Imran Khan: ಜೈಲಿನಿಂದ ಹೊರಗೆ ಬರ್ತಾರಾ ಪಾಕ್ ಮಾಜಿ ಪ್ರಧಾನಿ?

ಒಂದು ಕಡೆ ಪಾಕಿಸ್ತಾನ ಸಂಸತ್ ಚುನಾವಣೆಗೆ ಕೌಂಟ್‌ಡೌನ್ ಶುರುವಾದ್ರೆ, ಮತ್ತೊಂದ್ಕಡೆ ಇಮ್ರಾನ್ ಖಾನ್ ಅವರನ್ನ ಜೈಲಿನಿಂದ ರಿಲೀಸ್ ಮಾಡಿಸಲು ಪ್ರಯತ್ನ ಮುಂದುವರಿದಿದೆ. ಪಾಕಿಸ್ತಾನ ಮಾಜಿ ಕ್ರಿಕೆಟರ್ ಕಂ ಮಾಜಿ ಪ್ರಧಾನಿ ಹೊರಗೆ ಬರ್ತಾರೆ ಅಂತಾ ಕೋಟ್ಯಂತರ ಅಭಿಮಾನಿಗಳು ಕಾಯುತ್ತಿದ್ದು, ಇದೀಗ ಇಮ್ರಾನ್ ಬಿಡುಗಡೆ ಬಗ್ಗೆ ಬಿಗ್ ನ್ಯೂಸ್ ಸಿಕ್ಕಿದೆ.

ಅಧಿಕೃತ ರಹಸ್ಯ ಕಾಯ್ದೆ ಉಲ್ಲಂಘನೆ ಆರೋಪ ಎದುರಿಸುತ್ತಾ, ಜೈಲು ಸೇರಿರುವ ಪಾಕಿಸ್ತಾನದ ಮಾಜಿ ಪಿಎಂ ಇಮ್ರಾನ್‌ರ, ಜಾಮೀನು ಅರ್ಜಿ ವಿಚಾರಣೆ ಬಗ್ಗೆ ಬಿಗ್ ನ್ಯೂಸ್ ಹೊರಬಿದ್ದಿದೆ. ಜೈಲಲ್ಲಿ ಸಾಕಷ್ಟು ಸಂಕಷ್ಟ ಎದುರಿಸುತ್ತಿರುವ ಇಮ್ರಾನ್‌ಗೆ, ಹೇಗಾದರೂ ಬಿಡುಗಡೆ ಭಾಗ್ಯ ಸಿಗಲಿ ಅಂತಾ ಅಭಿಮಾನಿಗಳು ಪ್ರಾರ್ಥಿಸುತ್ತಿದ್ದರು. ಹಾಗೆ ಇಮ್ರಾನ್ ಖಾನ್ ಪರ ವಕೀಲರ ಪಡೆ ಕೂಡ ಸಿಕ್ಕಾಪಟ್ಟೆ ಎಫರ್ಟ್ ಹಾಕಿ ತಮ್ಮ ಪ್ರಯತ್ನ ಮುಂದುವರಿಸಿತ್ತು. ಈಗ ಬೇಲ್ ಬಗ್ಗೆ ಬಿಗ್ ಅಪ್‌ಡೇಟ್ ಸಿಕ್ಕಿದೆ.

Discover what is happening in Pak former PM Imran Khan case

ಇಮ್ರಾನ್‌ಗೆ ಯಾವಾಗ ಜಾಮೀನು ಸಿಗುತ್ತೆ?

ಅಷ್ಟಕ್ಕೂ ಸೆಪ್ಟೆಂಬರ್ 25ಕ್ಕೆ ಇಮ್ರಾನ್‌ ಖಾನ್‌ರ ಜಾಮೀನು ಅರ್ಜಿ ವಿಚಾರಣೆ ನಡೆಸುತ್ತೇವೆ ಎಂದು ಇಸ್ಲಾಮಾಬಾದ್‌ ಹೈಕೋರ್ಟ್‌ ಹೇಳಿದೆ. ಅಂದರೆ ನಾಳೆ ಇಮ್ರಾನ್ ಭವಿಷ್ಯವು ಕೂಡ ನಿರ್ಧಾರ ಆಗಲಿದೆ. ಜಾಮೀನು ಅರ್ಜಿಯನ್ನ ತಿರಸ್ಕರಿಸಿ ವಿಶೇಷ ನ್ಯಾಯಾಲಯ ಹೊರಡಿಸಿದ್ದ ಆದೇಶ ಪ್ರಶ್ನಿಸಿ ಇಮ್ರಾನ್ ಪರ ವಕೀಲರು ಇಸ್ಲಾಮಾಬಾದ್‌ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ. ಈ ಹಿನ್ನೆಲೆಯಲ್ಲಿ ಇದೀಗ ಸಿಹಿಸುದ್ದಿ ಸಿಕ್ಕಿದ್ದು, ಇಸ್ಲಾಮಾಬಾದ್‌ ಹೈಕೋರ್ಟ್‌ ಇಮ್ರಾನ್‌ರ ಭವಿಷ್ಯ ನಿರ್ಧರಿಸುವ ಮಹತ್ವದ ಆದೇಶವನ್ನು ನಾಳೆ ನೀಡುವ ಸಾಧ್ಯತೆ ದಟ್ಟವಾಗಿದೆ.

ಇಷ್ಟಲ್ಲದರ ಮಧ್ಯೆ ಇದೇ ಕಾಯ್ದೆ ಉಲ್ಲಂಘನೆ ಆರೋಪದಡಿ ಬಂಧಿತರಾದ ‌ಮಾಜಿ ವಿದೇಶಾಂಗ ಸಚಿವ ಶಾ ಮಹಮೂದ್‌ ಖುರೇಶಿ ಜಾಮೀನು ಅರ್ಜಿ ಕೂಡ ತಿರಸ್ಕರಿಸಲಾಗಿತ್ತು. ಹೀಗೆ ಇಬ್ಬರ ನ್ಯಾಯಾಂಗ ಬಂಧನವನ್ನು ಸೆಪ್ಟೆಂಬರ್ 26ರವರೆಗೂ ವಿಸ್ತರಿಸಿ ಸೆಪ್ಟೆಂಬರ್ 13ರಂದು ಆದೇಶ ನೀಡಿತ್ತು ಪಾಕಿಸ್ತಾನ ವಿಶೇಷ ನ್ಯಾಯಾಲಯ. ಆದರೆ ಈಗ ಇಮ್ರಾನ್ ವಿಚಾರದಲ್ಲಿ ರಿಲೀಫ್ ಸಿಕ್ಕಿದ್ದು ಖುರೇಶಿ ಕೂಡ ಇದೇ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಜೈಲಿಗೆ ಹೋಗಲು ಕಾರಣ ಏನು?

ಇನ್ನು ಇಮ್ರಾನ್ ಖಾನ್ ಪಾಕಿಸ್ತಾನ ಪ್ರಧಾನಿ ಹುದ್ದೆಗೆ ಏರಿದ್ದಾಗ ಪಾಕ್ ಸೇನೆ & ಪಾಕಿಸ್ತಾನದ ಐಎಸ್‌ಐ ವಿರೋಧ ಕಟ್ಟಿಕೊಂಡು ಅಧಿಕಾರದಿಂದ ಕೆಳಗೆ ಇಳಿದರು. ಹೀಗಾಗಿದ್ದಾಗ ಇಮ್ರಾನ್ ಖಾನ್ ತಮ್ಮನ್ನು ಪ್ರಧಾನ ಮಂತ್ರಿಯ ಹುದ್ದೆಯಿಂದ ಕೆಳಗಿಳಿಸಲು ಅಮೆರಿಕ ಬೆಂಬಲಿತ ಪಿತೂರಿ ನಡೆದಿತ್ತು ಎಂದು ಆರೋಪಿಸಿದ್ದರು. ಈ ಆರೋಪ ಇಮ್ರಾನ್‌ ಖಾನ್‌ಗೆ ಮುಳುವಾಗಿದೆ. ಹೀಗೆ ಅಮೆರಿಕದಲ್ಲಿನ ಪಾಕಿಸ್ತಾನ ರಾಯಭಾರ ಕಚೇರಿಯು ಕಳೆದ ವರ್ಷ ಮಾರ್ಚ್‌ನಲ್ಲಿ ರವಾನಿಸಿದ್ದ ಅಧಿಕೃತ ದಾಖಲೆ ಸೋರಿಕೆ ಮಾಡಿದ್ದ ಆರೋಪವನ್ನ ಇಮ್ರಾನ್‌ ಖಾನ್‌ ಹಾಗೂ ಅವರ ಆಪ್ತ ಖುರೇಶಿ ಎದುರಿಸುತ್ತಿದ್ದಾರೆ.

Discover what is happening in Pak former PM Imran Khan case

ಚುನಾವಣೆಗೆ ಸಿದ್ಧವಾಗುತ್ತಿದೆ ಪಾಕಿಸ್ತಾನ

ಪಾಕಿಸ್ತಾನದಲ್ಲಿ ಎಲೆಕ್ಷನ್‌ಗೆ ಸಿದ್ಧತೆ ನಡೆಸುತ್ತಿರುವಾಗ, ಇಮ್ರಾನ್ ಖಾನ್ ಜಾಮೀನು ಅರ್ಜಿ ವಿಚಾರಣೆ ಕೂಡ ಮಹತ್ವ ಪಡೆದಿದೆ. ಈಗಾಗಲೇ ಪಾಕ್ ಸಂಸತ್ ಚುನಾವಣೆಗೆ ಪಾಕಿಸ್ತಾನ ಆಯೋಗ ಸಿದ್ಧತೆ ಆರಂಭಿಸಿದೆ. ಕ್ಷೇತ್ರ ಪುನರ್‌ವಿಂಗಡಣೆ ಕಾರ್ಯದ ಬಳಿಕ ನವೆಂಬರ್‌ 30ಕ್ಕೆ ಅಂತಿಮ ಪಟ್ಟಿಯನ್ನ ಪ್ರಕಟಿಸುವ ನಿರೀಕ್ಷೆ ಇದೆ. ಹಾಗೇ 2024ರ ಜನವರಿ ತಿಂಗಳಲ್ಲಿ ಪಾಕ್ ಸಂಸತ್ ಚುನಾವಣೆ ಗ್ಯಾರಂಟಿ ಎನ್ನಲಾಗುತ್ತಿದೆ. ಈ ಮಧ್ಯೆ ಇಮ್ರಾನ್‌ಗೆ ಜಾಮೀನು ಸಿಕ್ಕರೆ ಪಾಕಿಸ್ತಾನದಲ್ಲಿ ಹಾಗೂ ಪಾಕ್ ಚುನಾವಣೆಯಲ್ಲಿ ಸಂಚಲನ ಸೃಷ್ಟಿಯಾಗಲಿದೆ.

ಪಾಕಿಸ್ತಾನ ಲೋಕಸಭೆ ಒಟ್ಟು ಸದಸ್ಯ ಬಲ 342, ಭಾರತದ ರೀತಿ ಪಾಕಿಸ್ತಾನದಲ್ಲೂ 5 ವರ್ಷ ಅಧಿಕಾರವಧಿ ಇರುತ್ತದೆ. ಈ ಅವಧಿಯು ಆಗಸ್ಟ್ 12ಕ್ಕೆ ಕೊನೆಯಾಗುತ್ತಿತ್ತು. ಆದರೆ ಈ ಅವಧಿ ಪೂರ್ಣವಾಗುವ ಮೊದಲು ಅಂದರೆ ಆಗಸ್ಟ್‌ 9ಕ್ಕೆ ಪಾಕಿಸ್ತಾನದ ಸಂಸತ್ ವಿಸರ್ಜನೆಗೆ ಶಿಫಾರಸು ಕಳುಹಿಸಿದ್ದರು ಪಾಕ್ ಪ್ರಧಾನಿ. ಹೀಗಾಗಿ ಪ್ರಧಾನಿ ಶಿಫಾರಸು ಹಿನ್ನೆಲೆ ಪಾಕಿಸ್ತಾನ ಸಂಸತ್ತನ್ನು ವಿಸರ್ಜನೆ ಮಾಡಲಾಗಿತ್ತು. ಈಗ ಚುನಾವಣೆ ಸಿದ್ಧತೆ ನಡುವೆ ಇಮ್ರಾನ್ ಖಾನ್ ಹೊರಗಡೆ ಬರ್ತಾರಾ? ಎಂಬ ಪ್ರಶ್ನೆ ಪಾಕಿಸ್ತಾನದ ನಾಗರಿಕರನ್ನು ಕಾಡುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+