ಅಫ್ಘಾನಿಸ್ತಾನದಲ್ಲಿ ಭೀಕರ ಹಿಮ ಕುಸಿತ; 100ಕ್ಕೂ ಹೆಚ್ಚು ಸಾವು

Subscribe to Oneindia Kannada

ನವದೆಹಲಿ, ಫೆಬ್ರವರಿ 6: ಅಫ್ಘಾನಿಸ್ತಾನದಲ್ಲಿ ಭಾರೀ ಹಿಮಪಾತವಾಗುತ್ತಿದ್ದು ಹಿಮಕುಸಿತಕ್ಕೆ 100ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಇಲ್ಲಿನ ಹಳ್ಳಿಯೊಂದರಲ್ಲೇ 50 ಕ್ಕೂ ಹೆಚ್ಚು ಜನ ಅಸುನೀಗಿದ್ದಾರೆ.

ಕಳೆದ ಮೂರು ದಿನಗಳಿಂದ ಅಫ್ಘಾನಿಸ್ತಾನದ ಕೇಂದ್ರ ಮತ್ತು ಈಶಾನ್ಯ ಭಾಗದಲ್ಲಿ ನಿರಂತರ ಹಿಮಪಾತವಾಗುತ್ತಿದೆ. ಹಿಮಪಾತದ ಅಬ್ಬರಕ್ಕೆ ಹಲವು ಮನೆಗಳು ಕುಸಿದಿದ್ದರೆ, ರಸ್ತೆಗಳು ಬಂದ್ ಆಗಿವೆ. ಇದರಿಂದ ಪರಿಹಾರ ಕಾರ್ಯಾಚರಣೆ ನಡೆಸುವುದೂ ಕಷ್ಟವಾಗಿದೆ.[ಭಾರತದ ಬಾಸ್ಮತಿ ಅಕ್ಕಿ ಆಮದು ಪುನರಾರಂಭಿಸಲಿದೆ ಇರಾನ್]

Deadly avalanches killed more than 100 people in Afghanistan

ಇಲ್ಲಿನ ನೂರಿಸ್ತಾನ ಪ್ರಾಂತ್ಯದ ಹಳ್ಳಿಯೊಂದರಲ್ಲೇ ಹಿಮ ಕುಸಿತದಿಂದ 50ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ. ಬಾಗ್ಮಟಲ್ ಜಿಲ್ಲೆಯ ಎರಡು ಹಳ್ಳಿಗಳು ಹಿಮಪಾತಕ್ಕೆ ಸಂಪೂರ್ಣ ನಾಮವಶೇಷವಾಗಿದೆ ಎಂದು ಅಫ್ಘಾನಿಸ್ತಾನದ ಅಧಿಕಾರಿಗಳು ಹೇಳಿದ್ದಾರೆ.[80 ಗಿಡುಗಗಳ ಜೊತೆ ವಿಮಾನದಲ್ಲಿ ರಾಜಕುಮಾರನ ಪ್ರಯಾಣ: ಹೀಗೂ ಉಂಟೇ!]

ಇನ್ನು ಕೇಂದ್ರ ಮತ್ತು ಉತ್ತರ ಅಫ್ಘಾನಿಸ್ತಾನದಲ್ಲಿ ಹಿಮಪಾತಕ್ಕೆ168 ಮನೆಗಳು ಕುಸಿದಿದ್ದು 54 ಜನ ಸಾವನ್ನಪ್ಪಿದ್ದಾರೆ. ಹವಾಮಾನ ದುರ್ಬಲವಾಗಿದ್ದು ಅತಿಯಾದ ಹಿಮಪಾತದಿಂದ ರಕ್ಷಣಾ ಕಾರ್ಯಾಚರಣೆಗೂ ಅಡಚಣೆಯಾಗಿದೆ. ಇದರಿಂದ ಸಾವು ನೋವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಅಪಾಯವಿದೆ. ಈಗಾಗಲೇ ನೂರಾರು ಜನ ಹಿಮಪಾತದಲ್ಲಿ ಸಿಲುಕಿದ್ದು ಅವರನ್ನು ರಕ್ಷಿಸುವ ಕಾರ್ಯ ಭರದಿಂದ ಸಾಗಿದೆ.

Deadly avalanches killed more than 100 people in Afghanistan

ತಾಲಿಬಾನ್ ಉಗ್ರ ಸಂಘನಟೆಗಳ ದಾಳಿಯಿಂದ ನಲುಗಿ ಹೋಗಿರುವ ವಿಶ್ವದ ಬಡ ರಾಷ್ಟ್ರಗಳಲ್ಲಿ ಒಂದಾದ ಅಫ್ಘಾನಿಸ್ತಾನ ಹಿಮಪಾತಕ್ಕೆ ತತ್ತರಿಸಿ ಹೋಗಿದೆ. ಕಳೆದ ತಿಂಗಳಷ್ಟೆ ಇಲ್ಲಿ 5 ವರ್ಷ ಕೆಳಗಿನ 27 ಮಕ್ಕಳು ಹಿಮಪಾತಕ್ಕೆ ಅಸು ನೀಗಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
More than 100 people have been killed in a series of avalanches triggered by last three days of heavy snowfall around Afghanistan. Officials warned that the death toll may rise still further.
Please Wait while comments are loading...