ಕೆನಡಾ ಗಡಿಯಲ್ಲಿ ಭಾರತದ ಯೋಧರ ಭರ್ಜರಿ ಸಮರಾಭ್ಯಾಸ!
ಒಂದ್ಕಡೆ ಕೆನಡಾ ಹಾಗೂ ಭಾರತದ ಸಂಬಂಧ ಕ್ಷಣಕ್ಷಣಕ್ಕೂ ಹಾಳಾಗಿ ಹೋಗುತ್ತಿದೆ. ಆದ್ರೆ ಇದೇ ಸಂದರ್ಭದಲ್ಲಿ ಭಾರತೀಯ ಸೇನೆಯ ವೀರ ಯೋಧರು ಕೆನಡಾ ಗಡಿಯಲ್ಲಿ ಭರ್ಜರಿ ಸಮರಾಭ್ಯಾಸ ನಡೆಸುತ್ತಿದ್ದಾರೆ. ಹಾಗಾದ್ರೆ ಕೆನಡಾ ಗಡಿಯಲ್ಲಿ ಭಾರತದ ವೀರ ಯೋಧರಿಗೆ ಏನು ಗುರಿ? ಯಾವ ಕಾರಣಕ್ಕೆ ಕೆನಡಾದ ಗಡಿಯಲ್ಲಿ ಭಾರತದ ಸೈನಿಕರು ಸಮರಾಭ್ಯಾಸ ನಡೆಸುತ್ತಿದ್ದಾರೆ?
ಅಂದಹಾಗೆ ಖಲಿಸ್ತಾನಿ ಉಗ್ರರು ತೋಡಿದ ಗುಂಡಿಯಲ್ಲಿ ಕೆನಡಾ ಸರ್ಕಾರ ಬಿದ್ದಂತೆ ಇದೀಗ ಕಾಣುತ್ತಿದೆ. ಅದರಲ್ಲೂ ಖಲಿಸ್ತಾನಿ ಉಗ್ರನ ಹತ್ಯೆಗೆ ಭಾರತದ ಅಧಿಕಾರಿಗಳು ಕಾರಣವೆಂದು ಹೇಳುವ ಮೂಲಕ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಕಿಚ್ಚು ಹೊತ್ತಿಸಿದ್ದರು. ಆದ್ರೆ ಇದೇ ಸಂದರ್ಭದಲ್ಲಿ ಭಾರತದ ವೀರ ಸೈನಿಕರು ಕೆನಡಾ ಗಡಿ ಭಾಗದಲ್ಲಿ ಅಬ್ಬರಿಸುತ್ತಿದ್ದಾರೆ. ಈ ಮೂಲಕ ಭಾರತದ ಸೇನಾ ತಾಕತ್ ಇಡೀ ಜಗತ್ತಿಗೆ ಗೊತ್ತಾಗುತ್ತಿದೆ. ಇಲ್ಲಿ ಭಾರತದ ಸೈನಿಕ ಪಡೆ ಮಾತ್ರ ಅಭ್ಯಾಸ ನಡೆಸುತ್ತಿಲ್ಲ, ಭಾರತೀಯ ಸೇನೆಗೆ ಅಮೆರಿಕ ಸೇನೆ ಕೂಡ ಸಾಥ್ ನೀಡಿದೆ.

ಅಲಾಸ್ಕಾ ನೆಲದಲ್ಲಿ ಭಾರತೀಯರ ಅಬ್ಬರ
ಹೌದು, ಭಾರತೀಯ ಸೇನೆ ಅಲಾಸ್ಕಾ ನೆಲದಲ್ಲಿ ತನ್ನ ಬಲಪ್ರದರ್ಶನ ಮಾಡುತ್ತಿದೆ. ಹೀಗೆ ಭಾರತದ ಸೇನೆ ಜೊತೆ ಅಮೆರಿಕ ಸೈನಿಕರು ಕೂಡ ಇದ್ದಾರೆ. ಯಾಕಂದ್ರೆ ಅಮೆರಿಕ ಮತ್ತು ಭಾರತದ ಸೈನಿಕರು ಈಗ ಅಲಾಸ್ಕಾ ನೆಲದಲ್ಲಿ ಜಂಟಿ ಸಮರಾಭ್ಯಾಸ ನಡೆಸುತ್ತಿದ್ದಾರೆ. ಈ ಅಲಾಸ್ಕಾ ಇರುವುದು ಕೆನಡಾ ಗಡಿ ಭಾಗದಲ್ಲಿ. ಹೀಗಾಗಿ ಕೆನಡಾ ಗಡಿ ಭಾಗದಲ್ಲೇ ಭಾರತ ಸೇನೆ ಭರ್ಜರಿ ತಾಲೀಮು ನಡೆಸುತ್ತಿದೆ. ಭಾರತ ಹಾಗೂ ಅಮೆರಿಕ ಸೈನಿಕರು ಜಂಟಿಯಾಗಿ ನಡೆಸುತ್ತಿರುವ ಸೇನಾ ಅಭ್ಯಾಸ ಇದೀಗ ಜಗತ್ತಿನ ಗಮನ ಸೆಳೆದಿದೆ.
Troops of India and the US carried out a joint tactical exercise in Alaska during the ongoing Ex Yudh Abhyas: Indian Army pic.twitter.com/KY7rtjgMiD
— ANI (@ANI) September 30, 2023
ಜಂಟಿ ಸಮರಾಭ್ಯಾಸದ ಉದ್ದೇಶ ಏನು?
ಇನ್ನು ಮತ್ತೊಂದು ಕಡೆ ಅಲಾಸ್ಕಾದಲ್ಲಿ ಒಟ್ಟು 2 ವಾರಗಳ ಕಾಲ ಜಂಟಿ ಸಮರಾಭ್ಯಾಸಕ್ಕೆ ಪ್ಲ್ಯಾನ್ ಮಾಡಲಾಗಿತ್ತು. ಇದೇ ಕಾರಣಕ್ಕೆ ಇಂದು ಭಾರತ ಹಾಗೂ ಅಮೆರಿಕ ಸೇನಾಪಡೆ ಯೋಧರು ಕಸರತ್ತು ಆರಂಭಿಸಿದ್ದಾರೆ. ಇನ್ನು ಈ ಜಂಟಿ ಸಮರಾಭ್ಯಾಸದ ಉದ್ದೇಶವೇನು ಅಂದರೆ, ಎರಡೂ ದೇಶಗಳು ಜಗತ್ತಿಗೆ ಈ ಮೂಲಕ ತಮ್ಮ ಬಲಪ್ರದರ್ಶನ ಮಾಡಲಿವೆ.

ಈ ಹಿನ್ನೆಲೆಯಲ್ಲಿ ಯುದ್ಧ ಎಂಜಿನಿಯರಿಂಗ್, ಅಡೆತಡೆ ನಿವಾರಣೆ ಸೇರಿದಂತೆ ವಿವಿಧ ಸೇನಾ ಕೌಶಲ್ಯ ವಿನಿಮಯ & ಯುದ್ಧ ಸಲಕರಣೆಗಳ ಸಮರ್ಥ ಬಳಕೆ ಬಗ್ಗೆ ಇದೀಗ ಎರಡೂ ದೇಶಗಳ ಸೈನಿಕರು ಅಭ್ಯಾಸ ಆರಂಭಿಸಿದ್ದಾರೆ. ಭಾರತೀಯ ಸೇನೆಯ ನೂರಾರು ಸೈನಿಕರು ಇದೀಗ ಈ ಜಂಟಿ ಸಮರಾಭ್ಯಾಸದಲ್ಲಿ ಪಾಲ್ಗೊಂಡಿದ್ದಾರೆ. ಈ ಮೂಲಕ ಎರಡೂ ದೇಶಗಳ ಮಧ್ಯೆ ಸೇನಾ ತಂತ್ರಜ್ಞಾನ ಕೂಡ ವಿನಿಮಯ ಆಗಲಿದೆ.
ಹಿಮ ತುಂಬಿದ ಜಾಗದಲ್ಲಿ ಅಭ್ಯಾಸ
ಅಲಾಸ್ಕಾ ಎಂದರೆ ಪ್ರವಾಸಿಗರಿಗೆ ಅಚ್ಚುಮೆಚ್ಚಿನ ಜಾಗ, ಏಕೆಂದರೆ ಇಲ್ಲಿ ಬೀಳುವ ಹಿಮವು ವಾತಾವರಣವನ್ನ ತಂಪಾಗಿ ಇಡುತ್ತದೆ. ಹಾಗೇ ಪ್ರವಾಸಿಗರಿಗೆ ಬೇಕಾದ ವ್ಯವಸ್ಥೆ ಕೂಡ ಈ ಪ್ರದೇಶದಲ್ಲಿ ಇದೆ. ಅಮೆರಿಕದ ಜಾಗವಾದ ಅಲಾಸ್ಕಾ ಯುದ್ಧದ ಸಮಯಕ್ಕೆ ಆಯಕಟ್ಟಿನ ಪ್ರದೇಶ ಕೂಡ ಹೌದು. ಹೀಗಾಗಿ ಇಲ್ಲಿ ನಡೆಯುತ್ತಿರುವ ಭಾರತ & ಅಮೆರಿಕ ಜಂಟಿ ಸೇನಾ ಅಭ್ಯಾಸ ಸಾಕಷ್ಟು ಗಮನ ಸೆಳೆಯುತ್ತಿದೆ. ಅಲ್ಲದೆ ಅಮೆರಿಕದ ಸೇನೆ ಕೂಡ ತನ್ನ ಸಾಕಷ್ಟು ತಂತ್ರಜ್ಞಾನ ಹಂಚಿಕೊಳ್ಳುತ್ತಿರುವುದು ಕುತೂಹಲ ಕೆರಳಿಸಿದೆ.
ಒಟ್ನಲ್ಲಿ ಭಾರತೀಯ ಸೇನೆ ಇದೀಗ ಕೆನಡಾ ಗಡಿಯಲ್ಲಿ ತನ್ನ ಬಲಪ್ರದರ್ಶನ ಮಾಡುತ್ತಿದೆ. ಒಂದ್ಕಡೆ ಭಾರತದ ಜೊತೆ ಕೆನಡಾ ಸಂಬಂಧ ಹಾಳು ಮಾಡಿಕೊಳ್ಳುತ್ತಿರುವ ಸಂದರ್ಭದಲ್ಲೇ ಈ ಬೆಳವಣಿಗೆ ಸಾಕಷ್ಟು ಗಮನ ಸೆಳೆದಿದೆ. ಮತ್ತೊಂದು ಕಡೆ ಭಾರತದ ಶತ್ರು ರಾಷ್ಟ್ರಗಳ ಕಣ್ಣು ಕೂಡ ಭಾರತ ಹಾಗೂ ಅಮೆರಿಕದ ಜಂಟಿ ಸಮರಾಭ್ಯಾಸದ ಮೇಲೆ ನೆಟ್ಟಿದೆ. ಆದರೆ ಇದ್ಯಾವುದಕ್ಕೂ ಕೇರ್ ಮಾಡದೆ ಭಾರತದ ಸೈನಿಕರು ಇದೀಗ ಭರ್ಜರಿಯಾಗಿ ಸಮರಾಭ್ಯಾಸ ನಡೆಸುತ್ತಿದ್ದಾರೆ.
-
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
Petrol Diesel Shortage: ಪೆಟ್ರೋಲ್, ಡೀಸೆಲ್ ಖಾಲಿಯಾಗುತ್ತೆ ಅನ್ನೋ ಸುಳ್ಳು ವದಂತಿಗಳಿಗೆ ಕಿವಿಕೊಡಬೇಡಿ; ಇಂಡಿಯನ್ ಆಯಿಲ್ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL












Click it and Unblock the Notifications