Israel-Iran War: ಇಸ್ರೇಲ್ & ಇರಾನ್ ಯುದ್ಧದಲ್ಲಿ ರಷ್ಯಾ ಬೆಂಬಲ ಯಾರಿಗೆ?

ಮನುಷ್ಯರಿಗೆ ಬುದ್ಧಿ ಬರಲ್ಲ.. ಈ ನಮ್ಮ ಭೂಮಿ ಇನ್ನು ಹೆಚ್ಚು ಕಾಲ ಉಳಿಯುವುದಿಲ್ಲ... ಅಂದಹಾಗೆ ಈ ರೀತಿ ಜಗತ್ತಿನಾದ್ಯಂತ ಜನರು ಚರ್ಚೆ ಮಾಡುತ್ತಿದ್ದಾರೆ. ಯಾಕಂದ್ರೆ ಒಂದು ಕಡೆ ಜಗತ್ತಿನಾದ್ಯಂತ ಯುದ್ಧಗಳು ಕ್ಷಣಕ್ಷಣಕ್ಕೆ ಹೆಚ್ಚಾಗುತ್ತಿವೆ. ಮತ್ತೊಂದು ಕಡೆ ವಿನಾಶಕಾರಿ ಬಾಂಬ್‌ಗಳನ್ನ ಅಂದ್ರೆ ಅಸ್ತ್ರಗಳನ್ನ ರೆಡಿ ಮಾಡಿಕೊಂಡಿರುವ ಮನಷ್ಯ ಇದೀಗ ಅವುಗಳನ್ನು ಬಳಸಲು ತುದಿಗಾಲಲ್ಲಿ ನಿಂತಿದ್ದಾನೆ. ಹೀಗಿದ್ದಾಗಲೇ ಇಸ್ರೇಲ್ & ಇರಾನ್ ಯುದ್ಧವು ಕೂಡ ದೊಡ್ಡ ತಲೆನೋವು ತರಿಸಿದೆ. ಹಾಗಾದ್ರೆ, ಇಸ್ರೇಲ್ & ಇರಾನ್ ಯುದ್ಧದಲ್ಲಿ ರಷ್ಯಾ ಬೆಂಬಲ ಯಾರಿಗೆ?

ಜಗತ್ತು ಹಿಂಸೆಯ ಕೂಪವಾಗುತ್ತಿದೆ, ಒಂದು ಕಡೆ ಬಡತನ ಹೆಚ್ಚಾಗುತ್ತಿದೆ. ಇನ್ನೊಂದು ಕಡೆ ನಿರುದ್ಯೋಗ ಆರ್ಭಟಿಸುತ್ತಿದೆ. ಹೀಗೆ ಪ್ರಪಂಚ ವಿನಾಶದ ಕಡೆಗೆ ಓಡೋಡಿ ಹೋಗುತ್ತಿದ್ದು, ಭೂಮಿಯ ಭವಿಷ್ಯ ಮಂಕಾಗಿ ಹೋಗುತ್ತಿದೆ. ಇಂತಹ ಸಮಯದಲ್ಲೇ ಉಗುರಲ್ಲಿ ಹೋಗುವ ವಿಚಾರಕ್ಕೆ ಇಸ್ರೇಲ್ & ಇರಾನ್ ಮಚ್ಚು ತಗೊಂಡು ನಿಂತಿವೆ. ಇಬ್ಬರೂ ಘೋರ ಯುದ್ಧದ ಸನಿಹದಲ್ಲಿ ಚೀರಾಡುತ್ತಿದ್ದಾರೆ, ಆರ್ಭಟಿಸುತ್ತಿದ್ದಾರೆ. ಹೀಗಿದ್ದರೂ ಇಸ್ರೇಲ್ & ಇರಾನ್ ಮಧ್ಯೆ ಇನ್ನೂ ಪೂರ್ಣ ಪ್ರಮಾಣದ ಯುದ್ಧ ಆರಂಭವಾಗಿಲ್ಲ. ಅಕಸ್ಮಾತ್ ಇಸ್ರೇಲ್ & ಇರಾನ್ ಸೇನೆ ನಡುವೆ ಯುದ್ಧ ಶುರುವಾದರೆ ರಷ್ಯಾ ಯಾರ ಪರ ನಿಲ್ಲಬಹುದು? ಬನ್ನಿ ತಿಳಿಯೋಣ.

Discover How Russia Can Take Major Part In Iran And Israel Clash

ರಷ್ಯಾ ಬೆಂಬಲ ಯಾರ ಪರ?

ಪ್ರಪಂಚದ ಅತಿ ದೊಡ್ಡ ದೇಶ ರಷ್ಯಾ, ವಿಸ್ತಿರ್ಣದ ವಿಚಾರದಲ್ಲಿ ರಷ್ಯಾ ಮೀರಿಸುವ ದೇಶ ಇನ್ನೊಂದು ಇಲ್ಲ. ಅದರಲ್ಲೂ ರಷ್ಯಾ ಜಾಗತಿಕ ಆರ್ಥಿಕತೆ ಮಾತ್ರವಲ್ಲ, ಸೇನೆ ವಿಚಾರಕ್ಕೆ ಬಂದರು ಕೂಡ ದೊಡ್ಡ ಪ್ರಭಾವ ಬೀರುವ ಶಕ್ತಿ ಹೊಂದಿದೆ. ಹಾಗಾದ್ರೆ ರಷ್ಯಾ ಸೇನೆ ಈಗ ಇರಾನ್ ದೇಶಕ್ಕೆ ಬೆಂಬಲ ನೀಡುತ್ತಾ? ಅಥವಾ ಇಸ್ರೇಲ್ ದೇಶದ ಪರವಾಗಿ ನಿಲ್ಲುತ್ತಾ? ಈ ಎರಡೂ ನಿರ್ಧಾರ ಕೈಬಿಟ್ಟು ಯುದ್ಧ ನಿಲ್ಲಿಸಲು ಮುಂದಾಗುತ್ತಾ ರಷ್ಯಾ?

ಏನು ಮಾಡ್ತಾರೆ ವ್ಲಾದಿಮಿರ್ ಪುಟಿನ್

ರಷ್ಯಾ ಮನಸ್ಸು ಮಾಡಿದರೆ ಏನು ಬೇಕಾದರೂ ಆಗಬಹುದು ಎಂಬ ಮಾತು ಚಾಲ್ತಿಯಲ್ಲಿದೆ. ಯಾಕಂದ್ರೆ ರಷ್ಯಾ ಕೆಪಾಸಿಟಿ ಆ ರೇಂಜ್‌ಗೆ ಇದ್ದು, ಅಮೆರಿಕದ ವಿರುದ್ಧವಾಗಿ ಈಗಾಗಲೇ ರಷ್ಯಾ ದೊಡ್ಡ ಸಂಘಟನೆ ಕಟ್ಟಿಕೊಳ್ಳುತ್ತಿದೆ. ಅಮೆರಿಕ ವಿರುದ್ಧ ತಿರುಗಿಬಿದ್ದ ದೇಶಗಳು ರಷ್ಯಾ ಸೇನೆ ಬೆಂಬಲಕ್ಕೆ ನಿಲ್ಲುತ್ತಿವೆ. ಪರಿಸ್ಥಿತಿ ಹೀಗಿದ್ದಾಗಲೇ ಇಸ್ರೇಲ್ & ಇರಾನ್ ಯುದ್ಧದಲ್ಲಿ ರಷ್ಯಾದ ನಡೆ ತೀವ್ರ ಕುತೂಹಲ ಕೆರಳಿಸಿದೆ. ಆದರೆ ಅಸಲಿ ಮ್ಯಾಟರ್ ಏನಪ್ಪಾ ಅಂದ್ರೆ ರಷ್ಯಾ ಈಗ ಇಸ್ರೇಲ್ & ಇರಾನ್ ಎರಡೂ ದೇಶಗಳ ಜೊತೆಗೂ ಉತ್ತಮ ಬಾಂಧವ್ಯ ಇಟ್ಟುಕೊಂಡಿದೆ.

ಈ ಹಿನ್ನೆಲೆಯಲ್ಲಿ ಇಸ್ರೇಲ್ & ಇರಾನ್ ಯುದ್ಧದಲ್ಲಿ ರಷ್ಯಾ ಪ್ರಮುಖ ಪಾತ್ರ ವಹಿಸುತ್ತದೆ. ಆದ್ರೆ ಯುದ್ಧ ನಡೆಸುವ ವಿಚಾರದಲ್ಲಿ ಅಲ್ಲ, ಯುದ್ಧ ನಿಲ್ಲಿಸುವ ವಿಚಾರದಲ್ಲಿ. ಒಂದು ವರ್ಷದ ಹಿಂದೆ ಹಮಾಸ್ & ಇಸ್ರೇಲ್ ಯುದ್ಧ ಶುರುವಾಗಿದ್ದ ಸಮಯದಲ್ಲಿ ಖುದ್ದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಇಸ್ರೇಲ್ ಜೊತೆ ಚರ್ಚೆ ಮಾಡಿ ಧೈರ್ಯ ತುಂಬಿದ್ದರು. ಹಾಗೇ ಇರಾನ್ ಜೊತೆಗೂ ಪುಟಿನ್ ಬಾಂಧವ್ಯ ಚೆನ್ನಾಗಿರುವುದು ಕುತೂಹಲ ಹೆಚ್ಚು ಮಾಡಿದೆ. ರಷ್ಯಾ ಈಗ ಇಸ್ರೇಲ್ & ಇರಾನ್ ನಡುವೆ ಸಂಧಾನ ನಡೆಸುವ ಸಾಧ್ಯತೆ ಕೂಡ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+