ಜುಲೈ 2: ರಷ್ಯಾ ಜತೆಗೂಡಿದ ಭಾರತ; ಕೊವಿಡ್ 19 ಟಾಪ್ 10 ಪಟ್ಟಿ
ಬೆಂಗಳೂರು, ಜುಲೈ 2: ಜಾಗತಿಕ ಮಹಾಮಾರಿ ಕೊವಿಡ್19 ಸೋಂಕಿನಿಂದ ಅಪಾರ ಪ್ರಮಾಣದಲ್ಲಿ ಸಾವು ನೋವು ಉಂಟಾಗಿದೆ. ಭಾರತದಲ್ಲಿ ದಿನದಿಂದ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಜುಲೈ 2ರಂದು ರಷ್ಯಾದ ಜೊತೆಗೂಡಿದ್ದು, 6 ಲಕ್ಷಕ್ಕೂ ಅಧಿಕ ಸಂಖ್ಯೆ ಸೋಂಕಿತರನ್ನು ಹೊಂದಿದೆ. ಆದರೆ, ರಷ್ಯಾದಲ್ಲಿ ಮರಣ ಪ್ರಮಾಣ ತೀರಾ ಕಡಿಮೆ.
ಸೋಂಕು ನಿಯಂತ್ರಣ, ಸೋಂಕು ನಿವಾರಣೆಗಾಗಿ ಲಸಿಕೆ ತಯಾರಿ ಜೋರಾಗಿ ನಡೆದಿದೆ. ಈಗಾಗಲೇ ಎರಡು ಮೂರು ಔಷಧಗಳು ಮಾರುಕಟ್ಟೆಯಲ್ಲಿ ಲಭ್ಯವಾಗುತ್ತಿವೆ. ಆದರೆ, ವಿಶ್ವದೆಲ್ಲೆಡೆ ವ್ಯಾಪ್ತಿಸಿರುವ ಸೋಂಕು ದಿನದಿಂದ ದಿನಕ್ಕೆ ಬಲಿ ಪಡೆಯುತ್ತಲೇ ಇದೆ.
ಜುಲೈ 2ರಂದು ಈ ಸಮಯಕ್ಕೆ ವಿಶ್ವದೆಲ್ಲೆಡೆ 10,811,206 ಕೊವಿಡ್ 19 ಪ್ರಕರಣಗಳಿವೆ ಹಾಗೂ ಸಾವಿನ ಸಂಖ್ಯೆ 519,095ಕ್ಕೇರಿದೆ. ಒಟ್ಟಾರೆ, 6,033,527 ಮಂದಿ ಗುಣಮುಖರಾಗಿದ್ದಾರೆ. ಒಟ್ಟು 4,258,584 ಸಕ್ರಿಯ ಪಾಸಿಟಿವ್ ಪ್ರಕರಣಗಳಿವೆ, 57,904 ವಿಷಮ ಪರಿಸ್ಥಿತಿಯಲ್ಲಿರುವ ಸೋಂಕಿತರಿದ್ದಾರೆ.

ಕೊರೊನಾವೈರಸ್ ಬಾಧಿತ ಟಾಪ್ 10 ದೇಶಗಳು:
ಯುಎಸ್ಎ: 2,681,811 ಪ್ರಕರಣಗಳು
ಬ್ರೆಜಿಲ್: 1,370,488
ರಷ್ಯಾ: 641,156
ಭಾರತ: 567,536
ಯುಕೆ: 311,965
ಸ್ಪೇನ್: 296,050
ಪೆರು: 282,365
ಚಿಲಿ: 275,999
ಇಟಲಿ: 240,436
ಇರಾನ್: 225,205
ಮೆಕ್ಸಿಕೋದಲ್ಲಿ ಒಂದೇ ದಿನ 5681 ಪ್ರಕರಣ ಕಾಣಿಸಿಕೊಂಡು ಟಾಪ್ 10 ಪಟ್ಟಿಯೊಳಗೆ ಸೇರಿದೆ. ಟಾಪ್ 11ಕ್ಕೆ ಇರಾನ್ ಕುಸಿದಿದ್ದು, ನಂತರ ಸ್ಥಾನದಲ್ಲಿ ಪಾಕಿಸ್ತಾನ, ಟರ್ಕಿ 2 ಲಕ್ಷಕ್ಕೂ ಸೋಂಕಿತರನ್ನು ಹೊಂದಿವೆ.
1 ಲಕ್ಷಕ್ಕೂ ಅಧಿಕ ಸೋಂಕಿತರಿರುವ ಪಟ್ಟಿಯಲ್ಲಿ ಜರ್ಮನಿ, ಸೌದಿ ಅರೇಬಿಯಾ, ಫ್ರಾನ್ಸ್, ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ, ಕೆನಡಾ, ಕೊಲಂಬಿಯಾ ದೇಶಗಳಿವೆ.
***
ಕೊರೊನಾವೈರಸ್ ನಿಂದ ಅತಿ ಹೆಚ್ಚು ಮೃತಪಟ್ಟವರನ್ನು ಹೊಂದಿರುವ ಟಾಪ್ 10 ದೇಶಗಳು:
ಯುಎಸ್ಎ: ಮೃತರ ಸಂಖ್ಯೆ 130,798
ಬ್ರೆಜಿಲ್: 60,713
ಯುಕೆ: 43,906
ಇಟಲಿ: 34,788
ಫ್ರಾನ್ಸ್: 29,861
ಮೆಕ್ಸಿಕೋ: 28,510
ಸ್ಪೇನ್: 28,363
ಭಾರತ: 17,848
ಇರಾನ್: 10,958
ಪೆರು: 9,860
ಮೃತರ ಸಂಖ್ಯೆಯಲ್ಲಿ ಟಾಪ್ 10 ರಾಷ್ಟ್ರಗಳಲ್ಲದೆ 5 ಸಾವಿರಕ್ಕೂ ಅಧಿಕ ಸಾವು ಕಂಡಿರುವ ದೇಶಗಳ ಪೈಕಿ ಬೆಲ್ಜಿಯಂ: 9,754, ರಷ್ಯಾ (9536), ಜರ್ಮನಿ (9061), ಕೆನಡಾ(8,615), ನೆದರ್ಲೆಂಡ್ಸ್(6,113), ಚಿಲಿ (5753), ಸ್ವೀಡನ್ (5,370) ಕಾಣಿಸಿಕೊಂಡಿವೆ.












Click it and Unblock the Notifications