ಯುಕೆಯಲ್ಲಿ 3 ತಿಂಗಳಲ್ಲಿ ಎಲ್ಲರಿಗೂ ಕೊರೊನಾ ಲಸಿಕೆ

ಯುಕೆಯಲ್ಲಿ 2021ರೊಳಗಾಗಿ ಆಕ್ಸ್‌ಫರ್ಡ್ ಲಸಿಕೆಗೆ ಅನುಮತಿ ಸಿಗಲಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಹಾಗೆಯೇ ಮೂರು ತಿಂಗಳಲ್ಲಿ ಎಲ್ಲರಿಗೂ ಕೊರೊನಾ ಲಸಿಕೆ ಹಾಕಬಹುದು ಎಂದು ಹೇಳಲಾಗಿದೆ.ಕೊವಿಡ್ 19 ಇಮ್ಯುನೈಸೇಷನ್ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಅದರಲ್ಲಿ ಮಕ್ಕಳನ್ನು ಸೇರಿಸಿಲ್ಲ. ಈ ಲಸಿಕೆಯನ್ನು ಆರು ತಿಂಗಳೊಳಗಾಗಿ ಲಸಿಕೆಯನ್ನು ಪಡೆಯಬೇಕು.

ಯುರೋಪಿಯನ್ ಮೆಡಿಸಿನ್ಸ್ ಏಜೆನ್ಸಿ ಆಸ್ಟ್ರಾಜೆನೆಕಾದ ದತ್ತಾಂಶವನ್ನು ಪರಿಶೀಲಿಸುತ್ತಿದೆ. ಇದು ಕೊರೊನಾ ಸೋಂಕಿನ ವಿರುದ್ಧ ಹೋರಾಡಬಲ್ಲದೇ ಎಂಬುದನ್ನು ಖಾತ್ರಿಪಡಿಸಿಕೊಳ್ಳುತ್ತಿದೆ.

COVID-19 Vaccine Roll-Out Within 3 Months In UK

ಯುರೋಪಿಯನ್ ಸುದ್ದಿ ವಿಮರ್ಶೆಯು ಬ್ರಿಟಿಷ್ ಲಸಿಕೆಯ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ. ಇದು ಕೊವಿಡ್ ವಿರುದ್ಧ ಯಶಸ್ವಿ ಲಸಿಕೆಯಾಗಬಹುದು ಎಂದು ಹೇಳಲಾಗಿದೆ.
ಆರೋಗ್ಯ ಸಿಬ್ಬಂದಿಗೆ ಮೊದಲು ಲಸಿಕೆ ನೀಡಲಾಗುತ್ತದೆ. ಡ್ರೈವ್ ಮೂಲಕ ಲಸಿಕಾ ಕೇಂದ್ರವನ್ನು ಸ್ಥಾಪಿಸಲಾಗುತ್ತದೆ.

9 ಕೋಟಿ ಸಂಭಾವ್ಯ ಕೊರೊನಾ ಲಸಿಕೆ ಖರೀದಿಗೆ ಬ್ರಿಟನ್ ಸಜ್ಜಾಗಿದೆ. ಬ್ರಿಟನ್‌ನಲ್ಲಿ ಕೊರೊನಾ ಸೋಂಕು ವಿಪರೀತವಾಗಿದ್ದು, 90 ಮಿಲಿಯನ್(9 ಕೋಟಿ) ಸಂಭಾವ್ಯ ಕೊರೊನಾ ಲಸಿಕೆ ಪಡೆಯಲು ಅನೇಕ ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಂಡಿದೆ.

9 ಕೋಟಿ ಸಂಭಾವ್ಯ ಕೊರೊನಾ ಲಸಿಕೆ ಖರೀದಿಗೆ ಸಜ್ಜಾದ ಬ್ರಿಟನ್ ಪಿಫೈಜರ್ ಇಂಕ್, ಬಯೋಎನ್ ಟೆಕ್, ಫ್ರೆಂಚ್ ಕ್ರೂಪ್ ಆಫ್ ವಾಲ್‌ನೆವಾ ಜೊತೆ ಒಪ್ಪಂದ ನಡೆದಿದೆ.

ಬ್ರಿಟನ್ ಬಯೋ ಎನ್ ಟೆಕ್ ,ಪಿಫೈಜರ್ ನಿಂದ 30(3 ಕೋಟಿ) ಮಿಲಿಯನ್ ಲಸಿಕೆಯನ್ನು ಪಡೆಯಲಿದೆ. ಬಯೋ ಎನ್‌ಟೆಕ್ ಯುಎಸ್ ಫಾರ್ಮಾಸುಟಿಕಲ್ ಪಿಫೈಜರ್ ಜೊತೆ ಸೇರಿ ಲಸಿಕೆ ಸಿದ್ಧಪಡಿಸುತ್ತಿದೆ. 150ಕ್ಕಿಂತಲೂ ಹೆಚ್ಚು ಕೊರೊನಾ ಲಸಿಕೆಗಳು ಸಿದ್ಧಗೊಳ್ಳುತ್ತಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+