಧಿ ಹೊಂದಲು ಭಾರತ ಮೂಲದ ಪ್ರಜೆಗಳ ಕೊಡುಗೆ ಕೂಡ ದೊಡ್ಡದಾಗಿದೆ. ಅಲ್ಲಿ ಕಟ್ಟಡ ಕಾರ್ಮಿಕರಿಂದ ಹಿಡಿದು, ವೈದ್ಯಕೀಯ ಸೇವೆಗಳ ತನಕ ಸಾಕಷ್ಟು ಭಾರತೀಯರು ಕೆಲಸ ಮಾಡುತ್ತಿದ್ದಾರೆ. ಹೀಗಿದ್ದಾಗಲೇ ಇರಾನ್ & ಇಸ್ರೇಲ್ ನಡುವೆ ಯುದ್ಧ ಶುರುವಾದ ಕಾರಣ, ಭಯದ ವಾತಾವರಣ ನಿರ್ಮಾಣ ಆಗಿದೆ. ಭಾರತೀಯರು ತಮ್ಮ ಹೆಂಡತಿ & ಮಕ್ಕಳಿಗೆ ಕರೆ ಮಾಡಿ ಮಾತನಾಡುವಾಗ ಬರೀ ಬಾಂಬ್‌ಗಳು ಬೀಳುವ ಸೌಂಡ್ ಕೇಳುತ್ತಿದೆ ಎಂಬ ಆರೋಪ ಸೋಷಿಯಲ್ ಮೀಡಿಯಾದಲ್ಲಿ ಮಾಡಲಾಗುತ್ತಿದೆ. ಹಾಗಾದ್ರೆ ಇಸ್ರೇಲ್ ದೇಶದ ಮೇಲೆ ಇರಾನ್ ದಾಳಿ ಮಾಡಿದ ನಂತರ ಭಾರತೀಯರ ಜೀವಕ್ಕೆ ಕಂಟಕ ಎದುರಾಯ್ತಾ?

ಭಾರತೀಯರ ಜೀವಕ್ಕೆ ಕಂಟಕ?
ಇಸ್ರೇಲ್ ದೇಶದಲ್ಲಿ ಇರುವ ಭಾರತೀಯರಿಗೆ ಈಗಾಗಲೇ ಕೇಂದ್ರ ಸರ್ಕಾರ ಮುನ್ಸೂಚನೆಯನ್ನ ನೀಡಿದೆ. ಯಾವ ಕ್ಷಣದಲ್ಲಿ ಬೇಕಾದರೂ ದೊಡ್ಡ ಅಪಾಯ ಆಗಬಹುದು, ಹೀಗಾಗಿ ಎಚ್ಚರಿಕೆ ವಹಿಸಿ ಎಂದು ಭಾರತ ಮೂಲದ ಪ್ರಜೆಗಳಿಗೆ ಇದೀಗ ಎಚ್ಚರಿಕೆ ಸಂದೇಶ ನೀಡಲಾಗಿದೆ. ಈ ಹಿನ್ನೆಲೆ ಇಸ್ರೇಲ್ ದೇಶದಲ್ಲಿ ಕೆಲಸ ಮಾಡುತ್ತಿರುವ ಭಾರತ ಮೂಲದ ಪ್ರಜೆಗಳಿಗೆ ಆತಂಕದ ವಾತಾವರಣ ನಿರ್ಮಾಣವಾಗಿದೆ. ಭಾರತದಲ್ಲಿ ಇರುವ ಹೆಂಡತಿ & ಮಕ್ಕಳು ಹಾಗೂ ಅಪ್ಪ ಮತ್ತು ಅಮ್ಮನಿಗೆ ಈಗ ಟೆನ್ಷನ್ ಶುರುವಾಗಿದೆ.
ಇಸ್ರೇಲ್ ಪರವಾಗಿ ಭಾರತದ ಯುದ್ಧ?
ಭಾರತದ ಸೇನೆ ಬಲಿಷ್ಠವಾಗಿದ್ದು, ಜಗತ್ತಿನ ದೊಡ್ಡ ದೊಡ್ಡ ದೇಶಗಳನ್ನೂ ಮೀರಿಸಿ ಭಾರತ ಮಿಲಿಟರಿ ಪಡೆಯನ್ನ ಕಟ್ಟಿಕೊಂಡಿದೆ. ಇಂತಹ ಸಮಯದಲ್ಲಿ ಇಸ್ರೇಲ್ ಪರವಾಗಿ ಭಾರತವು ಕೂಡ ಯುದ್ಧದ ಅಖಾಡಕ್ಕೆ ಬರುತ್ತಾ? ಎಂಬ ಪ್ರಶ್ನೆ ಮೂಡಿದೆ. ಯಾಕಂದ್ರೆ ಇಸ್ರೇಲ್ ಕೂಡ ಭಾರತದ ಸಹಾಯದ ನಿರೀಕ್ಷೆಯಲ್ಲಿ ಇದ್ದು, ಸಹಾಯ ಬಯಸುತ್ತಿದೆ. ಹೀಗಿದ್ದರೂ ಭಾರತ ಈಗಿನ ಪರಿಸ್ಥಿತಿಯಲ್ಲಿ ಇಸ್ರೇಲ್‌ಗೆ ಯುದ್ಧದ ವಿಚಾರದಲ್ಲಿ ಸಹಾಯ ಮಾಡುವುದು ಅನುಮಾನ ಎನ್ನಬಹುದು. ಯಾಕಂದ್ರೆ ಭಾರತ ಯುದ್ಧದ ವಿಚಾರದಲ್ಲಿ ಬೇರೆಯದ್ದೇ ನಿಲುವು ಹೊಂದಿದೆ. ಹೀಗಾಗಿ ಇಸ್ರೇಲ್ ಪರವಾಗಿ ಭಾರತ ಯುದ್ಧದ ಅಖಾಡಕ್ಕೆ ಬರುವುದು ಡೌಟ್.












Click it and Unblock the Notifications