Heatwave: ಮೆಕ್ಕಾ ಬೀದಿಗಳಲ್ಲಿ ಎಲ್ಲಂದರಲ್ಲಿ ಮೃತದೇಹ: 550 ಹಜ್ ಯಾತ್ರಿಕರು ಸಾವು!
ರಿಯಾದ್ ಜೂನ್ 19: ವಿಶ್ವದ ಅತಿ ದೊಡ್ಡ ಧಾರ್ಮಿಕ ಯಾತ್ರೆಗಳಲ್ಲಿ ಒಂದಾದ ಸೌದಿ ಅರೇಬಿಯಾದ ಹಜ್ ಯಾತ್ರೆಗೆ ಬಿಸಿಲಿನ ತಾಪ ತಟ್ಟಿದೆ. ಬಕ್ರೀದ್ ಹಬ್ಬದ ಪ್ರಯುಕ್ತ ಲಕ್ಷಾಂತರ ಜನ ಹಜ್ ಯಾತ್ರೆಗಾಗಿ ಮೆಕ್ಕಾಗೆ ತೆರಳಿದ್ದರು. ಈ ವೇಳೆ ಹೀಟ್‌ವೇವ್‌ನಿಂದಾಗಿ ನೂರಾರು ಜನ ಯಾತ್ರಾರ್ಥಿಗಳು ಸಾವನ್ನಪ್ಪಿರುವುದು ವರದಿಯಾಗಿದೆ.
ಬೇರೆ ಬೇರೆ ದೇಶದ 550ಕ್ಕೂ ಹೆಚ್ಚು ಯಾತ್ರಿಕರು ಸಾವನ್ನಪ್ಪಿರುವುದು ತಿಳಿದು ಬಂದಿದೆ. ಸುಡು ಬಿಸಿಲಿನಲ್ಲಿ ಯಾತ್ರಾರ್ಥಿಗಳ ಮೃತದೇಹಗಳು ರಸ್ತೆ ಬದಿ ಬಿದ್ದಿರುವ ವಿಡಿಯೋಗಳು ವೈರಲ್ ಆಗಿವೆ.

ಹೌದು... ಈ ಬಾರಿ ಹಜ್ ಯಾತ್ರೆ ವೇಳೆ ವಿಪರೀತ ಬಿಸಿಲಿಗೆ ಯಾತ್ರಿಕರು ಜೀವ ಉಳಿಸಿಕೊಳ್ಳುವುದು ಕಷ್ಟವಾಗಿದೆ. ಅಲ್ಲದೆ ಸೌದಿ ಅರೇಬಿಯಾದ ಆರೋಗ್ಯ ಸಚಿವಾಲಯ 2700ಕ್ಕೂ ಹೆಚ್ಚು ಹೀಟ್ ಸ್ಟ್ರೋಕ್ ಪ್ರಕರಣಗಳು ದಾಖಲಾಗಿವೆ ಎಂದು ತಿಳಿಸಿದೆ.
ಈ ಬಾರಿ ಭಾರತದಿಂದ 1 ಲಕ್ಷ 75 ಸಾವಿರ ಯಾತ್ರಿಕರು ಪವಿತ್ರ ಹಜ್ ಯಾತ್ರೆಗಾಗಿ ಸೌದಿ ಅರೇಬಿಯಾ ತಲುಪಿದ್ದಾರೆ. ಆದರೆ ಹೀಟ್ ವೇವ್‌ನಿಂದಾಗಿ ಯಾತ್ರಾರ್ಥಿಗಳಿಗೆ ತೊಂದರೆಯಾಗಿರುವ ಬಗ್ಗೆ ಯಾವುದೇ ಮಾಹಿತಿಗಳು ಲಭ್ಯವಾಗಿಲ್ಲ.
#BREAKING ⚠️ GRAPHIC IMAGES. Several dead bodies of #Hajj pilgrims can be seen in this video now viral on social. Will the #Saudi regime be held accountable? They promote this Islamist tourism & make billions from it. But as of yet, I haven't seen much media coverage of this! pic.twitter.com/wfOO9OFGKv
— Taha Siddiqui (@TahaSSiddiqui) June 17, 2024
ಸೌದಿ ಸರ್ಕಾರದ ಟೀಕೆ
ಹೀಗೆ ಹೀಟ್ ಸ್ಟ್ರೋಕ್‌ನಿಂದ ಮೃತಪಟ್ಟ ಯಾತ್ರಾರ್ಥಿಗಳ ಮೃತದೇಹಗಳನ್ನು ರಸ್ತೆ ವಿಭಜಕ ಮತ್ತು ಫುಟ್‌ಪಾತ್‌ನಲ್ಲಿ ಇರಿಸಲಾಗಿರುವ ವೀಡಿಯೊ ಕೂಡ ವೈರಲ್ ಆಗಿದೆ. ಆದರೆ ಈ ವೀಡಿಯೊವನ್ನು ದೃಢೀಕರಿಸಲಾಗಿಲ್ಲ. ಈಜಿಪ್ಟ್‌ನ ಯಾತ್ರಿಕ ಅಜಾ ಹಮೀದ್ ಬ್ರಾಹಿಂ (61) ಅವರು AFP ಸುದ್ದಿ ಸಂಸ್ಥೆಗೆ ಮಾತನಾಡಿ, ಅವರು ರಸ್ತೆಯ ಬದಿಯಲ್ಲಿ ಶವಗಳನ್ನು ಬಿದ್ದಿರುವುದನ್ನು ನೋಡಿರುವುದಾಗಿ ಹೇಳಿಕೊಂಡಿದ್ದಾರೆ.

ಮೃತದೇಹಗಳು ರಸ್ತೆ ಮೇಲೆ ಬಿದ್ದಿರುವ ವಿಡಿಯೋಗಳಿಗೆ ಜನರು ಸಾಮಾಜಿಕ ಮಾಧ್ಯಮದಲ್ಲಿ ಸೌದಿ ಅರೇಬಿಯಾವನ್ನು ಟೀಕಿಸುತ್ತಿದ್ದಾರೆ. ಸೌದಿ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.
ಕಾಬಾ ಬಳಿ 50 ದಾಟಿದ ತಾಪಮಾನ
ಸೌದಿ ಹವಾಮಾನ ಸೇವೆಯ ಪ್ರಕಾರ, ಸೋಮವಾರ ಮೆಕ್ಕಾದ ಗ್ರ್ಯಾಂಡ್ ಮಸೀದಿಯಲ್ಲಿ ತಾಪಮಾನ 51.8 ಡಿಗ್ರಿ ಸೆಲ್ಸಿಯಸ್ ತಲುಪಿದೆ. ಈ ಸ್ಥಳದಲ್ಲಿ ಯಾತ್ರಿಕರು ಕಾಬಾ ಪ್ರದಕ್ಷಿಣೆ ಮಾಡುತ್ತಾರೆ. ಗ್ರ್ಯಾಂಡ್ ಮಸೀದಿ ಬಳಿ ಇರುವ ಮೀನಾದಲ್ಲಿ ತಾಪಮಾನವು 46 ಡಿಗ್ರಿ ಸೆಲ್ಸಿಯಸ್ ಇತ್ತು.
ಈ ಸ್ಥಳದಲ್ಲಿ ಹಜ್ ಯಾತ್ರಿಕರು ಮೂರು ಕಾಂಕ್ರೀಟ್ ಗೋಡೆಗಳ ಮೇಲೆ ಕಾಣುವ ದೆವ್ವದ ಮೇಲೆ ಕಲ್ಲು ಹೊಡೆಯುವ ಆಚರಣೆಯನ್ನು ಮಾಡುತ್ತಾರೆ. ಆದರೆ ಇಲ್ಲಿ ಬಿಸಿಲಿನ ತಾಪಕ್ಕೆ ಯಾತ್ರಾರ್ಥಿಗಳು ನಲುಗಿ ಹೋಗಿದ್ದಾರೆ. ಬಿಸಿಲಿನಿಂದ ಪಾರಾಗಲು ಯಾತ್ರಾರ್ಥಿಗಳು ನೀರಿನ ಬಾಟಲಿಗಳಿಂದ ನೀರನ್ನು ತಲೆಯ ಮೇಲೆ ಸುರಿದುಕೊಳ್ಳುತ್ತಿದ್ದಾರೆ. ದೆವ್ವದ ಮೇಲೆ ಕಲ್ಲೆಸೆಯುವ ಆಚರಣೆಯನ್ನು ಹಜ್ ಯಾತ್ರೆಯ ಅಂತಿಮ ಹಂತವೆಂದು ಪರಿಗಣಿಸಲಾಗುತ್ತದೆ. ಇದಾದ ನಂತರ ಭಕ್ತರ ಹಜ್ ಯಾತ್ರೆ ಕೊನೆಗೊಳ್ಳುತ್ತದೆ.
ಸಾವನ್ನು ದೃಢಪಡಿಸಿದ ಹಲವು ದೇಶಗಳು
ಮೃತರ ಪೈಕಿ ಕನಿಷ್ಠ 323 ಮಂದಿ ಈಜಿಪ್ಟಿಯನ್ನರು , ಕನಿಷ್ಠ 60 ಮಂದಿ ಜೋರ್ಡಾನಿಯನ್ನರು, ವಿವಿಧ ದೇಶಗಳ 150ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಜೋರ್ಡಾನ್‌ನ ವಿದೇಶಾಂಗ ಸಚಿವಾಲಯ ಭಾನುವಾರದಂದು, ಜೋರ್ಡಾನ್‌ನ 14 ಯಾತ್ರಿಕರು ತೀವ್ರ ಶಾಖದಿಂದಾಗಿ ಸಾವನ್ನಪ್ಪಿದ್ದಾರೆ ಮತ್ತು 17 ಮಂದಿ ನಾಪತ್ತೆಯಾಗಿದ್ದಾರೆ ಎಂದು ಹೇಳಿದೆ.
ಐವರು ಯಾತ್ರಿಕರ ಸಾವನ್ನು ಇರಾನ್ ವರದಿ ಮಾಡಿದೆ ಆದರೆ ಕಾರಣವನ್ನು ಬಹಿರಂಗಪಡಿಸಿಲ್ಲ. ಸೆನೆಗಲ್ ಮೂರು ಸಾವುಗಳನ್ನು ವರದಿ ಮಾಡಿದೆ. ಸೌದಿ ಅರೇಬಿಯಾದ ಇಂಡೋನೇಷ್ಯಾದ ಆರೋಗ್ಯ ಸಚಿವಾಲಯದ ಅಧಿಕಾರಿಯೊಬ್ಬರು ಹಜ್ ಸಮಯದಲ್ಲಿ 136 ಇಂಡೋನೇಷ್ಯಾದ ಯಾತ್ರಿಕರು ಸಾವನ್ನಪ್ಪಿದ್ದಾರೆ, ಇದರಲ್ಲಿ ಕನಿಷ್ಠ ಮೂವರು ಶಾಖದ ಹೊಡೆತದಿಂದ ಸಾವನ್ನಪ್ಪಿದ್ದಾರೆ.












Click it and Unblock the Notifications