ಶ್.. ತಾಲಿಬಾನ್ ಪ್ರದೇಶವಿದು: ಇಲ್ಲಿ ಕೊರೊನಾವೈರಸ್ ಲಸಿಕೆಯನ್ನೂ ಹಾಕುವಂತಿಲ್ಲ!

ಕಾಬೂಲ್, ಆಗಸ್ಟ್ 13: ಜಗತ್ತಿನಾದ್ಯಂತ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ವಿರುದ್ಧ ಹೋರಾಡುವುದಕ್ಕೆ ಲಸಿಕೆ ವಿತರಿಸಲಾಗುತ್ತಿದೆ. ಆದರೆ ಅಫ್ಘಾನಿಸ್ತಾನದಲ್ಲಿ ಅದೇ ಕೊವಿಡ್-19 ಲಸಿಕೆ ವಿತರಣೆಯನ್ನು ನಿರ್ಬಂಧಿಸಲಾಗಿದೆ.

"ಅಫ್ಘಾನಿಸ್ತಾನದ ಪಕ್ತಿಯಾ ನಗರದ ಮೇಲೆ ಹಿಡಿದ ಸಾಧಿಸಿರುವ ತಾಲಿಬಾನ್ ಉಗ್ರ ಸಂಘಟನೆಯು ಈ ಪ್ರದೇಶದ ವ್ಯಾಪ್ತಿಯಲ್ಲಿ ಕೊವಿಡ್-19 ಲಸಿಕೆ ವಿತರಣೆಯನ್ನು ನಿಷೇಧಿಸಿದೆ," ಎಂದು ಅಫ್ಘಾನಿಸ್ತಾನ ಮೂಲದ ರೆಡಿಯೋ ಮತ್ತು ಟೆಲಿವಿಷನ್ ಮಾಧ್ಯಮ ಶಂಶಾದ್ ವರದಿ ಮಾಡಿದೆ. ಪಕ್ತಿಯಾ ಪ್ರದೇಶದಲ್ಲಿ ಕೊರೊನಾವೈರಸ್ ಲಸಿಕೆ ಬಳಕೆಯನ್ನು ನಿಷೇಧಿಸಲಾಗಿದೆ. ನಿಶಾನ್ ಸಾಹಿಬ್ ಅನ್ನು ಪ್ರಾಂತ್ಯದ ಗುರುದ್ವಾರದಿಂದ ನಿಯಂತ್ರಣಕ್ಕೆ ತೆಗೆದುಕೊಂಡ ಸಂದರ್ಭದಲ್ಲಿ ಈ ನಿಯಮವನ್ನು ಜಾರಿಗೊಳಿಸಲಾಗಿದೆ.

ಅಫ್ಘಾನಿಸ್ತಾನದಲ್ಲಿ ಕಳೆದ 24 ಗಂಟೆಗಳಲ್ಲಿ 175 ಮಂದಿಗೆ ಕೊವಿಡ್-19 ಸೋಂಕು ತಗುಲಿರುವುದು ಖಾತ್ರಿಯಾಗಿದೆ. ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 1,51,945ಕ್ಕೆ ಏರಿಕೆಯಾಗಿದ್ದು, ಮಹಾಮಾರಿಗೆ ಈವರೆಗೂ 7,014 ಮಂದಿ ಪ್ರಾಣ ಬಿಟ್ಟಿದ್ದಾರೆ. 39,195 ಸಕ್ರಿಯ ಪ್ರಕರಣಗಳಿವೆ. ಇದರ ಮಧ್ಯೆ ತಾಲಿಬಾನ್ ಆಕ್ರಮಣಕಾರಿ ನಿಲುವು ಪ್ರದರ್ಶಿಸುತ್ತಿದ್ದು, ಸರ್ಕಾರ ಮತ್ತು ಉಗ್ರರ ನಡುವಿನ ಸಮರ ಅತಿರೇಕಕ್ಕೆ ತಲುಪಿದೆ.

ತಾಲಿಬಾನ್ ಉಗ್ರರಿಂದ ಸೇನಾಧಿಕಾರಿ ಮನೆಯಲ್ಲಿ ಪಾರ್ಟಿ

ತಾಲಿಬಾನ್ ಉಗ್ರರು ಕಳೆದ ವಾರವಷ್ಟೇ ಅಫ್ಘಾನಿಸ್ತಾನ ಉತ್ತರದ ಪ್ರಾಂತೀಯ ರಾಜಧಾನಿಯನ್ನು ವಶಪಡಿಸಿಕೊಂಡರು. ತದನಂತರ ಜೌಜಾನ್‌ನ ಶೆಬರ್‌ಘನ್‌ನಲ್ಲಿ ಇರುವ ಅಫ್ಘಾನ್ ಸೇನಾಧಿಕಾರಿ ಮಾರ್ಷಲ್ ಅಬ್ದುಲ್ ರಶೀದ್ ದೋಸ್ತಮ್ ನಿವಾಸದಲ್ಲಿ ತಮ್ಮ ಗೆಲುವಿನ ಸಂಭ್ರಮವನ್ನು ಆಚರಿಸಿದರು. ದೋಸ್ತಮ್ ರಿಗೆ ಸೇರಿದ ಸಭಾಂಗಣದಲ್ಲಿ ತಾಲಿಬಾನ್ ಉಗ್ರರು ಕುಣಿದು ಕುಪ್ಪಳಿಸಿ ಪಾರ್ಟಿ ಮಾಡಿರುವ ವಿಡಿಯೋ ಫೇಸ್ ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಅಫ್ಘಾನ್ ಅಧ್ಯಕ್ಷ ಅಶ್ರಫ್ ಘನಿ ಗದ್ದುಗೆ ತ್ಯಾಗ?

ಅಫ್ಘಾನ್ ಅಧ್ಯಕ್ಷ ಅಶ್ರಫ್ ಘನಿ ಗದ್ದುಗೆ ತ್ಯಾಗ?

ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರ ಸಂಘಟನೆಯ ತನ್ನ ಆಕ್ರಮಣಕಾರಿ ನೀತಿಯನ್ನು ಮುಂದುವರಿಸುತ್ತಿದೆ. ರಾಜಧಾನಿ ಕಾಬೂಲ್ ನಿಂದ ಕೇವಲ 80 ಕಿಲೋ ಮೀಟರ್ ಅಂತರದವರೆಗೂ ತಾಲಿಬಾನ್ ತನ್ನ ಹಿಡಿತವನ್ನು ಸಾಧಿಸಿಕೊಂಡಿದೆ. ಈ ಹಂತದಲ್ಲಿ ಶಾಂತಿ ಮಾತುಕತೆ ಸಮಿತಿಯು ಅಧ್ಯಕ್ಷ ಅಶ್ರಫ್ ಘನಿ ಸರ್ಕಾರವನ್ನು ಸಂಪೂರ್ಣವಾಗಿ ಪತನಗೊಳಿಸುವ ನಿಟ್ಟಿನಲ್ಲಿ ಹೊಸ ಯೋಜನೆ ರೂಪಿಸುತ್ತಿದೆ. ಅಫ್ಘಾನಿಸ್ತಾನದಲ್ಲಿ ತಕ್ಷಣದ ಕದನ ವಿರಾಮಕ್ಕಾಗಿ ಹೊಸ ಸೂತ್ರ ರೂಪಿಸಲಾಗುತ್ತಿದೆ ಎಂದು CNN-News18 ವರದಿ ಮಾಡಿದೆ. ಈ ಶಾಂತಿ ಸೂತ್ರದ ಪ್ರಕಾರ, ಅಶ್ರಫ್ ಘನಿ ಆಡಳಿತದಿಂದ ಕೆಳಗಿಳಿಯಬೇಕಾಗುತ್ತದೆ.

ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಜೊತೆಗೆ ಸರ್ಕಾರ!

ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಜೊತೆಗೆ ಸರ್ಕಾರ!

ಅಫ್ಘಾನಿಸ್ತಾನದಲ್ಲಿ ಪ್ರಸ್ತು ಸೇನಾಧಿಕಾರಿಗಳು, ಪ್ರತಿನಿಧಿಗಳ ಜೊತೆಗೂಡಿ ತಾಲಿಬಾನ್ ಮಧ್ಯಂತರ ಸರ್ಕಾರವನ್ನು ರಚಿಸುವುದಕ್ಕೆ ಯೋಜನೆ ರೂಪಿಸುತ್ತಿದೆ. ಈ ನಿಟ್ಟಿನಲ್ಲಿ ಹೊಸ ಸೂತ್ರವನ್ನು ಸೂಕ್ತ ಚರ್ಚೆ ನಂತರ ಎಲ್ಲ ಪಕ್ಷಗಳೊಂದಿಗೆ ಹಂಚಿಕೊಳ್ಳಲಾಗುವುದು. ಈ ಪ್ರಸ್ತಾವನೆ ಇನ್ನೂ ಆರಂಭಿಕ ಹಂತದಲ್ಲಿರುವ ಹಿನ್ನೆಲೆ ಯೋಜನೆಯನ್ನು ತಾಲಿಬಾನ್ ಅಥವಾ ಅಫ್ಘಾನ್ ಸರ್ಕಾರ ಯಾವುದೇ ಪಾಲುದಾರರೊಂದಿಗೆ ಹಂಚಿಕೊಂಡಿಲ್ಲ ಎಂದು ತಿಳಿದು ಬಂದಿದೆ.

ತಾಲಿಬಾನ್ ಉಗ್ರರ ಹಿಡಿತಕ್ಕೆ ಸಿಲುಕಿದ ಅಫ್ಘಾನಿಸ್ತಾನ

ತಾಲಿಬಾನ್ ಉಗ್ರರ ಹಿಡಿತಕ್ಕೆ ಸಿಲುಕಿದ ಅಫ್ಘಾನಿಸ್ತಾನ

ತಾಲಿಬಾನ್ ಉಗ್ರ ಸಂಘಟನೆಯು ಅಫ್ಘಾನಿಸ್ತಾನದ ಹಲವು ನಗರಗಳ ಮೇಲೆ ಹಿಡಿತ ಸಾಧಿಸಿಕೊಳ್ಳುತ್ತಿದೆ. ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ ಸೇನೆಯು ಸ್ವದೇಶಕ್ಕೆ ಹಿಂತಿರುಗಿದ ಬೆನ್ನಲ್ಲೇ ಅಫ್ಘಾನ್ ನಲ್ಲಿ ತಾಲಿಬಾನ್ ಉಗ್ರರ ಅಟ್ಟಹಾಸ ಮಿತಿ ಮೀರುತ್ತಿದೆ. ಗುರುವಾರವಷ್ಟೇ ದೇಶದ ಅತಿದೊಡ್ಡ ನಗರ ಎನಿಸಿಕೊಂಡಿರುವ ಕಂದಾಹಾರ್ ಅನ್ನು ತಾಲಿಬಾನ್ ನಿಯಂತ್ರಣಕ್ಕೆ ತೆಗೆದುಕೊಂಡಿದೆ. ಕಂದಹಾರ್ ನಲ್ಲಿರುವ ರಾಜ್ಯಪಾಲದ ಕಚೇರಿ ಮತ್ತು ಇತರೆ ಆಡಳಿತ ಕಚೇರಿಗಳನ್ನು ಸ್ವಾಧೀನಪಡಿಸಿಕೊಳ್ಳುವ ಮೂಲಕ ನಗರದ ಮೇಲೆ ಹಿಡಿತ ಸಾಧಿಸಿದೆ. ಈವರೆಗೂ ರಾಷ್ಟ್ರದಲ್ಲಿ 12 ಪ್ರಮುಖ ನಗರಗಳ ಮೇಲೆ ತಾಲಿಬಾನ್ ಉಗ್ರ ಸಂಘಟನೆಯು ನಿಯಂತ್ರಣವನ್ನು ಕಾಯ್ದುಕೊಂಡಿದೆ. ಅಫ್ಘಾನಿಸ್ತಾನದ ಸರ್ಕಾರವು ದೇಶದ ಪ್ರಮುಖ ನಗರಗಳಲ್ಲೇ ತನ್ನ ಹಿಡಿತವನ್ನು ಕಳೆದುಕೊಂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+