‘ದಯವಿಟ್ಟು ನಮ್ಮನ್ನು ಕಾಪಾಡಿ, ಇಲ್ಲ ಅಂದ್ರೆ ತುಂಬಾ ಕಷ್ಟವಾಗುತ್ತೆ’

ತಲೆ ಗಟ್ಟಿ ಇದೆ ಅಂತಾ ಬಂಡೆಗೆ ಹೋಗಿ ತಲೆ ಚಚ್ಚಿಕೊಂಡ ರೀತಿ ಆಗಿದೆ ಉಕ್ರೇನ್ ದೇಶದ ಈಗಿನ ಪರಿಸ್ಥಿತಿ. ರಷ್ಯಾ ವಿರುದ್ಧ ಯುದ್ಧ ತಪ್ಪಿಸುವ ಅವಕಾಶ ಕಳೆದುಕೊಂಡ ಉಕ್ರೇನ್‌ಗೆ ಈಗ ಬದುಕುವುದು ಕೂಡ ಕಷ್ಟವಾಗುತ್ತಿದೆ. ಇಷ್ಟುದಿನ ಅಮೆರಿಕದ ನೆರವಿನ ಪರಿಣಾಮವೇ ರಷ್ಯಾ ವಿರುದ್ಧ ಉಕ್ರೇನ್ ಹೋರಾಟ ಪ್ರದರ್ಶನ ಮಾಡಿತ್ತು. ಆದರೆ ಅಮೆರಿಕದಲ್ಲಿ ಇದೀಗ ಉಕ್ರೇನ್‌ಗೆ ಸಹಾಯ ಮಾಡುವ ವಿಚಾರದಲ್ಲಿ ವಿವಾದ ಸ್ಫೋಟವಾಗಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ.

ಅಂದಹಾಗೆ ಬೈಡನ್ ಅವರು ಯಾವಾಗ ಉಕ್ರೇನ್ ಸೇನೆಗೆ ರಷ್ಯಾ ವಿರುದ್ಧ ಸಹಾಯವನ್ನು ಮಾಡಲು ಮುಂದಾದರೋ, ಆ ದಿನವೇ ಅಮೆರಿಕದಲ್ಲಿ ಆಕ್ರೋಶ ಮೊಳಗಿತ್ತು. ಯಾಕಂದ್ರೆ ಈ ರೀತಿ ಮಾಡಿದರೆ ರಷ್ಯಾ ರೊಚ್ಚಿಗೇಳುವ ಆತಂಕ ಮನೆಮಾಡಿತ್ತು.

Discover How Ukrainian President Volodymyr Zelenskyy Requested For Aid With US

ಇದೇ ಕಾರಣಕ್ಕೆ, ಈ ವಿಚಾರದಲ್ಲಿ ಅಮೆರಿಕ ತಟಸ್ಥವಾಗಿ ಇರಲಿ ಎನ್ನುವ ಒತ್ತಾಯ ಕೇಳಿಬಂದಿತ್ತು. ಇಷ್ಟಾದ್ರೂ ಅಮೆರಿಕದ ಜೋ ಬೈಡನ್ ಆಡಳಿತ ಮಾತ್ರ ಮಾತು ಕೇಳದೆ ಉಕ್ರೇನ್ ಬೆನ್ನಿಗೆ ನಿಂತು, ಮತ್ತೆ ವಿರೋಧ ಕಟ್ಟಿಕೊಂಡಿದೆ. ಹೀಗಿದ್ದಾಗ ಉಕ್ರೇನ್ ನೆರವಿಗಾಗಿ ಕಾಯುತ್ತಿದ್ದು, ಈಗ ಅಮೆರಿಕ ಎದುರು ಉಕ್ರೇನ್ ಅಧ್ಯಕ್ಷ ನೇರವಾಗಿ ನೆರವಿಗೆ ಮೊರೆ ಇಟ್ಟಿದ್ದಾರೆ.

ಅಮೆರಿಕದ ಎದುರು ಬೇಡಿಕೊಂಡ ಉಕ್ರೇನ್

ಯೆಸ್, ಈಗ ಉಕ್ರೇನ್ ಅಧ್ಯಕ್ಷರಾದ ಝೆಲೆನ್ಸ್ಕಿ ಅವರು ಅಮೆರಿಕಗೆ ಮನವಿ ಮಾಡಿದ್ದಾರೆ. ರಷ್ಯಾ ವಿರುದ್ಧ ಹೋರಾಡಲು ಅಮೆರಿಕ ತನ್ನ ಸಹಾಯವನ್ನು ಮುಂದುವರಿಸಲಿ ಎಂದು, ಬೇಡಿಕೆ ಸಲ್ಲಿಸಿದ್ದಾರೆ. ಜರ್ಮನಿಯ ಅಮೆರಿಕದ ಸೇನಾ ನೆಲೆಯ ಪ್ರಧಾನ ಕಚೇರಿಗೆ ಭೇಟಿ ನೀಡಿ ಬಳಿಕ ಝೆಲೆನ್ಸ್ಕಿ ಈ ಮನವಿ ಸಲ್ಲಿಸಿದ್ದಾರೆ. ಮಿಲಿಟರಿ ಕಮಾಂಡರ್ ಗಳನ್ನ ಭೇಟಿ ಮಾಡಿದ ನಂತರ ಅವರು ಭಾವುಕರಾಗಿ ಸಾಮಾಜಿ ಮಾಧ್ಯಮದ ಮೂಲಕ ಅಮೆರಿಕಗೆ ಹೀಗೆ ಮನವಿ ಮಾಡಿದ್ದಾರೆ.

ಕಾಂಗ್ರೆಸ್ ನಿರ್ಧಾರದಲ್ಲಿ ಉಕ್ರೇನ್ ಭವಿಷ್ಯ!

ಈ ನಿರ್ಣಾಯಕ ಯುದ್ಧದಲ್ಲಿ ರಷ್ಯಾನ ಹಿಮ್ಮೆಟ್ಟಿಸೋದಕ್ಕೆ ಉಕ್ರೇನ್‌ಗೆ ಅಗತ್ಯ ಇರುವ ಸೇನಾ ಬೆಂಬಲ ಮುಂದುವರಿಸಲು ಅಮೆರಿಕ ಸಂಸತ್ತು ಶೀಘ್ರ ನಿರ್ಣಾಯಕ ನಿರ್ಧಾರ ತೆಗೆದುಕೊಳ್ಳುವ ನಿರೀಕ್ಷೆ ಇದೆ ಎಂದಿದ್ದಾರೆ ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್ಸ್ಕಿ. ಹಾಗೇ ಅಮೆರಿಕದ ಮಿಲಿಟರಿ ಅಧಿಕಾರಿಗಳ ಜೊತೆಗೆ ಹಲವು ಪ್ರಮುಖ ವಿಚಾರಗಳನ್ನ ಕೂಡ ವೊಲೊಡಿಮಿರ್‌ ಝೆಲೆನ್ಸ್ಕಿ ಚರ್ಚೆ ಮಾಡಿದ್ದಾರೆ.

ಏನ್ ಆಗಲಿದೆ ಉಕ್ರೇನ್ ಭವಿಷ್ಯ?

ರಷ್ಯಾ ವಿರುದ್ಧ ಗೆಲುವಿಗೋಸ್ಕರ ಉಕ್ರೇನ್ ಈಗ ಅಮೆರಿಕ ಎದುರು ಪರಿಪರಿಯಾಗಿ ಸಹಾಯಕ್ಕೆ ಮನವಿ ಮಾಡುತ್ತಿದೆ. ಆದರೂ ಅಮೆರಿಕನ್ ಕಾಂಗ್ರೆಸ್ ನಿರ್ಣಯದ ಮೇಲೆ, ಈಗ ಉಕ್ರೇನ್ ಭವಿಷ್ಯ ನಿಂತಿದೆ. ಅಕಸ್ಮಾತ್ ಅಮೆರಿಕನ್ ಕಾಂಗ್ರೆಸ್, ಜೋ ಬೈಡನ್ ಸರ್ಕಾರದ ನಿರ್ಧಾರ ಬೆಂಬಲಿಸಿದರೆ ಮಾತ್ರ ಉಕ್ರೇನ್‌ಗೆ ಉಳಿವು. ಇಲ್ಲವಾದರೆ ಪರಿಸ್ಥಿತಿ ಕಠಿಣವಾಗಲಿದೆ ಎಂಬ ಮಾತುಗಳು ಕೂಡ ಕೇಳಿಬರುತ್ತಿವೆ.

Discover How Ukrainian President Volodymyr Zelenskyy Requested For Aid With US

ಎಷ್ಟು ದುಡ್ಡು ಅಂತಾ ಕೊಡೋದು?

ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಸಾರಿ 660 ದಿನಗಳೇ ಕಳೆದಿದೆ. ಸುಮಾರು ಒಂದು ಮುಕ್ಕಾಲು ವರ್ಷದಲ್ಲಿ ಅಮೆರಿಕದಿಂದ, 4 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಸಹಾಯನ ಉಕ್ರೇನ್ ಸೇನೆ ಪಡೆದಿದೆ. ಅಮೆರಿಕದ ಒಳಗಡೆ ಭಾರಿ ವಿರೋಧ ವ್ಯಕ್ತವಾಗಿದ್ದು, ಶೀಘ್ರದಲ್ಲಿ ಅಮೆರಿಕ ಸರ್ಕಾರ ಉಕ್ರೇನ್‌ಗೆ ನೀಡುತ್ತಿರುವ ನೆರವು ಸಂಪೂರ್ಣ ನಿಲ್ಲಿಸಿದ್ರೂ ಅಚ್ಚರಿ ಇಲ್ಲ ಎನ್ನಲಾಗುತ್ತಿದೆ. ಇದೇ ಸಮಯದಲ್ಲಿ ಉಕ್ರೇನ್ ಅಧ್ಯಕ್ಷರು ನೇರವಾಗಿ ಅಮೆರಿಕಗೆ ಮನವಿ ಸಲ್ಲಿಸಿದ್ದಾರೆ.

ಹೀಗೆ ಒಂದು ಯುದ್ಧ ಜಗತ್ತನ್ನು ಹಲವು ವಿನಾಶದ ಕಡೆಗೆ ತಳ್ಳುತ್ತಿದೆ. ಅದರಲ್ಲಿ ಉಕ್ರೇನ್ ಪರಿಸ್ಥಿತಿ ಹೀನಾಯವಾಗಿ, ಅಲ್ಲಿನ ಜನ ಜೀವ ಉಳಿಸಿಕೊಳ್ಳಲು ಪರದಾಡುವ ವಾತಾವರಣ ನಿರ್ಮಾಣವಾಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ, ಇದೆಲ್ಲಾ ಮೂರನೇ ಮಹಾಯುದ್ಧಕ್ಕೆ ದಾರಿ ಮಾಡಿಕೊಡುತ್ತಾ? ಅನ್ನೋ ಆತಂಕ ಕೂಡ ಮನೆಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+