ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಸೋಂಕಿತರು 'ಕ್ಷಯರೋಗ'ಕ್ಕೆ ಒಳಗಾಗುವ ಸಾಧ್ಯತೆ

|
Google Oneindia Kannada News

ಮಾಸ್ಕೋ,ಫೆಬ್ರವರಿ 10: ಕೊರೊನಾ ಸೋಂಕಿತರು ಕ್ಷಯ ರೋಗಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚಿದೆ ಎಂದು ರಷ್ಯಾ ಆರೋಗ್ಯ ಸಚಿವಾಲಯ ಎಚ್ಚರಿಕೆ ಸಂದೇಶ ರವಾನಿಸಿದೆ.

ಕ್ಯಾನ್ಸರ್ ರೋಗಿಗಳು ಕೋವಿಡ್ 19 ನ ತೀವ್ರ ಸ್ವರೂಪಗಳನ್ನು ಅಭಿವೃದ್ಧಿಪಡಿಸುವ ಹೆಚ್ಚಿನ ಅಪಾಯವನ್ನು ಹೊಂದಿದ್ದು, ಸಾಧ್ಯವಿರುವ ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ಕ್ಯಾನ್ಸರ್ ರೋಗಿಗಳಿಗೆ ವಿಶೇಷ ಕೊರೊನಾ ವೈರಸ್ ಚಿಕಿತ್ಸೆ ಇಲ್ಲ ಎಂದು ಸಚಿವಾಲಯ ತಿಳಿಸಿದೆ.

ಜನರಿಗೆ ಲಸಿಕೆ ಪಡೆಯುವಂತೆ ಮಾಡಲು ರಷ್ಯಾದಲ್ಲೊಂದು ಹೊಸ ತಂತ್ರಜನರಿಗೆ ಲಸಿಕೆ ಪಡೆಯುವಂತೆ ಮಾಡಲು ರಷ್ಯಾದಲ್ಲೊಂದು ಹೊಸ ತಂತ್ರ

ಕೊರೊನಾ ಸೋಂಕಿನಿಂದ ಬಳಲಿದ ನಂತರ ಅನೇಕ ರೋಗಿಗಳು ಶ್ವಾಸಕೋಶದಲ್ಲಿ ಫೈಬ್ರೋಸಿಸ್ ರೂಪದಲ್ಲಿ ಉಳಿದಿರುವ ಬದಲಾವಣೆಗಳು ಅಭಿವೃದ್ಧಿಯಾಗುತ್ತದೆ. ಈ ವರ್ಗದ ರೋಗಿಗಳಲ್ಲಿ ಮುಂದೆ ಕ್ಷಯರೋಗ ಕಾಡುವ ಅಪಾಯವಿದೆ.

COVID-19 Patients At Higher Risk Of tuberculosis, Russian Health Ministry Warns

ಕೊರೊನಾ ಸೋಂಕಿರುವಾಗ ಹಾಗೂ ಕೊರೊನಾ ನಿವಾರಣೆಯ ನಂತರವೂ ಕ್ಷಯ ರೋಗ ಸಂಭವಿಸಬಹುದಾಗಿದೆ ಎಂದು ಎಚ್ಚರಿಸಿದೆ.

ಶಂಕಿತ ಕೊರೊನಾ ವೈರಸ್ ರೋಗಿಗಳು ಕ್ಷಯ ರೋಗ ತಪಾಸಣೆಗೆ ಒಳಪಡುವಂತೆ ಸಚಿವಾಲಯವು ಶಿಫಾರಸು ಮಾಡಿದೆ. ಈ ರೋಗವು ಸುಪ್ತ ರೂಪದಲ್ಲಿಯೂ ಸಹ ಕೋವಿಡ್ ನ ತೀವ್ರ ಸ್ವರೂಪಗಳಿಗೆ ಕಾರಣವಾಗುತ್ತದೆ ಎಂದು ಹೇಳಿದೆ.

ಮಧುಮೇಹ,ಬಿಪಿಸೇರಿದಂತೆ ಇತರೆ ರೋಗಗಳಿರುವವರಿಗೆ ಕೊರೊನಾ ಸೋಂಕು ತಗುಲಿದರೆ ಅಪಾಯ ಹೆಚ್ಚು ಎಂದು ತಜ್ಞರು ಹೇಳಿದ್ದರು.ಆದರೆ ಸೋಂಕಿನಿಂದ ಮತ್ತೊಂದು ದೊಡ್ಡ ರೋಗದ ಅಪಾಯದ ಸುಳಿವನ್ನು ಈಗ ಬಿಚ್ಚಿಟ್ಟಿದ್ದಾರೆ.

English summary
Patients who have been infected with the coronavirus have a higher risk of contracting tuberculosis, according to new recommendations released by the Russian Health Ministry.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X