ಡೆಡ್ಲಿ ಕೊರೊನಾಕ್ಕೆ ಬೆದರಿ 54 ಸಾವಿರ ಕೈದಿಗಳ ಬಿಡುಗಡೆ..!
ಟೆಹರಾನ್, ಮಾರ್ಚ್ 4: ಜಗತ್ತಿನಾದ್ಯಂತ ತೀವ್ರ ತಲ್ಲಣ ಸೃಷ್ಠಿಸಿರುವ ಕೊರೊನಾ ವೈರಸ್ (ಕೋವಿಡ್ 19) ಆರವತ್ತಕ್ಕೂ ಹೆಚ್ಚು ದೇಶಗಳನ್ನು ನಡುಗಿಸುತ್ತಿದೆ. ಚೀನಾದಲ್ಲಿ ಸೋಂಕು ಪತ್ತೆ ಪ್ರಕರಣ ಇಳಿದಿದ್ದರೆ, ಇತ್ತ ವಿವಿಧ ದೇಶಗಳಲ್ಲಿ ಹೆಚ್ಚುತ್ತಿವೆ.
ಅದರಲ್ಲೂ ಕೊರೊನಾ ವೈರಸ್‌ಗೆ ಮಧ್ಯಪ್ರಾಚ್ಯ ದೇಶವಾದ ಇರಾನ್ ಎಷ್ಟು ಬೆದರಿದೆ ಎಂದರೆ, ತನ್ನ ದೇಶದ ಜೈಲಿನಲ್ಲಿನ 54 ಸಾವಿರಕ್ಕೂ ಹೆಚ್ಚು ಕೈದಿಗಳನ್ನು ಜೈಲಿನಿಂದ ಬಿಡುಗಡೆ ಮಾಡುವುದಾಗಿ ಹೇಳಿದೆ.
ಇರಾನ್‌ನಲ್ಲಿ 5 ವರ್ಷಕ್ಕಿಂತ ಕಡಿಮೆ ಶಿಕ್ಷೆಗೆ ಒಳಗಾಗಿ ಜೈಲು ಸೇರಿರುವ ಸಜಾ ಬಂಧಿಗಳನ್ನು ತಪಾಸಣೆ ಮಾಡಿ, ಜೈಲಿನಿಂದ ಬಿಡುಗಡೆ ಮಾಡಲಾಗುತ್ತದೆ ಎಂದು ಇರಾನ್ ಸರ್ಕಾರ ತಿಳಿಸಿದೆ. ಈ ಬಿಡುಗಡೆ ಕೇವಲ ತಾತ್ಕಾಲಿಕ ಎಂದು ಸಹ ಹೇಳಿದೆ. ಇರಾನ್ ಜೈಲಿನಲ್ಲಿ ಕೈದಿಗಳು ಕಿಕ್ಕಿರಿದು ತುಂಬಿರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಈ ಕ್ರಮ ಕೈಗೊಂಡಿದೆ ಎಂದು ಅಲ್ಲಿನ ಸರ್ಕಾರ ಬಿಬಿಸಿ ಸುದ್ದಿ ಸಂಸ್ಥೆಗೆ ತಿಳಿಸಿದೆ.

ಜಾಮೀನಿನ ಮೇಲೆ ಬಿಡುಗಡೆ
''ಜೈಲಿನಲ್ಲಿರುವ 54 ಸಾವಿರ ಕೈದಿಗಳನ್ನು ತಪಾಸಣೆ ಮಾಡುತ್ತಿದ್ದೇವೆ. ಕೋವಿಡ್ -19 ಕಂಡು ಬಂದರೆ ಅವರನ್ನು ಆಸ್ಪತ್ರೆಗೆ ದಾಖಲಿಸಿ, ಪರೀಕ್ಷೆ ನಕಾರಾತ್ಮಕ ಕಂಡು ಬಂದವರನ್ನು ತಾತ್ಕಾಲಿಕವಾಗಿ ಜಾಮೀನು ನೀಡಿ ಜೈಲಿನಿಂದ ಬಿಡುಗಡೆ ಮಾಡಲಾಗುವುದು. ಐದು ವರ್ಷಗಳಿಗಿಂತ ಹೆಚ್ಚು ಶಿಕ್ಷೆ ಅನುಭವಿಸುವ ಭದ್ರತಾ ಕೈದಿಗಳನ್ನು ಹೊರಗೆ ಬಿಡಲಾಗುವುದಿಲ್ಲ'' ಎಂದು ಇರಾನ್ ಸರ್ಕಾರದ ನ್ಯಾಯಾಂಗ ವಕ್ತಾರ ಘೋಲಮ್ ಹೋಸೇನ್ ಎಸ್ಮೇಲಿ ಬಿಬಿಸಿ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಇರಾನ್ ಜೈಲಿನಲ್ಲಿ ಬ್ರಿಟನ್ ಪ್ರಜೆ
ಬ್ರಿಟನ್ ಸಕಾ್ರ ಕೂಡ ಕೋವಿಡ್ 19 ಗೆ ಬೆದರಿದ್ದು, ''ಇರಾನ್ ಎವಿನ್ ಜೈಲಿನಲ್ಲಿರು ಬ್ರಿಟಿಷ್-ಇರಾನಿನ ಚಾರಿಟಿ ಕೆಲಸಗಾರ ಜಾಗಾರಿ ರಾಟ್‌ಕ್ಲಿಫ್ ಅವರನ್ನು ಶೀಘ್ರದಲ್ಲೇ ಬಿಡುಗಡೆ ಮಾಡಬಹುದು'' ಎಂದು ಬ್ರಿಟಿಷ್ ಸಂಸದರು ತಿಳಿಸಿದ್ದಾರೆ. ರಾಟ್ಕ್ಲಿಫ್ ಗೂಡಚರ್ಯೆ ಆರೋಪದ ಮೇಲೆ ಇರಾನ್ ಸರ್ಕಾರ ಅವರನ್ನು ಬಂಧಿಸಿ ಜೈಲಿನಲ್ಲಿಟ್ಟಿದೆ. ಜಾಗರಿ-ರಾಟ್ಕ್ಲಿಫ್ ಇಂದು ಅಥವಾ ನಾಳೆ ಫರ್ಲೋಪ್‌ನಲ್ಲಿ ಬಿಡುಗಡೆಯಾಗಬಹುದು ಎಂದು ಬ್ರಿಟನ್‌ನಲ್ಲಿನ ಇರಾನಿನ ರಾಯಭಾರಿ ತುಲಿಪ್ ಸಿದ್ದಿಕ್ ಜೊತೆ ಚರ್ಚೆಯ ನಂತರ ಹೇಳಿದ್ದಾರೆ.

ಇರಾನಿನಲ್ಲಿ 12 ಜನ ಮೃತಪಟ್ಟಿದ್ದಾರೆ
ಇರಾನಿನಲ್ಲಿ ಮಾರಕ ಕೊರೊನಾ ವೈರಸ್‌ಗೆ ಇದುವರೆಗೆ ಒಟ್ಟು 12 ಜನ ಮೃತಪಟ್ಟಿದ್ದಾರೆ ಎಂದು ಅಲ್ಲಿನ ಸರ್ಕಾರ ಸ್ಪಷ್ಟಪಡಿಸಿದೆ. ಇರಾನಿನಲ್ಲಿ 61 ಕ್ಕೂ ಹೆಚ್ಚು ಜನ ಕೊರೊನಾಕ್ಕೆ ಬಲಿಯಾಗಿದ್ದಾರೆ ಎಂಬುದು ವದಂತಿಗಳು ಮಾತ್ರ. 800 ಜನರಲ್ಲಿ ಕೊರೊನಾ ಕಂಡು ಬಂದಿದೆ. ಸೋಂಕು ಹರಡದಂತ ಎಲ್ಲ ಅಗತ್ಯ ಕ್ರಮಗಳನ್ನು ಸರ್ಕಾರ ಕೈಗೊಂಡಿದೆ ಎಂದು ಅಲ್ಲಿನ ಸರ್ಕಾರದ ವಕ್ತಾರರು ಹೇಳಿದ್ದಾರೆ.

3330 ಕ್ಕೂ ಹೆಚ್ಚು ಜನ ಮೃತ
ಮಾರಕ ಕೊರೊನಾಕ್ಕೆ ಮಂಗಳವಾರ ಅಂತ್ಯಗೊಂಡಂತೆ ಜಗತ್ತಿನಾದ್ಯಂತ 3330 ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ ಎಂದು ವರದಿಗಳು ತಿಳಿಸಿವೆ. ಚೀನಾದಲ್ಲಿ 2977 ಜನ ಮೃತಪಟ್ಟಿದ್ದು. ಸಾವಿರ ಸರಣಿ ಮುಂದುವರೆದಿದೆ. ಭಾರತದಲ್ಲೂ ಆರು ಕೊರೊನಾ ಸೋಂಕು ಪ್ರಕರಣಗಳು ಕಂಡು ಬಂದು ಆತಂಕಕ್ಕೆ ಕಾರಣವಾಗಿದೆ.












Click it and Unblock the Notifications