ಕೊರೊನಾದಿಂದ ಗುಣಮುಖರಾಗಿ 3 ತಿಂಗಳವರೆಗೂ ಲಕ್ಷಣಗಳು ಇರಲಿವೆ
ಬ್ರಿಟನ್, ಅಕ್ಟೋಬರ್ 19: ಕೊರೊನಾ ಸೋಂಕು ತಗುಲಿ ಗುಣಮುಖರಾಗಿ ತಿಂಗಳುಗಳು ಕಳೆದರೂ ಲಕ್ಷಣಗಳು ಇರಲಿವೆ ಎಂದು ಬ್ರಿಟನ್ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ತಜ್ಞರು ತಿಳಿಸಿದ್ದಾರೆ.
ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆಗೆ ತೆರಳಿದವರಿಗೂ ಕೂಡ ಉಸಿರಾಟದ ತೊಂದರೆ, ಮೈಕೋ ನೋವು, ಮಾನಸಿಕ ಖಿನ್ನತೆ ಮೂರ್ನಾಲ್ಕು ತಿಂಗಳ ಕಾಲ ಮುಂದುವರೆಯಲಿದೆ ಎಂದು ಅವರು ತಿಳಿಸಿದ್ದಾರೆ.
ಹಾಗೆಯೇ ಇದರಿಂದ ದೇಹದಲ್ಲಿರುವ ಇತರೆ ಭಾಗಗಳಿಗೂ ಹಾನಿಯುಂಟಾಗುವ ಎಲ್ಲಾ ಸಾಧ್ಯತೆಗಳಿವೆ ಎಂದು ವಿಶ್ವವಿದ್ಯಾಲಯ ತಿಳಿಸಿದೆ.

ಕೇವಲ ನೆಗಡಿ ಕಾಣಿಸಿಕೊಂಡಾಕ್ಷಣ ಆಸ್ಪತ್ರೆಗೆ ಹೋಗಬೇಕೆ ಎನ್ನುವ ಪ್ರಶ್ನೆ ಸಾಕಷ್ಟು ಮಂದಿಯನ್ನು ಕಾಡುತ್ತಿದೆ. ಕಳೆದ ವರ್ಷವೂ ನನಗೆ ಜ್ವರ, ಶೀತವಾಗಿತ್ತು, ಹಾಗೆಯೇ ಗುಣಮುಖನಾಗಿದ್ದೆ, ಈ ಬಾರಿಗೂ ಹಾಗೆಯೇ ಕಡಿಮೆಯಾಗುತ್ತದೆ ಅದಕ್ಕೆ ಆಸ್ಪತ್ರೆ ಏಕೆ ಎಂದು ಕೆಲವರು ಪ್ರಶ್ನೆ ಮಾಡುತ್ತಿದ್ದಾರೆ. ಆದರೆ ಇದ್ಯಾವುದಕ್ಕೂ ನಿರ್ದಿಷ್ಟ ಉತ್ತರವಿಲ್ಲ.
ಕೆಲವು ತಜ್ಞರು ಕೊವಿಡ್ ಯಾವುದು ಸಾಮಾನ್ಯ ನೆಗಡಿಯಾವುದು ಎಂದು ಆರಂಭದಲ್ಲಿ ವ್ಯತ್ಯಾಸ ಗುರುತಿಸುವುದು ಕಷ್ಟ ಹಾಗಾಗಿ ಆಸ್ಪತ್ರೆಗೆ ತೆರಳಿ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಸಲಹೆ ನೀಡಿದರೆ, ಇನ್ನು ಕೆಲವು ತಜ್ಞರು ಶೀತ, ಜ್ವರ ಎಲ್ಲಾ ವರ್ಷ ವರ್ಷವೂ ಬರುವಂಥದ್ದು ಹೀಗಾಗಿ ರೋಗದ ಸಣ್ಣ ಲಕ್ಷಣಗಳಿದ್ದರೆ ಚಿಕಿತ್ಸೆ ಅಗತ್ಯವಿಲ್ಲ ಎಂದು ಹೇಳಿದ್ದಾರೆ.












Click it and Unblock the Notifications