ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡೆಡ್ಲಿ ಕೊರೊನಾ ಹತ್ತಿಕ್ಕಲು ಸಫಲವಾಯಿತಾ ಡ್ರ್ಯಾಗನ್ ಚೀನಾ...?

|
Google Oneindia Kannada News

ಬಿಜಿಂಗ್, ಮಾರ್ಚ್ 3; ಜಗತ್ತಿನಾದ್ಯಂತ ತೀವ್ರ ತಲ್ಲಣ ಸೃಷ್ಠಿಸಿರುವ ಕೊರೊನಾ ವೈರಸ್ (ಕೋವಿಡ್ 19) 3000 ಕ್ಕೂ ಹೆಚ್ಚು ಜನರನ್ನು ಅಪೋಶನ ತೆಗೆದುಕೊಂಡಿದೆ. ಆದರೆ, ಮಾರಕ ಕೊರನಾವನ್ನು ಹತ್ತಿಕ್ಕಲು ತನ್ನ ನಿರಂತರ ಪ್ರಯತ್ನಗಳಿಂದ ಚೀನಾ ಸಫಲವಾಗುತ್ತಿದೆ ಎಂದು ವರದಿಗಳು ಬಂದಿವೆ.

ಕಳೆದ ಮೂರು ತಿಂಗಳಿನಿಂದ ಚೀನಾದಲ್ಲಿ ಪ್ರತಿನಿತ್ಯ ಸಾವಿರರ ಗಡಿ ದಾಟಿ ಹೊಸ ಕೊರೊನಾ ಸೋಂಕು ಪೀಡಿತರು ಪತ್ತೆಯಾಗುತ್ತಿದ್ದರು. ಆದರೆ ಕಳೆದ ಆರು ವಾರಗಳಿಂದ ಚೀನಾ ಕೈಗೊಂಡಿರುವ ವ್ಯಾಪಕ ಕ್ರಮಗಳಿಂದ ಕೊರೊನಾ ಸೋಂಕು ಹರಡುವಿಕೆ ತಹಬದಿಗೆ ಬಂದಿದೆ.

ಕೊರಾನಾವೈರಸ್ ಭೀತಿಯಲ್ಲಿದ್ದರೆ ಈ ಸಹಾಯವಾಣಿಗೆ ಕರೆ ಮಾಡಿ ಕೊರಾನಾವೈರಸ್ ಭೀತಿಯಲ್ಲಿದ್ದರೆ ಈ ಸಹಾಯವಾಣಿಗೆ ಕರೆ ಮಾಡಿ

ಸೋಮವಾರ ಚೀನಾದಲ್ಲಿ 125 ಹೊಸ ಕೊರೊನಾ ಪ್ರಕರಣಗಳು ಕಂಡು ಬಂದಿವೆ. 31 ಜನ ಹುಬ್ಬಿ ಪ್ರಾಂತ್ಯದಲ್ಲಿ ಶುಕ್ರವಾರ ಮೃತಪಟ್ಟಿದ್ದಾರೆ. ಇದು ಕಳೆದ ಆರು ವಾರಗಳಲ್ಲಿ ಅತಿ ಕಡಿಮೆ ಸಂಖ್ಯೆ ಎಂದು ವರದಿಗಳು ಹೇಳಿವೆ. ಈ ಸಂಖ್ಯೆಯನ್ನೂ ಇನ್ನೂ ಕಡಿಮೆಗೊಳಿಸುವತ್ತ ದಾಪುಗಾಲು ಇಟ್ಟಿದ್ದೇವೆ ಎಂದು ಚೀನಾ ರಾಷ್ಟ್ರೀಯ ಆರೋಗ್ಯ ಸಮಿತಿ ಹೇಳಿದೆ.

2943 ಜನರು ಶುಕ್ರವಾರದ ಅಂತ್ಯಕ್ಕೆ ಬಲಿ

2943 ಜನರು ಶುಕ್ರವಾರದ ಅಂತ್ಯಕ್ಕೆ ಬಲಿ

ಚೀನಾದಲ್ಲಿ ಇದುವರೆಗೆ ಕೊರೊನಾ ಸೋಂಕಿಗೆ ಬಲೆಯಾಗಿ 2943 ಜನರು ಶುಕ್ರವಾರದ ಅಂತ್ಯಕ್ಕೆ ಬಲಿಯಾಗಿದ್ದಾರೆ. ೮೦ ಸಾವಿರ ಜನ ಸೋಂಕು ಪೀಡಿತರಾಗಿದ್ದಾರೆ. ಚೀನಾ ಸರ್ಕಾರ ಕೈಗೊಂಡಿರುವ ಅತ್ಯಂತ ಪರಿಣಾಮಾತ್ಮಕ ಕ್ರಮಗಳಿಂದ ಮಾರಕ ಕೊರೊನಾದ ಗಂಭೀರ ಫಲಿತಾಂಶವನ್ನು ಕಡಿಮೆಗೊಳಿಸಲಾಗಿದೆ ಎಂದು ಚೀನಾ ಸರ್ಕಾರ ಹೇಳಿದೆ.

ಅಮೆರಿಕದಲ್ಲಿ 6 ಜನ ಬಲಿ

ಅಮೆರಿಕದಲ್ಲಿ 6 ಜನ ಬಲಿ

ಚೀನಾದಲ್ಲಿ ಕಾಣಿಸಿಕೊಂಡು ಈಗ ಆರವತ್ತು ದೇಶಗಳಲ್ಲಿ ಹಬ್ಬಿರುವ ಕೊರೊನಾಕ್ಕೆ ಅಮೆರಿಕದಲ್ಲಿ 6 ಜನ ಬಲಿಯಾಗಿದ್ದಾರೆ. ಇದರಿಂದ ಇಷ್ಟುದಿನ ನಿಶ್ಚಿಂತೆಯಿಂದ ಇದ್ದ ಅಮೆರಿಕವೂ ಕೂಡ ಕೆಂಗೆಟ್ಟಿದೆ. 100 ಜನರಲ್ಲಿ ಕೊರೊನಾ ಕಾಣಿಸಿಕೊಂಡಿದೆ. ಚೀನಾ, ದಕ್ಷಿಣ ಕೊರಿಯಾ ಹಾಗೂ ಇಟಲಿಯಲ್ಲಿ 935 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿವೆ.

ಹೈ ಅಲರ್ಟ್: ಭಾರತದಲ್ಲಿ ಇಬ್ಬರಿಗೆ ಕೊರೊನಾ ಅಟ್ಯಾಕ್ಹೈ ಅಲರ್ಟ್: ಭಾರತದಲ್ಲಿ ಇಬ್ಬರಿಗೆ ಕೊರೊನಾ ಅಟ್ಯಾಕ್

ಭಾರತದಲ್ಲೂ ತೀವ್ರ ಆತಂಕ

ಭಾರತದಲ್ಲೂ ತೀವ್ರ ಆತಂಕ

ಭಾರತದಲ್ಲೂ ಎರಡು ಹೊಸ ಕೊರೊನಾ ಪೀಡಿತ ಪ್ರಕರಣಗಳು ಕಂಡು ಬಂದಿರುವುದರಿಂದ ಆತಂಕಕ್ಕೆ ಕಾರಣವಾಗಿದೆ. ದೆಹಲಿ ಹಾಗೂ ಹೈದರಾಬಾದ್‌ನ ಇಬ್ಬರು ವ್ಯಕ್ತಿಗಳಲ್ಲಿ ಸೋಂಕು ಕಂಡು ಬಂದಿರುವುದನ್ನು ಕೇಂದ್ರ ಆರೋಗ್ಯ ಸಚಿವಾಲಯ ಖಚಿತಪಡಿಸಿದೆ. ದೆಹಲಿ, ಹೈದರಾಬಾದ್ ಹಾಗೂ ಬೆಂಗಳೂರಿನಲ್ಲಿ ಆರೋಗ್ಯ ಸಚಿವಾಲಯಗಳು ಹೈ ಅಲರ್ಟ್ ಘೋಷಿಸಿವೆ.

ತೀವ್ರ ಕಟ್ಟೆಚ್ಚರ

ತೀವ್ರ ಕಟ್ಟೆಚ್ಚರ

ಕೊರೊನಾ ಸೋಂಕಿತ ದೆಹಲಿ ಹಾಗೂ ತೆಲಂಗಾಣದ ಇಬ್ಬರನ್ನೂ ತೀವ್ರ ತಪಾಸಣೆ ನಡೆಸಲಾಗುತ್ತಿದ್ದು, ಸದ್ಯ ಅವರ ಪರಿಸ್ಥಿತಿ ಹತೋಟೆಯಲ್ಲಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಮತ್ತೊಂದು ಸುತ್ತಿನ ಉನ್ನತ ಮಟ್ಟದ ಸಭೆಯನ್ನು ಎಲ್ಲ ರಾಜ್ಯಗಳೊಂದಿಗೆ ನಡೆಸಲಾಗುವುದು ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

English summary
Deadly Coronavirus Fresh Cases Slowdown In China. End of Last Friday 125 coronavirus cases finded in china. this is lowest cases last 6 weeks.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X