US Elections 2024: ಅಮೆರಿಕ ಅಧ್ಯಕ್ಷರ ಆಯ್ಕೆ ಅದೆಷ್ಟು ವಿಭಿನ್ನ? ಹೇಗೆ ನಡೆಯುತ್ತೆ ಅಮೆರಿಕ ಮುಖ್ಯಸ್ಥನ ಆಯ್ಕೆ?
ಅಮೆರಿಕ ಎಂಬ ದೈತ್ಯ ದೇಶಕ್ಕೆ ಇದೀಗ ಹೊಸ ಅಧ್ಯಕ್ಷರ ಎಂಟ್ರಿ ಆಗಿದೆ. ಅಮೆರಿಕ ನೂತನ ಅಧ್ಯಕ್ಷರನ್ನ ಬರಮಾಡಿಕೊಂಡಿದೆ. ಅಮೆರಿಕದಲ್ಲಿ ನಡೆಯುವ ಅಧ್ಯಕ್ಷೀಯ ಚುನಾವಣೆ ಹೀಗೆ 200ಕ್ಕೂ ಹೆಚ್ಚು ವರ್ಷಗಳ ಇತಿಹಾಸ ಕೂಡ ಹೊಂದಿದೆ. ಹೀಗಿದ್ದಾಗ ಅಮೆರಿಕ ಅಧ್ಯಕ್ಷರನ್ನ ಆಯ್ಕೆ ಮಾಡುವುದು ಹೇಗೆ? ಅಮೆರಿಕ ಅಧ್ಯಕ್ಷರ ಆಯ್ಕೆ ಅದೆಷ್ಟು ವಿಭಿನ್ನ? ಹೇಗೆ ನಡೆಯುತ್ತೆ ಅಮೆರಿಕ ಮುಖ್ಯಸ್ಥನ ಆಯ್ಕೆ? ಈ ಎಲ್ಲ ಮಾಹಿತಿಯನ್ನ ಸಂಪೂರ್ಣವಾಗಿ ತಿಳಿಯೋಣ ಬನ್ನಿ.
ಅಮೆರಿಕ ಜಗತ್ತಿನ ಸೂಪರ್ ಪವರ್ ದೇಶವಾಗಿ ಹೊರಹೊಮ್ಮಿ ಸುಮಾರು 100 ವರ್ಷಗಳೇ ಕಳೆದು ಹೋಗಿವೆ. ಅಮೆರಿಕ ಹೀಗೆ ನಂಬರ್ 1 ಆಗುವ ಮೊದಲು ಬ್ರಿಟನ್ ಅಂದ್ರೆ ಸಾಮಾನ್ಯ ಭಾಷೆಯಲ್ಲಿ ಇಂಗ್ಲೆಂಡ್ ಎಂದು ಕರೆಯಲಾಗುವ ದೇಶ ನಂಬರ್ 1 ಪಟ್ಟದಲ್ಲಿ ಇತ್ತು. ಆದ್ರೆ ಮಹಾಯುದ್ಧಗಳ ಪರಿಣಾಮ, ಹಿಟ್ಲರ್ ವಿರುದ್ಧ ಬಡಿದಾಡಿದ ಹಿನ್ನೆಲೆ ಇಂಗ್ಲೆಂಡ್ ಸೋತು ಹೋಗಿ ಕೊನೆಗೆ ನಂಬರ್ 1 ಪಟ್ಟದಿಂದ ಜಾರಿ ಬಿತ್ತು. ಹೀಗೆ ಬ್ರಿಟನ್ ನಂಬರ್ 1 ಪಟ್ಟದಿಂದ ಜಾರಿ ಬಿದ್ದ ತಕ್ಷಣ ಆ ಜಾಗಕ್ಕೆ ಕೂತಿದ್ದೇ ಅಮೆರಿಕ! ಹಾಗಾದ್ರೆ ಅಮೆರಿಕದ ಚುಣಾವಣೆಯಲ್ಲಿ ಬಳಸುವ ಪದ್ಧತಿ ಎಂತಹದ್ದು? ಅಮೆರಿಕ ಅಧ್ಯಕ್ಷರ ಆಯ್ಕೆ ಹೇಗೆ ನಡೆಯುತ್ತದೆ? ಮುಂದೆ ಓದಿ.

ಅಮೆರಿಕ ಅಧ್ಯಕ್ಷರ ಆಯ್ಕೆ ಹೀಗೆ ನಡೆಯುತ್ತೆ!
ಅಂದಹಾಗೆ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಅಧ್ಯಕ್ಷರನ್ನು 2 ಮತಗಳ ಮೂಲಕ ಅಳೆಯಲಾಗುತ್ತೆ. ಒಂದು ಪಾಪ್ಯುಲರ್ ವೋಟ್, ಇದನ್ನು ಒಟ್ಟು ಮತದಾನ ಅಂತಾ ಕೂಡ ಕರೆಯಬಹುದು. ಅದು ಹೇಗೆ ಅಂದ್ರೆ ಇಡೀ ಅಮೆರಿಕದಲ್ಲಿ ಸುಮಾರು 16 ಕೋಟಿ ಮತದಾರರು ಇದ್ದಾರೆ ಅಂತಾ ಅಂದುಕೊಳ್ಳಿ, ಆಗ ಈ 16 ಕೋಟಿ ಮತದಾರರ ಪೈಕಿ ಅಭ್ಯರ್ಥಿ ಪಡೆಯುವ ಒಟ್ಟು ಮತಗಳ ಸಂಖ್ಯೆಯನ್ನ, ಶೇಕಡವಾರು ಅಂದ್ರೆ ಪರ್ಸಂಟೇಜ್ ಲೆಕ್ಕದಲ್ಲಿ ಅಳತೆ ಮಾಡಿ ಪಾಪ್ಯುಲರ್ ವೋಟ್ ಎನ್ನಲಾಗುತ್ತದೆ.
ಆದರೆ ಅಧ್ಯಕ್ಷರ ಆಯ್ಕೆಗೆ ಇದು ಮಾತ್ರ ಮುಖ್ಯವಾಗಲ್ಲ. ಪಾಪ್ಯುಲರ್ ವೋಟ್ ಮಾತ್ರ ಪಡೆದರೆ ಅಧ್ಯಕ್ಷರಾಗುವುದಕ್ಕೆ ಅರ್ಹತೆ ಸಿಗುವುದಿಲ್ಲ. ಇದರ ಜೊತೆ ಎಲೆಕ್ಟೊರಾಲ್ ಕಾಲೇಜುಗಳ ಸಂಖ್ಯೆ 270ರ ಮ್ಯಾಜಿಕ್ ನಂಬರ್ ತಲುಪಲೇಬೇಕು. ಅಮೆರಿಕದಲ್ಲಿ ಒಟ್ಟಾರೆಯಾಗಿ 538 ಎಲೆಕ್ಟೊರಾಲ್ ಕಾಲೇಜುಗಳು ಇದ್ದು, ಈ ಪೈಕಿ ಅಮೆರಿಕದ ಅಧ್ಯಕ್ಷರಾಗಲು ಕನಿಷ್ಠ 270 ಮತವು ಅಭ್ಯರ್ಥಿ ಬುಟ್ಟಿಗೆ ಬೀಳಬೇಕು. ಹಾಗಾದ್ರೆ ಏನಿದು 'ಎಲೆಕ್ಟೊರಾಲ್ ಕಾಲೇಜು' ಮುಂದೆ ಓದಿ.
1789ರಲ್ಲಿ ಶುರುವಾಗಿತ್ತು ಈ ಪದ್ಧತಿ!
1776ರ ಜುಲೈ 4ಕ್ಕೆ ಬ್ರಿಟಿಷ್ ಸಾಮ್ರಾಜ್ಯದಿಂದ ಅಮೆರಿಕ ಸ್ವಾತಂತ್ರ್ಯ ಪಡೆಯಿತು. 1789 ರಲ್ಲಿ ಅಮೆರಿಕದಲ್ಲಿ ಮೊದಲ ಸರ್ಕಾರವು ಅಸ್ತಿತ್ವಕ್ಕೆ ಬಂತು. ಸ್ವತಂತ್ರ ಅಮೆರಿಕದ ಮೊಟ್ಟ ಮೊದಲ ದೊರೆ ಜಾರ್ಜ್ ವಾಷಿಂಗ್ಟನ್. ಅಂದಿನ ಸಂದರ್ಭದಲ್ಲಿ ಜಾರ್ಜ್ ವಾಷಿಂಗ್ಟನ್ ನೇತೃತ್ವದಲ್ಲಿಯೇ ಸ್ವಾತಂತ್ರ್ಯ ಪಡೆಯಲು ಹೋರಾಟ ನಡೆದಿತ್ತು. ಇದೇ ಕಾರಣಕ್ಕೆ, ಅಮೆರಿಕನ್ನರು ಅವರನ್ನೇ ಮೊದಲ ಅಧ್ಯಕ್ಷರಾಗಿ ಆಯ್ಕೆ ಕೂಡ ಮಾಡಿದ್ದರು. 1789 ರಲ್ಲಿ ಅಧ್ಯಕ್ಷ ಪಟ್ಟಕ್ಕೆ ಆಯ್ಕೆಯಾದ ವಾಷಿಂಗ್ಟನ್ & ಅವರ ಬೆಂಬಲಿಗರು ಎಲೆಕ್ಟೊರಾಲ್ ಕಾಲೇಜು ಪದ್ಧತಿ ಪರಿಚಯ ಮಾಡಿದರು.
'ಎಲೆಕ್ಟೊರಾಲ್ ಕಾಲೇಜು' ಅರ್ಥ ಹೀಗಿದೆ!
1789 ರಿಂದ ಅಮೆರಿಕದಲ್ಲಿ ನಡೆದ ಪ್ರತಿ ಚುನಾವಣೆಯಲ್ಲೂ ಅಧ್ಯಕ್ಷರ ಆಯ್ಕೆ ಎಲೆಕ್ಟೊರಾಲ್ ಕಾಲೇಜು ಮೂಲಕ ನಡೆಯುತ್ತಾ ಬಂದಿದೆ. ಎಲೆಕ್ಟೊರಾಲ್ ಕಾಲೇಜು ಅಂದ್ರೆ ಒಂದು ಪ್ರದೇಶದ ಅಥವಾ ಕ್ಷೇತ್ರದ ಹೆಸರಲ್ಲ. ಇದು ಒಂದು ಮತವಾಗಿದೆ. ಪ್ರತಿಯೊಂದು ರಾಜ್ಯಗಳಿಗೂ ಅದರ ಜನಸಂಖ್ಯೆಗೆ ಅನುಗುಣವಾಗಿ ಹಂಚಿಕೆಯಾಗುವ ಮತಗಳನ್ನೇ ಎಲೆಕ್ಟೊರಾಲ್ ಕಾಲೇಜು ಎಂದು ಕರೆಯಲಾಗುತ್ತದೆ.












Click it and Unblock the Notifications