ಚೀನಾದಲ್ಲೊಂದು ವಿಚಿತ್ರ ಕೊರೊನಾ ಕೇಸ್: ವಾಸಿ ಆಗಿದ್ದು ಹೇಗೆ ಗೊತ್ತಾ.?

ಕೋವಿಡ್-19 ರೋಗದ ಲಕ್ಷಣಗಳು ಎಷ್ಟು ದಿನ ಕಾಣಿಸಿಕೊಳ್ಳಬಹುದು.? 97% ಸೋಂಕಿತರಲ್ಲಿ 11-12 ದಿನಗಳ ಒಳಗೆ ರೋಗದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಹೀಗಾಗಿ 14 ದಿನಗಳ ಕಾಲ ಪ್ರತ್ಯೇಕವಾಗಿರಲು ಸೂಚಿಸಲಾಗುತ್ತಿದೆ. ಹೀಗಿರುವಾಗಲೇ, ಚೀನಾದಲ್ಲೊಂದು ವಿಚಿತ್ರ ಪ್ರಕರಣ ಪತ್ತೆಯಾಗಿದೆ.

ಮಧ್ಯ ವಯಸ್ಕ ಕೋವಿಡ್-19 ರೋಗಿ 49 ದಿನಗಳ ಕಾಲ ಅನಾರೋಗ್ಯದಿಂದ ಬಳಲಿ ಚೀನಾದ ವೈದ್ಯಕೀಯ ತಜ್ಞರ ನಿದ್ದೆಗೆಡಿಸಿದ್ದಾನೆ. ಕೋವಿಡ್-19 ನಿಂದಾಗಿ ದೀರ್ಘಕಾಲದ ಅನಾರೋಗ್ಯಕ್ಕೆ ತುತ್ತಾಗಿರುವ ಮೊದಲ ಕೇಸ್ ಇದಾಗಿದ್ದು, ಮತ್ತಷ್ಟು ಆತಂಕ ಹೆಚ್ಚಾಗುವಂತೆ ಮಾಡಿದೆ.

49 ದಿನಗಳ ಕಾಲ ಅನಾರೋಗ್ಯಕ್ಕೀಡಾಗಲು, ಕೊರೊನಾ ವೈರಸ್ ನ ರೂಪಾಂತರಿತ ಆವೃತ್ತಿ (Mutated version) ಕಾರಣವಾಯಿತೋ ಅಥವಾ ಅದರ ಉಪ-ವಿಧ (ಸಬ್-ಟೈಪ್) ಸೋಂಕಿಗೆ ಮೂಲವಾಯಿತೋ ಎಂಬುದರ ಬಗೆಗಿನ ಅಧ್ಯಯನಕ್ಕೆ ಚಾಲನೆ ನೀಡಲಾಗಿದೆ.

ವಿಚಿತ್ರ ಪ್ರಕರಣ

ವಿಚಿತ್ರ ಪ್ರಕರಣ

ತೀವ್ರವಾದ ಕಾಯಿಲೆ ಹೊಂದಿರುವವರು ಮಾತ್ರ ದೀರ್ಘಕಾಲದವರೆಗೆ ಸೋಂಕಿತರಾಗಿರುತ್ತಾರೆ ಎನ್ನಲಾಗಿತ್ತು. ಆದ್ರೆ, ಇದಕ್ಕೆ ತದ್ವಿರುದ್ಧವಾಗಿದೆ ಚೀನಾದಲ್ಲಿ ದಾಖಲಾಗಿರುವ ಹೊಸ ಪ್ರಕರಣ. ಮಧ್ಯ ವಯಸ್ಸಿನ ಪುರುಷನಿಗೆ ತೀವ್ರವಾದ ಕಾಯಿಲೆ ಏನೂ ಇರಲಿಲ್ಲ. ಆತನಿಗೆ mild symptoms ಇದ್ದರೂ, ಅದು 49 ದಿನಗಳವರೆಗೆ ಕಂಡುಬಂದಿತ್ತು.

ಹೆಚ್ಚಿನ ಅಧ್ಯಯನ ಅವಶ್ಯಕ

ಹೆಚ್ಚಿನ ಅಧ್ಯಯನ ಅವಶ್ಯಕ

ಜ್ವರ ಕಾಣಿಸಿಕೊಂಡ ಬಳಿಕ ಫೆಬ್ರವರಿ 8 ರಂದು ಚೀನಾದ ಆ ವ್ಯಕ್ತಿ ಕೋವಿಡ್-19 ಪರೀಕ್ಷೆಗೆ ಒಳಗಾಗಿದ್ದರು. ಜ್ವರ ಬಿಟ್ಟರೆ, ಆತನಿಗೆ ಕೆಮ್ಮು, ಶೀತ, ಉಸಿರಾಟದ ತೊಂದರೆ ಇರಲಿಲ್ಲ. 17, 22, 26, 30, 34, 39, 43, 49ನೇ ದಿನ ಕೋವಿಡ್-19 ಪರೀಕ್ಷೆಗಳನ್ನು ಪುನರಾವರ್ತಿಸಲಾಗಿದ್ದು, ಎಲ್ಲರದಲ್ಲೂ 'ಪಾಸಿಟೀವ್' ಅಂತಲೇ ಬಂದಿದೆ. ಇದನ್ನ ಗಮನಿಸಿರುವ ವೈದ್ಯರು ಹೆಚ್ಚಿನ ಅಧ್ಯಯನಕ್ಕೆ ಸೂಚಿಸಿದ್ದಾರೆ.

ವಾಸಿ ಆಗಿದ್ದು ಹೇಗೆ.?

ವಾಸಿ ಆಗಿದ್ದು ಹೇಗೆ.?

49 ದಿನಗಳ ಕಾಲ ಕೊರೊನಾ ಪೀಡಿತನಾಗಿದ್ದ ಚೀನಿ ವ್ಯಕ್ತಿಯಲ್ಲಿ ರೋಗವನ್ನು ವಾಸಿ ಮಾಡಲು 'ಪ್ಲಾಸ್ಮಾ ಪೊರೈಕೆ'ಯ ವಿಧಾನ ಅನುಸರಿಸಲಾಗಿದೆ. ಈಗಾಗಲೇ ಕೊರೊನಾ ವೈರಸ್ ವಿರುದ್ಧ ಹೋರಾಡಿ, ರೋಗ ಗೆದ್ದವರಿಂದ ರಕ್ತ ಪಡೆದು, ಅದರಲ್ಲಿನ ಶಕ್ತಿಯುತ ಪ್ಲಾಸ್ಮಾ ಕಣಗಳನ್ನು ಒಂದುಗೂಡಿಸಿ ಸೋಂಕಿತನಿಗೆ ಚುಚ್ಚುಮದ್ದಾಗಿ ನೀಡಲಾಗಿದೆ. ಇದರಿಂದ ಸೋಂಕಿತನಲ್ಲಿ Anti-bodies ವೃದ್ಧಿಯಾಗಿದೆ.

ಪರಿಣಾಮಕಾರಿ ಮಾರ್ಗ

ಪರಿಣಾಮಕಾರಿ ಮಾರ್ಗ

ಪ್ಲಾಸ್ಮಾ ಪೂರೈಕೆಯ ವಿಧಾನ ಚೀನಿ ವ್ಯಕ್ತಿ ಮೇಲೆ ಪರಿಣಾಮಕಾರಿಯಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಆದ್ರೆ, ಈ ವಿಧಾನದಿಂದ ಉಂಟಾಗುವ ದೀರ್ಘಕಾಲದ ಸಮಸ್ಯೆಗಳ ಬಗ್ಗೆ ಪ್ರಯೋಗ ನಡೆಯಬೇಕಿದೆ ಎಂದು ವೈದ್ಯರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+