90 ನಿಮಿಷ ಕಿಮ್‌ ಜಾಂಗ್ ಗುಣಗಾನ ಕಡ್ಡಾಯ, ಹೀಗೊಂದು ವಿಚಿತ್ರ ಆದೇಶ

ಸಿಯೋಲ್, ಸೆಪ್ಟೆಂಬರ್ 17: ಇನ್ನುಮುಂದೆ ಉತ್ತರ ಕೊರಿಯಾದ ಮಕ್ಕಳು 90 ನಿಮಿಷಗಳ ಕಾಲ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಅವರ ಗುಣಗಾನ ಮಾಡುವಂತೆ ವಿಚಿತ್ರ ಆದೇಶ ನೀಡಲಾಗಿದೆ.

ಕಿಮ್​ ಜಾಂಗ್​ ಉನ್​ ಬದುಕಿದ್ದಾರೋ, ಸತ್ತಿದ್ದಾರೋ ಎಂಬುದು ಯಾರಿಗೂ ತಿಳಿದಿಲ್ಲ, ಅವರು ಬದುಕಿದ್ದಾರೆ ಎಂದು ಕೆಲವು ಫೋಟೋಗಳನ್ನು ಅಪ್‌ಲೋಡ್ ಮಾಡಲಾಗುತ್ತಿದೆ. ಈ ಆದೇಶವನ್ನು ಕಿಮ್ ಸಹೋದರಿ ಕಿಮ್ ಯೋ ಜಾಂಗ್ ಹೊರಡಿಸಿದ್ದಾರೆ.

ಇದಕ್ಕಾಗಿಯೇ ಹೊಸ ಪಠ್ಯವನ್ನು ಅಳವಡಿಸಲಾಗಿದೆ. ಈ ಮೊದಲು ಇದ್ದ ಪಠ್ಯಕ್ರಮದಲ್ಲಿ 30 ನಿಮಿಷ ಕಿಮ್​ನ ಗುಣಗಾನ ಮಾಡುವುದು ಕಡ್ಡಾಯವಾಗಿತ್ತು. ಅದನ್ನೀಗ 90 ನಿಮಿಷಕ್ಕೆ ಏರಿಕೆ ಮಾಡಲಾಗಿದೆ.

 ಪ್ರಿ ನರ್ಸರಿ ಮಕ್ಕಳಿಗೆ ಗುಣಗಾನ ಕಡ್ಡಾಯ

ಪ್ರಿ ನರ್ಸರಿ ಮಕ್ಕಳಿಗೆ ಗುಣಗಾನ ಕಡ್ಡಾಯ

ಕಿಮ್ ಯೋ ಜಾಂಗ್ ಹೊರಡಿಸಿರುವ ಈ ಆದೇಶದಲ್ಲಿ ಇನ್ನುಮುಂದೆ ಪ್ರೀ ನರ್ಸರಿ ಮಕ್ಕಳು ಕಡ್ಡಾಯವಾಗಿ ಪ್ರತಿದಿನ 90 ನಿಮಿಷ ತನ್ನ ಸಹೋದರನ ಗುಣಗಾನ ಮಾಡಬೇಕು.

 90 ನಿಮಿಷ ಅವರ ಬಗ್ಗೆ ಕಲಿಯಬೇಕು

90 ನಿಮಿಷ ಅವರ ಬಗ್ಗೆ ಕಲಿಯಬೇಕು

ಕಿಮ್​ ಜಾಂಗ್​ ಉನ್​ನ ಸಾಧನೆಗಳ ಪಟ್ಟಿಯನ್ನು ಪ್ರೀ ನರ್ಸರಿ ಮಕ್ಕಳ ಪಠ್ಯಕ್ರಮದಲ್ಲಿ ಅಳವಡಿಸಲಾಗಿದ್ದು, ಪ್ರತಿದಿನ ಕನಿಷ್ಠ 90 ನಿಮಿಷ ಮಕ್ಕಳು ಅದರ ಬಗ್ಗೆ ಕಲಿಯಬೇಕಿದೆ. ಉತ್ತರ ಕೊರಿಯಾದ ಬಗ್ಗೆ ನಿಷ್ಠೆ ಮತ್ತು ನಂಬಿಕೆಯನ್ನು ಉಳಿಸಿ ಬೆಳೆಸಿಕೊಳ್ಳಲು ಅಧ್ಯಕ್ಷ ಕಿಮ್​ನ ಗುಣಗಾನ, ಅವರ ಶ್ರೇಷ್ಠತೆ ಬಗ್ಗೆ ಮಕ್ಕಳು ಕಲಿಯಬೇಕು ಎನ್ನುವುದು ಸಹೋದರಿ ಕಿಮ್ ಯೋ ಜಾಂಗ್ ಅನಿಸಿಕೆ.

 ಅಧ್ಯಾಪಕರ ನೇಮಕ

ಅಧ್ಯಾಪಕರ ನೇಮಕ

ಈ ಪಠ್ಯದ ತರಬೇತಿಗಾಗಿ ವಿಶೇಷ ಅಧ್ಯಾಪಕರನ್ನೂ ನೇಮಕ ಮಾಡಿದ್ದು, ಅದಕ್ಕಾಗಿಯೇ ಪ್ರತ್ಯೇಕ ತರಗತಿಯನ್ನೂ ಮೀಸಲು ಇರಿಸಲಾಗಿದೆ. ಇದರ ಅವಧಿ 90 ನಿಮಿಷಗಳಾಗಿದ್ದು, ಅದರಲ್ಲಿ ಮಕ್ಕಳು ಕಿಮ್​ ಬಗ್ಗೆ ತಿಳಿದುಕೊಳ್ಳುವುದು ಇನ್ನುಮುಂದೆ ಕಡ್ಡಾಯವಾಗಿದೆ.

Recommended Video

    ಕೊರೋನ ಬಂದಿದ್ದು ಒಳ್ಳೇದೇ ಆಯ್ತು ,ಅಸಹ್ಯಕರ ವ್ಯಕ್ತಿಗಳ Hand Shake stop!! | Oneindia Kannada
     ಮಹಾನ್ ಕಾರ್ಯಗಳ ಬಗ್ಗೆ ಗುಣಗಾನ

    ಮಹಾನ್ ಕಾರ್ಯಗಳ ಬಗ್ಗೆ ಗುಣಗಾನ

    ಅಂದರೆ ತನ್ನ ಸಹೋದರ ಇಲ್ಲಿಯವರೆಗೆ ಮಾಡಿರುವ 'ಮಹಾನ್​' ಕಾರ್ಯಗಳ ಬಗ್ಗೆ ಕಡ್ಡಾಯವಾಗಿ ಕಲಿಯಬೇಕು. ಕಲಿಕೆಯ ಸಂದರ್ಭದಲ್ಲಿ ಕಿಮ್​ ಜಾಂಗ್​ ಉನ್​ ಮಾಡಿರುವ ಸಾಧನೆಗಳ ಬಗ್ಗೆ ಶ್ಲಾಘನೆ ಮಾಡಬೇಕು ಎಂದು ಆದೇಶ ಹೊರಡಿಸಿದ್ದಾರೆ.

    Notifications
    Settings
    Clear Notifications
    Notifications
    Use the toggle to switch on notifications
    • Block for 8 hours
    • Block for 12 hours
    • Block for 24 hours
    • Don't block
    Gender
    Select your Gender
    • Male
    • Female
    • Others
    Age
    Select your Age Range
    • Under 18
    • 18 to 25
    • 26 to 35
    • 36 to 45
    • 45 to 55
    • 55+