ಜೂನ್ 30: ಕೊವಿಡ್ 19ಗೆ ಬಲಿ, ಟಾಪ್ 10 ದೇಶಗಳು
ಬೆಂಗಳೂರು, ಜೂನ್ 30: ಜಾಗತಿಕ ಮಹಾಮಾರಿ ಕೊವಿಡ್19 ಸೋಂಕಿನಿಂದ ಅಪಾರ ಪ್ರಮಾಣದಲ್ಲಿ ಸಾವು ನೋವು ಉಂಟಾಗಿದೆ. ಸೋಂಕು ನಿಯಂತ್ರಣ, ಸೋಂಕು ನಿವಾರಣೆಗಾಗಿ ಲಸಿಕೆ ತಯಾರಿ ಜೋರಾಗಿ ನಡೆದಿದೆ. ಈಗಾಗಲೇ ಎರಡು ಮೂರು ಔಷಧಗಳು ಮಾರುಕಟ್ಟೆಯಲ್ಲಿ ಲಭ್ಯವಾಗುತ್ತಿವೆ. ಆದರೆ, ವಿಶ್ವದೆಲ್ಲೆಡೆ ವ್ಯಾಪ್ತಿಸಿರುವ ಸೋಂಕು ದಿನದಿಂದ ದಿನಕ್ಕೆ ಬಲಿ ಪಡೆಯುತ್ತಲೇ ಇದೆ.
ಜೂನ್ 30ರಂದು ಈ ಸಮಯಕ್ಕೆ ವಿಶ್ವದೆಲ್ಲೆಡೆ 10,409,518 ಕೊವಿಡ್ 19 ಪ್ರಕರಣಗಳಿವೆ ಹಾಗೂ ಸಾವಿನ ಸಂಖ್ಯೆ 508,091ಕ್ಕೇರಿದೆ. ಒಟ್ಟಾರೆ, 5,664,569 ಮಂದಿ ಗುಣಮುಖರಾಗಿದ್ದಾರೆ. ಒಟ್ಟು 4,236,858 ಸಕ್ರಿಯ ಪಾಸಿಟಿವ್ ಪ್ರಕರಣಗಳಿವೆ, 57,530 ವಿಷಮ ಪರಿಸ್ಥಿತಿಯಲ್ಲಿರುವ ಸೋಂಕಿತರಿದ್ದಾರೆ.
ಮೆಕ್ಸಿಕೋ, ಪಾಕಿಸ್ತಾನ 2 ಲಕ್ಷಕ್ಕೂ ಸೋಂಕಿತರನ್ನು ಹೊಂದಿದ್ದರೆ,
1 ಲಕ್ಷಕ್ಕೂ ಅಧಿಕ ಸೋಂಕಿತರಿರುವ ಪಟ್ಟಿಯಲ್ಲಿ ಟರ್ಕಿ, ಜರ್ಮನಿ, ಸೌದಿ ಅರೇಬಿಯಾ, ಫ್ರಾನ್ಸ್,ದಕ್ಷಿಣ ಆಫ್ರಿಕಾ ಬಾಂಗ್ಲಾದೇಶ, ಕೆನಡಾ ದೇಶಗಳಿವೆ. ಮೃತರ ಸಂಖ್ಯೆಯಲ್ಲಿ ಟಾಪ್ 10 ರಾಷ್ಟ್ರಗಳಲ್ಲದೆ 5 ಸಾವಿರಕ್ಕೂ ಅಧಿಕ ಸಾವು ಕಂಡಿರುವ ದೇಶಗಳ ಪೈಕಿ ಜರ್ಮನಿ(9041), ರಷ್ಯಾ (9166), ಪೆರು(9,504), ಕೆನಡಾ(8,566), ನೆದರ್ಲೆಂಡ್ಸ್(6,107), ಸ್ವೀಡನ್ (5,310) ಕಾಣಿಸಿಕೊಂಡಿವೆ.

ಕೊರೊನಾವೈರಸ್ ಬಾಧಿತ ಟಾಪ್ 10 ದೇಶಗಳು:
ಯುಎಸ್ಎ: 2,681,811 ಪ್ರಕರಣಗಳು
ಬ್ರೆಜಿಲ್: 1,370,488
ರಷ್ಯಾ: 641,156
ಭಾರತ: 567,536
ಯುಕೆ: 311,965
ಸ್ಪೇನ್: 296,050
ಪೆರು: 282,365
ಚಿಲಿ: 275,999
ಇಟಲಿ: 240,436
ಇರಾನ್: 225,205
***
ಕೊರೊನಾವೈರಸ್ ನಿಂದ ಅತಿ ಹೆಚ್ಚು ಮೃತಪಟ್ಟವರನ್ನು ಹೊಂದಿರುವ ಟಾಪ್ 10 ದೇಶಗಳು:
ಯುಎಸ್ಎ: ಮೃತರ ಸಂಖ್ಯೆ128,783
ಬ್ರೆಜಿಲ್: 58,385
ಯುಕೆ: 43,575
ಇಟಲಿ: 34,744
ಫ್ರಾನ್ಸ್: 29,813
ಸ್ಪೇನ್: 28,346
ಮೆಕ್ಸಿಕೋ: 27,121
ಭಾರತ: 16,904
ಇರಾನ್: 10,670
ಬೆಲ್ಜಿಯಂ: 9,732












Click it and Unblock the Notifications