ಕೊರೊನಾ ಹೊಡೆತಕ್ಕೆ ಇಟಲಿ ಜರ್ಜರಿತ: ಒಂದೇ ದಿನ 475 ಸಾವು!
ರೋಮ್, ಮಾರ್ಚ್ 19: ಡೆಡ್ಲಿ ಕೊರೊನಾ ವೈರಸ್ ನಿಂದಾಗಿ ಇಟಲಿಯಲ್ಲಿ ದಿನೇ ದಿನೇ ಸಾವಿನ ಸಂಖ್ಯೆ ಹೆಚ್ಚಾಗುತ್ತಿದ್ದು, ನಿನ್ನೆ ಒಂದೇ ದಿನ ಅತಿ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಮಾರಣಾಂತಿಕ ಕೊರೊನಾ ವೈರಸ್ ನಿಂದಾಗಿ ಇಟಲಿಯಲ್ಲಿ ಬುಧವಾರ 475 ಮಂದಿ ಮೃತಪಟ್ಟಿದ್ದಾರೆ.
Recommended Video
ಕೊರೊನಾ ವೈರಸ್ ಚೀನಾದಲ್ಲಿ ಮೊದಲು ಕಾಣಿಸಿಕೊಂಡಾಗಿನಿಂದ ಹಿಡಿದು ಇಲ್ಲಿಯವರೆಗೂ ಯಾವ ದೇಶದಲ್ಲೂ ಇಷ್ಟೊಂದು ಮಂದಿ ಒಂದೇ ದಿನ ಪ್ರಾಣ ಬಿಟ್ಟಿರಲಿಲ್ಲ.
ಇಟಲಿಯಲ್ಲೇ ಈ ಹಿಂದೆ ಒಂದೇ ದಿನ 368 ಮಂದಿಯನ್ನ ಕೊರೊನಾ ವೈರಸ್ ಬಲಿ ಪಡೆದಿತ್ತು. ಇದೀಗ ಒಂದೇ ದಿನದಲ್ಲಿ 475 ಜನರ ಸಾವು ಸಂಭವಿಸುವ ಮೂಲಕ ಒಂದು ದುರಂತ ದಾಖಲೆಯ ಹಣೆಪಟ್ಟಿ ಇಟಲಿಗೆ ಲಭಿಸಿದೆ.

ಇಟಲಿಯಲ್ಲಿ ಇಲ್ಲಿಯವರೆಗೂ 35,713 ಕೊರೊನಾ ಸೋಂಕಿತ ಪ್ರಕರಣಗಳು ದಾಖಲಾಗಿವೆ. ಅದರಲ್ಲಿ ಒಟ್ಟು 2978 ಮಂದಿ ಕೊರೊನಾ ವೈರಸ್ ಗೆ ಬಲಿಯಾಗಿದ್ದಾರೆ. 4,025 ಮಂದಿ ಕೊರೊನಾ ವಿರುದ್ಧ ಹೋರಾಡಿ ಸಾವನ್ನೇ ಗೆದ್ದು ಬಂದಿದ್ದಾರೆ.
ಕೊರೊನಾ ವೈರಸ್ ಹೊಡೆತದಿಂದಾಗಿ ಇಟಲಿಯಲ್ಲಿ ಇನ್ನೂ 2,257 ಮಂದಿಯ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ.
60 ಮಿಲಿಯನ್ ಜನ ಸಂಖ್ಯೆ ಹೊಂದಿರುವ ಇಟಲಿಯಲ್ಲಿ ಕೋವಿಡ್-19 ನಿಂದಾಗಿ ದಿನೇ ದಿನೇ ಸಾವಿಗೀಡಾಗುತ್ತಿರುವವರ ಸಂಖ್ಯೆ ಹೆಚ್ಚಳವಾಗುತ್ತಿದೆ. ಕೊರೊನಾ ವೈರಸ್ ಸೋಂಕಿನಿಂದ ಜರ್ಜರಿತಗೊಂಡಿರುವ ಇಟಲಿ ಸಂಪೂರ್ಣವಾಗಿ ಸ್ತಬ್ಧಗೊಂಡಿದೆ.












Click it and Unblock the Notifications