ರಷ್ಯಾಗೆ 3ನೇ ಮಹಾಯುದ್ಧದ ಎಚ್ಚರಿಕೆ ನೀಡಿದ ಜೋ ಬೈಡನ್!

ಉಕ್ರೇನ್‌ನಲ್ಲಿ ಮಾಸ್ಕೋ ವಿರುದ್ಧ ವಾಶಿಂಗ್ಟನ್ ಹೋರಾಡುವುದಿಲ್ಲ ಎಂದು ಒತ್ತಿಹೇಳಿದ ಬೈಡನ್, ನ್ಯಾಟೋ ಮತ್ತು ಕ್ರೆಮ್ಲಿನ್ ನಡುವಿನ ನೇರ ಘರ್ಷಣೆಯು ಮೂರನೇ ಮಹಾಯುದ್ಧವನ್ನು ಪ್ರಚೋದಿಸುತ್ತದೆ ಎಂದಿದ್ದಾರೆ.

ಫೆಬ್ರವರಿ 24ರಂದು ಉಕ್ರೇನ್ ಮೇಲೆ ರಷ್ಯಾದ ಪಡೆಗಳು ಮಿಲಿಟರಿ ಕಾರ್ಯಾಚರಣೆಗಳನ್ನು ಪ್ರಾರಂಭಿಸಿದವು. ಅದಾಗಿ ಮೂರು ದಿನಗಳ ನಂತರದಲ್ಲಿ ಉಕ್ರೇನ್‌ನ ಬೇರ್ಪಟ್ಟ ಪ್ರದೇಶಗಳಾದ ಡೊನೆಟ್ಸ್ಕ್ ಮತ್ತು ಲುಹಾನ್ಸ್ಕ್ ಅನ್ನು ಸ್ವತಂತ್ರ ಘಟಕಗಳಾಗಿ ಮಾಸ್ಕೋ ಗುರುತಿಸಿತು.

ಉಕ್ರೇನ್‌ನಲ್ಲಿ ರಷ್ಯಾದ ವಿರುದ್ಧ ಯುದ್ಧ ಮಾಡುವುದಿಲ್ಲ:

ಯುರೋಪ್ ನೆಲದಲ್ಲಿರುವ ನಮ್ಮ ಮಿತ್ರರಾಷ್ಟ್ರಗಳೊಂದಿಗೆ ನಾವು ಸದಾ ನಿಲ್ಲುವುದನ್ನು ಮುಂದುವರಿಸುತ್ತೇವೆ. ಇದರಲ್ಲಿ ಯಾವುದೇ ರಾಜಿಯಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ರವಾನಿಸಲು ಬಯಸುತ್ತೇವೆ. ನಾವು ಯುನೈಟೆಡ್ ಸ್ಟೇಟ್ಸ್‌ನ ಸಂಪೂರ್ಣ ಶಕ್ತಿಯೊಂದಿಗೆ NATO ಪ್ರದೇಶದ ಪ್ರತಿಯೊಂದು ಇಂಚನ್ನೂ ರಕ್ಷಿಸುತ್ತೇವೆ ಹಾಗೂ NATO ಅನ್ನು ಉತ್ತೇಜಿಸುತ್ತೇವೆ. ನಾವು ಉಕ್ರೇನ್‌ನಲ್ಲಿ ರಷ್ಯಾದ ವಿರುದ್ಧ ಯುದ್ಧ ಮಾಡುವುದಿಲ್ಲ. NATO ಮತ್ತು ರಷ್ಯಾ ನಡುವಿನ ನೇರ ಮುಖಾಮುಖಿ ವಿಶ್ವ ಸಮರ III ಆಗಲಿದ್ದು, ಅದನ್ನು ತಡೆಯಲು ನಾವು ಶ್ರಮಿಸಬೇಕಿದೆ," ಎಂದು ಜೋ ಬೈಡನ್ ಹೇಳಿದ್ದಾರೆ.

Direct Confrontation Between NATO and Russia Is World War III: Joe Biden Warning

ಉಕ್ರೇನ್ ವಿಷಯದಲ್ಲಿ ಜಗತ್ತಿನ ಒಗ್ಗಟ್ಟು:

ಉಕ್ರೇನ್ ವಿಷಯದಲ್ಲಿ ಅಮೆರಿಕದ ಜನರು ಮತ್ತು ಜಗತ್ತು ಒಗ್ಗಟ್ಟಾಗಿದೆ ಎಂದು ಜೋ ಬೈಡನ್ ಹೇಳಿದರು. "ನಾವು ಉಕ್ರೇನ್ ಜನರೊಂದಿಗೆ ನಿಲ್ಲುತ್ತೇವೆ. ನಾವು ನಿರಂಕುಶಾಧಿಕಾರಿಗಳು ಮತ್ತು ಚಕ್ರವರ್ತಿಗಳು ಪ್ರಪಂಚದ ದಿಕ್ಕನ್ನು ಬದಲಿಸಲು ಬಿಡುವುದಿಲ್ಲ. ಈ ಕ್ಷಣವನ್ನು ಎದುರಿಸಲು ಪ್ರಜಾಪ್ರಭುತ್ವಗಳು ಏರುತ್ತಿವೆ, ಜಗತ್ತನ್ನು ಶಾಂತಿಯ ಕಡೆಗೆ ಒಟ್ಟುಗೂಡಿಸುತ್ತಿವೆ. ನಾವು ನಮ್ಮ ಶಕ್ತಿಯನ್ನು ತೋರಿಸುತ್ತಿದ್ದೇವೆಯೇ ಹೊರತು ಕುಗ್ಗುವುದಿಲ್ಲ," ಎಂದು ಹೇಳಿದರು.

ರಷ್ಯಾ ಮೇಲೆ ಮತ್ತಷ್ಟು ನಿರ್ಬಂಧದ ಎಚ್ಚರಿಕೆ:

"ಪುಟಿನ್ ಇದೇ ರೀತಿ ದಯೆಯಿಲ್ಲದಂತೆ ಆಕ್ರಮಣವನ್ನು ಮುಂದುವರಿಸುತ್ತಿದ್ದಂತೆ, ಯುನೈಟೆಡ್ ಸ್ಟೇಟ್ಸ್ ಮತ್ತು ನಮ್ಮ ಮಿತ್ರರಾಷ್ಟ್ರಗಳು ಮತ್ತು ಪಾಲುದಾರರು ಪುಟಿನ್ ಮೇಲೆ ಆರ್ಥಿಕ ಒತ್ತಡವನ್ನು ಹೆಚ್ಚಿಸುತ್ತವೆ. ಜಾಗತಿಕ ವೇದಿಕೆಯಲ್ಲಿ ರಷ್ಯಾವನ್ನು ಮತ್ತಷ್ಟು ಪ್ರತ್ಯೇಕಿಸುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು," ಎಂದು ಬೈಡನ್ ಹೇಳಿದರು.

ಏನಿದು ನ್ಯಾಟೋ?:

ಉತ್ತರ ಅಟ್ಲಾಂಟಿಕ್ ಟ್ರೀಟಿ ಆರ್ಗನೈಸೇಶನ್ (NATO) 30 ಉತ್ತರ ಅಮೇರಿಕಾ ಮತ್ತು ಯುರೋಪಿಯನ್ ರಾಷ್ಟ್ರಗಳ ಗುಂಪಾಗಿದೆ. NATO ಪ್ರಕಾರ, ಅದರ ಉದ್ದೇಶ "ರಾಜಕೀಯ ಮತ್ತು ಮಿಲಿಟರಿ ವಿಧಾನಗಳ ಮೂಲಕ ಅದರ ಸದಸ್ಯ ರಾಷ್ಟ್ರಗಳ ಸ್ವಾತಂತ್ರ್ಯ ಮತ್ತು ಭದ್ರತೆಯನ್ನು ಖಾತರಿಪಡಿಸುವುದು."

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+