Interstellar: ಬಾಹ್ಯಾಕಾಶ ಲೋಕದಲ್ಲಿ ತಲ್ಲಣ, ಭೂಮಿ ಮೇಲೆ ಹೆಜ್ಜೆ ಹಾಕಲು ಏಲಿಯನ್ ಶಿಪ್ ಎಂಟ್ರಿ?
ಅದು 1977 ಆಗಸ್ಟ್ 15, ಇಡೀ ಬಾಹ್ಯಾಕಾಶ ಲೋಕವೇ ಒಂದು ಕ್ಷಣ ರೋಮಾಂಚನದ ಕಡಲಲ್ಲಿ ಮಿಂದೆದ್ದ ಸಮಯ. ಏಕೆಂದರೆ ಬ್ರಹ್ಮಾಂಡದಲ್ಲಿ ಭೂಮಿ ಬಿಟ್ಟರೆ ಬೇರೆ ಎಲ್ಲೂ ಜೀವಿಗಳು ಇಲ್ಲ ಎಂದು ಕೊರಗುತ್ತಿದ್ದ ಮನುಷ್ಯರಿಗೆ ಬ್ರಹ್ಮಾಂಡದ ಮೂಲೆಯಿಂದ ದಿಢೀರ್ ವಿಚಿತ್ರ ಸಂದೇಶ ಒಂದು ಬಂದಿತ್ತು. ಖಗೋಳಶಾಸ್ತ್ರಜ್ಞ ಜೆರ್ರಿ ಎಹ್‌ಮನ್ ಅವರು, ಒಹಿಯೋ ಸ್ಟೇಟ್ ವಿಶ್ವವಿದ್ಯಾಲಯದ ಬಿಗ್ ಇಯರ್ ರೇಡಿಯೋ ದೂರದರ್ಶಕ ಪರಿಶೀಲನೆ ಮಾಡುವಾಗ ಅಚ್ಚರಿ ವಿಚಾರ ಒಂದು ಪತ್ತೆ ಆಗಿತ್ತು. ಅಂದಹಾಗೆ ಈ ರೇಡಿಯೋ ದೂರದರ್ಶಕದಲ್ಲಿ ಶಕ್ತಿಯುತ, ಸಣ್ಣ ಕಣದ ರೇಡಿಯೋ ಸ್ಫೋಟವನ್ನು ಪತ್ತೆಹಚ್ಚಿ ಇತಿಹಾಸ ನಿರ್ಮಿಸಿದ್ದರು.
ಬ್ರಹ್ಮಾಂಡದ ಯಾವುದೋ ಮೂಲೆಯಿಂದ ಬಂದಿದ್ದ ಈ ಸಿಗ್ನಲ್ ಲ್ಯಾಬ್‌ನಲ್ಲಿ ಪರಿಶೀಲನೆ ಮಾಡಿ ನೋಡುವಾಗ, ಡೇಟಾ ಪ್ರಿಂಟ್‌ಔಟ್‌ನಲ್ಲಿ ಎತ್ತಿನಂತೆ ತೋರಿಸಿದ್ದ ಸಿಗ್ನಲ್ ಅನ್ನು ಕೆಂಪು ಮಸಿಯಲ್ಲಿ ವೃತ್ತ ಮಾಡಿ 'ವಾವ್!' ಎಂದು ಬರೆದರು. ಜೆರ್ರಿ ಎಹ್‌ಮನ್ ಅವರ ಈ ಸಂಶೋಧನೆ ಬಾಹ್ಯಾಕಾಶ ಲೋಕದ ದಿಕ್ಕನ್ನೇ ಬದಲಿಸುವ ಮುನ್ಸೂಚನೆ ನೀಡಿತ್ತು.

50 ವರ್ಷಗಳ ನಂತರ ತಲ್ಲಣ!
ಹೀಗೆ ಸಿಕ್ಕಿದ್ದ ನಿಗೂಢವಾಗಿದ್ದ ಸಿಗ್ನಲ್ 72 ಸೆಕೆಂಡ್ ಮುಂದುವರಿದು, 1420.406 ಮೆಗಾಹರ್ಟ್ಜ್ (ಹೈಡ್ರೋಜನ್ ರೇಖಾ ಆವೃತ್ತಿ - ಈ ಬರಹದಲ್ಲಿ ಮುಂದೆ ಈ ಬಗ್ಗೆ ವಿವರಣೆ ನೀಡಲಾಗಿದೆ) ನಲ್ಲಿ ಕೇಂದ್ರಿತವಾಗಿತ್ತು. ಈ ಸಿಗ್ನಲ್ ಬಾಹ್ಯಾಕಾಶದಲ್ಲಿ ಬಹು ದೂರದಿಂದ ಬಂದಂತೆ ತೋರಿತ್ತು ಹಾಗೂ ಹಲವು ದಶಕಗಳ ಸತತ ಹುಡುಕಾಟದ ನಂತರ ಕೂಡ ಮರುಕಳಿಸಲಿಲ್ಲ. ಹಾಗಾದರೆ ಈ ಘಟನೆ ಈಗ ಮತ್ತೆ ಯಾಕೆ ಸುದ್ದಿಯಲ್ಲಿದೆ? ಸುಮಾರು 50 ವರ್ಷಗಳ ನಂತರ ಬಾಹ್ಯಾಕಾಶ ಲೋಕದಲ್ಲಿ ಮತ್ತೊಮ್ಮೆ ಸಂಚಲನ ಸೃಷ್ಟಿಯಾಗಿರುವುದು ಏಕೆ? ಬನ್ನಿ ತಿಳಿಯೋಣ.
ಹೌದು, ಮೊದಲೇ ಹೇಳಿದಂತೆ 'ವಾವ್!' ಸಿಗ್ನಲ್ ಮನುಷ್ಯರಿಗೆ ಸಿಕ್ಕು ಈಗಾಗಲೇ ಸುಮಾರು 50 ವರ್ಷಗಳೇ ಕಳೆದು ಹೋಗಿವೆ. ಹೀಗೆ ಅರ್ಧ ಶತಮಾನದ ನಂತರ ಒಂದು ಹೊಸ ಸಿದ್ಧಾಂತವು ಆ ಬ್ರಹ್ಮಾಂಡದ ವಿಸ್ಮಯಕಾರಿ ಸಂದೇಶದ ಬಗ್ಗೆ ಚರ್ಚೆ ಹುಟ್ಟು ಹಾಕುವಂತೆ ಮಾಡಿದೆ. ಬಾಹ್ಯಾಕಾಶ ವಿಜ್ಞಾನಿಗಳು ಹೊಸದಾಗಿ ಪತ್ತೆಯಾಗಿರುವ ಅಂತರ್ನಕ್ಷತ್ರೀಯ ವಸ್ತು 3I/ATLAS ಬಗ್ಗೆ ನಿದ್ದೆ ಬಿಟ್ಟು ಸಂಶೋಧನೆ ನಡೆಸುತ್ತಿದ್ದು, ಇದರ ಜೊತೆಗೆ ಜಗತ್ತಿನಾದ್ಯಂತ ಸುದ್ದಿಯಲ್ಲಿರುವ 'ವಾವ್!' ಸಿಗ್ನಲ್ ಜೊತೆಗೂ ನಂಟು ಬೆಸೆಯುತ್ತಿದ್ದಾರೆ.
36 hours for 3I/ATLAS reappearance from behind the Sun and fact is, no one knows what we will see emerging.
— Astronomy Vibes (@AstronomyVibes) October 27, 2025
Stay tuned 🛸 eyes to the skies.#3IATLAS pic.twitter.com/Uv6zYnIcTZ
'ವಾವ್!' ದಿಕ್ಕಿನಿಂದಲೇ ಬಂತಾ ನೌಕೆ?
ವಿಶ್ವವಿಖ್ಯಾತ ಹಾರ್ವರ್ಡ್ ವಿವಿ ಖಗೋಳಶಾಸ್ತ್ರಜ್ಞ ಎವಿ ಲೋಯೆಬ್ ಅವರು ಹೇಳುವಂತೆ, ಇದೀಗ ಬಾಹ್ಯಾಕಾಶದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಹಾರಾಡುತ್ತಿರುವ ವಿಚಿತ್ರವಾದ ವಸ್ತು 'ವಾವ್!' ಸಿಗ್ನಲ್ ಬಂದ ಪ್ರದೇಶದ ದಿಕ್ಕಿನಿಂದ ಬಂದಿರಬಹುದು ಅಲ್ಲವೇ? ಎಂಬ ಪ್ರಶ್ನೆಯನ್ನು ಮುಂದಿಟ್ಟು ಹೊಸ ಹುಳು ಬಿಟ್ಟಿದ್ದಾರೆ. 1977ರ ರೇಡಿಯೋ ಸಂಪ್ರೇಕ್ಷಣೆಯ & ಒಂದು ಭೌತಿಕ ಅಂತರ್ನಕ್ಷತ್ರೀಯ ಧೂಮಕೇತು ನಡುವಿನ ಮೊದಲ ಸ್ಪಷ್ಟ ಸಂಪರ್ಕವನ್ನ ನಾವು ನೋಡುತ್ತಿದ್ದೇವೆ ಎಂಬುದು ಸ್ಪಷ್ಟ ಎಂದು ಹೇಳುವ ಮೂಲಕ, ಹೊಸ ಸಿದ್ಧಾಂತ ಪ್ರಸ್ತಾಪಿಸಿದ್ದಾರೆ ಖಗೋಳಶಾಸ್ತ್ರಜ್ಞ ಎವಿ ಲೋಯೆಬ್ ಅವರು.
The Eight anomalies that indicate 3I/ATLAS's artificial naturehttps://t.co/i2Vm9piww0
— RAEFOS Network (@RAEFOSnetwork) October 27, 2025
ಹೈಡ್ರೋಜನ್ ರೇಖಾ ಆವೃತ್ತಿ ಎಂದರೇನು?
ಹೈಡ್ರೋಜನ್ ರೇಖೆ, 21 ಸೆಂಟೀಮೀಟರ್ ರೇಖೆ ಎಂದು ಕೂಡ ಕರೆಯಲ್ಪಡುವುದು. ಹೈಡ್ರೋಜನ್ ಅಣುಗಳಿಂದ ಸ್ವಾಭಾವಿಕವಾಗಿ ಹೊರಬರುವ 1420.406 ಮೆಗಾಹರ್ಟ್ಜ್ (MHz) ರೇಡಿಯೋ ಸಿಗ್ನಲ್ ಅನ್ನ ಇದು ಸೂಚಿಸುತ್ತದೆ. ಇದು ಸುಮಾರು 21 ಸೆಂಟೀಮೀಟರ್ ಅಲೆದೈರ್ಘ್ಯವಾಗಿದೆ ಮತ್ತು ಇದು ಬ್ರಹ್ಮಾಂಡದಲ್ಲಿನ ಅತ್ಯಂತ ಸಾಮಾನ್ಯ ಮೂಲಭೂತ ಅಂಶವಾಗಿದೆ. ವಿಜ್ಞಾನಿಗಳಿಗೆ ಇದು ಅವರ ಪ್ರಮುಖ ಸಂಶೋಧನೆಗಳಲ್ಲಿ ಬೆಂಬಲ ಒದಗಿಸುತ್ತದೆ ಮತ್ತು ಬಾಹ್ಯಾಕಾಶ ಲೋಕದಲ್ಲಿ ಏಲಿಯನ್ ಅಂದರೆ ಪರಗ್ರಹ ಜೀವಿಗಳನ್ನು ಹುಡುಕುವುದರಲ್ಲಿ ಈ ರೀತಿಯ ಸಿಗ್ನಲ್ ಸಾಕಷ್ಟು ಮಹತ್ವವನ್ನ ಪಡೆದಿವೆ.
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications