ಸೌದಿ ನ್ಯಾಷನಲ್ ಬ್ಯಾಂಕ್‌ನಿಂದ ನೆರವು ನಿರಾಕರಣೆ: ಶೇ.24 ಕುಸಿತ ಕಂಡ ಕ್ರೆಡಿಟ್ ಸ್ಯೂಸ್ ಷೇರುಗಳು!
ಹಗರಣಗಳ ಸರಣಿಯಿಂದ ತತ್ತರಿಸಿರುವ ಸ್ವಿಟ್ಜರ್ಲೆಂಡ್‌ನ ಎರಡನೇ ಅತಿದೊಡ್ಡ ಬ್ಯಾಂಕ್ ಮತ್ತೊಮ್ಮೆ ತತ್ತರಿಸಿದೆ.
ಕ್ರೆಡಿಟ್ ಸ್ಯೂಸ್ ಗ್ರೂಪ್ ಎಜಿ ಷೇರುಗಳಲ್ಲಿ ಬುಧವಾರ (ಮಾರ್ಚ್ 15) ದೊಡ್ಡ ಕುಸಿತ ಕಂಡಿದೆ. ಕಂಪನಿಯ ಷೇರುಗಳು ಶೇ.24ರಷ್ಟು ಕುಸಿತ ದಾಖಲಿಸಿದೆ. ಈ ಸ್ಟಾಕ್‌ನಲ್ಲಿ ಕಂಡ ಇದುವರೆಗಿನ ಅತಿದೊಡ್ಡ ಕುಸಿತವಾಗಿದೆ. ಸೌದಿ ನ್ಯಾಷನಲ್ ಬ್ಯಾಂಕ್ ಹೆಚ್ಚಿನ ಹಣಕಾಸಿನ ನೆರವು ನೀಡುವುದಿಲ್ಲ ಎಂದು ಹೇಳಿದ ನಂತರ ಕಂಪನಿಯ ಷೇರುಗಳು ಕೆಟ್ಟದಾಗಿ ಕುಸಿದು ಬಿದ್ದಿವೆ.
ವಾಸ್ತವವಾಗಿ ಸೌದಿ ನ್ಯಾಷನಲ್ ಬ್ಯಾಂಕ್ ಕ್ರೆಡಿಟ್ ಸ್ಯೂಸ್ ಕಂಪನಿಯಲ್ಲಿ ದೊಡ್ಡ ಪಾಲನ್ನು ಹೊಂದಿದೆ. ಬ್ಯಾಂಕಿಂಗ್ ವಲಯದಲ್ಲಿ ಯುರೋಪಿಯನ್ ಷೇರು ಮಾರುಕಟ್ಟೆಗಳು ಕುಸಿದಿದ್ದರಿಂದ, ಸೌದಿ ನ್ಯಾಷನಲ್ ಬ್ಯಾಂಕ್ ಅಧ್ಯಕ್ಷ ಅಮ್ಮರ್ ಅಲ್ ಖುದೈರಿ ತನ್ನ ಪಾಲನ್ನು ಇನ್ನೂ 10 ಪ್ರತಿಶತದಷ್ಟು ಹೆಚ್ಚಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಸೌದಿ ನ್ಯಾಷನಲ್ ಬ್ಯಾಂಕ್‌ನ ಈ ಹೇಳಿಕೆಯ ನಂತರ, ಕ್ರೆಡಿಟ್ ಸ್ಯೂಸ್‌ನ ಷೇರುಗಳಲ್ಲಿ ಬಹಳ ಕುಸಿತ ಕಂಡು ಬಂದಿದೆ.

ಇದರಿಂದ ಹಗರಣಗಳ ಸರಣಿಯಿಂದ ತತ್ತರಿಸಿರುವ ಸ್ವಿಟ್ಜರ್ಲೆಂಡ್‌ನ ಎರಡನೇ ಅತಿದೊಡ್ಡ ಬ್ಯಾಂಕ್ ಮತ್ತೊಮ್ಮೆ ತತ್ತರಿಸಿದೆ. ಕ್ರೆಡಿಟ್ ಸ್ಯೂಸ್‌ನ ಮಾರುಕಟ್ಟೆ ಮೌಲ್ಯವು ಈಗಾಗಲೇ ಎರಡು ಯುಎಸ್ ಬ್ಯಾಂಕುಗಳ ಕುಸಿತದಿಂದ ಸಾಂಕ್ರಾಮಿಕದ ಭಯದಿಂದ ಈ ವಾರ ಭಾರೀ ಕುಸಿತವನ್ನು ಅನುಭವಿಸಿದೆ.
ಸಿಲಿಕಾನ್ ವ್ಯಾಲಿ ಬ್ಯಾಂಕ್ ನಂತರ ಹೂಡಿಕೆದಾರರಲ್ಲಿ ಬ್ಯಾಂಕಿಂಗ್ ಕ್ಷೇತ್ರದ ಬಗ್ಗೆ ಕಾಳಜಿ, ಆತಂಕ ಹೆಚ್ಚಿರುವುದು ಈಗ ಗಮನಿಸಬೇಕಾದ ಅಂಶ. ಯುರೋಪ್ ಬ್ಯಾಂಕ್ ಸೂಚ್ಯಂಕದ ಬಗ್ಗೆ ಮಾತನಾಡುವುದಾದರೇ ಮಾರ್ಚ್ 8 ರಿಂದ, ಬ್ಯಾಂಕಿಂಗ್ ಸೂಚ್ಯಂಕದಲ್ಲಿ 120 ಬಿಲಿಯನ್ ಯುರೋಗಳ ಕುಸಿತ ಕಂಡುಬಂದಿದೆ. ಬುಧವಾರ ಬ್ಯಾಂಕ್ ಸೂಚ್ಯಂಕ ಶೇ.6.4ರಷ್ಟು ಕುಸಿತ ಕಂಡಿದೆ.
ಬುಧವಾರ ಸೌದಿ ಅರೇಬಿಯಾದಲ್ಲಿ ನಡೆದ ಹಣಕಾಸು ವಲಯದ ಸಮ್ಮೇಳನದಲ್ಲಿ ಮಾತನಾಡಿದ ಕ್ರೆಡಿಟ್ ಸ್ಯೂಸ್ ಅಧ್ಯಕ್ಷ ಆಕ್ಸೆಲ್ ಲೆಹ್ಮನ್, ಬ್ಯಾಂಕ್‌ಗೆ ಸರ್ಕಾರದ ನೆರವು ಅಗತ್ಯವಿಲ್ಲ ಎಂದು ಹೇಳಿದ್ದಾರೆ. ನಿಯಂತ್ರಣದಲ್ಲಿನ ವ್ಯತ್ಯಾಸದಿಂದಾಗಿ ಯುಎಸ್‌ನ ಸಿಲಿಕಾನ್ ವ್ಯಾಲಿ ಬ್ಯಾಂಕ್ (SVB) ಕುಸಿತದೊಂದಿಗೆ ತನ್ನ ಬ್ಯಾಂಕಿನ ಸಮಸ್ಯೆಗಳನ್ನು ಹೋಲಿಸುವುದು ಸರಿಯಲ್ಲ ಎಂದು ವಾದ ಮಾಡಿದ್ದಾರೆ.
ಸದ್ಯ ಬ್ಯಾಂಕ್ ಅನ್ನು ಲಾಭದಾಯಕತೆಗೆ ಹಿಂದಿರುಗಿಸುವ ಪ್ರಯತ್ನದಲ್ಲಿ ಕ್ರೆಡಿಟ್ ಸ್ಯೂಸ್ ಮೂರು ವರ್ಷಗಳ ಸಂಕೀರ್ಣ ಪುನರ್ ರಚನೆಯ ಮಧ್ಯದಲ್ಲಿದೆ. ಸಿಲಿಕಾನ್ ವ್ಯಾಲಿ ಬ್ಯಾಂಕ್‌ನ ಅವನತಿಯಿಂದ ಇದು ತೀವ್ರವಾಗಿ ಹಾನಿಗೊಳಗಾಗಿದೆ. ಸಿಲಿಕಾನ್ ವ್ಯಾಲಿ ಬ್ಯಾಂಕ್ ಕುಸಿತದ ನಂತರ ಹೂಡಿಕೆದಾರರು ಬ್ಯಾಂಕುಗಳ ವ್ಯವಹಾರಗಳ ಹೆಚ್ಚು ಗಮನ ಹರಿಸುತ್ತಿದ್ದಾರೆ.












Click it and Unblock the Notifications