ಕಚ್ಚಾ ತೈಲ ಮಾರಾಟದಲ್ಲಿ ಅಮೆರಿಕ ಹಿಂದಿಕ್ಕಿದ ರಷ್ಯಾ
ಭಾರತವು ರಷ್ಯಾದಿಂದ ಕಚ್ಚಾ ತೈಲವನ್ನು ಖರೀದಿಸಿದ ಸಂಗತಿಗಳು ಜಾಗತಿಕವಾಗಿ ಸುದ್ದಿಯಾಗಿದ್ದವು. ಆದರೆ, ಇದೀಗ ಭಾರತಕ್ಕೆ ಅಗ್ಗದ ಬೆಲೆಗೆ ಕಚ್ಚಾ ತೈಲವನ್ನು ಪೂರೈಕೆ ಮಾಡಿರುವ ರಷ್ಯಾ ಕಚ್ಚಾ ತೈಲ ಅಗ್ಗದ ಬೆಲೆಗೆ ಮಾರಾಟ ಮಾಡಿದೆ. ಇನ್ನು ಜಾಗತಿಕ ಮಾರುಕಟ್ಟೆಯ ಕಚ್ಚಾ ತೈಲ ವ್ಯಾಪಾರದಲ್ಲಿ ನಿಯಂತ್ರಣ ಸಾಧಿಸಿಕೊಂಡಿರುವ ಅಮೆರಿಕವನ್ನೇ ರಷ್ಯಾ ಹಿಂದಿಕ್ಕಿದೆ.
ರಷ್ಯಾ ಭಾರತಕ್ಕೆ ತೈಲ ಪೂರೈಕೆಯಲ್ಲೂ ಮುಂದಿದ್ದು, ಇರಾಕ್ ಹಾಗೂ ಸೌದಿ ಅರೇಬಿಯಾ ರಾಷ್ಟ್ರಗಳನ್ನು ಸಹ ಹಿಂದಿಕ್ಕಿದೆ. ಈ ಎರಡು ರಾಷ್ಟ್ರಗಳು ಭಾರತಕ್ಕೆ ಹಾಗೂ ಬೇರೆ ರಾಷ್ಟ್ರಗಳಿಗೆ ಕಚ್ಚಾ ತೈಲ ಪೂರೈಕೆಯಲ್ಲಿ ಎರಡನೇ ಹಾಗೂ ಮೂರನೇ ಸ್ಥಾನದಲ್ಲಿವೆ.
ರಷ್ಯಾದಿಂದ ಭಾರತವು ತೈಲ ಖರೀದಿಗೆ ಅಮೆರಿಕ ಹಾಗೂ ಯುರೋಪ್ ರಾಷ್ಟ್ರಗಳು ಪದೇ-ಪದೇ ಆಕ್ಷೇಪವನ್ನು ವ್ಯಕ್ತಪಡಿಸಿದ್ದರೂ ಈ ಉಭಯ ದೇಶಗಳ ನಡುವಿನ ವ್ಯಾಪಾರ ಸಂಬಂಧಗಳ ಮೇಲೆ ಪರಿಣಾಮ ಬೀರಿಲ್ಲ. ಅಷ್ಟೇ ಅಲ್ಲ, ಇದೇ ಕಳೆದ ಅಕ್ಟೋಬರ್ ತಿಂಗಳಿನಲ್ಲಿ ಭಾರತಕ್ಕೆ ತೈಲ ಪೂರೈಕೆಯಲ್ಲಿ ರಷ್ಯಾ ಮೊದಲ ಸ್ಥಾನವನ್ನು ಗಳಿಸಿದೆ. ಇನ್ನು ಭಾರತಕ್ಕೆ ತೈಲ ರಫ್ತು ಮಾಡಿರುವ ಇರಾಕ್ ಹಾಗೂ ಸೌದಿ ಅರೇಬಿಯಾ ರಾಷ್ಟ್ರಗಳು ಎರಡನೇ ಹಾಗೂ ಮೂರನೇ ಸ್ಥಾನದಲ್ಲಿ ಇಳಿಕೆ ಕಂಡಿದ್ದು ಭಾರತ ಈ ರಾಷ್ಟ್ರಗಳಿಂದ ಈ ಬಾರಿ ಕಡಿಮೆ ಕಚ್ಚಾ ತೈಲವನ್ನು ಆಮದು ಮಾಡಿಕೊಂಡಿದೆ ಎಂದು ವರದಿಯಾಗಿದೆ.

ರಷ್ಯಾದ ಪಾಲು ಶೇ. 1ರಿಂದ 22ಕ್ಕೆ ಏರಿಕೆ
ಕಚ್ಚಾ ತೈಲ ಮಾರಾಟವನ್ನು ಶಿಪ್ಪಿಂಗ್ ಡೇಟಾ ಆಧಾರದ ಮೇಲೆ ಮಾರುಕಟ್ಟೆ ವರದಿಗಳಲ್ಲಿ ಈ ಮಾಹಿತಿಯನ್ನು ನೀಡಲಾಗಿದೆ. ಭಾರತವು ಪ್ರತಿದಿನ 5 ಮಿಲಿಯನ್ ಬ್ಯಾರೆಲ್ ತೈಲವನ್ನು ಬೇರೆ ರಾಷ್ಟ್ರಗಳಿಂದ ಆಮದು ಮಾಡಿಕೊಳ್ಳುತ್ತದೆ. ಹೀಗೆ ಕಳೆದ ಅಕ್ಟೋಬರ್ ತಿಂಗಳಲ್ಲಿ ರಷ್ಯಾದ ಪಾಲು ಶೇಕಡಾ 22ರಷ್ಟಿದ್ದರೆ 2019ರಲ್ಲಿ ರಷ್ಯಾದ ಪಾಲು ಕೇವಲ ಶೇಕಡಾ 1ರಷ್ಟಿತ್ತು ಎಂಬುವುದೇ ಆಶ್ಚರ್ಯಕರ ಸಂಗತಿಯಾಗಿದೆ.
ಚೀನಾ ಹಾಗೂ ಅಮೆರಿಕ ನಂತರದ ಸ್ಥಾನದಲ್ಲಿ ಭಾರತ ವಿಶ್ವದ ಮೂರನೇ ಅತಿದೊಡ್ಡ ತೈಲ ಆಮದು ಮಾಡಿಕೊಳ್ಳುವ ದೇಶವಾಗಿದೆ. ಹಲವಾರು ವರ್ಷಗಳಿಂದ ಭಾರತಕ್ಕೆ ಹೆಚ್ಚು ಕಚ್ಚಾ ತೈಲ ಆಮದು ಮಾಡುತ್ತಿದ್ದ ಇರಾಕ್‌ನಿಂದ ಆದ ಆಮದು ಶೇ. 20ಕ್ಕೆ ಇಳಿದಿದೆ. ಆದರೆ, ಭಾರತವು ಸೌದಿ ಅರೇಬಿಯಾದಿಂದ ಶೇ 16 ತೈಲವನ್ನು ಆಮದು ಮಾಡಿಕೊಳ್ಳುತ್ತಿದೆ. ಈ ವರ್ಷದ ಫೆಬ್ರವರಿಯಿಂದ ರಷ್ಯಾದಿಂದ ಭಾರತವು ತೈಲ ಖರೀದಿ ಹೆಚ್ಚಾಗಿದೆ. ಫೆಬ್ರವರಿಯಲ್ಲಿ ಉಕ್ರೇನ್ ಮೇಲೆ ರಷ್ಯಾ ದಾಳಿ ನಡೆಸಿತ್ತು, ಈ ಕಾರಣದಿಂದಾಗಿ ಅಮೆರಿಕ, ಬ್ರಿಟನ್, ಜರ್ಮನಿ ಸೇರಿದಂತೆ ಹಲವು ಪಾಶ್ಚಿಮಾತ್ಯ ದೇಶಗಳು ರಷ್ಯಾದ ಮೇಲೆ ನಿರ್ಬಂಧಗಳನ್ನು ಹೇರಿದ್ದವು. ಇಂತಹ ಪರಿಸ್ಥಿತಿಯಲ್ಲಿ ರಷ್ಯಾ ಅಗ್ಗದ ಬೆಲೆಗೆ ಕಚ್ಚಾ ತೈಲವನ್ನು ಮಾರಾಟವಾಗುತ್ತಿದ್ದಾರೆ ಈ ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಂಡಿರುವ ಭಾರತ ದೊಡ್ಡ ಮಟ್ಟದಲ್ಲಿ ರಷ್ಯಾದಿಂದ ತೈಲ ಖರೀದಿಸಿದೆ. ಇನ್ನು 2-3 ತಿಂಗಳಲ್ಲಿ ಬೇರೆ ರಾಷ್ಟ್ರಗಳಿಂದ ಕಚ್ಚಾ ತೈಲವನ್ನು ಭಾರತ ಖರೀದಿಗೆ ಮಾಡಲು ಮುಂದಾಗಿದ್ದರೆ ಭಾರತಕ್ಕೆ ನಷ್ಟ ಉಂಟಾಗುತ್ತಿತ್ತು ಎಂದು ವರದಿಯಾಗಿದೆ.

ಭಾರತಕ್ಕೆ ಲಾಭದಾಯಕ ಒಪ್ಪಂದ
ಇನ್ನು ವಿಶ್ವಾದ್ಯಂತ ಕಚ್ಚಾ ತೈಲ ಬೆಲೆಯು ಬ್ಯಾರೆಲ್‌ಗೆ 139 ಡಾಲರ್‌ಗೆ ಏರಿದ್ದು, 14 ವರ್ಷಗಳ ನಂತರ ರಷ್ಯಾ ಕಚ್ಚಾ ತೈಲು ವ್ಯಾಪಾರವು ಗರಿಷ್ಠ ಮಟ್ಟವಾಗಿದೆ. ಇನ್ನು ಈ ಎಲ್ಲ ಅಂಕಿ-ಅಂಶಗಳನ್ನು ಗಮನಿಸಿದರೆ, ರಷ್ಯಾದಿಂದ ತೈಲ ಖರೀದಿಸಿರುವ ಭಾರತಕ್ಕೆ ಲಾಭದಾಯಕ ಒಪ್ಪಂದ ಎಂದು ಸಾಬೀತಾಗಿದೆ. ಆದರೆ, ಭಾರತ ರಷ್ಯಾದ ತೈಲವನ್ನು ಖರೀದಿಸಲು ಅಮೆರಿಕ ಮತ್ತು ಯುರೋಪ್ ವಿರೋಧ ವ್ಯಕ್ತಪಡಿಸಿವೆ .ಇದಕ್ಕೆ ದಿಟ್ಟ ಉತ್ತರ ನೀಡಿದ ವಿದೇಶಾಂಗ ಸಚಿವರು, ನಾವು ಯಾರ ಲಾಭ ಅಥವಾ ನಷ್ಟಕ್ಕೆ ಈ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಜೈಶಂಕರ್ ಸ್ಪಷ್ಟವಾಗಿ ಹೇಳಿದ್ದರು. ರಷ್ಯಾ ತೈಲವನ್ನು ಖರೀದಿಸುವ ನಮ್ಮ ನಿರ್ಧಾರವು ದೇಶದ ಹಿತಾಸಕ್ತಿಯಾಗಿದೆ ಹಾಗೂ ಇದರಿಂದ ನಾವು ನಮ್ಮ ದೇಶದ ಜನರಿಗೆ ಸರಿಯಾದ ದರದಲ್ಲಿ ತೈಲವನ್ನು ನೀಡಬಹುದು ಎಂದು ಹೇಳಿದ್ದಾರೆ.












Click it and Unblock the Notifications