Ukraine War: ಪರಮಾಣು ಅಸ್ತ್ರಗಳ ಯುದ್ಧದಲ್ಲಿ ನಾಶವಾಗಿ ಹೋಗುತ್ತಾ ಜಗತ್ತು?
ಭಾರತ ಶಾಂತವಾಗಿದೆ, ಇದಕ್ಕೆ ಕಾರಣ ಭಾರತದ ಯುದ್ಧ ವಿರೋಧಿ ನೀತಿ. ಅಕಸ್ಮಾತ್ ಈ ರೀತಿ ಭಾರತ ಇರದೆ, ಭಾರತ ಕೂಡ ಬೇರೆ ದೇಶಗಳಂತೆ ಯುದ್ಧಕ್ಕೆ ಪ್ರಾಮುಖ್ಯತೆ ನೀಡಿದ್ದರೆ ಪರಿಸ್ಥಿತಿ ಹೇಗೆ ಇರುತ್ತಿತ್ತು ಹೇಳಿ? ಹೌದು, ಪ್ರಪಂಚದಲ್ಲಿ ಈಗಾಗಲೇ 2 ಮಹಾಯುದ್ಧ ನಡೆದು ಹೋಗಿವೆ. ಅದರಲ್ಲೂ 2ನೇ ಮಹಾ ಯುದ್ಧದಲ್ಲಿ ಪರಮಾಣು ಅಸ್ತ್ರ ಅಂದರೆ ನ್ಯೂಕ್ಲಿಯರ್ ವೆಪನ್ಸ್ ಬಳಕೆ ಆಗಿತ್ತು. ಪರಮಾಣು ಬಾಂಬ್ ಭಯಾನಕತೆ ನೋಡಿ ಜಗತ್ತಲ್ಲಿ ಎಂದೆಂದಿಗೂ ಈ ಬಾಂಬ್‌ಗಳನ್ನು ಬಳಕೆ ಮಾಡಬಾರದೆಂಬ ನಿರ್ಧಾರಕ್ಕೂ ಮನುಷ್ಯರು ಬಂದಿದ್ದರು. ಆದರೆ ಈಗ ಏನಾಗುತ್ತಿದೆ ಗೊತ್ತಾ?
ಯುದ್ಧ.. ಯುದ್ಧ.. ಯುದ್ಧ... ಹೀಗೆ ಮನುಷ್ಯರಿಗೆ ಏನೇ ಹೇಳಿದರೂ ಬುದ್ಧಿ ಬರುವಂತೆ ಕಾಣುತ್ತಿಲ್ಲ. ಯಾಕಂದ್ರೆ ಜಾಗತಿಕ ಮಟ್ಟದಲ್ಲಿ ಯುದ್ಧಗಳ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿದೆ. ಅದರಲ್ಲೂ ದೊಡ್ಡ ದೊಡ್ಡ ದೇಶಗಳೇ ಸೇರಿಕೊಂಡು ಇದೀಗ ಯುದ್ಧ ಮಾಡ್ತಿವೆ. ಅದರ ಭೀಕರತೆ ಇದೀಗ ಹೇಗೆ ಇದೆ ಅಂದ್ರೆ, ಒಂದು ಕಡೆ ರಷ್ಯಾ & ಉಕ್ರೇನ್ ಯುದ್ಧದಲ್ಲಿ ಪರಮಾಣು ಅಸ್ತ್ರಗಳ ಬಳಕೆಗೆ ಸಿದ್ಧತೆ ನಡೆದಿದೆ ಎಂಬ ಸುದ್ದಿ ಭಯ ಹುಟ್ಟಿಸುತ್ತಿದೆ. ಇದು ಮಾತ್ರವಲ್ಲ, ಇಸ್ರೇಲ್ & ಪ್ಯಾಲೆಸ್ತೀನ್ ಯುದ್ಧದಲ್ಲೂ ಭಯದ ವಾರಾವರಣ ಆವರಿಸಿದೆ.

ರಷ್ಯಾ ವಿರುದ್ಧ ಪರಮಾಣು ಅಸ್ತ್ರ?
ಯುದ್ಧದಲ್ಲಿ ಉಕ್ರೇನ್ ಇದೀಗ ಗೆಲ್ಲಬೇಕು ಎಂಬ ಕಾರಣಕ್ಕೆ ಪಾಶ್ಚಿಮಾತ್ಯ ದೇಶಗಳು ದೊಡ್ಡ ಮಟ್ಟದಲ್ಲಿ ಸಹಾಯ ಮಾಡುತ್ತಿವೆ. ವಿಚಾರ ಇಷ್ಟೇ ಆಗಿದ್ದರೆ ಸಮಸ್ಯೆ ಇರಲಿಲ್ಲ, ಆದರೆ ಈ ರೀತಿ ಲಕ್ಷ ಲಕ್ಷ ಕೋಟಿ ರೂಪಾಯಿ ಸಹಾಯ ಪಡೆಯುತ್ತಿರುವ ಉಕ್ರೇನ್, ರಷ್ಯಾ ವಿರುದ್ಧವೇ ಪರಮಾಣು ಅಸ್ತ್ರಗಳನ್ನ ಅಂದರೆ ಭಯಾನಕ ನ್ಯೂಕ್ಲಿಯರ್ ವೆಪನ್ಸ್ ಬಳಸಲು ಸಿದ್ಧತೆಯನ್ನ ನಡೆಸಿದೆ ಎಂಬ ಆರೋಪ ಕೇಳಿಬಂದಿದೆ. ಹಾಗಿದ್ರೆ ರಷ್ಯಾ ಈ ವಿಚಾರದಲ್ಲಿ ಸುಮ್ಮನೆ ಕೂರುತ್ತಾ ಹೇಳಿ?
ರಷ್ಯಾ ರೆಡಿಮಾಡಿದೆ ಪರಮಾಣು ಅಸ್ತ್ರ!
ಉಕ್ರೇನ್ ಬಳಿ ಎಷ್ಟು ಪರಮಾಣು ಅಸ್ತ್ರಗಳು ಇವೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದ್ರೆ ರಷ್ಯಾ ಬಳಿ ಮಾತ್ರ ಯಾರೂ ಊಹಿಸಲು ಸಾಧ್ಯವಾಗದ ದೊಡ್ಡ ದೊಡ್ಡ ಪರಮಾಣು ಬಾಂಬ್ ರಾಶಿಯೇ ಇದೆ. ಅದರಲ್ಲೂ ಈಗಾಗಲೇ ರಷ್ಯಾ ಮಿಲಿಟರಿ ತನ್ನ ಮಿತ್ರ ದೇಶ ಬೆಲಾರಸ್ ಗಡಿ ಪ್ರದೇಶದ ಸಮೀಪದಲ್ಲೇ ಭಾರಿ ದೊಡ್ಡ ಪ್ರಮಾಣದಲ್ಲಿ ನ್ಯೂಕ್ಲಿಯರ್ ಬಾಂಬ್‌ಗಳನ್ನ ಕೂಡ ನೇಮಕ ಮಾಡಿದೆ. ಈ ಕಾರಣಕ್ಕೆ ಯಾವ ಕ್ಷಣದಲ್ಲಿ ಏನಾಗುತ್ತೋ? ಎಂಬ ಭಯವು ಕೂಡ ಇದೀಗ ಆವರಿಸಿದೆ. ಅಕಸ್ಮಾತ್ ಇಬ್ಬರೂ ತಲೆಕೆಟ್ಟವರ ರೀತಿ ಪರಮಾಣು ಬಾಂಬ್ ಬಳಕೆಯನ್ನ ಮಾಡಿದರೆ ಜಗತ್ತು ಸರ್ವನಾಶ ಆಗುವುದು ಗ್ಯಾರಂಟಿ!












Click it and Unblock the Notifications