ಲಸಿಕೆಯಿಂದ ಮಹಿಳೆಗೆ ಗಡ್ಡ ಬರಬಹುದು, ಜನ ಮೊಸಳೆಯಾಗಬಹುದು: ಅಧ್ಯಕ್ಷನ ವಿಚಿತ್ರ ಹೇಳಿಕೆ
ಬ್ರೆಸಿಲಿಯಾ, ಡಿಸೆಂಬರ್ 19: ಜಗತ್ತಿನಾದ್ಯಂತ ಕೊರೊನಾ ವೈರಸ್ ಸೋಂಕು ಹರಡಲು ಆರಂಭಿಸಿದಾಗಿನಿಂದಲೂ ಈ ಸೋಂಕಿನ ಬಗ್ಗೆ ತಲೆಕೆಡಿಸಿಕೊಳ್ಳುವುದು ಬೇಕಿಲ್ಲ. ಇದು ಸಣ್ಣ ಜ್ವರವಷ್ಟೇ. ಲಸಿಕೆ ಪಡೆದುಕೊಳ್ಳುವ ಅಗತ್ಯವೇ ಇಲ್ಲ ಎಂದು ಪ್ರತಿಪಾದಿಸುತ್ತಾ ಬಂದಿರುವ ಬ್ರೆಜಿಲ್ ಅಧ್ಯಕ್ಷ ಜೈರ್ ಬೊಲ್ಸೊನಾರೊ ವಿಚಿತ್ರ ಹೇಳಿಕೆಯೊಂದನ್ನು ನೀಡಿದ್ದಾರೆ.
ಕೊರೊನಾ ಲಸಿಕೆಗಳ ವಿರುದ್ಧ ವಾಗ್ದಾಳಿ ನಡೆಸಿರುವ ಬ್ರೆಜಿಲ್ ಅಧ್ಯಕ್ಷರು, ಫೈಜರ್- ಬಯೋಎನ್‌ಟೆಕ್ ತಯಾರಿಸಿರುವ ಲಸಿಕೆಯನ್ನು ಪಡೆದುಕೊಂಡರೆ ಮಹಿಳೆಯರು ಗಡ್ಡಧಾರಿಗಳಾಗಬಹುದು ಅಥವಾ ಜನರು ಮೊಸಳೆಗಳಾಗಬಹುದು ಎಂದು ಹೇಳಿದ್ದಾರೆ.
ಕಳೆದ ವರ್ಷ ಮೊದಲ ಬಾರಿ ವೈರಸ್ ವರದಿಯಾದ ವೇಳೆಯಿಂದಲೂ ಬೊಲ್ಸೊನಾರೊ ಅವರು ಇದೊಂದು ಸಣ್ಣ ಫ್ಲೂ ಮಾತ್ರ ಎಂದು ಹೇಳುತ್ತಾ ಬಂದಿದ್ದಾರೆ. ತಾವು ಕೊರೊನಾ ವೈರಸ್ ಲಸಿಕೆ ಪಡೆದುಕೊಳ್ಳುವುದಿಲ್ಲ. ಹಾಗೆ ಪಡೆಯದೆ ಇರುವುದು ನನ್ನ ಹಕ್ಕು ಎಂದು ಕಳೆದ ತಿಂಗಳು ಹೇಳಿದ್ದರು. ಅದರ ನಡುವೆಯೂ ಅವರು ಈ ವಾರ ದೇಶದಾದ್ಯಂತ ಸಾಮೂಹಿಕ ಲಸಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು, ತಾವು ಲಸಿಕೆ ಪಡೆದುಕೊಳ್ಳುವುದಿಲ್ಲ ಎಂದು ಪುನರುಚ್ಚರಿಸಿದ್ದಾರೆ. ಮುಂದೆ ಓದಿ.

ಮೊಸಳೆಯಾದರೆ ನಿಮ್ಮ ಸಮಸ್ಯೆಯಷ್ಟೇ
''ಫೈಜರ್ ಲಸಿಕೆಯ ಒಪ್ಪಂದದಲ್ಲಿ ಒಂದು ವಿಚಾರವನ್ನು ಸ್ಪಷ್ಟವಾಗಿ ಹೇಳಲಾಗಿದೆ. 'ಯಾವುದೇ ರೀತಿಯ ಅಡ್ಡಪರಿಣಾಮಗಳಿಗೆ ನಾವು ಹೊಣೆಗಾರರು ಅಲ್ಲ' ಎಂದು. ನೀವು ಮೊಸಳೆಯಾಗಿ ಬದಲಾದರೆ ಅದು ನಿಮ್ಮ ಸಮಸ್ಯೆಯಷ್ಟೇ'' ಎಂದು ಅವರು ಹೇಳಿದ್ದಾರೆ.

ಮಹಿಳೆಯರಿಗೆ ಗಡ್ಡ ಬೆಳೆದರೆ...
''ನೀವು ಸೂಪರ್ ಹ್ಯೂಮನ್ ಆಗಿ ಬದಲಾದರೆ, ಮಹಿಳೆಗೆ ಗಡ್ಡ ಬೆಳೆಯಲು ಆರಂಭಿಸಿದರೆ ಅಥವಾ ಪುರುಷನೊಬ್ಬ ದುರ್ಬಲ ಧ್ವನಿಯಲ್ಲಿ ಮಾತನಾಡಲು ಶುರುಮಾಡಿದರೆ ಲಸಿಕೆ ಕಂಪೆನಿಯವರು ಯಾವ ರೀತಿಯೂ ಜವಾಬ್ದಾರರಲ್ಲ'' ಎಂದು ಅವರ ಸೂಚನೆಯನ್ನು ಉಲ್ಲೇಖಿಸಿದ್ದಾರೆ.

ಕಡ್ಡಾಯವಲ್ಲ ಎಂದ ಅಧ್ಯಕ್ಷ
ಫೈಜರ್ ಲಸಿಕೆಯ ತುರ್ತು ಬಳಕೆಯನ್ನು ಈಗಾಗಲೇ ಬ್ರಿಟನ್, ಅಮೆರಿಕ ಮತ್ತು ಕೆನಡಾಗಳಲ್ಲಿ ಆರಂಭಿಸಲಾಗಿದೆ. ಬ್ರೆಜಿಲ್‌ನಲ್ಲಿ ಫೈಜರ್ ಲಸಿಕೆಯ ಪ್ರಯೋಗಗಳು ಹಲವು ವಾರಗಳಿಂದ ನಡೆಯುತ್ತಿವೆ. ಬುಧವಾರ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿದ ಬೊಲ್ಸೊನಾರೊ, ಲಸಿಕೆಯು ಉಚಿತ ಆದರೆ ಕಡ್ಡಾಯವಲ್ಲ ಎಂದಿದ್ದಾರೆ.
Recommended Video

ಲಸಿಕೆ ಕಡ್ಡಾಯ, ಆದರೆ ಬಲವಂತವಿಲ್ಲ
ಆದರೆ ಗುರುವಾರ ಆದೇಶ ನೀಡಿರುವ ಬ್ರೆಜಿಲ್ ಸುಪ್ರೀಂಕೋರ್ಟ್, ಲಸಿಕೆ ಪಡೆಯುವುದು ಕಡ್ಡಾಯ. ಹಾಗೆಂದು ಅದನ್ನು ಬಲವಂತವಾಗಿ ನೀಡುವಂತಿಲ್ಲ ಎಂದು ಹೇಳಿದೆ. ''ಲಸಿಕೆ ನಿಯಂತ್ರಣ ಪ್ರಾಧಿಕಾರವು ಅನುಮತಿ ನೀಡಿದ ಬಳಿಕ ಎಲ್ಲರಿಗೂ ಲಸಿಕೆ ಸಿಗಲಿದೆ. ಆದರೆ ನಾನು ಲಸಿಕೆ ಪಡೆಯುವುದಿಲ್ಲ. ನಾನು ಕೆಟ್ಟು ಉದಾಹರಣೆ ನೀಡುತ್ತಿದ್ದೇನೆ ಎಂದು ಕೆಲವರು ಆರೋಪಿಸುತ್ತಾರೆ. ಆದರೆ ಹಾಗೆ ಹೇಳುವ ಮೂರ್ಖರೇ, ನನಗೂ ವೈರಸ್ ತಗುಲಿತ್ತು. ನನ್ನಲ್ಲಿ ಪ್ರತಿರಕ್ಷಣಾ ಸಾಮರ್ಥ್ಯವಿದೆ. ನಾನೇಕೆ ಲಸಿಕೆ ತೆಗೆದುಕೊಳ್ಳಬೇಕು?'' ಎಂದು ಬೊಲ್ಸೊನಾರೊ ಪ್ರಶ್ನಿಸಿದ್ದಾರೆ.












Click it and Unblock the Notifications